ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕಣ್ಣಿದ್ದು ಕುರುಡರು ನಾವು...

ಅನುಕಂಪದ ಜೊತೆ ಅವಕಾಶವನ್ನೂ ನೀಡಿ, ಸಹಾನುಭೂತಿಯ ಜೊತೆ ಸದಾಶಯವೂ ಇರಲಿ, ಕರುಣೆಯ ಜೊತೆ ಸಹಕಾರವೂ ಇರಲಿ. ವಿಶ್ವ ಅಂಗವಿಕಲರ ದಿನ ಡಿಸೆಂಬರ್ 3 ( International Day of Disabled Persons )

Image

ಸ್ಟೇಟಸ್ ಕತೆಗಳು (ಭಾಗ ೧೧೬೨)- ಒಳ ಹೊರಗೆ

ಸುತ್ತ ನೋಡುವ ಕಣ್ಣುಗಳು ಹೆಚ್ಚಾಗಿವೆ, ನೋಡುವ ಕಣ್ಣುಗಳೆಲ್ಲವೂ ಕೂಡ ಒಂದೊಂದು ಕಥೆಯನ್ನ ಸೃಷ್ಟಿಸಿಕೊಳ್ಳುತ್ತವೆ. ನೀನು ಭಯಪಡುವುದು ಬೇಡ ಆದರೆ ಹೊರಗೆ ನಿಂತ ಕಣ್ಣುಗಳು ಮಾತನಾಡುವುದಕ್ಕೆ ಆರಂಭವಾದಾಗ ದೊಡ್ಡ ಮಾತುಗಳನ್ನೇ ಹೇಳುತ್ತಾರೆ.

Image

ಕೃತಕ ಬುದ್ಧಿಮತ್ತೆ ಸೃಷ್ಟಿಸಿದ “ಅಮ್ಮ”

ದಿನದಿನವೂ ಕೃತಕ ಬುದ್ಧಿಮತ್ತೆಯ ಬಗ್ಗೆ ಹೊಸಹೊಸ ಸುದ್ದಿಗಳನ್ನು ಕೇಳುತ್ತಲೇ ಇದ್ದೇವೆ. ಕೃತಕ ಬುದ್ಧಿಮತ್ತೆಯಿಂದ ಕೆಲಸ ಮಾಡುವ ರೋಬೋಟುಗಳು ಹಲವು ಕ್ಷೇತ್ರಗಳಿಗೆ ಪ್ರವೇಶಿಸಿವೆ.

ಹೋಟೆಲುಗಳಲ್ಲಿ ತಿಂಡಿ-ತಿನಿಸು ತಂದು ಕೊಡಲು; ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡಲು - ಅಂತಹ ರೋಬೋಟುಗಳ ಬಳಕೆ ಬಗ್ಗೆ ಕೇಳಿದ್ದೇವೆ. ಮನೆಕೆಲಸಗಳಿಗಾಗಿಯೂ ರೋಬೋಟುಗಳ ಬಳಕೆ ಸುದ್ದಿಯಾಗಿದೆ. ಅದೇ ರೀತಿಯಲ್ಲಿ, ವಿಮಾನ ನಿಲ್ದಾಣಗಳಲ್ಲಿ ಧ್ವನಿವರ್ಧಕಗಳ ಮೂಲಕ ವಿಷಯ ಘೋಷಿಸಲು; ಸುದ್ದಿ ಚಾನೆಲುಗಳಲ್ಲಿ ವಾರ್ತೆಗಳನ್ನು ಓದಲು (ವಾರ್ತಾ ವಾಚಕಿಯರಾಗಿ) ಕೃತಕ ಬುದ್ಧಿಮತ್ತೆಯ ಬಲದಿಂದ ಕೆಲಸ ಮಾಡುವ “ಪರದೆಯಲ್ಲಿ ಮೂಡುವ ವ್ಯಕ್ತಿ”ಗಳನ್ನೂ ಕಂಡಿದ್ದೇವೆ.

Image

ಡೈಬಿಟಿಸ್ ಅನ್ನು ಹೆಚ್ಚಿಸುವ ಆಹಾರಗಳು!

ಸಮೋಸ, ಛೋಲೆ ಭಟೊರೆ, ಗ್ರಿಲ್ಲಡ್ ಚಿಕನ್ ಪಕೋಡಗಳು ಇತ್ಯಾದಿಗಳ ಹೆಸರುಗಳನ್ನು ಕೇಳುತ್ತಲೇ ನಮಗೆ ಬಾಯಲ್ಲಿ ನೀರೂರುತ್ತದೆ. ಈ ಪದಾರ್ಥಗಳನ್ನು ಎಷ್ಟೇ ತಿಂದರೂ, ನಾಲಿಗೆಗೆ ಅದೇ ರುಚಿ-ಸ್ವಾದ ಸಿಗುತ್ತದೆ. ಆದರೆ, ಇವುಗಳು ನಮ್ಮಲ್ಲಿ ಮಧುಮೇಹದ ಅಪಾಯವನ್ನೂ ಹೆಚ್ಚಿಸುತ್ತದೆ. ಜಗತ್ತಿನಲ್ಲಿ ನಮ್ಮ ದೇಶವನ್ನು ಮಧುಮೇಹದ (ಡೈಬಿಟಿಸ್) ರಾಜಧಾನಿ ಎಂದು ಕರೆಯಲಾಗುತ್ತಿದೆ.

Image

ಬೆಟ್ಟದ ಜೀವಕ್ಕೆ ಮರು ಜೀವ… (ಭಾಗ 1)

ಪಿ. ಶೇಷಾದ್ರಿ ಅವರ ಹೆಸರನ್ನು ಹೇಳುವಾಗ, ಕೇಳುವಾಗಲೆಲ್ಲ ಅವರ ಅನಾಮಿಕ ಅಭಿಮಾನಿಯಾದ ನನ್ನ ಮನಸ್ಸು ತಿರುಮಲೆಯ ಬೆಟ್ಟವನ್ನೇರಿ ನಿಂತುಬಿಡುತ್ತದೆ. ಅವರ ಹೆಸರಿಗೂ ಬೆಟ್ಟಕ್ಕೂ ಅವಿನಾಭಾವ ಸಂಬಂಧವಿರಬಹುದೇ?! ಏಕೆಂದರೆ ಡಾ.

Image

ಹುಣಸೆ ಬೀಜದಿಂದ ಪ್ರಯೋಜನಗಳು

ಹುಣಸೆ ಹುಳಿ ಎಂದಾಗ ಗ್ರಾಮೀಣ ಮಕ್ಕಳ ಬಾಯಿಯಲ್ಲಿ ನೀರೂರುವುದು ಸಹಜ. ಹುಣಸೆ ಮರದ ಕೆಳಗೆ ಬಿದ್ದಿರುವ ಹುಣಸೆ ಹಣ್ಣನ್ನು ಬಾಯಿಯಲ್ಲಿ ಹಾಕಿ ಚೀಪುವುದೇ ಒಂದು ರೀತಿಯ ಮಜಾ. ಕಾಯಿ ಹುಣಸೆ, ಸ್ವಲ್ಪ ಹಣ್ಣಾದ ಹುಣಸೆ ಮತ್ತು ಹಣ್ಣಾಗಿ (ಮಾಗಿ) ಉದುರಿ ಕೆಳಕ್ಕೆ ಬಿದ್ದ ಹುಣಸೆ ಹುಳಿಯನ್ನು ತಿನ್ನುವುದು ಗ್ರಾಮೀಣ ಭಾಗದ ಮಕ್ಕಳ ಆಟದ ಭಾಗವೇ ಆಗಿರುತ್ತದೆ. ಪೇಟೆಯಲ್ಲಿ ಹುಣಸೆ ಮರಗಳು ಕಡಿಮೆ.

Image

ಫಡ್ನವೀಸ್ ಮುಖ್ಯಮಂತ್ರಿ

ಮಹಾರಾಷ್ಟ್ರದಲ್ಲಿ ಬಿಜೆಪಿ ಮುಖಂಡ ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲು ವೇದಿಕೆ ಸಿದ್ಧಗೊಂಡಿದೆ. ಚುನಾವಣಾ ಫಲಿತಾಂಶ ಘೋಷಣೆಯಾದ ಸುಮಾರು ೧೨ ದಿನಗಳ ಬಳಿಕ ಫಡ್ನವೀಸ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

Image

ರಾಜಕೀಯ ಪಕ್ಷಗಳಿಗೆ ಶಾಶ್ವತ ಕಾರ್ಯಕರ್ತರ ಪಡೆ ಬೇಕೇ ?

ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ಪಕ್ಷಗಳಿಗೆ ಅಜೀವ ಕಾರ್ಯಕರ್ತರು ಅಥವಾ ಸದಸ್ಯರ ಅವಶ್ಯಕತೆ ಇದೆಯೇ? ಪ್ರಜಾಪ್ರಭುತ್ವದ ಕ್ರಮಬದ್ಧ ಮುಂದುವರಿಕೆಗಾಗಿ, ಆಡಳಿತಾತ್ಮಕ ಕೆಲಸಗಳಿಗಾಗಿ, ಚುನಾವಣಾ ವ್ಯವಸ್ಥೆ ಇದೆ. ನಮ್ಮ ಪ್ರತಿನಿಧಿಗಳನ್ನು ನಾವೇ ಆಯ್ಕೆ ಮಾಡಿಕೊಳ್ಳಲು ಈ ಚುನಾವಣಾ ಪ್ರಕ್ರಿಯೆಯನ್ನು ನಡೆಸಲಾಗುತ್ತದೆ.

Image

ಸ್ಟೇಟಸ್ ಕತೆಗಳು (ಭಾಗ ೧೧೬೧)- ಪಿಳಿ ಪಿಳಿ

ಪುಟ್ಟ ಕಾಲುಗಳನ್ನ ಅಲ್ಲಾಡಿಸೋಕೆ ಆಗ್ತಾ ಇಲ್ಲ.‌ ಭಾರವಾಗಿದೆ ಎಂದಿಗಿಂತಲೂ ಹೆಚ್ಚಾಗಿ. ಅಮ್ಮ ನನ್ನನ್ನು ಬಿಟ್ಟು ದೂರ ಹೋಗ್ತಾನೆ ಇಲ್ಲ. ಮನೆಯಲ್ಲಿ ತುಂಬಾ ಖುಷಿಯಾಗಿತ್ತು, ಸುತ್ತ ಮುತ್ತ ಗಿಡಮರ ನಿಶಬ್ದ ವಾತಾವರಣ, ಎಲ್ಲೇ ಬೇಕಾದರೂ ಓಡಾಡ್ತಾ ಇರಬಹುದು, ಆದರೆ ಇದ್ಯಾವುದೋ ದೊಡ್ಡ ಕಟ್ಟಡದ ಒಳಗೆ ಕರೆದುಕೊಂಡು ಬಂದಿದ್ದಾರೆ. ಎಲ್ಲರೂ ಬಂದವರು ನನ್ನನ್ನು ಅಯ್ಯೋ ಪಾಪ ಎಂದು ಕನಿಕರದಿಂದ ನೋಡುತ್ತಿದ್ದಾರೆ.

Image