ಒಮ್ಮೆ ನಕ್ಕು ಬಿಡಿ!

ಆಫೀಸ್‌ಗೆ ಹೋದೆ. ಮುಖದಲ್ಲಿ ಇದ್ದ ಪ್ರಸನ್ನತೆ, ಗೆಲುವನ್ನು ಕಂಡು ಜ್ಯೂನಿಯರ್‌ಗಳು ಕೇಳಿದವು  - "ಏನ್ ಸಾರ್? ತುಂಬಾನೇ ಖುಷಿಯಾಗಿದ್ದೀರಿ !! ಪ್ರಮೋಷನ್ನಾ ? ಹೊಸಾ ಮೊಬೈಲ್ ತಗೊಂಡ್ರಾ ? ಹೊಸಾ ಬೈಕ್ ಬುಕ್ ಮಾಡಿದ್ರಾ ? ಲೋನ್ ಕ್ಲಿಯರ್ ಆಯ್ತಾ ? 

Image

ಬದುಕು ಬದಲಿಸಬಹುದು

ಪುಸ್ತಕದ ಲೇಖಕ/ಕವಿಯ ಹೆಸರು
ನೇಮಿಚಂದ್ರ
ಪ್ರಕಾಶಕರು
ನವಕರ್ನಾಟಕ ಪ್ರಕಾಶನ
ಪುಸ್ತಕದ ಬೆಲೆ
ರೂ.೧೧೦/-

ಇದು ಓದಿ ಮರೆಯಬಹುದಾದ ಪುಸ್ತಕವಲ್ಲ. ಮತ್ತೆಮತ್ತೆ ಓದಬೇಕಾದ ಚಿಂತನೆಗಳು, ಸಂಗತಿಗಳು, ಘಟನೆಗಳು, ಒಳನೋಟಗಳು, ವಿಶ್ಲೇಷಣೆಗಳು ತುಂಬಿದ ಪುಸ್ತಕ.

“ಸಮಯವಿಲ್ಲವೇ ಹೇಳಿ” ಎಂಬ ಮೊದಲ ಅಧ್ಯಾಯದಲ್ಲಿಯೇ ನೇಮಿಚಂದ್ರ ಬರೆಯುತ್ತಾರೆ: “.... ನಿಜಕ್ಕೂ "ನಾಳೆ" ಎಂಬುದು ನಮಗಿದೆಯೇ? ಸಾವಿನ ಭಯದಲ್ಲಿ ಇವರು (ಅಧ್ಯಾಯದಲ್ಲಿ ಉಲ್ಲೇಖಿಸಿದ ಕ್ಯಾನ್ಸರ್ ಪೀಡಿತರು) ಬದುಕು ಬಿಟ್ಟವರಲ್ಲ. ಆದರೆ ಸಾವಿನ ನಿರ್ಭಯದಲ್ಲಿ ಬದುಕದವರುಂಟು. ನನ್ನ ಬದುಕಿನ ಆದ್ಯತೆಗಳನ್ನು ಗುರುತಿಸಿಕೊಳ್ಳಲು ಕ್ಯಾನ್ಸರಿಗೆ ಕಾಯಬೇಕೇ? ಎಷ್ಟು ಬದುಕನ್ನು ವ್ಯರ್ಥವಾಗಿ ಕಳೆದದ್ದಿದೆ, ಪ್ರೀತಿಸದೆ, ಬಯಸಿದ್ದನ್ನು ಮಾಡದೆ, “ಅಯ್ಯೋ ಟೈಮೇ ಇಲ್ಲ” ಎಂಬ ಸಬೂಬುಗಳನ್ನು ಮುಸುಕು ಹಾಕಿ ಮಲಗಿದ್ದಿದೆ?”

ಸಾಮಾಜಿಕ ಜಾಲತಾಣಗಳು ಕನ್ನಡ ಭಾಷೆ ಮತ್ತು ಸಾಹಿತ್ಯದ ಮೇಲೆ ಬೀರಿದ ಪ್ರಭಾವ...

ಸುಮಾರು 10-15 ವರ್ಷಗಳ ಹಿಂದೆ ಇದ್ದ ಕನ್ನಡ ಭಾಷೆ ಮತ್ತು ಸಾಹಿತ್ಯದ ಬಗೆಗಿನ ಆತಂಕ ಈಗ ಅಷ್ಟಾಗಿ ಕಾಣುತ್ತಿಲ್ಲ. ಫೇಸ್ ಬುಕ್, ವಾಟ್ಸ್ ಆಪ್, ಟ್ವಿಟರ್, ಇನ್ಸ್ಟಾಗ್ರಾಂ ಮುಂತಾದ ಜಾಲತಾಣಗಳ  ಸಂಪರ್ಕ ಕ್ರಾಂತಿಯಿಂದ ಆದ ಕೆಲವು ಒಳ್ಳೆಯ ಬೆಳವಣಿಗೆಗಳಲ್ಲಿ ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಬಹಳ ಉಪಯೋಗವಾಗಿದೆ ಎಂಬುದನ್ನು ಗಮನಿಸಬಹುದು.

Image

ಡಾ. ಬಾಬು ರಾಜೇಂದ್ರ ಪ್ರಸಾದ್ ನೆನಪಿಗಾಗಿ ವಕೀಲರ ದಿನ

ಡಿಸೆಂಬರ್ ೩ ವಕೀಲರ ದಿನ. ಈ ದಿನವು ಸ್ವತಂತ್ರ ಭಾರತದ ಮೊದಲ ರಾಷ್ಟ್ರಪತಿಯಾದ ಡಾ.ಬಾಬು ರಾಜೇಂದ್ರ ಪ್ರಸಾದ್ ಅವರ ಜನ್ಮದಿನ. ರಾಜೇಂದ್ರ ಪ್ರಸಾದ್ ಅವರು ಶ್ರೇಷ್ಟ ವಕೀಲರಾಗಿದ್ದರು. ಸ್ವಾತಂತ್ರ್ಯ ಪೂರ್ವದಲ್ಲಿ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ಬಹುತೇಕ ಮಂದಿ ವಕೀಲಿ ವೃತ್ತಿ ಮಾಡುತ್ತಿದ್ದರು.

Image

ಸಂಬಾರ ಪದಾರ್ಥಗಳು

ಪುಸ್ತಕದ ಲೇಖಕ/ಕವಿಯ ಹೆಸರು
ಡಾ.ವಸುಂದರಾ ಭೂಪತಿ
ಪ್ರಕಾಶಕರು
ನವಕರ್ನಾಟಕ ಪ್ರಕಾಶನ, ಕ್ರೆಸೆಂಟ್ ರಸ್ತೆ, ಬೆಂಗಳೂರು.
ಪುಸ್ತಕದ ಬೆಲೆ
ರೂ.೧೫೦.೦೦ ಮುದ್ರಣ : ೨೦೧೬

ಸಂಬಾರ ಪದಾರ್ಥಗಳು ಪುಸ್ತಕ ಬರೆದ ಡಾ.ವಸುಂದರಾ ಭೂಪತಿ ವೃತ್ತಿಯಲ್ಲಿ ಖ್ಯಾತ ವೈದ್ಯೆ. ಪೃವೃತ್ತಿಯಲ್ಲಿ ಸಾಹಿತಿಯಾದ ಇವರ ಹಲವಾರು ಪುಸ್ತಕಗಳು ಪ್ರಕಟಗೊಂಡಿವೆ. ಇಂಗ್ಲಿಷ್, ಹಿಂದಿ ಭಾಷೆಗೆ ಇವರ ಹಲವು ಪುಸ್ತಕಗಳು ಅನುವಾದಗೊಂಡಿವೆ.