February 2014

February 23, 2014
      ಸಾವು ಬದುಕಿನ ಒಂದು ದಿವ್ಯ ಕ್ಷಣ ಅದು ದೊಡ್ಡವ ಸಣ್ಣವ ಬಡವ ಬಲ್ಲಿದ ಆ ಜಾತಿ ಈ ಜಾತಿ ಆ ದೇಶದವ ಈ ದೇಶದವ ಜ್ಞಾನಿ ಅಜ್ಞಾನಿ ಎನ್ನುವ ಬೇಧ ಅದಕಿಲ್ಲ ಅವರು ಯಾರೆ ಇರಲಿ ಜವರಾಯ ಬಂದೆರಗಿ ಬಿಡುತ್ತಾನೆ ಆತ ಜೀವಾತ್ಮಗಳನು ಮುಕ್ತಗೊಳಿಸುತ್ತಾನೆ…
February 23, 2014
  ಪದಬಂಧವು ಪದಗಳ ರಂಗೋಲಿ. ಈ ಪದಗಳ ಚಿತ್ತಾರ ತುಂಬಾ ಪ್ರಾಚೀನವಾದುದು, ಇದು  ಆಯಾ  ಭಾಷೆ, ಸಂಸ್ಕೃತಿ, ಕಲೆ, ನಾಗರೀಕತೆ ಮತ್ತು ಅದರ ಸೃಷ್ಟಿ ಕರ್ತನ ಸ್ರಜನಶೀಲತೆಯ  ಆಧಾರದ ಮೇಲೆ ವೈವಿಧ್ಯತೆ ಪಡೆದುಕೊಳ್ಳುತ್ತದೆ.  ಕನ್ನಡದಲ್ಲಿಯೂ ಕೂಡ ನಾವು…
February 23, 2014
ಒಳಗಿನದೇನೊ ಚಮತ್ಕಾರದ ಶಕ್ತಿ ತೇಜ - ಮನಸೊ, ಚಿತ್ತವೊ, ಅಂತರಾತ್ಮವೊ ಅಥವಾ ಸ್ವೇಚ್ಛೆಯಲಿರಬಯಸುವ ನಮ್ಮೊಳಗವಿತ ನಮ್ಮದೆ ಪ್ರತಿಬಿಂಬವೊ - ಅದರ ವಿವಿಧಾವತಾರದ ಅಗಣಿತ ಪ್ರಜ್ಞೆ ಪ್ರಪುಲ್ಲಗೊಳಿಸಿದಷ್ಟೆ ಸಹಜವಾಗಿ ಪ್ರಕ್ಷುಬ್ದಗೊಳಿಸುವ ಬಗೆ ಉಪಮಾತೀತ…
February 22, 2014
ವಿಷಯಾಸಕ್ತಿಯಲಿ ಮುಳುಗಿ ಮನ ತೊಳಲಾಡುತಿಹುದು ಕರ್ಮ, ಬಂಧಗಳೆನುವ ಬಲೆಯೊಳು ತಾನೆ ಸಿಲುಕಿಹುದು ತ್ಯಜಿಸಬೇಕೆಲ್ಲವ  ಎಂದೊಮ್ಮೊಮ್ಮೆ   ಮನಸಿಗನಿಸಿದರು ಸೋಲುವುದು ಮನ ಭೋಗ, ಲಾಲಸೆ ಮಾಯೆಯೆದುರು   ಇರಿಸಿಹನು ಎಲ್ಲವನು, ಎಲ್ಲರನು ಅವನಿಚ್ಚೆಯಂತೆ…
February 22, 2014
ತಿ.ನರಸೀಪುರದ ಸಮೀಪ ಗರ್ಗೇಶ್ವರಿ ಎಂಬ ಹಳ್ಳಿಯಿದೆ. ಈ ಊರಿನ ಮಧ್ಯದಲ್ಲಿ ಗರ್ಗೇಶ್ವರ ದೇಗುಲವಿದೆ. ಗರ್ಗ ಮಹರ್ಷಿಗಳು ಇಲ್ಲಿಕಠೋರ ತಪಸ್ಸು ಮಾಡಿದರೆಂದು ಆಗ ಶಿವನು ಪಾರ್ವತೀ ಸಮೇತ ಅರ್ಧನಾರೀಶ್ವರನಾಗಿ ದರ್ಶನ ಕೊಟ್ಟನೆಂದು ಐತಿಹ್ಯವಿದೆ.ಇಲ್ಲಿ…
February 22, 2014
(ಪರಿಭ್ರಮಣ..(05)ರ ಕೊಂಡಿ: http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%...)
February 22, 2014
ಮನದ ಅಪಾರ ಶಕ್ತಿಯ ವಿಸ್ಮಯ ಮಾತಲ್ಹಿಡಿಯಲಾಗದ ಮಹಾಕಾಯ. ಬರೆದು ಕಟ್ಟಿಡಲಾಗದ ಅನಂತ ವಿಸ್ತಾರದ ದಾಯ. ಅದರ ಯಾನದ ಪರಿಯನ್ನು ಸ್ವೇಚ್ಛೆಯೆನ್ನಬೇಕೊ, ಸ್ವಾತ್ಯಂತ್ರವೆನ್ನಬೇಕೊ ಎನ್ನುವ ಗೊಂದಲ ಒಂದೆಡೆಯಾದರೆ, ಅದನ್ನು ನಿಯಂತ್ರಿಸ ಬಯಸಿ ಕಡಿವಾಣ ಹಾಕಿ…
February 22, 2014
ಶಿಲ್ಪಿಯು ನೀನೆ ಶಿಲ್ಪವು ನೀನೆ ವಿಶ್ವವ ಸೃಷ್ಟಿಪ ಶಿಲೆಯೂನೀನೆ ಶೃತಿಯೂ ನೀನೆ ವೀಣೆಯು ನೀನೆ ಶೃತಿಯೊಳು ಹೊಮ್ಮಿದ ನಾದವು ನೀನೆ ಕಾರ್ಯವು ನೀನೆ ಕಾರಣ ನೀನೆ ಕಾರ್ಯ ಕಾರಣದ ಕರ್ತೃವು ನೀನೆ ನಿನ್ನೆಯು ನೀನೆ ನಾಳೆಯು ನೀನೆ ನಿನ್ನೆ ನಾಳೆಗಳ ಸೇತುವೆ…
February 21, 2014
ಕಳೆದ ವಾರವಷ್ಟೇ ನಾನು ತ೦ಗಿಯ೦ತೇ ಭಾವಿಸಿದ್ದ ಹಿ೦ದೂ ಹುಡುಗಿಗಾಗಿ ,ಮುಸ್ಲಿ೦ ಸಹೋದರರಿಬ್ಬರು ರಾಜಕಾರಣಿಯೊಬ್ಬನನ್ನು ಹತ್ಯೆಗೈದ ಘಟನೆಯ ಬಗ್ಗೆ ಬರೆದಿದ್ದೆ.ಈ ವಾರವೂ ಅ೦ಥದ್ದೇ ಒ೦ದು ಘಟನೆಯ ಬಗ್ಗೆ ಬರೆಯುತ್ತಿದ್ದೇನೆ.ಆದರೆ ಇದು ಕೊಲೆಯ೦ತಹ…
February 21, 2014
ಅದೇಕೊ ಇಂದು ಸಂಜೆ ಬರೀ ಭಾವಗೀತೆಯನ್ನು ಓದುತ್ತ ಮನಪರವಾಶವಾಯಿತು, ಲಕ್ಷ್ಮೀನಾರಯಣ ಭಟ್ಟರ ಎಲ್ಲಿಜಾರಿತೂ ಮನವೂ.... ಹಾಗೆ  ಅಡಿಗರ ಅಮೃತವಾಹಿನಿಯೊಂದು..... ಓದುತ್ತ ಇರುವಂತೆ, ಒಬ್ಬರೂ ಕೃಷ್ಣಪ್ರಸಾದ್ ಎನ್ನುವವರು ಯೂ-ಟುಭ್ ನ ಲಿಂಕ್ ಒಂದನ್ನು…
February 21, 2014
ಉಗ್ರಂ ಚಿತ್ರದ ಬಗ್ಗೆ ಹೇಳಬೇಕು ಅನಿಸುತ್ತಿದೆ. ಆದರೆ, ಆರಂಭದ 20 ನಿಮಿಷ ನೋಡದೆ ಇರೋದ್ರಿಂದ, ವಿಮರ್ಶ ಮಾಡೋದು ಎಷ್ಟು ಸರಿ ಅನ್ನೋ ಅನುಮಾನವೂ ಇದೆ. ಅದಾಗ್ಯೂ ಉಗ್ರಂ ಬಗ್ಗೆ  ಹೇಳಬೇಕು ಎಂದು ಬಲವಾದ ಉತ್ಸಾಹ ಮೂಡುತ್ತಿದೆ. ಕಾರಣ, ಉಗ್ರಂ ಅಷ್ಟು…
February 21, 2014
ಮಲೆನಾಡಿನ ಕಂಪಿನ ಸಿರಿಯೆ, ಭಾರತ ಮಾತೆಯ ಮಡಿಲಿನ ಮಗುವೆ, ಕನ್ನಡ ತಾಯಿಯ ಹೆಮ್ಮೆಯ ಕುಡಿಯೆ, ಕನ್ನಡ ಜನತೆಯ ನೆಚ್ಚಿನ ಕವಿಯೆ, ನಿಮ್ಮಿಂದ   ಅರಳಿದವು ಸುಂದರ ಕವನ,  ಓದಿದವರ ಮನಸಾಯಿತು ಪಾವನ, ಮರೆಯಲಾರದ ಸಾಹಿತ್ಯದ ನಂದನವನ ,  ಅಚ್ಚಳಿಯದಂತೆ…
February 21, 2014
ನಮ್ಮ‌ ಕಾಲೇಜಿನ‌ ವಾರ್ಷಿಕ‌ ಸ್ಮರಣ‌ ಸಂಚಿಕೆಗೆ (ರೇಷ್ಮೆ ಕೃಷಿ ಕಾಲೇಜು,ಚಿಂತಾಮಣಿ) ನನ್ನ‌ 'ಕನಸಿನ‌ ಸ್ವೀಟಿ' ಹನಿಗವನ‌ ಕೊಡಲು ಬಯಸಿದ್ದೇನೆ,ಆದ್ದರಿಂದ‌ ತಾವುಗಳು ಈ ಕವನದ‌ ಬಗ್ಗೆ ಅಭಿಪ್ರಾಯಗಳನ್ನು ತಿಳಿಸಬೇಕೆಂದು ಕೋರುತ್ತೇನೆ…
February 21, 2014
ಕೆಳದಿಯ ಬಸವರಾಜ ಭೂಪಾಲ ವಿರಚಿತ "ಶ್ರೀಶಿವತತ್ತ್ವರತ್ನಾಕರ" ಸಂಪುಟ 4ರ ಲೋಕಾರ್ಪಣೆ ಕೃತಿಯ ವಿಶೇಷಗಳು: ಒಟ್ಟು 13,000 ಶ್ಲೋಕಗಳು! ಹತ್ತು ವಿದ್ವಾಂಸರ ಮಂಡಳಿಯಿಂದ ಕೆಳದಿಯ ಅರಸ ಬಸವರಾಜ ಭೂಪಾಲನ ನೇತೃತ್ವದಲ್ಲಿ ಸಂಕಲನ!!. ವಿವಿಧ ಶಾಸ್ತ್ರ…
February 21, 2014
  ನಾಳೆ ಮಾಡೊ ಅಡುಗೆಗೆ ಅಂತ ಇಂದೇ ತರಕಾರಿ ಹೆಚ್ಚಿಟ್ಟ ಹಾಗೆ ನಾಳೆ ತೊಡೋ ಉಡುಗೆಯನ್ನು ಇಂದೇ ಇಸ್ತ್ರಿ ಮಾಡಿಟ್ಟುಕೊಂಡ ಹಾಗೆ ನಾಳೆ ಹೋಗೋ ಸಿನಿಮಾಕ್ಕಂತ ಇಂದೇ ಟಿಕೆಟ್ ಕೊಂಡಿಟ್ಟ ಹಾಗೆ ನಾಳೆ ಹುಟ್ಟೋ ಕೂಸಿಗಂತ ಇಂದೇ ಕುಲಾವಿ ಹೊಲೆದಿಟ್ಟ ಹಾಗೆ…
February 21, 2014
ನಿಂತಿಹುದವನರೂಪ ಕಣ್ಣಲ್ಲಿ ಮತ್ತವನ ಸ್ಪರ್ಶವೇ ನೆಲೆಸಿರಲು ಮೈಯಲ್ಲಿ ಮಾತು ಕಿವಿಯಲ್ಲಿರಲು ಮನಸು ಮನಸಲ್ಲಿರಲು ಬೇರೆ ಮಾಡುವುದೇನು ದೈವವಿನ್ನು ? ಪಾಕೃತ ಮೂಲ (ಹಾಲನ ಗಾಥಾ ಸತ್ತಸಯಿ ೨-೩೨) : ರೂಅಂ ಅಚ್ಛೀಸು ಠಿಅಂ  ಫರಿಸೋ ಅಂಗೇಸು ಜಂಪಿಅಂ…
February 20, 2014
ಮಾವು ಸವಿಯುವಾಗ ಬೇವನುಣಿಸಿದವರ ನೆನಪು ಮೃಷ್ಟಾನ್ನವನ್ನುಣ್ಣುವಾಗ ಗಂಜಿಯೂಟದ  ಮೆಲುಕು ನೀಡಬೇಕು ಮನಕೂ ತರಬೇತಿ ಬದುಕಸವಿನನುಭವಿಸಲು ಪೂರ್ತಿ
February 19, 2014
ಎಂದಿನಂತೆ ಆಫೀಸಿಗೆ ಹೊರಡುವ ದಾರಿಯಲ್ಲಿ ಇಂದೂ ನಡೆದಿದ್ದೆ. ಈಚಿನ ದಿನಗಳಲ್ಲಿ ತುಸು ಬಿಸಿಲು ಹೆಚ್ಚು; ಹೀಗಾಗಿ ಬೆಳಗಿನ ಹೊತ್ತಲೆ ಸೂರ್ಯ ಆಗಲೆ ಪ್ರಖರನಾಗಿ ಬೆವರಿಳಿಸುವ ದಿನಗಳು. ಆದರೆ ಇಂದೇಕೊ ಸ್ವಲ್ಪ ಕನಿಕರ ತೋರುತ್ತ ತುಸುವೆ ತಂಪಾಗಿರುವಂತೆ…
February 19, 2014
     ನೆನಪು ಎನ್ನುವುದು ಕ್ಷಣಾರ್ಧವೊಂದರಲಿ ಘಟಿಸಿ ಬಿಡುವಂತಹುದು   ಹಳೆಯ ಮಲ್ಲಿಗೆ ಬಳ್ಳಿ ಹೊಸ ಹೂವುಗಳರಳಿಸಿಕೊಂಡು ನಿಂತು ಬಿಡುವಂತೆ ಏಕೆ ಗೊತ್ತೆ ?   ಅದು ಆ ಕ್ಷಣದ ಬೆಳಕು ಗಾಳಿ ಮತ್ತು ಪಸೆಗಳ ನೆರವಿನಿಂದ ಅರಳಿದಂತಹುದು !   ನೆನಪು…
February 18, 2014
ಸಾಲುಗಳು - 6 (ನನ್ನ ಸ್ಟೇಟಸ್) <42> ಅಡ್ಜಸ್ಟ್ ಮೆಂಟ್  -------------- ಜೀವನದಲ್ಲಿ ಪ್ರತಿ ವಿಷ್ಯದಲ್ಲೂ ಅಡ್ಜಸ್ಟ್ ಆಗಲೇ ಬೇಕು ! . . , ಸಾಗು ಜಾಸ್ತಿಯಾಯಿತು ಎಂದು ಪೂರಿ , ಪೂರಿ ಉಳಿಯಿತು ಎಂದು ಸಾಗು ಹಾಕಿಸಿಕೊಳ್ಳುತ್ತಿದ್ದರೆ…