ವಿಕಸಿತ ಭಾರತ
22 hours 39 minutes ago - ಬರಹಗಾರರ ಬಳಗಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪೀ ಗರೀಯಸಿ” ಎಂಬ ಪರಮ ಶ್ರೇಷ್ಠವಾದ ಮಾತು ಮಾಂಡೂಕ ಉಪನಿಷತ್ ನಲ್ಲಿದೆ. ನಾವು ಹುಟ್ಟಿದ ದೇಶ ಸ್ವರ್ಗಕ್ಕಿಂತ ಶ್ರೇಷ್ಠವೆಂದೇ ಈ ಶ್ಲೋಕದ ಸಂದೇಶ. ದೇಶದ ಬಗ್ಗೆ ಗೌರವ ಮತ್ತು ಅಭಿಮಾನ ಇರಲೇ ಬೇಕಾದುದು ನಮ್ಮೆಲ್ಲರ ಸಹಜ ಕರ್ತವ್ಯ. ಜನರ ಜೀವನ ಮಟ್ಟ ಹಿಮಾಲಯದೆತ್ತರ ಏರಲು ಭಾರತ ಎಲ್ಲ ಕ್ಷೇತ್ರಗಳಲ್ಲೂ ವಿಕಸನ ಹೊಂದಬೇಕು. ಕೇಂದ್ರ ಸರಕಾರ 2024-25ನೇ ಸಾಲಿನ ಮುಂಗಡ ಪತ್ರದಲ್ಲಿ ವಿಕಸಿತ ಭಾರತದ ಮಹಾ ಸಂಕಲ್ಪದೊಂದಿಗೆ ಹೊಸ ಮನ್ವಂತರದ ಬಾಗಿಲು ತೆರೆಯುವತ್ತ ಗಮನವನ್ನು ಹರಿಸಿರುವುದು ಶ್ಲಾಘನೀಯ. 2047ಕ್ಕೆ ನಮಗೆ ಸ್ವಾತಂತ್ರ್ಯ ದೊರೆತು ಶತ ಸಂವತ್ಸರಗಳಾಗುತ್ತದೆ. ಈ ಹೊತ್ತಿಗೆ ಭಾರತ ಸಂಪೂರ್ಣವಾಗಿ ವಿಕಸಿಸ ಬೇಕೆಂಬುದು ಕೇಂದ್ರ ಸರಕಾರದ ದೃಢ ನಿಲುವು. ಅಭಿವೃದ್ಧಿ ಕೆಲಸಗಳಿಂದ ಮಾತ್ರವೇ ಭಾರತ ವಿಕಸಿಸದು. ಭಾರತ ವಿಕಸಿಸಲು ಅಭಿವೃದ್ಧಿ ಕೆಲಸಗಳ ಜೊತೆಗೆ ಪ್ರಜಾ ಕೋಟಿಯು ತಮ್ಮನ್ನು ಮೊತ್ತ ಮೊದಲಾಗಿ ಸರ್ವಾಂಗೀಣವಾಗಿ ವಿಕಸನಗೊಳಿಸಬೇಕು.
ಭಾರತ ವಿಕಸಿಸಲು ಭಾರತೀಯರೆಲ್ಲರೂ ಕಂಕಣಿತರಾಗಬೇಕಾಗಿದೆ. “ಭಾರತ” ಇದರಲ್ಲಿರುವ ಅಕ್ಷರಗಳನ್ನು ವಿಮರ್ಶೆ ಮಾಡಿದರೆ “ಭಾ” ಎಂದರೆ ಜ್ಞಾನ. “ರತ” ಎಂದರೆ “ರತಿಸು” ಅಥವಾ “ಅನುಭವಿಸು” ಎಂದರ್ಥ. ಜ್ಞಾನವನ್ನು ಯಾವಾತ ಅನುಭವಿಸಿ ಆನಂದಿಸುವನೋ ಅವನೇ ಭಾರತೀಯ. ನಮ್ಮ ಪ್ರಮಾಣ ಪತ್ರಗಳಲ್ಲಿ ರಾಷ್ಟ್ರೀಯತೆಯನ್ನು ಭಾರತೀಯ ಎಂದೇ ದಾಖಲಿಸುತ್ತೇವೆ. ಯಾರನ್ನೇ ಆಗಲಿ, ಭಾರತೀಯ ಎನ್ನ ಬೇಕಾದರೆ ಆತ ಮತ್ತು ಆಕೆ ಇಲ್ಲಿನ ಜ್ಞಾನ ಮತ್ತು ಆಧ್ಯಾತ್ಮಿಕತೆಯನ್ನು ಅನುಸರಣೆ ಮಾಡಿರಬೇಕು. ಭಾರತೀಯ ಸಿದ್ಧಾಂತಗಳು ಮತ್ತು ಆಚರಣೆಗಳನ್ನು ಬದುಕಿನೊಂದಿಗೆ ಸಮನ್ವಯವಾಗಬೇಕು. ನೈಜ ಅರ್ಥದ ಭಾರತೀಯರಾಗ ಬೇಕು. ನೈಜ ಭಾರತೀಯತೆಯ ಧಾರಕರಿಂದ ಬಾರತವು ವಿಕಸಿಸಲು ಖಂಡ… ಮುಂದೆ ಓದಿ...