ವಿಧ: ಪುಸ್ತಕ ವಿಮರ್ಶೆ
October 31, 2024
ಕೆ. ಷರೀಫಾ ಅವರು ಬರೆದ ‘ಮುಸ್ಲಿಮರ ತಲ್ಲಣಗಳು' ಎನ್ನುವ ಕೃತಿ ಸ್ವಾತಂತ್ರೋತ್ತರ ಭಾರತದ ಮುಸ್ಲಿಮರ ಸ್ಥಿತಿ-ಗತಿಯನ್ನು ವಿವರವಾಗಿ ಮಂಡಿಸುತ್ತದೆ. ಕಳೆದ ಎಪ್ಪತೈದು ವರ್ಷಗಳಲ್ಲಿ ದೇಶದಲ್ಲಿ ತೀವ್ರತರ ಬದಲಾವಣೆಗಳಾಗಿವೆ. ದುರ್ಬಲ ವರ್ಗ, ಪರಿಶಿಷ್ಟ ಜಾತಿ, ಬುಡಕಟ್ಟು, ಧಾರ್ಮಿಕ ಅಲ್ಪಸಂಖ್ಯಾತರು ಬೌದ್ಧಿಕ ಸಂಪನ್ಮೂಲಗಳ ಮೇಲೆ ತಮ್ಮ ಹಿಡಿತ ಸಾಧಿಸುತ್ತಿದ್ದಾರೆಯೆ? ಧಾರ್ಮಿಕ ಅಲ್ಪಸಂಖ್ಯಾತರಿಗೆ ನ್ಯಾಯ ದೊರಕುತ್ತಿದೆಯೆ? ಅದರಲ್ಲೂ ಮುಸ್ಲಿಮರ ಸಮಸ್ಯೆಗಳೇನು? ಅವರ ತಲ್ಲಣಗಳೇನು? ಅವರ ಆತಂಕಗಳೇನು…
ವಿಧ: ಪುಸ್ತಕ ವಿಮರ್ಶೆ
October 29, 2024
ಜ್ಞಾನಪೀಠ ಪುರಸ್ಕೃತ ಮಲಯಾಳಂ ಕವಿ ಪ್ರೊ.ಒ ಎನ್ ವಿ ಕುರುಪ್ ಅವರು ಬರೆದ ಕೃತಿಯನ್ನು ‘ಅಕ್ಷರ' ಎನ್ನುವ ಹೆಸರಿನಲ್ಲಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ ಡಾ. ಸುಷ್ಮಾ ಶಂಕರ್. ಈ ೧೦೨ ಪುಟಗಳ ಪುಟ್ಟ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಖ್ಯಾತ ಸಾಹಿತಿ ಡಾ. ಚಂದ್ರಶೇಖರ ಕಂಬಾ ಇವರು ಸೊಗಸಾದ ಮುನ್ನುಡಿಯನ್ನು ಬರೆದಿದ್ದಾರೆ. ಆ ಮುನ್ನುಡಿಯ ಆಯ್ದ ಭಾಗಗಳು ನಿಮ್ಮ ಓದಿಗಾಗಿ...
“ಸಣ್ಣ ಸಣ್ಣ ವಿವರಗಳಲ್ಲಿಯೇ ರೂಪಕಗಳನ್ನು ಹೆಣೆಯುತ್ತ ಕವನ ಕಟ್ಟುವ ಅಪರೂಪದ ಕಲೆ ಶ್ರೀ ಒ.ಎನ್. ವಿ ಕುರುಪ್ ಅವರ…
ವಿಧ: ರುಚಿ
October 29, 2024
ಟೊಮೇಟೋ ಹಣ್ಣನ್ನು ತೊಳೆದು ಚಿಕ್ಕದಾಗಿ ಹೆಚ್ಚಿಕೊಳ್ಳಿ ಇದಕ್ಕೆ ಹುರಿದ ಎಳ್ಳು ಜೀರಿಗೆ ಕಾಯಿತುರಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಮಜ್ಜಿಗೆ ಹಾಕಿ ಬೇಕಾದಲ್ಲಿ ನೀರು, ರುಚಿಗೆ ಉಪ್ಪು, ಬೆಲ್ಲ ಸೇರಿಸಿ ತಂಬುಳಿ ಹದಕ್ಕೆ ಮಾಡಿಕೊಳ್ಳಿ. ಇದಕ್ಕೆ ಎಣ್ಣೆ, ಒಣಮೆಣಸಿನ ಚೂರುಗಳು, ಸಾಸಿವೆ, ಇಂಗು ಕರಿಬೇವು ಹಾಕಿ ಒಗ್ಗರಣೆ ಮಾಡಿದರೆ ರುಚಿಯಾದ ಟೊಮೇಟೋ ಕಾಯಿ ತಂಬುಳಿ ಊಟದ ಜೊತೆ ಬಳಸಬಹುದು.
-ಕಲ್ಪನಾ ಪ್ರಭಾಕರ ಹೆಗಡೆ, ಸೋಮನಳ್ಳಿ
ವಿಧ: ರುಚಿ
October 27, 2024
ಆಲೂಗೆಡ್ಡೆಗಳನ್ನು ಬೇಯಿಸಿ ಸಿಪ್ಪೆ ತೆಗೆದು ಕಂದು ಬಣ್ಣ ಬರುವವರೆಗೆ ಎಣ್ಣೆಯಲ್ಲಿ ಹುರಿಯಿರಿ. ಹುರಿದ ಆಲೂಗೆಡ್ಡೆಗಳನ್ನು ತಟ್ಟೆಯಲ್ಲಿ ಜೋಡಿಸಿ ಮೊಸರು, ಉಪ್ಪು, ಸಿಹಿ ಚಟ್ನಿ, ಜೀರಿಗೆ ಹುಡಿ, ಕಾಳುಮೆಣಸಿನ ಹುಡಿ, ಚಾಟ್ ಮಸಾಲೆ, ಕೊತ್ತಂಬರಿ ಸೊಪ್ಪು, ಮೊಳಕೆ ಬರಿಸಿದ ಕಾಳುಗಳು, ಖಾರಾ ಸೇವ್ ಹಾಕಿದರೆ ರುಚಿ ರುಚಿಯಾದ ಆಲೂ ದಹಿ ಚಾಟ್ ಸವಿಯಲು ರೆಡಿ. ಸಿಹಿ ಚಟ್ನಿ ಇಲ್ಲವಾದರೆ ಟೊಮೆಟೋ ಸಾಸ್ ಬಳಸಬಹುದು. (ಸಣ್ಣ ಗಾತ್ರದ ಬೇಬಿ ಪೊಟಾಟೋ (ಆಲೂಗೆಡ್ಡೆ) ಮಾರುಕಟ್ಟೆಯಲ್ಲಿ ಸಿಗುತ್ತದೆ. ಅದನ್ನು…
ವಿಧ: ಪುಸ್ತಕ ವಿಮರ್ಶೆ
October 26, 2024
ಕೃಷಿಕ, ಲೇಖಕ, ಮಕ್ಕಳ ಸಾಹಿತಿ ಆಗಿರುವ ಪ. ರಾಮಕೃಷ್ಣ ಶಾಸ್ತ್ರಿಗಳ ‘ಬದುಕು ಬರಹ ಬವಣೆ' ಪುಸ್ತಕ ರೂಪದಲ್ಲಿ ಹೊರಬಂದಿದೆ. ಅವರ ಸುಪುತ್ರರೇ ಆಗಿರುವ ಪತ್ರಕರ್ತ ಲಕ್ಷ್ಮೀ ಮಚ್ಚಿನ ಅವರು ಈ ಕೃತಿಯ ನಿರೂಪಣೆ ಮಾಡಿದ್ದಾರೆ. ಈ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಸಾಹಿತಿ ಎಸ್. ನಿತ್ಯಾನಂದ ಪಡ್ರೆ. ಇವರು ತಮ್ಮ ಬರಹದಲ್ಲಿ ವ್ಯಕ್ತ ಪಡಿಸಿದ ಭಾವನೆಗಳ ಕೆಲವು ಸಾಲುಗಳು…
ಪ. ರಾಮಕೃಷ್ಣ ಶಾಸ್ತ್ರಿಯವರ ಹೆಸರು ಕನ್ನಡ ಪತ್ರಿಕಾ ರಂಗದ ಓದುಗರಿಗೆಲ್ಲ ಚಿರಪರಿಚಿತ. ಕಳೆದ ಹಲವು ವರ್ಷಗಳಿಂದ ಕನ್ನಡದ…
ವಿಧ: ರುಚಿ
October 25, 2024
ಕಡ್ಲೆ ಹುಡಿ ಹಾಗೂ ಗೋಧಿ ಹುಡಿಗಳನ್ನು ಚೆನ್ನಾಗಿ ಹುರಿದು ಕೊಳ್ಳಬೇಕು. ಪರಿಮಳ ಬರುವಷ್ಟು ಹುರಿಯಬೇಕು. ಅದಕ್ಕೆ ತುಪ್ಪವನ್ನು ಮಿಶ್ರ ಮಾಡಬೇಕು. ಅಮೇಲೆ ಸಕ್ಕರೆ, ಗೇರು ಬೀಜವನ್ನು ಮಿಶ್ರ ಮಾಡಿ ಚೆನ್ನಾಗಿ ಮಗುಚ ಬೇಕು. ತಣ್ಣಗಾಗುವ ಮೊದಲೆ ಉಂಡೆ ಮಾಡಬೇಕು
-ಅಶ್ವಿನಿ ಮೂರ್ತಿ ಅಯ್ಯನಕಟ್ಟೆ
ವಿಧ: ಪುಸ್ತಕ ವಿಮರ್ಶೆ
October 24, 2024
“ಡಿ. ಎಸ್. ಚೌಗಲೆ ಅವರ ಕಾದಂಬರಿ 'ಸದರಬಜಾರ್' ಹಲವು ವರ್ಗಗಳ ಓದುಗರಿಗೆ ಅಪರಿಚಿತವಾದ ಸಾಮಾಜಿಕ ಲೋಕವೊಂದನ್ನು ತೆರೆದಿಡುತ್ತದೆ. ಕರ್ನಾಟಕ ಮಹಾರಾಷ್ಟ್ರಗಳ ಗಡಿಭಾಗ, ಈಚಲ್‌ಕರಂಜಿ, ಅಬ್ದುಲ್ ಲಾಟ್ ಇವು ಜವಳಿ ಉದ್ಯಮ, ಸಕ್ಕರೆ ಕಾರಖಾನೆಗಳು ಇವುಗಳಿಂದ ಬೆಳೆದ ವಿಶಾಲವಾದ ಕಾರ್ಮಿಕರ ಕಾಲನಿಗಳಂತೆ ಬೆಳೆದ ಊರುಗಳು. ఇಲ್ಲಿಗೆ ಕೆಲಸ ಹುಡಿಕೊಂಡು ಬಂದವರು, ಬರಗಾಲದಲ್ಲಿ ಗುಳೆ ಹೊರಟು ಬಂದವರು, ಕುಟುಂಬ ಹಾಗೂ ಸಮಾಜಗಳ ದೌರ್ಜನ್ಯಗಳಿಂದಾಗಿ ಓಡಿ ಬಂದು ಇಲ್ಲಿ ವೇಶೈಯರಾಗಿ ಬದುಕುತ್ತಿರುವವರು- ಇವರಲ್ಲಿ…
ವಿಧ: ರುಚಿ
October 23, 2024
ಬೊಂಬಾಯಿ ರವೆಯನ್ನು ಹೊರತು ಪಡಿಸಿ ಎಲ್ಲಾ ಸಾಮಗ್ರಿಗಳನ್ನು ಚೆನ್ನಾಗಿ ಮಿಶ್ರ ಮಾಡಬೇಕು. ಆಮೇಲೆ ಉಂಡೆ (ಚಪಾತಿ ಉಂಡೆಗಾತ್ರ) ಮಾಡಿ ಬೊಂಬಾಯಿ ರವೆಯಲ್ಲಿ ಉರುಳಿಸಿ ತಟ್ಟಿ ಕಾವಲಿಯಲ್ಲಿ೨ ಬದಿ ಬೇಯಿಸ ಬೇಕು. ಸ್ವಲ್ಪ ತುಪ್ಪ ಅಥವಾ ಎಣ್ಣೆ ಬಳಸಬಹುದು. ಚಟ್ನಿ ಅಥವಾ ಟೊಮ್ಯಾಟೊ ಕೆಚಪ್ ನೊಂದಿಗೆ ತಿನ್ನಲು ಬಲುರುಚಿ.
-ಅಶ್ವಿನಿ ಮೂರ್ತಿ ಅಯ್ಯನಕಟ್ಟೆ
ವಿಧ: ಪುಸ್ತಕ ವಿಮರ್ಶೆ
October 22, 2024
ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ವಾಸಿಯಾದ ಕಿರಣ್ ಉಪಾಧ್ಯಾಯರು ಈಗ ಉದ್ಯೋಗ ನಿಮಿತ್ತ ಕೊಲ್ಲಿ ರಾಷ್ಟ್ರ ಬಹ್ರೈನ್ ನಿವಾಸಿ. ನಾಟಕ, ಯಕ್ಷಗಾನದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಇವರು ಪ್ರತೀ ಸೋಮವಾರ ‘ವಿಶ್ವವಾಣಿ' ಪತ್ರಿಕೆಯಲ್ಲಿ ‘ವಿದೇಶವಾಸಿ’ ಎಂಬ ಅಂಕಣ ಬರೆಯುತ್ತಾರೆ. ಗಲ್ಭ್ ರಾಷ್ಟ್ರಗಳ ಬಗ್ಗೆ ತಿಳಿಸುತ್ತಾ ನಮ್ಮನ್ನು ಜಗತ್ತಿನಾದ್ಯಂತ ಸುತ್ತಿಸುತ್ತಾರೆ, ಭಾರತಕ್ಕೂ ಕರೆತರುತ್ತಾರೆ, ಕೊನೆಗೆ ಕರ್ನಾಟಕದಲ್ಲೂ ಛಾಪು ಮೂಡಿಸುತ್ತಾರೆ. ಕಿರಣ್ ಅವರ ಅಂಕಣ ಬರಹಗಳ ಪ್ಲಸ್ ಪಾಯಿಂಟ್ ಎಂದರೆ…
ವಿಧ: ರುಚಿ
October 20, 2024
ಹಪ್ಪಳಗಳಿಗೆ ಸ್ವಲ್ಪ ಎಣ್ಣೆ ಸವರಿ ಕಾವಲಿಯ ಮೇಲೆ ಹಾಕಿ ತೆಗೆಯಿರಿ. ತಣಿದ ಹಪ್ಪಳಗಳ ಮೇಲೆ ಕ್ರಮವಾಗಿ ಈರುಳ್ಳಿ, ಹಸಿ ಮೆಣಸಿನಕಾಯಿ, ಟೊಮೆಟೊ, ದಪ್ಪ ಮೆಣಸಿನಕಾಯಿ, ಕ್ಯಾರೆಟ್ ಗಳನ್ನು ಸಮನಾಗಿ ಹರಡಿ. ನಂತರ ಮೆಣಸಿನ ಹುಡಿ, ಜೀರಿಗೆ ಹುಡಿ, ಗರಮ್ ಮಸಾಲೆಗಳನ್ನು ಸಮನಾಗಿ ಉದುರಿಸಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ರುಚಿಯಾದ ಮಸಾಲಾ ಪಾಪಡ್ ತಯಾರು. ಸೂಪ್ ನೊಂದಿಗೆ ಸೂಪರ್ ಕಾಂಬಿನೇಶನ್.