ಸಾಮಾನ್ಯನ ಓದು - ಮಹಾಭಾರತದಲ್ಲಿ ಕೃಷ್ಣ ಮತ್ತು ಧರ್ಮರಾಯ shreekant.mishrikoti Mon, 11/23/2020 - 19:14

ಹಳೆಯ ತುಷಾರ ( ತಿಂಗಳ ಪತ್ರಿಕೆ ) ಒಂದನ್ನು ಓದುತ್ತಿದ್ದೆ. ಅದರಲ್ಲಿ ಮಹಾಭಾರತ ಕುರಿತಾದ ಲಕ್ಷ್ಮೀಶ ತೋಳ್ಪಾಡಿಯವರ ಒಂದು ಲೇಖನ ಕಂಡಿತು. ಅದು ಮುಂದಿನ ಸಂಚಿಕೆಯಲ್ಲಿ ಮುಂದುವರಿದದ್ದು , ಸದ್ಯ ಆ ಸಂಚಿಕೆಯು ನನ್ನಲ್ಲಿತ್ತು. 

ಮಹಾಭಾರತದಲ್ಲಿ ಕೃಷ್ಣ ಮತ್ತು ಧರ್ಮರಾಜನ ಕುರಿತಾಗಿ ಈ ಲೇಖನ ಇತ್ತು. ಕೃಷ್ಣನು ಸಾಕ್ಷಾತ್ ಕಾಲನೇ ಆಗಿದ್ದು ಲೋಕದ ನಾಶಕ್ಕೆ ಕಾರಣ ಎಂದು ಸ್ವತಃ ಹೇಳಿಕೊಂಡಿದ್ದಾನೆ. ಅವನ ಪಾಲಿಗೆ ಮಹಾಭಾರತದಲ್ಲಿ ಬರುವ 14 ಅಕ್ಷೋಹಿಣಿ ಸೈನ್ಯದಷ್ಟು ಜನರ ಸಾವು ಸಹಜ. ಅವನ ಪಾಲಿಗೆ ಎಲ್ಲರೂ ಈ ಸರ್ವನಾಶದ ನೆಪ ಮಾತ್ರರು, ಕೇವಲ ನಿಮಿತ್ತರು. ಇದೆಲ್ಲ ಆಗಬೇಕಾದದ್ದೇ ಎಂಬ ನಿರ್ಲಿಪ್ತತೆ ಅವನಲ್ಲಿ ಇದೆ.

ಹಾಗೇ ಸುಮ್ಮನೇ...!

*ಅಡುಗೆಗೆ ಉಪ್ಪು ಹೆಚ್ಚಾದರೆ ಒಂದು ಆಲೂಗಡ್ಡೆ ಮುಳುಗಿಸಬೇಕಂತೆ. ಅದು ಉಪ್ಪನ್ನು ಹೀರ್ಕೊಳುತ್ತೆ.*

ನಮಗೂ ಹೀಗೊಬ್ಬ ಆಪತ್ಭಾಂಧವ ಇದ್ದಿದ್ರೆ ಚೆನ್ನಾಗಿರೋದಲ್ವಾ, ಸಾಲದ ಹೊರೆಯೇರಿದಾಗ ತೀರ್ಸೋಕೆ.

 

*ಈರುಳ್ಳಿ ಕತ್ತರಿಸಿ ನೀರಲ್ಹಾಕಿ ಹೆಚ್ಚಿದರೆ ಕಣ್ಣೀರು ಬರಲ್ಲ.*

Image

ರಾಬಿನ್ ಹುಡ್ ಕಥೆಗಳಲ್ಲಿ ಸತ್ಯ ಎಷ್ಟು?

ಬಾಲ್ಯದಲ್ಲಿ ನಾವು ರಾಮಾಯಣ, ಮಹಾಭಾರತ ಕಥೆಗಳ ಜೊತೆಗೆ ಕೆಲವು ಇಂಗ್ಲೀಷ್ ಕಥೆಗಳನ್ನೂ ಕೇಳುತ್ತಾ ಬೆಳೆದಿದ್ದೇವೆ. ಅವುಗಳಲ್ಲಿ ಪ್ರಮುಖವಾದದ್ದು ರಾಬಿನ್ ಹುಡ್. ಇವನು ಕಾಡಿನಲ್ಲಿ ವಾಸಿಸುತ್ತಾ, ಶ್ರೀಮಂತರ ಸಂಪತ್ತನ್ನು ದರೋಡೆ ಮಾಡುತ್ತಾ ಅವುಗಳನ್ನು ಬಡವರಿಗೆ ಹಂಚುತ್ತಿದ್ದ ದಯಾಮಯಿ. ಆದರೆ ಯಾವತ್ತೂ ರಾಜನ ಸೈನಿಕರಿಗೆ ಅಥವಾ ಕೋತ್ವಾಲರ ಕೈಗೆ ಸಿಗುತ್ತಲೇ ಇರಲಿಲ್ಲ. ರಾಬಿನ್ ಹುಡ್ ಕಥಾನಕವನ್ನು ಕೇಳುವಾಗ ಈಗಲೂ ರೋಮಾಂಚನವಾಗುತ್ತದೆ. ನಿಜವಾಗಿಯೂ ರಾಬಿನ್ ಹುಡ್ ಎಂಬ ವ್ಯಕ್ತಿ ಜೀವಂತವಾಗಿದ್ದನೇ? ಅಥವಾ ಕಲ್ಪನಾ ಲೋಕದ ವ್ಯಕ್ತಿಯೇ? ಹಲವಾರು ಗೊಂದಲಗಳಿವೆ. ಕೆಲವರು ರಾಬಿನ್ ಹುಡ್ ಎಂಬುದು ಅವನ ನಿಜನಾಮಧೇಯವಲ್ಲ. ನಿಜ ಹೆಸರು ಬೇರೆಯೇ ಇರಬೇಕು.

Image

ಒಂದು ನೀತಿಕಥೆ - ಇಬ್ಬರು ರಾಜರು

ಒಮ್ಮೆ ಇಬ್ಬರು ನೆರೆ ಹೊರೆಯ ರಾಜರು ರಥದಲ್ಲಿ ಪ್ರಯಾಣಿಸುತ್ತ ಒಂದು ಇಕ್ಕಟ್ಟಾದ ಸೇತುವೆಯ ಮೇಲೆ ಎದಿರಾಗುತ್ತಾರೆ. ಒಬ್ಬರು ಮುಂದೆ ಹೋಗಬೇಕಾದರೆ, ಇನ್ನೊಬ್ಬ ರಾಜನು ತನ್ನ ರಥವನ್ನು ಹಿಂತೆಗೆಯಬೇಕು. ಆದರೆ ಇಬ್ಬರು ರಾಜರೂ ಸಹ ರಥವನ್ನು ಹಿಂದೆಗೆಯಲು ಸಿದ್ಧರಿರಲಿಲ್ಲ. ಕೊನೆಗೆ ಇಬ್ಬರ ರಾಜರ ರಥದ ಸಾರಥಿಯರು ಒಂದು ಒಪ್ಪಂದಕ್ಕೆ ಬಂದರು. ಇಬ್ಬರೂ ತಮ್ಮ ರಾಜನು ಮಾಡಿದ ಸತ್ಕಾರ್ಯಗಳನ್ನು ಕುರಿತು ಹೇಳುವುದು. ಯಾವ ರಾಜನು ಹೆಚ್ಚಿನ ಸತ್ಕಾರ್ಯಗಳನ್ನು ಮಾಡಿರುತ್ತಾರೋ ಅಂತಹ ರಾಜನು ಮುಂದೆ ಹೋಗುವುದು. ಇನ್ನೊಬ್ಬ ರಾಜನು ರಥವನ್ನು ಹಿಂತೆಗೆದುಕೊಳ್ಳುವುದು.

Image

ಒಂದು ಒಳ್ಳೆಯ ನುಡಿ (20) - ತಪ್ಪು ಮಾಡದವರು…

ತಪ್ಪು ಮಾಡದವರು ಯಾರಾದರೂ ಇದ್ದಾರೆಯೇ ಎಂದು ಕೇಳಿದರೆ, ಸಾವಿಲ್ಲದ ಮನೆಯ ಸಾಸಿವೆ ಕಾಳು ಹುಡುಕಿದಂತೆ ಆದೀತು. ನಮ್ಮ ಬದುಕಿನ ದೀರ್ಘ ಹಾದಿಯಲ್ಲಿ ಒಂದಿಲ್ಲೊಂದು ಸಂದರ್ಭದಲ್ಲಿ *ತಪ್ಪುಗಳು* ಗೊತ್ತಿದ್ದೋ, ಗೊತ್ತಿಲ್ಲದೆಯೋ ಆಗಿಬಿಡುತ್ತದೆ. ಯಾರು ತಪ್ಪನ್ನು ತಿದ್ದಿ ಮುಂದೆ ಆಗದ ಹಾಗೆ ನೋಡಿಕೊಳ್ಳುತ್ತಾನೋ ಅವನು ಜಾಣ. ಗೊತ್ತಿದ್ದೂ ಮತ್ತೆ ಮತ್ತೆ ತಪ್ಪುಗಳನ್ನು ಎಸಗುವವ ಮೂರ್ಖರ ಸಾಲಿಗೆ ಸೇರುವವ. ತನ್ನ *ಭವಿಷ್ಯ*ಕ್ಕೆ ತಾನೇ ಕಲ್ಲು ಹಾಕಿಕೊಂಡ ಹಾಗೆ.

Image

ಎರಡು ಟೆಡ್ದಿ ಕರಡಿಗಳ ಕಿತಾಪತಿ

ಟೋರಾ ಮತ್ತು ಬೋರಾ ಎಂಬ ಎರಡು ಟೆಡ್ದಿ ಕರಡಿಗಳು ಜೀವದ ಗೆಳೆಯರು. ಅವರಿಬ್ಬರೂ ಸ್ವೀಟಿ ಎಂಬ ಪುಟ್ಟ ಹುಡುಗಿಯೊಂದಿಗೆ ಇದ್ದರು. ಅವಳು ಅವರನ್ನು ತನ್ನ ಹಾಸಿಗೆಯಲ್ಲೆಯೇ ಇಟ್ಟಿದ್ದಳು.

ಅವಳ ತಲೆದಿಂಬುಗಳನ್ನೇರಿದರೆ ಕಿಟಕಿಯ ಮೂಲಕ ಅವುಗಳಿಗೆ ಹೊರಗಿನ ಉದ್ಯಾನ ಕಾಣಿಸುತ್ತಿತ್ತು. ಹಂಗಾಮಿನಿಂದ ಹಂಗಾಮಿಗೆ ಬಣ್ಣ ಬದಲಾಯಿಸುವ ಆ ಉದ್ಯಾನದ ಗಿಡಗಳನ್ನು ನೋಡುವುದೆಂದರೆ ಅವುಗಳಿಗೆ ಖುಷಿಯೋ ಖುಷಿ.

ಚಳಿಗಾಲದ ಒಂದು ಮುಂಜಾವದಲ್ಲಿ ಸ್ವೀಟಿ ಹಾಸಿಗೆಯಿಂದ ಎದ್ದು, ಪರದೆಗಳನ್ನು ಪಕ್ಕಕ್ಕೆ ಸರಿಸಿ, ಕಿಟಕಿಯಿಂದ ಹೊರಗೆ ನೋಡುತ್ತಾ “ಓ, ಹಿಮ ಬೀಳುತ್ತಿದೆ” ಎಂದು ಕೂಗಿದಳು.

Image

ಬಹು ಉಪಯೋಗಿ ರೋಸ್ ಮೇರಿ ಸಸ್ಯ

ರೋಸ್ ಮೇರಿ ಸಸ್ಯದ ಹೆಸರನ್ನು ಬಹಳಷ್ಟು ಮಂದಿ ಕೇಳಿಯೇ ಇರುತ್ತೀರಿ. ಇದನ್ನು ಸಾಂಬಾರ ಪದಾರ್ಥವಾಗಿಯೂ ಉಪಯೋಗಿಸುತ್ತಾರೆ. ಬಹಳಷ್ಟು ಮಂದಿ ಇದರ ಎಣ್ಣೆ ಹಾಗೂ ಹುಡಿಯನ್ನು ನೋಡಿರಲೂ ಬಹುದು. ಆದರೆ ಗಿಡವನ್ನು, ಹೂವನ್ನು ನೋಡಿರುವವರು ಕಮ್ಮಿ. ರೋಸ್ ಮೇರಿ ಗಿಡದ ಬಗ್ಗೆ ಹಾಗೂ ಅದರ ಉಪಯೋಗಗಳ ಬಗ್ಗೆ ಸ್ವಲ್ಪ ಮಾಹಿತಿ ಪಡೆಯೋಣ.

Image

ಸರ್ವಜ್ಞನ ದೃಷ್ಟಿಯಲ್ಲಿ ಸಜ್ಜನ - ದುರ್ಜನ

ಮಾನವ ಜನ್ಮ ಬಹಳ ದೊಡ್ಡದು. ನಮ್ಮ ಹಿಂದಿನ ಜನ್ಮದ ಪಾಪ ಪುಣ್ಯಗಳಿಗನುಸಾರವಾಗಿ, ಈ ಜನ್ಮವೆತ್ತಿದವರು ನಾವುಗಳು. ನಮ್ಮ ಗುಣಾವಗುಣಗಳಿಗೂ, ನಾವೆಸಗಿದ ಕಾರ್ಯಗಳೇ ಕಾರಣ. ವಿವೇಕಿಗಳಾದವರು, ಜ್ಞಾನವಂತರು, ಉತ್ತಮರು, ವಿದ್ಯಾವಂತರು ತಮ್ಮ ತಮ್ಮ ಗುಣದೋಷಗಳನ್ನು ಅರಿತು, ಇನ್ನೂ ಒಳ್ಳೆಯವರಾಗಲು ಪ್ರಯತ್ನಿಸಬೇಕು. *ಸಜ್ಜನರ ಸಂಗವದು ಹೆಜ್ಜೇನು ಸವಿದಂತೆ* ಅವರ ಸಹವಾಸವು ನಮ್ಮಲ್ಲಿ ಪರಿವರ್ತನೆಯನ್ನು ಮಾಡಬಹುದು. ಸತ್ಸಂಗದಿಂದ ನಾವು ಪರಿಶುದ್ಧ ಬದುಕನ್ನು ಕಟ್ಟಿಕೊಳ್ಳಬಹುದು.

ಸತ್ಯರಾ ನುಡಿ ತೀರ್ಥ ನಿತ್ತರಾ ನಡೆ ತೀರ್ಥ

Image