ಬಯಲಲ್ಲಿ ಅಡಗಿರುವ 501 ಸತ್ಯಗಳು

ಪುಸ್ತಕದ ಲೇಖಕ/ಕವಿಯ ಹೆಸರು
ಇಂಗ್ಲಿಷ್ ಮೂಲ: ಪಿ.ದೈವಮುತ್ತು ಕನ್ನಡಕ್ಕೆ: ಆದರ್ಶ್ ಗೋಖಲೆ
ಪ್ರಕಾಶಕರು
ಅವನಿ ಪ್ರಕಾಶನ, ಕುಂಭಾಸಿ, ಕುಂದಾಪುರ-೫೭೬೨೫೭
ಪುಸ್ತಕದ ಬೆಲೆ
ಬೆಲೆ: ರೂ.೮೦.೦೦

ಹಿಂದೂ ವಾಯ್ಸ್ ಸಂಪಾದಕರಾದ ಪಿ.ದೈವಮುತ್ತು ಅವರು ಆಂಗ್ಲ ಭಾಷೆಯಲ್ಲಿ ಬರೆದ ‘655 thruths’ ಎಂಬ ಪುಸ್ತಕವನ್ನು ಆದರ್ಶ್ ಗೋಖಲೆಯವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಪಿ. ದೈವಮುತ್ತು ಅವರು ಹೇಳುವಂತೆ ‘ಇಸ್ಲಾಂ, ಕ್ರೈಸ್ತ ಹಾಗೂ ಕಮ್ಯೂನಿಷ್ಟರಂತೆ ‘ಜಾತ್ಯಾತೀತವಾದ' ಎಂಬುದು ಹಿಂದೂಗಳ ಶತ್ರುವಾಗಿ ರೂಪುಗೊಳ್ಳುತ್ತಿರುವ ಹೊಸದಾದ ಮತ.

ದುಷ್ಟರ ಸಹವಾಸ... ಒಂದು ನೀತಿ ಕಥೆ

ಒಂದು ಪ್ರದೇಶದ ರಾಜನು ಕಾಡಿಗೆ ವಿಹಾರಕ್ಕೆಂದು ತೆರಳಿದ್ದನು. ಅಲ್ಲಿ ರಾಜನಿಗೆ ತುಂಬಾ ದಣಿವಾಯಿತು. ಆಗ ರಾಜನು ಒಂದು ಮರದ ಕೆಳಗೆ ಬಂದು ನಿಂತುಕೊಂಡ. ರಾಜನನ್ನು ಗಮನಿಸಿದ ಒಂದು ಕೋಗಿಲೆಯು ಆತನಿಗೆ ನೀರಿರುವ ಸ್ಥಳವನ್ನು ತೋರಿಸಿ ಒಂದು ಹಣ್ಣನ್ನು ಕೂಡ ತಂದುಕೊಟ್ಟಿತು. ರಾಜನು ಹಣ್ಣು ತಿಂದು ಸಂತೃಪ್ತನಾದ. ಕೋಗಿಲೆಯು ತನ್ನ ಇಂಪಾದ ಕಂಠದಿಂದ ಹಾಡಲಾರಂಭಿಸಿತು. ಹಾಡನ್ನು ಕೇಳುತ್ತಾ ರಾಜನು ನಿದ್ರೆಗೆ ಜಾರಿದ.

Image

ಮಣ್ಣಿನ ಫಲವತ್ತತೆಯನ್ನು ಉಳಿಸೋಣ ಬನ್ನಿ..!

ಡಿಸೆಂಬರ್ ೫ ವಿಶ್ವ ಮಣ್ಣಿನ ದಿನ. ೨೦೦೨ನೇ ಇಸವಿಯಲ್ಲಿ ಇಂಟರ್ ನ್ಯಾಷನಲ್ ಯೂನಿಯನ್ ಆಫ್  ಸಾಯಿಲ್ (ಮಣ್ಣು) ಸೈನ್ ಎಂಬ ಸಂಸ್ಥೆಯು ಮೊತ್ತ ಮೊದಲಿಗೆ ಮಣ್ಣಿನ ದಿನವನ್ನು ಆಚರಿಸಿತು.

Image

ಭಾರತೀಯ ನೌಕಾಪಡೆಯ ದಿನ

ಡಿಸೆಂಬರ್ ೪ ಭಾರತೀಯ ನೌಕಾ ಪಡೆಯ ದಿನ ( Indian Navy Day) ಮತ್ತು ಡಿಸೆಂಬರ್ ೫ ವಿಶ್ವ ಮಣ್ಣು ದಿನ (World Soil Day). ಈ ಎರಡೂ ದಿನಗಳ ಬಗ್ಗೆ ಒಂದಿಷ್ಟು ತಿಳಿದುಕೊಳ್ಳೋಣ.

Image

ಸೋಮಾರಿ ಸಿಂಹದ ಪಾಡು

ಸೋಮಾರಿ ಸಿಂಹ ಮರದ ನೆರಳಿನಲ್ಲಿ ಗೊರಕೆ ಹೊಡೆಯುತ್ತಾ ಮಲಗಿತ್ತು. ಆಕಾಶದಲ್ಲಿ ಸೂರ್ಯ ಬೆಳಗುತ್ತಿದ್ದರೆ, ತನ್ನ ಬಾಲದಿಂದ ನೊಣಗಳನ್ನು ಓಡಿಸುತ್ತಾ ಅದು ಆರಾಮವಾಗಿ ಮಲಗಿತ್ತು.

ಸೋಮಾರಿ ಸಿಂಹಕ್ಕೆ ಮಲಗುವುದರ ಹೊರತಾಗಿ ಬೇರೆನನ್ನೂ ಮಾಡಲು ಇಷ್ಟವಿರಲಿಲ್ಲ. ಸಾಧ್ಯವಿದ್ದರೆ ಹಗಲುರಾತ್ರಿಯೆಲ್ಲ ಸೋಮಾರಿ ಸಿಂಹ ಮಲಗಲು ತಯಾರಿತ್ತು. ಯಾವಾಗಾದರೊಮ್ಮೆ ಏನಾದರೂ ತಿನ್ನಲಿಕ್ಕಾಗಿ ಎದ್ದರೆ ಸಾಕು ಎಂದು ಅದು ಹಗಲುಗನಸು ಕಾಣುತ್ತಿತ್ತು. ಆಗ, ಅಲ್ಲೊಂದು ಹೈನಾ ಓಡಿ ಹೋಯಿತು. ಅದು, "ಸೋಮಾರಿ ಸಿಂಹ, ಏಳು. ನಿನಗೆ ನೀರಿನಲ್ಲಿ ಈಜುವುದು ಬೇಡವಾಗಿದ್ದರೆ ಏಳು. ಯಾಕೆಂದರೆ ಇನ್ನೇನು ಮಳೆ ಸುರಿಯಲಿದೆ" ಎನ್ನುತ್ತಾ ಅಲ್ಲಿಂದ ದೂರ ಹೋಯಿತು.

Image

ಹಾಗಲಕಾಯಿ ತುಂಡು ಮಸಾಲಾ

Image

ಮೊದಲಿಗೆ ಲಿಂಬೆ ಹಣ್ಣಿನ ಗಾತ್ರದ ಹುಣಸೆ ಹುಳಿಯ ರಸವನ್ನು ಮಾಡಿ ಇಟ್ಟುಕೊಂಡಿರಿ. ಮೆಂತ್ಯೆ, ಕೊತ್ತಂಬರಿ ಮತ್ತು ಬ್ಯಾಡಗಿ ಮೆಣಸನ್ನು ಹುರಿದು ಮಿಕ್ಸಿಯಲ್ಲಿ ಹಾಕಿ ಹುಡಿ ಮಾಡಿರಿ. ಹಾಗಲಕಾಯಿಯನ್ನು ವೃತ್ತಾಕಾರದಲ್ಲಿ ಸ್ವಲ್ಪ ದೊಡ್ಡ ಗಾತ್ರದಲ್ಲಿ ಕತ್ತರಿಸಿ ಇಟ್ಟುಕೊಂಡಿರಿ. ಒಲೆಯ ಮೇಲೆ ಬಾಣಲೆಯನ್ನು ಇರಿಸಿ ಮೊದಲೇ ಕತ್ತರಿಸಿದ ಹಾಗಲ ಕಾಯಿಯ ತುಂಡುಗಳನ್ನು ಅದಕ್ಕೆ ಹಾಕಿ.

ಬೇಕಿರುವ ಸಾಮಗ್ರಿ

ಹಾಗಲಕಾಯಿ ೨ (ಮಧ್ಯಮ ಗಾತ್ರ), ಹುಣಸೆಹುಳಿ - ಲಿಂಬೆ ಹಣ್ಣು ಗಾತ್ರದ್ದು, ಬೆಲ್ಲ - ರುಚಿಗೆ ತಕ್ಕಷ್ಟು, ಕೊತ್ತಂಬರಿ ೩ ಸಣ್ಣ ಚಮಚ, ಮೆಂತ್ಯೆ  ಅರ್ಧ ಚಮಚ, ಬ್ಯಾಡಗಿ ಮೆಣಸಿನಕಾಯಿ ೫, ಕಾಯಿ ಮೆಣಸು ೧, ರುಚಿಗೆ ತಕ್ಕಷ್ಟು ಉಪ್ಪು.

ಒಗ್ಗರಣೆಗೆ: ಎಣ್ಣೆ, ಸಾಸಿವೆ, ಕರಿಬೇವು ಸೊಪ್ಪು