ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸ್ಟೇಟಸ್ ಕತೆಗಳು (ಭಾಗ ೧೧೯೯) - ಪತ್ರ

ಆ ಪತ್ರವೊಂದಕ್ಕೆ ವಿಳಾಸ ಸಿಕ್ಕಿಲ್ಲ . ಹಲವು ಸಮಯದಿಂದ ತನ್ನೊಳಗೆ ಅದ್ಭುತವಾದ ಸಂದೇಶವನ್ನು ಇಟ್ಟುಕೊಂಡು ವಿಳಾಸಕ್ಕಾಗಿ ಕಾಯುತ್ತಲೇ ಕುಳಿತು ಬಿಟ್ಟಿದೆ.

Image

ಮಣಿಪಾಲ ಎಂಡ್ ಪಾಯಿಂಟ್ ನಲ್ಲಿ…

ಮಣಿಪಾಲ ನಗರವು ತನ್ನ ಭವ್ಯವಾದ ಶೈಕ್ಷಣಿಕ ಸಂಸ್ಥೆಗಳಿಗೆ ಹೆಸರುವಾಸಿಯಾಗಿದೆ. ಅತ್ಯಾಧುನಿಕ ಎಲ್ಲಾ ಆರೋಗ್ಯ ಚಿಕಿತ್ಸೆಗಳ ಆಸ್ಪತ್ರೆಗಳು ಇಲ್ಲಿವೆ. ಕರಾವಳಿ ತೀರದ ಅಷ್ಟೇ ಅಲ್ಲದೆ ರಾಜ್ಯದ, ದೇಶದ ಅತ್ಯುತ್ತಮ ಆಸ್ಪತ್ರೆಗಳ ಊರು ಮಣಿಪಾಲ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 

Image

ಆಶಾ ಕಾರ್ಯಕರ್ತೆಯರಲ್ಲಿ ಆಶಾವಾದ

ಕಳೆದ ಎಂಟು ವರ್ಷಗಳಿಂದ ಒಂದೇ ಬೇಡಿಕೆ ಇಟ್ಟುಕೊಂಡು ಹೋರಾಟ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಕೊನೆಗೂ ಒಂದು ಹಂತದ ಜಯ ಸಿಕ್ಕಿದೆ. ಹತ್ತು ಸಾವಿರ ರೂಪಾಯಿ ಮಾಸಿಕ ಗೌರವ ಧನ ನಿಗದಿ ಸೇರಿದಂತೆ ಆಶಾ ಸಂಘಟನೆಯ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ರಾಜ್ಯ ಸರಕಾರ ತಾತ್ವಿಕ ಒಪ್ಪಿಗೆ ನೀಡಿದೆ. ಮುಖ್ಯ ಮಂತ್ರಿ ಸಿದ್ಧರಾಮಯ್ಯ ಅವರು ಈ ನಿಟ್ಟಿನಲ್ಲಿ ಆಶಾ ಸಂಘಟನೆ ಮುಖಂಡರ ಜತೆ ನಡೆಸಿದ ಸಂಧಾನ ಯಶಸ್ವಿಯಾಗಿದೆ.

Image

ಇಂದಿನ ರಾಜಕಾರಣ...

ಸರಣಿ ಅಪಘಾತಗಳು, ಸರಣಿ ಆತ್ಮಹತ್ಯೆಗಳು, ಸರಣಿ ಅಪರಾಧಗಳು, ಸರಣಿ ಅನಾರೋಗ್ಯಗಳು, ಸರಣಿ ಭ್ರಷ್ಟಾಚಾರದ ಹಗರಣಗಳು, ಮತ್ತೊಂದು ಕಡೆ, ಮೂರು ಪಕ್ಷಗಳ 224 ಜನಪ್ರತಿನಿಧಿಗಳಾದ ವಿಧಾನಸಭಾ ಸದಸ್ಯರ ನಡುವೆ ಅಧಿಕಾರಕ್ಕಾಗಿ, ಸರಣಿ ಭಿನ್ನಮತೀಯ ಚಟುವಟಿಕೆಗಳು, ಸರಣಿ ಅನಾವಶ್ಯಕವಾದ ಸಮಾವೇಶಗಳು,  ಸರಣಿ ಡಿನ್ನರ್ ಪಾರ್ಟಿಗಳು, ಸರಣಿ ಮಾತುಕತೆಗಳು, ಸರಣಿ ದೆಹಲಿ ಸಂಧಾನಕಾರರ ಯಾತ್ರೆಗಳು.

Image

ಸ್ಟೇಟಸ್ ಕತೆಗಳು (ಭಾಗ ೧೧೯೮) - ಮರ ಮಾತು

ಅಲ್ಲೋ ಮಾರಾಯ ನೀನು ಹೇಗೆ ನಿಂತು ಬಿಟ್ಟಿದ್ದೀಯಾ? ಇಷ್ಟು ಗಟ್ಟಿಯಾಗಿ, ಇನ್ನೂ ಬೀಳದೆ.‌ ನಿನ್ನೆ ರಾತ್ರಿಯ ಆ ಜೋರು ಮಳೆಗೆ, ಬಿರುಸಾದ ಗಾಳಿಗೆ ಒಂದೂ ಚೂರು ಅಲುಗಾಡದೆ ಹೇಗೆ ನಿಂತು ಬಿಟ್ಟಿದ್ದೀಯಾ? ಅಲ್ಲೋ ಮಾರಾಯಾ ನಿನ್ನ ಸುತ್ತ ಮುತ್ತ ನಿಂತಿದ್ದವರು ಯಾರೂ ನಿಂತೇ‌ ಇಲ್ಲ. ಎಲ್ಲರೂ‌ ತಲೆ‌ಕೆಳಗಾಗಿ ಉರುಳಿದ್ದಾರೆ. ಇದು‌ ಹೇಗೆ ಸಾಧ್ಯವಾಯಿತು?

Image

ಬಿಳಿ ಹುಬ್ಬಿನ ದೇವನಕ್ಕಿ ರಕ್ಷಿಸಿ

ಹಿಂದಿನ ವಾರದ ಹಕ್ಕಿಕಥೆಗಳಲ್ಲಿ ನೀರನ್ನು ಆಶ್ರಯಿಸಿ ಬದುಕುವ ಕೆಲವು ಹಕ್ಕಿಗಳನ್ನು ಪರಿಚಯ ಮಾಡಿಕೊಂಡಿದ್ದೇವೆ. ನೀರಿನ ಮೇಲೆ ಈಜುತ್ತಾ ಆಹಾರ ಹುಡುಕುವ ಬಾತುಕೋಳಿಗಳು, ನೀರಿನ ಒಳಗೆ ಮುಳುಗಿ ಮೀನು ಹಿಡಿಯುವ ನೀರುಕಾಗೆ ಅಥವಾ ಹಾವಕ್ಕಿಗಳು, ತಮ್ಮ ಉದ್ದವಾದ ಕಾಲುಗಳನ್ನು ಬಳಸಿ ನೀರು ಅಥವಾ ಕೆಸರಿನಲ್ಲಿ ಓಡಾಡುತ್ತಾ ಆಹಾರ ಅರಸುವ ಕೊಕ್ಕರೆಯ ಜಾತಿಯ ಹಕ್ಕಿಗಳು ನಮಗೆ ಗೊತ್ತು.

Image

ಸಾಹಿತ್ಯ ಕಲೆ ಎಂದರೆ…

ಸಾಹಿತ್ಯ ಕಲೆ ಎಂದರೆ ಮನುಷ್ಯತ್ವ ಅಂತ ಅಂದುಕೊಳ್ಳಬೇಕಾಗಿಲ್ಲ. ಪ್ರಾಚೀನ ಸಾಹಿತ್ಯದಲ್ಲಿ ಒಬ್ಬ ವೀರನ ರಣಶೌರ್ಯವನ್ನು ಪ್ರಶಂಸಿಸ ಬೇಕಾದರೆ, ವೈರಿವನಿತೆಯರ ಕೆನ್ನೆಯ‌ ಮೇಲೆ ಸದಾ ಕಂಬನಿ ಹರಿಸಿದವನು ಎಂಬಂತಹ ವರ್ಣನೆ ಸಿಗುತ್ತವೆ. ಇಂತಹ ಅಮಾನುಷ ರೂಪಕಗಳನ್ನು ಹುಟ್ಟಿಸಿದ್ದು  ಹಿಂಸಾತ್ಮಕ ಊಳಿಗವಾದಿ ಯುದ್ಧಸಂಸ್ಕೃತಿ.

Image