ಬಾಳಿಗೊಂದು ಚಿಂತನೆ - 17 (ಚಾಣಕ್ಯ ನೀತಿ)

ನಾವು ಬದುಕಿರುವಾಗಲೇ, ನಮ್ಮ ಶರೀರದಲ್ಲಿ ಶಕ್ತಿ ಇರುವಾಗಲೇ ಏನನ್ನಾದರೂ ಸಾಧಿಸಬೇಕು. ತನ್ನ ಮನಸ್ಸಿನಲ್ಲಿರುವ ಆಸೆಯನ್ನು ಸಾಧ್ಯವಿದ್ದಷ್ಟೂ ಆರೋಗ್ಯಕರವಾಗಿ ಪೂರೈಸಿಕೊಳ್ಳಬೇಕು. ತಾನೇನಾದರೂ ಈ ಬದುಕಲ್ಲಿ ಮಾಡಬೇಕೆಂಬ ಕನಸನ್ನು ಕಂಡಿದ್ದರೆ ಅದನ್ನು ಪೂರೈಸುವಲ್ಲಿ, ಸಾಧಿಸುವಲ್ಲಿ ಪ್ರಯತ್ನಿಸಿ, ಸಫಲನಾಗಬೇಕು. ನಾವು ಈ ಜಗತ್ತನ್ನೇ ಬಿಟ್ಟು ಹೋದ ಮೇಲೆ, ಸಾಧಿಸುವುದಾದರೂ ಏನಿದೆ?

Image

ಡಿಸೆಂಬರ್ ೧೦- ಮಾನವ ಹಕ್ಕುಗಳ ದಿನಾಚರಣೆ

ಮಾನವ ಹಕ್ಕುಗಳ ರಕ್ಷಣೆ ನಮ್ಮೆಲ್ಲರ ಹೊಣೆ. ಮಾನವ ಹಕ್ಕುಗಳ ಪರಿಧಿ ಅಥವಾ ವ್ಯಾಪ್ತಿ ವಿಶಾಲವಾದ್ದು. ನಾವುಗಳು ನಾಗರಿಕರಾಗಿ ಬದುಕಲು ಅನಿವಾರ್ಯ ಸಹ. ಬೇರೆಯವರ ಸ್ವಾತಂತ್ರ್ಯವನ್ನು ಹರಣ ಮಾಡುವ, ತುಳಿಯುವ, ಕಸಿಯುವ ಅಧಿಕಾರ ಖಂಡಿತಾ ನಮಗಿಲ್ಲ. ಇಲ್ಲಿ ಪರಸ್ಪರ ತಿಳುವಳಿಕೆ ಅಗತ್ಯ. ಪ್ರಜಾಪ್ರಭುತ್ವದ ಜೀವಂತಿಕೆಯೂ ಹೌದು.

Image

ಆಟಕ್ಕೆ ವಿದಾಯ ಹೇಳಿದ ಮಗು ಮುಖದ ‘ಪಾರ್ಥಿವ್'

‘ಧೋನಿಯವರು ಭಾರತ ಟೀಂಗೆ ಬರುವ ಮೊದಲೇ ನಾನು ತಂಡದಲ್ಲಿ ಬೇರೂರಬೇಕಿತ್ತು. ಆದರೆ ನಾನು ಅದರಲ್ಲಿ ಸಫಲನಾಗಲಿಲ್ಲ. ಈಗ ಧೋನಿಯನ್ನು ದೂಷಿಸಿ ಪ್ರಯೋಜನವಿಲ್ಲ' ಎಂಬ ಅಪ್ಪಟ ಕ್ರೀಡಾ ಸ್ಪೂರ್ತಿಯ ಮಾತುಗಳನ್ನು ಆಡಿದ್ದು ಬೇರೆ ಯಾರೂ ಅಲ್ಲ, ಮುದ್ದು ಮಗು ಮುಖದ, ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಪಾರ್ಥಿವ್ ಪಟೇಲ್. ಮಹೇಂದ್ರ ಸಿಂಗ್ ಧೋನಿಯವರು ಬಂದ ಬಳಿಕ ಪಾರ್ಥಿವ್ ಪಟೇಲ್ ಅವರಿಗೆ ಭಾರತ ತಂಡದಲ್ಲಿ ಆಡುವ ಅವಕಾಶಗಳು ಕಮ್ಮಿ ಆದುವು.

Image

ನಮ್ಮ ಹೆಮ್ಮೆಯ ಭಾರತ (ಭಾಗ 35- 36)

ಕೃಷಿ ಮತ್ತು ವಾಣಿಜ್ಯ
೩೫.ಭಾರತದ ಹೈನಪಶುಗಳ ಸಂಖ್ಯೆ ಜಗತ್ತಿನಲ್ಲೇ ಅತ್ಯಧಿಕ
ಭಾರತದಲ್ಲಿ ದನಗಳನ್ನು "ಗೋಮಾತೆ" ಎಂದು ಪೂಜಿಸಲಾಗುತ್ತದೆ. ಸಂಕ್ರಾಂತಿ ಮತ್ತು ದೀಪಾವಳಿ ಹಬ್ಬಗಳ ಸಂದರ್ಭದಲ್ಲಿ ಗೋವುಗಳನ್ನು ಅಲಂಕರಿಸಿ ಪೂಜಿಸಲಾಗುತ್ತದೆ. ಹಳ್ಳಿಗಳಲ್ಲಿ ಗೋಮಾಳಕ್ಕೆ ಮತ್ತು ನಗರಗಳಲ್ಲಿ ಬೀದಿಗಳಲ್ಲಿ ದನಗಳನ್ನು ಅಡ್ಡಾಡಲು ಬಿಡುತ್ತಾರೆ. ದನಗಳು ದೇವರ ಕೊಡುಗೆ ಎಂದು ಹಿಂದೂಗಳು ನಂಬುತ್ತಾರೆ. ಆದ್ದರಿಂದ ದನದ ಮಾಂಸವನ್ನು ಹಿಂದೂಗಳು ತಿನ್ನುವುದಿಲ್ಲ. ಗೋಮಾಂಸ ಮಾರಾಟವನ್ನು ಹಲವು ರಾಜ್ಯಗಳಲ್ಲಿ ನಿಷೇಧಿಸಲಾಗಿದೆ.

Image

ಕರಾವಳಿಯ ಮನೆಯಲ್ಲೊಂದು ಮುಂಜಾನೆ...

 

ಎವೆಯಿಕ್ಕದೆ ನೋಡಿದೆ. ಹಾಗೇ ನೋಡ್ತಾ ಹೋದೆ. ಎಂತಹ ಅದ್ಭುತ ಜೋಡಿ, ಉಪ್ಪಿಟ್ಟು ಅವಲಕ್ಕಿಯದ್ದು. (ನಮ್ಮತುಳು ಭಾಷೆಯಲ್ಲಿದು ಸಜ್ಜಿಗೆ ಬಜಿಲ್ ) ಕೆಂಪು ಕೆಂಪಾದ ಒರಟಿನ ಚೆಲುವ ಚೆನ್ನಿಗನ ಜೊತೆ, ಬೆಳ್ಳಗಿನ, ಮೃದುವಾದ ಬಾಲೆ. ಜೋಡಿ ಅಂದ್ರೆ ಹೀಗಿರಬೇಕು ಅನ್ನಿಸಿತು.

Image

ಗುರುಗಳ ಗುರು ನಾರಾಯಣ

ಪುಸ್ತಕದ ಲೇಖಕ/ಕವಿಯ ಹೆಸರು
ಪೇರೂರು ಜಾರು
ಪ್ರಕಾಶಕರು
ತೂಟೆ ಪ್ರಕಟನಾಲಯ, ಅಂಗಡಿ ಮನೆ, ಪೇರೂರು - 576213, ಉಡುಪಿ ಜಿಲ್ಲೆ.
ಪುಸ್ತಕದ ಬೆಲೆ
ರೂ. 150.00. ಮುದ್ರಣ; 2018

*ಪೇರೂರು ಜಾರು ಅವರ ಮಹಾಕಾವ್ಯ "ಗುರುಗಳ ಗುರು ನಾರಾಯಣ*"

ಡಿಸೆಂಬರ್ ೭ : ಎರಡು ವಿಶೇಷತೆಗಳ ದಿನ

ಮೊನ್ನೆ ತಾನೇ ಡಿಸೆಂಬರ್ ೭ ಕಳೆದು ಹೋಯಿತು. ಆಯಾ ದಿನದ ವಿಶೇಷತೆಗಳನ್ನು ಗುರುತಿಸುವವರು ಆ ದಿನದ ಎರಡು ಮಾಹಿತಿಗಳನ್ನು ಗಮನಿಸಿರಬಹುದು. ದಿನ ವಿಶೇಷದ ಬಗ್ಗೆ ತಿಳಿಯದವರಿಗಾಗಿ ಚುಟುಕಾದ ಮಾಹಿತಿ ಇಲ್ಲಿ ನೀಡ ಬಯಸುವೆ.

Image

ಬದನೆಕಾಯಿ ಮಸಾಲೆ ಖಾರ ಗೊಜ್ಜು

Image

ಸಣ್ಣ ಗಾತ್ರದ ಬದನೆಕಾಯಿಗಳನ್ನು ಸ್ವಚ್ಛ ಗೊಳಿಸಿ, ಅರಶಿನ ಮತ್ತು ಉಪ್ಪು ಬೆರೆಸಿದ ನೀರಿನಲ್ಲಿ  ಸಣ್ಣ ಸಣ್ಣ ಹೋಳುಗಳನ್ನಾಗಿ ಮಾಡಿ ಹಾಕಬೇಕು. ನೀರುಳ್ಳಿಯನ್ನು ತೆಳ್ಳಗೆ ಕತ್ತರಿಸಿಟ್ಟು ಕೊಳ್ಳಬೇಕು. ಬಾಣಲೆಗೆ  ಸಾಸಿವೆ, ಚಿಟಿಕೆ ಉದ್ದಿನಬೇಳೆ, ಜೀರಿಗೆ, ಒಣಮೆಣಸು, ಎಣ್ಣೆ, ಅರಶಿನ ಹುಡಿ, ಚಿಟಿಕೆ ಇಂಗು, ಹಾಕಿ ಒಗ್ಗರಣೆ ಆಗುವಾಗ, ಕರಿಬೇವು, ಬೆಳ್ಳುಳ್ಳಿ ಬೀಜ ಹಾಕಿ, ಜೊತೆಗೆ ನೀರುಳ್ಳಿ ಸೇರಿಸಿ ಹುರಿಯಬೇಕು.

ಬೇಕಿರುವ ಸಾಮಗ್ರಿ

ಬದನೆಕಾಯಿ (ಸಣ್ಣ ಗಾತ್ರ) ೩, ಈರುಳ್ಳಿ ೧, ಅರಶಿನ ಸ್ವಲ್ಪ, ಉಪ್ಪು ರುಚಿಗೆ ತಕ್ಕಷ್ಟು, ಒಗ್ಗರಣೆಗೆ ಒಣ ಮೆಣಸು, ಎಣ್ಣೆ, ಉದ್ದಿನ ಬೇಳೆ, ಚಿಟಿಕೆ ಇಂಗು, ಕರಿಬೇವು, ಬೆಳ್ಳುಳ್ಳಿ ಬೀಜಗಳು, ಸಣ್ಣ ತುಂಡು ಶುಂಠಿ, ಟೊಮೆಟೋ ೨, ಬೆಲ್ಲ ರುಚಿಗೆ ಬೇಕಾಗುವಷ್ಟು, ಗಾಂಧಾರಿ ಮೆಣಸು ೧೦-೧೫, ಕಾಯಿಮೆಣಸು ೪, ಮಸಾಲೆ (ಸಾಂಬಾರು) ಹುಡಿ ೨ ಚಮಚ, ಹುಣಸೆ ಹುಳಿ ಬೇಕಾಗುವಷ್ಟು, ಕೊತ್ತಂಬರಿ ಸೊಪ್ಪು, ಸಣ್ಣ ನಿಂಬೆಹಣ್ಣು