ಗೀತಾಮೃತ - 12
*ಅಧ್ಯಾಯ ೪*
*ಚಾತುರ್ವರ್ಣ್ಯಂ ಮಯಾ ಸೃಷ್ಟಂ ಗುಣಕರ್ಮವಿಭಾಗಶ:/*
*ತಸ್ಯ ಕರ್ತಾರಮಪಿ ಮಾಂ ವಿದ್ದ್ಯಕರ್ತಾರಮವ್ಯಯಮ್//೧೩//*
- Read more about ಗೀತಾಮೃತ - 12
- Log in or register to post comments
*ಅಧ್ಯಾಯ ೪*
*ಚಾತುರ್ವರ್ಣ್ಯಂ ಮಯಾ ಸೃಷ್ಟಂ ಗುಣಕರ್ಮವಿಭಾಗಶ:/*
*ತಸ್ಯ ಕರ್ತಾರಮಪಿ ಮಾಂ ವಿದ್ದ್ಯಕರ್ತಾರಮವ್ಯಯಮ್//೧೩//*
*ಡಾ. ಜಿ. ಭಾಸ್ಕರ ಮಯ್ಯ ಅವರ "1857 ಭಾರತದ ಪ್ರಥಮ ಮಹಾಸಂಚಲನದಲ್ಲಿ ವಿಷ್ಣು ಭಟ್ಟ ಗೋಡ್ಸೆಯ 'ನನ್ನ ಪ್ರವಾಸ' ಮಾಝಾ ಪ್ರವಾಸ"*
ಡಾ. ಜಿ. ಭಾಸ್ಕರ ಮಯ್ಯ ಅವರು ಅನುವಾದಿಸಿದ ವಿಷ್ಣು ಭಟ್ಟ ಗೋಡ್ಸೆಯವರ "ನನ್ನ ಪ್ರವಾಸ" ಅಥವಾ "ಮಾಝಾ ಪ್ರವಾಸ" 2018ರಲ್ಲಿ ಮುದ್ರಣವಾದ 256 ಪುಟಗಳ ಕೃತಿ. 200 ರೂಪಾಯಿ ಬೆಲೆಯ ಕೃತಿಯನ್ನು ಅನುವಾದಕರಾದ ಭಾಸ್ಕರ ಮಯ್ಯರವರೇ ತಮ್ಮ "ಜನವಾದಿ ಪ್ರಕಾಶನ, ಗುಂಡ್ಮಿ, ಕುಂದಾಪುರ - 576226" ಮೂಲಕ ಪ್ರಕಟಿಸಿದ್ದಾರೆ.
ಸಲಿಲದ ತೀರದಿ ಚಾರುವ ತಾಣವು
ಕಲರವ ಜುಳುಜುಳು ನಾದದಲಿ
ಚೆಲುವಿನ ಸಿರಿಯದು ಹಸಿರಿನ ಬೆಟ್ಟವು
ನೆಲೆದಲಿ ಸುಮಧುರ ಗೀತದಲಿ
ವಿಹಗದ ಚಾರಣ ಕಣಿವೆಯ ತುಂಬುತ
ಭಗವಾನ್ ಬುದ್ಧನಿಂದ ಸ್ಥಾಪಿತವಾದ ಬೌದ್ಧ ಧರ್ಮವು ಪ್ರಪಂಚದ ಎಲ್ಲೆಡೆ ಹಬ್ಬಿದೆ. ಬೌದ್ಧ ಭಿಕ್ಷುಗಳ ಬಗ್ಗೆ ಹಲವಾರು ಕಥೆಗಳಿವೆ. ಅವರ ಅಖಂಡ ನಿರ್ಲಿಪ್ತತೆಯು ಸಾಮಾನ್ಯ ಜನರನ್ನು ಹುಬ್ಬೇರಿಸುವಂತೆ ಮಾಡುತ್ತದೆ. ಭಗವಾನ್ ಬುದ್ಧನು ‘ಆಸೆಯೇ ದುಃಖಕ್ಕೆ ಮೂಲ' ಎಂದು ಹೇಳಿದ. ಅದರಂತೆ ಬೌದ್ಧ ಭಿಕ್ಷುಗಳು ತಮ್ಮ ಜೀವನ ಪರ್ಯಂತ ಅತ್ಯಂತ ನಿರ್ಮೋಹಿಗಳಾಗಿ ಬದುಕುತ್ತಿದ್ದಾರೆ. ಈ ಹಂತ ತಲುಪಲು ಅವರು ಅನೇಕ ಸಾಧನೆಗಳನ್ನು ಮಾಡಬೇಕಾಗುತ್ತದೆ. ಸುಖಾಸುಮ್ಮನೇ ಯಾರಿಗೂ ಪ್ರಾಪಂಚಿಕ ಜೀವನದ ಮೋಹದಿಂದ ಹೊರ ಬರಲು ಸಾಧ್ಯವಾಗುವುದಿಲ್ಲ. ಹಲವಾರು ಮಹನೀಯರು ಈ ಧರ್ಮದ ಗುಣಗಳಿಂದ ಪ್ರೇರಿತರಾಗಿ ಬೌದ್ಧ ಧರ್ಮದ ಕಡೆಗೆ ವಾಲಿದ್ದೂ ಇದೆ.
ಝೆನ್ ವಿದ್ಯಾರ್ಥಿ ಯಮಒಕನಿಗೆ ಎಲ್ಲವನ್ನೂ ತಿಳಿಯಬೇಕೆಂಬ ಬಯಕೆ. ಒಬ್ಬರಾದ ನಂತರ ಇನ್ನೊಬ್ಬ ಝೆನ್ ಗುರುಗಳನ್ನು ಕಂಡು ಮುಂದುವರಿಯುತ್ತಿದ್ದ.
ಕೊನೆಗೆ ಝೆನ್ ಗುರು ಡೊಕುಓನ್ ಅವರ ದರ್ಶನ ಪಡೆದ. ತನ್ನ ಬಗ್ಗೆ ಅವರಿಗೆ ತಿಳಿಸುತ್ತಾ, ತನ್ನ ಜ್ನಾನ ಪ್ರದರ್ಶಿಸಲಿಕ್ಕಾಗಿ ಹೀಗೆಂದ, "ಗುರುಗಳೇ, ನಮನಗಳು. ನಾನು ತಿಳಿದದ್ದು ಏನೆಂದರೆ ಮನಸ್ಸು ಎಂಬುದಿಲ್ಲ, ದೇಹ ಎಂಬುದೂ ಇಲ್ಲ. ಒಳ್ಳೆಯದು, ಕೆಟ್ಟದ್ದು ಎರಡೂ ಇಲ್ಲ. ಅರಿವು ಎಂಬುದಿಲ್ಲ, ಭ್ರಮೆ ಎಂಬುದೂ ಇಲ್ಲ. ನಾವು ನೋಡುತ್ತೇವೆ ಹಾಗೂ ಅನುಭವಿಸುತ್ತೇವೆ ಅನ್ನೋದೂ ಸತ್ಯವಲ್ಲ. ನಮಗೆ ಕಾಣುವ, ನಮ್ಮ ಗ್ರಹಿಕೆಗೆ ಸಿಗುವ ಯಾವ ವಸ್ತುವಿಗೂ ಅಸ್ತಿತ್ವವಿಲ್ಲ. ನಿಜವಾಗಿ ಇರುವುದು ಮಹಾಶೂನ್ಯ ಒಂದೇ.”
ಅಷ್ಟಾದಶ ಪುರಾಣ ದಶೋಪನಿಷತ್ತುಗಳನು
ಪಾರಾಯಣ ಮಾಡಿಸುತ್ತಲಿ ಆಲಿಸು|
ರಾಮಾಯಣ ಮಹಾಭಾರತ ಕಾವ್ಯಗಳನು
ತಿಳಿದು ಓದಿಸುತ್ತಲಿ ಆಲಿಸು||
ತೀರ್ಥಂಕರರ ಚರಿತೆ ಶಾಸನದ ಸ್ತುತಿಸಾಲುಗಳ
ಕ್ಯಾಪ್ಟನ್ ಗೋಪಿನಾಥ್ ನಮ್ಮ ಹೆಮ್ಮೆಯ ಕನ್ನಡಿಗರು. ಏರ್ ಡೆಕ್ಕನ್ ವಿಮಾನಯಾನ ಸಂಸ್ಥೆಯನ್ನು ಸ್ಥಾಪಿಸಿ ಜನ ಸಾಮಾನ್ಯರೂ ವಿಮಾನದಲ್ಲಿ ಹೋಗಬಹುದೆಂಬ ಕನಸನ್ನು ನನಸು ಮಾಡಿದವರು. ಮೊನ್ನೆ ಕ್ಯಾಪ್ಟನ್ ಗೋಪಿನಾಥ್ ಅವರ ಒಂದು ಸಂದರ್ಶನ ನೋಡುತ್ತಿದ್ದೆ. ಅವರು ತಮ್ಮ ಡೆಕ್ಕನ್ ಹೆಲಿಕಾಪ್ಟರ್ ಸರ್ವಿಸಸ್ ಸಂಸ್ಥೆಯಲ್ಲಿ ಆದ ಒಂದು ಗ್ರಾಹಕ ಅನುಭವದ ಬಗ್ಗೆ ಹೇಳಿದ್ದು ಹೀಗೆ...
ದೇವರು ಮಾನವನಿಗೆ ನೀಡಿದ ಎಲ್ಲಾ ಅಂಗಾಂಗಗಳು ಅತ್ಯಮೂಲ್ಯವೇ. ಆದರೆ ಕಣ್ಣು ಅವುಗಳಲ್ಲಿ ಶ್ರೇಷ್ಣವಾದ ಅಂಗ. ಅದಕ್ಕೇ ಹೇಳುವುದು ನೇತ್ರದಾನ ಮಹಾದಾನ ಎಂದು. ನಾವು ಸತ್ತ ನಂತರ ಮಣ್ಣಲ್ಲಿ ಮಣ್ಣಾಗುವ ಅಥವಾ ಸುಟ್ಟು ಬೂದಿಯಾಗುವ ಕಣ್ಣುಗಳನ್ನು ದಾನವಾಗಿ ನೀಡಿದರೆ ಇನ್ನೂ ಇಬ್ಬರು ನೇತ್ರಹೀನರು ಈ ಸುಂದರ ಪ್ರಪಂಚವನ್ನು ನೋಡಬಹುದು. ವೈದ್ಯರು ದೇವರ ಪ್ರತಿರೂಪ ಎನ್ನುತ್ತಾರೆ. ಹಲವಾರು ವೈದ್ಯರು ತಮ್ಮ ಕಾರ್ಯದ ಮೂಲಕ ಈ ಮಾತನ್ನು ನಿಜವಾಗಿಸಿದ್ದಾರೆ. ಇಂತಹದ್ದೇ ಓರ್ವ ಕಣ್ಣಿನ ವೈದ್ಯರ ಬಗ್ಗೆ ನಾನಿಂದು ನಿಮಗೆ ಕಿರು ಲೇಖನದ ಮೂಲಕ ತಿಳಿಸುವೆ.
ಚಾಣಕ್ಯ ನೀತಿ
ನಿಜವಾದ ಬಡವನೆಂದರೆ ಸರಿಯಾದ ವಿದ್ಯೆ ಕಲಿತು,ಸನ್ಮಾರ್ಗದಲ್ಲಿ ನಡೆಯದವರು.ಹಣವಿಲ್ಲದವರನ್ನೆಲ್ಲ ಒಟ್ಟು ಸೇರಿಸಿ ನಿರ್ಗತಿಕರೆಂಬ ಹಣೆಪಟ್ಟಿ ನಾವು ಕಟ್ಟಬಾರದು. ಬಡತನ-ಸಿರಿತನ ಎಂಬುದು ಯಾವತ್ತೂ ಶಾಶ್ವತವಲ್ಲ. ಅವು ಒಂದಕ್ಕೊಂದು ವೈರಿಗಳು. ವಿದ್ಯೆ, ವಿದ್ವತ್ ಎರಡೂ ದೇವಲೋಕದ ಕಾಮಧೇನುವಿನಂತೆ. ಆಪತ್ಕಾಲದಲ್ಲಿ ನಮ್ಮನ್ನು ರಕ್ಷಿಸುತ್ತದೆ. ಹೊಟ್ಟೆ ಪಾಡಿಗೆ ವಿದ್ಯೆ ಬೇಕು, ಜೊತೆಗೆ ತಾನೂ *ಬೆಳಕನ್ನು*ಪಡೆದು ಇತರರಿಗೂ ಬೆಳಕು ನೀಡುವ ಜ್ಞಾನವೇ ವಿದ್ಯೆ.
ಮೊದಲಿಗೆ ಅಕ್ಕಿ, ಮೆಂತೆ, ಉದ್ದಿನಬೇಳೆಯನ್ನು ಜೊತೆಯಾಗಿ ನೀರಿನಲ್ಲಿ ಅರ್ಧ ಗಂಟೆ ನೆನೆಸಿ. ನಂತರ ನೆನೆದ ಸಾಮಾಗ್ರಿಗಳ ಜೊತೆ ಕಾಯಿ ಮೆಣಸು, ಪಡುವಲ ಬೀಜ, ಉಪ್ಪು ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ. ನಂತರ ಸಣ್ಣಗೆ ಹೆಚ್ಚಿದ ನೀರುಳ್ಳಿ, ಕತ್ತರಿಸಿದ ಕೊತ್ತಂಬರಿ ಸೊಪ್ಪುಗಳನ್ನು ಆ ರುಬ್ಬಿದ ಮಿಶ್ರಣಕ್ಕೆ ಬೆರೆಸಿರಿ. ದೋಸೆಯ ಕಾವಲಿಯನ್ನು ಒಲೆಯ ಮೇಲಿಟ್ಟು ಸಣ್ಣ ಸಣ್ಣ ದೋಸೆ ಆಕಾರದಲ್ಲಿ ಈ ರುಬ್ಬಿದ ಮಿಶ್ರಣವನ್ನು ಹಾಕಿರಿ. ಬೇಕಾದಲ್ಲಿ ಕಾವಲಿಗೆ ಸ್ವಲ್ಪ ಎಣ್ಣೆಯನ್ನು ಹಾಕಿರಿ. ದೋಸೆಯನ್ನು ಎರಡೂ ಬದಿ ಕಾಯಿಸಿರಿ. ಬಿಸಿ ಬಿಸಿಯಾಗಿ ಊಟದ ಜೊತೆ ತಿನ್ನಲು ಹಿತಕರ
೨ ಮಧ್ಯಮ ಗಾತ್ರದ ಪಡುವಲ ಕಾಯಿಯ ಬೀಜಗಳು, ಬೆಳ್ತಿಗೆ ಅಕ್ಕಿ ೧/೨ ಕಪ್, ನೀರುಳ್ಳಿ ೧, ಕಾಯಿ ಮೆಣಸು ೨-೩, ಮೆಂತೆ ೨ ಚಮಚ, ಉದ್ದಿನ ಬೇಳೆ ೨ ಚಮಚ, ರುಚಿಗೆ ಉಪ್ಪು, ಕೊತ್ತಂಬರಿ ಸೊಪ್ಪು, ಎಣ್ಣೆ