ಅಂದದ ಕೈಗೆ ಬಣ್ಣದ ಬಳೆಗಳು
ನಾರಿಯ ಮೈಯಲಿ ಗರಿಗರಿ ಸೀರೆಯು
- Read more about ಅಂದದ ಕೈಗೆ ಬಣ್ಣದ ಬಳೆಗಳು
- Log in or register to post comments
ನಾರಿಯ ಮೈಯಲಿ ಗರಿಗರಿ ಸೀರೆಯು
ಅಂತು ಇಂತು ೨೦೨೦ನೇ ಕೊನೇ ತಿಂಗಳಿಗೆ ನಾವೆಲ್ಲರೂ ಕಾಲಿಟ್ಟಿದ್ದೇವೆ. ನವೆಂಬರ್ ತಿಂಗಳಲ್ಲೇ ನಾನು ಈ ಲೇಖನ ಬರೆಯಬೇಕೆಂದಿದ್ದೆ. ಆದರೆ ಅನಿವಾರ್ಯ ಕಾರಣಗಳಿಂದ ಸಾಧ್ಯವಾಗಿರಲಿಲ್ಲ. ಸಂಪದದಲ್ಲಿ ‘ಕನ್ನಡ ನಾಡು, ಭಾಷೆ’ ಬಗ್ಗೆ ಬಂದ ಸರಣಿ ಲೇಖನಗಳಿಗೆ ಪೂರಕವಾಗಿ ನಾನು ಈ ಲೇಖನ ಬರೆಯಲು ಮನಸ್ಸು ಮಾಡಿರುವೆ.
ಇಂದಿನ ಆಧುನಿಕ ಜಗತ್ತಿನ ಈ ಒತ್ತಡದ ವಾತಾವರಣದಲ್ಲಿ ನೆಮ್ಮದಿ, ಶಾಂತಿ, ಎನ್ನುವುದು ಬಹುತೇಕರ ಪಾಲಿಗೆ ಮರೀಚಿಕೆ ಯಾಗಿದೆ. ನೆಮ್ಮದಿ ಪಡೆಯ ಬೇಕಾದರೆ, ದೈವ ಚಿಂತನೆ ಅಗತ್ಯವಾಗಿ ಬೇಕು. ಆಧ್ಯಾತ್ಮಿಕ ಚಿಂತನೆಗಳ ಸಾರದಲ್ಲಿ ಮುಳುಗಬೇಕು. ಹಿಂದಿನ ಕಾಲದಲ್ಲಿ ಆತ್ಮೋಧ್ದಾರಕ್ಕಾಗಿ ತಪಸ್ಸು ಮಾಡಲು ಯೋಗ, ಧ್ಯಾನಾಸಕ್ತರಾಗಲು ಮನೆ - ಮಠ ಬಿಟ್ಟು ಕಾಡಿಗೆ ತೆರಳುತ್ತಿದ್ದರು.
ನೆಲೆ ಕಾಣಲಿ
ತರಗೆಲೆಗಳ ಹೊದಿಕೆಯ ಕೆಳಗೆ
*ಸುಭಾಷಿತಗಳು* ಜ್ಞಾನದ ಗುಳಿಗೆಗಳು ಇದ್ದಂತೆ. ಸಂಸ್ಕೃತಕ್ಕೆ ಕಾವ್ಯಮಯವಾದ ಜ್ಞಾನದ ತಿರುಳನ್ನು ನೀಡಿದ ಶ್ರೇಷ್ಠ ವಾದ ಹೇಳಿಕೆಗಳು. ಇವುಗಳ ಒಳಹೊಕ್ಕು ನೋಡಿದರೆ ಕಾಣಸಿಗುವುದು *ವೇದಗಳು, ಉಪನಿಷತ್ತುಗಳು, ಸ್ಮೃತಿಗಳು, ರಾಮಾಯಣ, ಮಹಾಭಾರತ, ಪುರಾಣಗಳು, ಆಗಮ ಶಾಸ್ತ್ರಗಳು,ದರ್ಶನಗಳು, ಮಹಾಕಾವ್ಯಗಳು, ಲಘುಕಾವ್ಯಗಳು * ಮುಂತಾದವುಗಳ ಸಾರಗಳೇ ಇರುವುದು.
ತನ್ನ ಯುವ ಶಿಷ್ಯನೊಬ್ಬ ಕೊ ಅನ್ (ಝೆನ್ ಒಗಟು) ಅಧ್ಯಯನದಲ್ಲಿ ವಿಶೇಷ ಪರಿಣತಿ ಗಳಿಸಿದ್ದನ್ನು ಝೆನ್ ಗುರು ಗಮನಿಸಿದ. ಆ ಶಿಷ್ಯನ ಪರಿಣತಿಯನ್ನು ಇನ್ನಷ್ಟು ಹೆಚ್ಚಿಸುವ ಉದ್ದೇಶದಿಂದ ಅವನನ್ನು ಗುರು ಫ್ಯುಜಿ ಪರ್ವತಕ್ಕೆ ಕರೆದೊಯ್ದ.
ಆ ಯುವ ಶಿಷ್ಯ ಮುಂಚೆಯೂ ಹಲವಾರು ಸಲ ಫ್ಯುಜಿ ಪರ್ವತ ಏರಿದ್ದ. ಈ ಭೇಟಿಯಲ್ಲಿ ಗುರುವಿನೊಂದಿಗೆ ಪರ್ವತ ಏರುತ್ತಿದ್ದಂತೆ ಪರ್ವತವನ್ನು ಹೊಸ ನೆಲೆಯಿಂದ ಕಾಣಲು ಅವನಿಗೆ ಸಾಧ್ಯವಾಯಿತು.
ಎರಡು ದಶಕಗಳ ಹಿಂದೆ ಏಡ್ಸ್ ಮತ್ತು ಎಚ್.ಐ.ವಿ. ಪಾಸಿಟಿವ್ ಎಂದರೆ ಬೆಚ್ಚಿ ಬೀಳುತ್ತಿದ್ದ ಜನರು ಈಗ ಆ ಕಾಯಿಲೆ (ಕೊರತೆ) ಬಹುತೇಕ ಸಾಮಾನ್ಯ ರೋಗದಂತೇ ಕಾಣಲು ಪ್ರಾರಂಭಿಸಿದ್ದಾರೆ. ಸಮಯ ಕಳೆದಂತೆ ರೋಗ ಹರಡುವ ವೈರಸ್ ಬಲಹೀನವಾದಂತೆ ಕಾಣಿಸುತ್ತಿದೆ. ಈಗಲೂ ಈ ವೈರಸ್ ನಿವಾರಣೆಗೆ ಖಚಿತವಾದ ಮದ್ದು ಅಥವಾ ಲಸಿಕೆ ಇಲ್ಲ. ಆದರೆ ಎಚ್ ಐ ವಿ ಪಾಸಿಟಿವ್ ಆದ ತಕ್ಷಣ ಮರಣ ಸಂಭವಿಸುವುದಿಲ್ಲ.
ಪ್ರತೀ ಶುಕ್ರವಾರದಂದು ಕನಕಧಾರ ಲಕ್ಷ್ಮೀ ಮಂತ್ರವನ್ನು ಪಠಿಸುವ ಮೊದಲು ನಾವು ಕೈಗೊಳ್ಳಬೇಕಾದ ಕಾರ್ಯಗಳು:
ಮಲೆನಾಡಿನ ರೋಚಕ ಕಥೆಗಳು ಸರಣಿಯ ೮ ನೇ ಭಾಗವಾದ ‘ಮಲೆನಾಡಿನ ಮರೆಯದ ನೆನಪುಗಳು’ ಎಂಬ ಪುಸ್ತಕವನ್ನು ಗಿರಿಮನೆ ಶ್ಯಾಮರಾವ್ ರಚಿಸಿದ್ದಾರೆ. ಎಂದಿನಂತೆ ಮಲೆನಾಡಿನ ಸುಂದರ ಪರಿಸರದ ವರ್ಣನೆ, ಕಾಡು ಪ್ರಾಣಿಗಳ ಒಡನಾಟ, ಬಾಲ್ಯದ ರಸನಿಮಿಷಗಳು ಈ ಪುಸ್ತಕದಲ್ಲೂ ಮುಂದುವರೆದಿದೆ. ಈ ಸರಣಿ ಪುಸ್ತಕಗಳನ್ನು ಓದುತ್ತಾ ಓದುತ್ತಾ ಮಲೆನಾಡು ಇನ್ನಷ್ಟು ಆಪ್ತವಾಗುತ್ತಾ ಹೋಗುತ್ತದೆ. ರೋಚಕತೆ ಪ್ರತಿಯೊಂದು ಘಟ್ಟದಲ್ಲೂ ಕಂಡು ಬರುತ್ತದೆ.