ಪರಾಗದಾನಿಗಳನ್ನು ಉಳಿಸೋಣ ಬನ್ನಿ…! (ಭಾಗ ೨)
1 day 10 hours ago - Ashwin Rao K Pಅದಾದ ತರುವಾಯ ಎಪ್ರೀಲ್ ತಿಂಗಳಿಗೆ ಜೇನಿನ ದೊಡ್ದ ಕೊಯಿಲು. ವಾರಕ್ಕೊಮ್ಮೆ ೧೫ ದಿನಕ್ಕೊಮ್ಮೆ ಹತ್ತನಾಜೆ ತನಕವೂ ಜೇನು ತೆಗೆಯುತ್ತಿದ್ದೆವು. ಸುಮಾರು ೧೦ ಲೀಟರಿಗೂ ಹೆಚ್ಚು ಹಿಡಿಯುವ ಪಾತ್ರೆ. ಅದರ ತುಂಬಾ ಜೇನು. ಜೇನು ಪೆಟ್ಟಿಗೆಯ ಸಮೀಪ ಹೋಗುವಾಗಲೇ ಆ ಪಟ್ಟಿಗೆಯಲ್ಲಿ ಜೇನು ಆಗಿದೆ ಎಂಬುದನ್ನು ಅಲ್ಲಿ ಬರುವ ಪರಿಮಳ ತಿಳಿಸುತ್ತಿತ್ತು. ಅದು ಕುಂಟು ನೇರಳೆ ಹೂವಿನ ಜೇನು. ಆಗ ಈಗ ರಬ್ಬರ್, ಅಡಿಕೆ ಬೆಳೆಯಲಾಗುತ್ತಿರುವ ಗುಡ್ಡ ಬೆಟ್ಟಗಳಲ್ಲೆಲ್ಲಾ ಕುಂಟು ನೇರಳೆ, ನೇರಳೆ ಮರಗಳು ಇದ್ದವು. ಜೇನು ನೊಣಗಳಿಗೆ ಅದು ಗರಿಷ್ಟ ಪ್ರಮಾಣದ ಮಧುವನ್ನು ಕೊಡುತ್ತಿತ್ತು. ಅ ಸಮಯದಲ್ಲಿ ಎಲ್ಲೋ ಪಾಲಾಗಿ ಬಂದು ಆಯಾಸ ಪರಿಹಾರಕ್ಕಾಗಿ ಮರದ ಗೆಲ್ಲುಗಳಲ್ಲಿ ಆಶ್ರಯ ಪಡೆಯುವ ಜೇನು ಕುಟುಂಬಗಳು ಎಷ್ಟೋ ದೊರೆಯುತ್ತಿದ್ದವು. ಜೇನು ನೊಣಗಳು ಹಾರಾಡುವುದು ಕಂಡರೆ ಅದು ತಗ್ಗಿನಲ್ಲಿ ಇದ್ದರೆ, ಅದಕ್ಕೆ ನೀರು ಚೆಲ್ಲುವಂತೆ ಹೇಳುತ್ತಿದ್ದರು. ಹಾಗೆ ಮಾಡುವುದರಿಂದ ನೊಣಗಳ ರೆಕ್ಕೆ ಒದ್ದೆಯಾಗಿ ಎಲ್ಲಾದರೂ ಅಲ್ಲೇ ಪಕ್ಕದಲ್ಲಿ ತಗ್ಗಿನಲ್ಲಿ ವಿರಮಿಸುತ್ತಿದ್ದವು. ಆ ನಂತರ ಅದನ್ನು ಹಿಡಿದು ಪೆಟ್ಟಿಗೆಗೆ ಕೂಡಿಹಾಕುತ್ತಿದ್ದೆವು. ಕೆಲವೊಮ್ಮೆ ಜೇನು ಕುಟುಂಬ ಇದ್ದರೂ ಪೆಟ್ಟಿಗೆ ಇಲ್ಲದೆ ಅದನ್ನು ಬಿಟ್ಟುದೂ ಉಂಟು. ಇಷ್ಟು ಅಲ್ಲದೆ ಆಗ ಎಲ್ಲಿ ನೋಡಿದರಲ್ಲಿ ಕೋಲು ಜೇನು. ಅದು ನಾನು ಪಿಯುಸಿ ಓದುವ ಸಮಯ ಇದ್ದಿರಬೇಕು. ಸುಮಾರು ೧೦ ಕೋಲು ಜೇನಿನ ಕುಟುಂಬಗಳು ನಮ್ಮ ಹೊಲದಲ್ಲಿ ಇದ್ದವು. ಕೆಲವು ಬಿದಿರು ಮೆಳೆಯಲ್ಲಿ, ಮತ್ತೆ ಕೆಲವು ಕರಿ ಮೆಣಸಿನ ಬಳ್ಳಿಯಲ್ಲಿ, ಕೆಲವು ಕಾಡು ಗಿಡಗಳಲ್ಲಿ ಈ ಜೇನು ಕುಟುಂಬ ಕೋಲಿನ ಮೇಲೆ ಎರಿ ಬಿಟ್ಟು ವಾಸಿಸುತ್ತಿದ್ದವು.
ನಮಗೆ ಆ ಜೇನನ್ನು ತೆಗೆಯುವ ಉಪಾಯವನ್ನು ಹೇಳಿಕೊಟ್ಟಿದ್ದರು. ಆ ಪ್ರಕಾರ ವಾರ ವಾರವ… ಮುಂದೆ ಓದಿ...