ಬಾಲ್ಯದ ಸವಿ ನೆನಪುಗಳು

ಬಾಲ್ಯದ ಆಟವ ನೆನದರೆ ಚಂದವು

ಮತ್ತೆ ಮರಳದು ಆ ಶುಭಘಳಿಗೆ

ಅದ್ಭುತ ಅಮೋಘ ಸುಂದರ ಕ್ಷಣವದು

ನಲಿಯುತ ಜಿಗಿಯುವ ಬಾಳಿಗೆ..

 

ಮಕ್ಕಳ ನಲಿವದು ನಕ್ಕರೆ ಬರುವುದೆ

ಮಾನಸಿಕ ಒತ್ತಡ ನಿರ್ವಹಣೆ ಮತ್ತು ಮನಸ್ಸಿನ ಮ್ಯಾಜಿಕ್

ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಇನ್ನಷ್ಟು “ಜನಸ್ನೇಹಿ"ಯಾಗಿಸುವ ಮತ್ತು ಕೊರೋನಾ ವೈರಸ್ ಹಾವಳಿಯ ಈ ಸಮಯದಲ್ಲಿ ಮಾನಸಿಕ ಒತ್ತಡ ನಿರ್ವಹಣೆಯ ವಿಧಾನಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಮಂಗಳೂರಿನ ಜಿಲ್ಲಾ ಪೊಲೀಸ್ ಕಚೇರಿ ವತಿಯಿಂದ ಉಪನ್ಯಾಸ ಕಾರ್ಯಕ್ರಮವನ್ನು ೯ ನವಂಬರ್ ೨೦೨೦ರಂದು ಆಯೋಜಿಸಲಾಗಿತ್ತು.

Image

ಕನ್ನಡ ಭಾಷೆಯೆಂದರೆ ಅದು ಬದುಕಿನ ಸಂಸ್ಕೃತಿ

ನೀವು ಯಾವುದೋ ಕೆಲಸದ ಮೇಲೆ ವಿದೇಶಕ್ಕೆ ಹೋಗಿರುತ್ತೀರಿ. ಅಲ್ಲಿ ಎಲ್ಲಿ ನೋಡಿದರೂ ಹೊಸ ಮುಖ. ಹೊಸ ಜನ. ಹೊಸ ಭಾಷೆ, ಆಚಾರ ವಿಚಾರ. ಅಲ್ಲಿನ ಹೋಟೇಲ್ ಹೊಕ್ಕು ನೀವು ಕಾಫಿ ಹೀರುತ್ತಾ ಕುಳಿತಿರುವಾಗ ನಿಮ್ಮ ಹಿಂದಿನಿಂದ ‘ಕನ್ನಡ’ ಭಾಷೆಯ ಮಾತು ನಿಮಗೆ ಕಿವಿಗೆ ಬೀಳುತ್ತದೆ. ಕೂಡಲೇ ನೀವು ಹಿಂದಕ್ಕೆ ತಿರುಗಿ ನೋಡುತ್ತೀರಿ. ಅಲ್ಲೊಂದು ಕುಟುಂಬ ಇದೆ. ಅಪ್ಪ, ಅಮ್ಮ ಹಾಗೂ ಮಕ್ಕಳು. ಎಲ್ಲರೂ ಕನ್ನಡದಲ್ಲಿ ಮಾತನಾಡುತ್ತಿದ್ದಾರೆ. ನಿಮಗೆ ಆಗ ಬೆಂಗಳೂರಿನ ಮೆಜೆಸ್ಟಿಕ್ ನ ಹೋಟೇಲ್ ನಲ್ಲಿ ಕಾಫಿ ಕುಡಿಯುವ ಅನುಭವವಾಗುತ್ತದೆ. ಅಲ್ಲವೇ? ನೀವೇ ಅವರ ಬಳಿ ಹೋಗಿ ನೀವು ಕರ್ನಾಟಕದವರಾ? ಎಂದು ಕನ್ನಡದಲ್ಲೇ ಪರಿಚಯ ಮಾಡಿಕೊಳ್ಳುತ್ತೀರಿ. ಅವರೂ ಕನ್ನಡದಲ್ಲೇ ‘ಹೌದು' ಎಂದು ಉತ್ತರ ಕೊಡುತ್ತಾರೆ.

Image

ದೇವರು ಮತ್ತು ಭಕ್ತಿ

ದೇವರು ಮತ್ತು ಭಕ್ತಿ ಎಂಬುದು ಒಂದು ಶಕ್ತಿ. ಸರ್ವಂತರಾಮಿಯಾದ, ಅಣುರೇಣು, ತೃಣ ಕಾಷ್ಟಗಳಲ್ಲೂ ನೆಲೆಸಿದ ‘ಭಗವಂತನ’ ನೆಲೆ ಬೆಲೆ ಕಂಡವರಾರೂ ಇಲ್ಲ. ನಮ್ಮ ಮನದಲ್ಲೊಂದು ಕಲ್ಪನೆ ’ದೇವರ’ ಬಗ್ಗೆ, ಹೀಗಿರಬಹುದು, ಹಾಗಿರಬಹುದು ಎಂಬುದಾಗಿ ಅಷ್ಟೆ. ನಮಗೆ ಆತನ ನಿಲುವನ್ನು ಪೂಜಿಸಲೋ, ಇನ್ನಾವುದಕ್ಕೋ ಬೇಕಾಗಿ ‘ಮೂರ್ತಸ್ವರೂಪ’ವನ್ನು ಮನದಲ್ಲಿ ಗ್ರಹಿಸಿ ಭಜಿಸುತ್ತೇವೆ. ಕಲ್ಲಿನ ಮೂರ್ತಿಯೇ ಆಗಲಿ, ಭಾವಚಿತ್ರವೇ ಇರಲಿ, ಬೇಡ ಪ್ರಜ್ವಲಿಸುತಿರುವ ಒಂದು ದೀಪವೇ ಆಗಲಿ, ಪ್ರಕೃತಿಯ ಯಾವುದೇ ವಸ್ತುವಾಗಲಿ ದೇವರನ್ನು ಅದರಲ್ಲಿ ಕಲ್ಪಿಸಿ, ಭಕ್ತಿಯಿಂದ ಆರಾಧಿಸುತ್ತೇವೆ

Image

ಸಾಮಾನ್ಯನ ಓದು - ನವೆಂಬರ್ 2020 ರ 'ಮಯೂರ' ತಿಂಗಳ ಪತ್ರಿಕೆ

 

ಈ ತಿಂಗಳ ಮಯೂರದಲ್ಲಿ ಸಿದ್ದಲಿಂಗು ಪರಿಣಯ ಎಂಬ ಕಥೆ ಇದೆ. ಇದರಲ್ಲಿ ನೋಡಲು ತುಂಬ ಕುರೂಪಿಯಾಗಿರುವಾತನ ಮದುವೆ ತಡವಾಗಿ ಆಗುತ್ತದೆ. ಹುಡುಗಿ ನಂಬಲು ಅಸಾಧ್ಯವಾಗುವಷ್ಟು ಸುಂದರಿ. ಮದುವೆಯನ್ನು ಗೊತ್ತು ಮಾಡುವಾಗ ಅವಳು ಮೂಕಿ ಎಂದು ಹೇಳಿರುತ್ತಾರೆ.  

 

ಆದರೆ ಮೊದಲ ರಾತ್ರಿ ಅವಳು ಮೂಕಿಯಲ್ಲ ಎಂದು ಗೊತ್ತಾಗುತ್ತದೆ. ಆದರೆ ಅದು ತೃತೀಯಲಿಂಗದ ವ್ಯಕ್ತಿ ! ಮುಂದೆ ಆಗುವುದೇನು ? ನೀವೇ ಕತೆಯನ್ನು ಓದಿ. 

 

ಓದುಗರಿಗೆ ಹಳಗನ್ನಡವನ್ನು ಪರಿಚಯಿಸುವ ನಿಚ್ಚಂ ಪೊಸತು ಎಂಬ ನಿಯತ ಅಂಕಣದಲ್ಲಿ ನಾಗವರ್ಮನ ಕರ್ನಾಟಕ ಕಾದಂಬರಿಯ ಬಗೆಗೆ ಲೇಖನ ಇದೆ.

 

ಮದ್ದು ಗುಂಡಿನ ಕಿಡಿಯು ಹಾರಿಸಿ...

(ಭಾಮಿನಿ ಷಟ್ಪದಿ)

ದೀಪ ಹಚ್ಚುತ ತಮವದೂಡುತ

ಧೂಪ ಬೆಳಗಿ ಜ್ಞಾನ ತುಂಬಿದೆ

ರೂಪನಂದನ ಪೂಜೆ ಮಾಡುವ ದಿವ್ಯದಂಗಳದಿ

ಛಾಪು ಮೂಡಿಸಿ ಕಳೆಯು ಚೆಲ್ಲಿದೆ

ಗೀತಾಮೃತ - 11

*ಅಧ್ಯಾಯ ೪*

       *ಸ ಏವಾಯಂ ಮಯಾ ತೇದ್ಯ ಯೋಗ: ಪ್ರೋಕ್ತ: ಪುರಾತನ:/*

*ಭಕ್ತೋಸಿ ಮೇ ಸಖಾ ಚೇತಿ ರಹಸ್ಯಂ ಹ್ಯೇತದುತ್ತಮಮ್//೩//*

Image

ಹುಣಸೆ ಮರದ ದೆವ್ವ

ಪುಸ್ತಕದ ಲೇಖಕ/ಕವಿಯ ಹೆಸರು
ಎನ್. ನರಸಿಂಹಯ್ಯ
ಪ್ರಕಾಶಕರು
ಸಪ್ನ ಬುಕ್ ಹೌಸ್, ಗಾಂಧಿನಗರ, ಬೆಂಗಳೂರು
ಪುಸ್ತಕದ ಬೆಲೆ
ರೂ.೨೭.೦೦, ಮುದ್ರಣ : ಸೆಪ್ಟೆಂಬರ್ ೨೦೧೦

ಹುಣಸೆ ಮರದ ದೆವ್ವ ಪುಸ್ತಕವನ್ನು ಬರೆದವರು ಪತ್ತೇದಾರಿ ಕಾದಂಬರಿಯ ಪಿತಾಮಹರಾದ ಎನ್. ನರಸಿಂಹಯ್ಯನವರು. ಕಡಿಮೆ ಓದಿದ್ದರೂ ನೂರಾರು ಪತ್ತೇದಾರಿ ಕಾದಂಬರಿಗಳನ್ನು ಬರೆದಿರುವ, ಹಲವು ದಶಕಗಳ ಹಿಂದೆ ಸಾಮಾನ್ಯರಿಗೆ ಓದುವ ಗೀಳನ್ನಂಟಿಸಿದ ಮತ್ತು ಅವರಲ್ಲಿ ಅನೇಕರನ್ನು ಬರಹಗಾರರನ್ನಾಗಿ ರೂಪಿಸಿದ ಖ್ಯಾತಿ ಇವರದ್ದು. ಅಕ್ಷರ ಸೌಲಭ್ಯವಂಚಿತ ಕುಟುಂಬದಿಂದ ಬಂದ ಇವರ ಬರಹಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಟಿತ ಗೌರವ ಪ್ರಶಸ್ತಿ ದೊರೆತಿದೆ. ಇಷ್ಟೊಂದು ಪುಸ್ತಕಗಳನ್ನು ಬರೆದರೂ ಬಡತನದಿಂದಲೇ ಬದುಕಿ ಬಾಳಿದವರು. 

ದೀಪಾವಳಿಯ ಹಬ್ಬದಂದು ನರಕ ಚತುರ್ದಶಿಯ ಮಹತ್ವ

ದೀಪಾವಳಿ ಹಬ್ಬದ ನರಕ ಚತುರ್ದಶಿ ಮುಗಿಸಿ ನಾವು ಲಕ್ಷ್ಮೀಪೂಜೆಗೆ ಅಣಿಯಾಗುತ್ತಿದ್ದೇವೆ. ಆದರೂ ನರಕ ಚತುರ್ದಶಿಯನ್ನು ನಾವು ಆಚರಿಸುವ ಪೌರಾಣಿಕ ಹಿನ್ನಲೆಯನ್ನು ಬ್ರಹ್ಮಾವರದ ಶ್ರೀ ಹರಿಕೃಷ್ಣ ಹೊಳ್ಳ ಇವರು ಸುಂದರವಾಗಿ ಕಥಾ ರೂಪದಲ್ಲಿ ಬರೆದಿದ್ದಾರೆ. ಬನ್ನಿ ಓದೋಣ...

Image

ಲಕ್ಷ್ಮೀ ದೇವಿ ನಮೋಸ್ತುತೆ

( ಭಾಮಿನಿ ಷಟ್ಪದಿ)

ಕಮಲವದನೆಯೆ ವಿಷ್ಣುವಲ್ಲಭೆ

ಕಮಲಕೋಮಲ ಚಂಚರೀಕಳೆ

ಕಮಲ ಮಾಲೆಯ ಕೊರಳಿನಲ್ಲಿಯೆ ಧರಿಸಿ ಮೆರೆಯುವಳು||

ಕಮಲ ಕುಸುಮ ಪ್ರಿಯಳೆ ಲಕ್ಷ್ಮೀ