ವಿಧ: ಪುಸ್ತಕ ವಿಮರ್ಶೆ
October 18, 2024
ಪತ್ರಕರ್ತ ಶ್ರೀಧರ ನಾಯಕ್ ಅವರು ತಮ್ಮ ವೃತ್ತಿ ಜೀವನದಲ್ಲಿನ ಅನುಭವಗಳನ್ನು ಕೃತಿ ರೂಪದಲ್ಲಿ ಹೊರತಂದಿದ್ದಾರೆ. ಅದರ ಹೆಸರೇ ‘ಹೇಳದೇ ಇದ್ದ ವಾಸ್ತವಗಳು'. ಪತ್ರಕರ್ತರು ಕೆಲಸ ಮಾಡುವಾಗ ಬಹಳಷ್ಟು ಸಂಗತಿಗಳು ತಿಳಿದು ಬಂದರೂ ಕೆಲವು ವಿಷಯಗಳನ್ನು ಬರೆಯಲು ಆಗುವುದಿಲ್ಲ. ಆದಕ್ಕೆ ನಾನಾ ಕಾರಣಗಳು ಇರುತ್ತವೆ. ಅಂತಹ ಬರೆಯದೇ ಉಳಿದು ಹೋದ ವಿಚಾರಗಳನ್ನು ‘ಹೇಳದೇ ಇದ್ದ ವಾಸ್ತವಗಳು'ಕೃತಿಯಲ್ಲಿ ಬರೆಯಲು ಮನಸ್ಸು ಮಾಡಿದ್ದಾರೆ. ಈ ಕೃತಿಗೆ ಕನ್ನಡದ ಹಿರಿಯ ಕಥೆಗಾರ, ವಿಮರ್ಶಕ ಎಸ್ ದಿವಾಕರ ಇವರು…
ವಿಧ: ರುಚಿ
October 17, 2024
ಶುದ್ಧೀಕರಿಸಿದ ಬೇವಿನಸೊಪ್ಪುನ್ನು, ಜೀರಿಗೆ ಬೆಣ್ಣೆ ಹಾಕಿ ಹುರಿದು ಕೊಳ್ಳಬೇಕು. ಹುರಿದ ಬೇವಿನಸೊಪ್ಪನ್ನು ತೆಂಗಿನತುರಿಯೊಂದಿಗೆ ನುಣ್ಣಗೆ ಬೀಸಿಕೊಳ್ಳಬೇಕು. ಬೀಸಿದ ಮಿಶ್ರಣಕ್ಕೆ ಮಜ್ಜಿಗೆ ಉಪ್ಪು, ಹಾಕಿ ತಕ್ಕಷ್ಟು ನೀರು ಹಾಕಿ ಕುದಿಸಬೇಕು. ಸಣ್ಣಗೆ ಕುದಿಯುವಾಗ ಒಗ್ಗರಣೆ ಹಾಕಿದರೆ ಬೇವಿನಸೊಪ್ಪು ತಂಬುಳಿ ತಯಾರು.
- ಅಶ್ವಿನಿ ಮೂರ್ತಿ ಅಯ್ಯನಕಟ್ಟೆ, ಸುಳ್ಯ
ವಿಧ: ಪುಸ್ತಕ ವಿಮರ್ಶೆ
October 16, 2024
ವೃತ್ತಿಯಲ್ಲಿ ಆಯುರ್ವೇದ ವೈದ್ಯರಾಗಿರುವ ಉಡುಪಿಯ ನಿವಾಸಿ ಡಾ. ಶಶಿಕಿರಣ್ ಶೆಟ್ಟಿ ಇವರು ಪ್ರವೃತ್ತಿಯಲ್ಲಿ ಬಹುಮುಖ ಪ್ರತಿಭೆಗಳ ಸಂಗಮ. ಸಮಾಜದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿರುವವರ, ಅನಾರೋಗ್ಯಕ್ಕೆ ತುತ್ತಾಗಿರುವವರ, ಆರ್ಥಿಕ ಪರಿಸ್ಥಿತಿ ಹದಗೆಟ್ಟು ದೀನ ಸ್ಥಿತಿಯಲ್ಲಿರುವವರನ್ನು ಪೊರೆಯುವ ಸಾಹಸಿ. ಹೋಮ್ ಡಾಕ್ಟರ್ ಫೌಂಡೇಶನ್ ಎಂಬ ಸಂಸ್ಥೆಯನ್ನು ಮುನ್ನಡೆಸುತ್ತಿರುವ ಡಾ. ಶಶಿಕಿರಣ್ ಶೆಟ್ಟಿಯವರು ಬಹಳಷ್ಟು ಮಂದಿಗೆ ಹೊಸ ಬಾಳು ಕೊಡುವಲ್ಲಿ ನೆರವಾಗಿದ್ದಾರೆ. ನೂರಾರು ಮಂದಿ ಇವರ ಹೊಸ ಹೊಸ…
ವಿಧ: ಪುಸ್ತಕ ವಿಮರ್ಶೆ
October 14, 2024
ಮುದಗಲ್ಲ ಎಂಬ ಊರು ಐತಿಹಾಸಿಕವಾಗಿ ಬಹಳ ಮಹತ್ವ ಪಡೆದಿದೆ. ಈ ಊರಿನಲ್ಲಿ ಕಂಡು ಬರುವ ಶಾಸನಗಳ ಬಗ್ಗೆ ಸವಿವರವಾಗಿ ಡಾ. ಮಹದೇವಪ್ಪ ನಾಗರಾಳ ಅವರು ಮಾಹಿತಿ ನೀಡುತ್ತಿದ್ದಾರೆ ತಮ್ಮ ಕೃತಿ ‘ಮುದಗಲ್ಲ ಇತಿಹಾಸ ಮತ್ತು ಶಾಸನಗಳು' ಇದರಲ್ಲಿ. ಈ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಚನ್ನಬಸವಯ್ಯ ಹಿರೇಮಠ. ಇವರು ತಮ್ಮ ಮುನ್ನುಡಿಯಲ್ಲಿ ಈ ಊರಿನ ಇತಿಹಾಸ ಮತ್ತು ಶಾಸನಗಳ ಬಗ್ಗೆ ಲೇಖಕರು ಎಷ್ಟು ಸೊಗಸಾದ ಕಾರ್ಯ ಮಾಡಿದ್ದಾರೆ ಎನ್ನುವುದನ್ನು ಹೇಳಿದ್ದಾರೆ. ಅವರ ಮನದಾಳದ ಮಾತುಗಳ ಆಯ್ದ ಭಾಗ ಇಲ್ಲಿದೆ…
ವಿಧ: ರುಚಿ
October 13, 2024
ಕಡಲೆಕಾಳುಗಳನ್ನು ೬ ಗಂಟೆ ನೆನೆಸಿ, ದಾಲ್ಚಿನ್ನಿ, ಲವಂಗ, ಕೊತ್ತಂಬರಿ ಬೀಜ, ಶುಂಠಿ ತುರಿ, ಮೆಣಸಿನ ಹುಡಿ, ಜೀರಿಗೆ ಹುಡಿ, ಸೋಂಪು ಹುಡಿಗಳನ್ನು ಸೇರಿಸಿ ರುಬ್ಬಿ ಮಸಾಲೆ ತಯಾರಿಸಿ, ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಹಸಿ ಮೆಣಸಿನಕಾಯಿ, ಈರುಳ್ಳಿ, ಟೋಮೆಟೊಗಳನ್ನು ಬಾಡಿಸಿ. ಈ ಮಿಶ್ರಣಕ್ಕೆ ಅರೆದ ಮಸಾಲೆ, ತುಪ್ಪ, ಉಪ್ಪು, ಹುಣಸೆರಸ, ಬೇಯಿಸಿದ ಕಡಲೆಕಾಳುಗಳನ್ನು ಹಾಕಿ ಕುದಿಸಿ. ಪುದೀನಾ ಎಳೆಗಳುಹಾಗೂ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿದರೆ, ಪೂರಿ (ಬಟೂರಾ) ಜೊತೆ ಸವಿಯಲು ಚೋಲೆ ತಯಾರು.
ವಿಧ: ರುಚಿ
October 12, 2024
ಸೌತೆ ಸಿಪ್ಪೆ, ಉಪ್ಪು, ಹುಳಿ, ಕೊತ್ತಂಬರಿ ಹಾಕಿ ಬೇಯಿಸ ಬೇಕು. ಬೇಯಿಸಿದ ಸಾಮಾನು, ತೆಂಗಿನತುರಿಯನ್ನು ಒಟ್ಟಿಗೆ ಹಾಕಿ ಬೀಸಬೇಕು. ಅದಕ್ಕೆ ಬೆಳ್ಳುಳ್ಳಿ ಒಗ್ಗರಣೆ ಹಾಕಿದರೆ ಗೊಜ್ಜು ತಯಾರು.
- ಅಶ್ವಿನಿ ಮೂರ್ತಿ ಅಯ್ಯನಕಟ್ಟೆ, ಸುಳ್ಯ
ವಿಧ: ರುಚಿ
October 11, 2024
ತೊಂಡೆಕಾಯಿಯನ್ನು ತೆಳ್ಳಗೆ ನಾಲ್ಕು ತುಂಡು ಕತ್ತರಿಸಬೇಕು. ರಾತ್ರಿ ಕತ್ತರಿಸಿ ಮಜ್ಜಿಗೆ, ಉಪ್ಪು, ಮೆಣಸಿನ ಪುಡಿ ಹಾಕಿ ಮಿಶ್ರಣ ಮಾಡಿ ಇಡಬೇಕು. ಬೆಳಿಗ್ಗೆ ತೊಂಡೆಕಾಯಿಯ ಹೋಳುಗಳನ್ನು ತೆಗೆದು (ಸ್ವಲ್ಪ ನೀರು ಎದ್ದಿರುತ್ತದೆ) ಒಣ ಹಾಳೆಯಲ್ಲಿ ಹಾಕಿ ಬಿಸಿಲಿನಲ್ಲಿ ಒಣಗಿಸಬೇಕು. ೬ ಒಳ್ಳೆಯ ಬಿಸಿಲು ಬೇಕಾಗುತ್ತದೆ. ಗರಿ ಗರಿಯಾಗುವಷ್ಟು ಒಣಗಿಸಿ ಗಾಳಿಯಾಡದಂತೆ ಇಟ್ಟರೆ ಬಹುಕಾಲ ಸಂರಕ್ಷಿಸಿ ಉಪಯೋಗಿಸಬಹುದು.
- ಅಶ್ವಿನಿ ಮೂರ್ತಿ ಅಯ್ಯನಕಟ್ಟೆ, ಸುಳ್ಯ
ವಿಧ: ಪುಸ್ತಕ ವಿಮರ್ಶೆ
October 10, 2024
ಕಥೆಗಾರ, ಉಪನ್ಯಾಸಕ ಡಾ. ಆನಂದ ಗೋಪಾಲ್ ಅವರು ಬರೆದ ‘ಜ್ಞಾನ ಫಕೀರ ಪ್ರೊ. ಎಂ ಕರೀಮುದ್ದೀನ್' ಎಂಬ ಕೃತಿ ಇತ್ತೀಚೆಗೆ ಬಿಡುಗಡೆಯಾಗಿದೆ. ಟಿಪ್ಪು ಸುಲ್ತಾನ್ ವಂಶಸ್ತನಾಗಿದ್ದುಕೊಂಡು, ಸುಮಾರು ೬ ಭಾಷೆಯಲ್ಲಿ ಪಾಂಡಿತ್ಯವನ್ನು ಹೊಂದಿದ್ದು, ಖ್ಯಾತ ನಾಮ ಸಾಹಿತಿಗಳ ಸಾಂಗತ್ಯದಲ್ಲಿದ್ದೂ ಸರಳ, ಸಜ್ಜನಿಕೆಯಿಂದ ಜಾತ್ಯಾತೀತವಾಗಿ ಬದುಕಿದ ಕರೀಮುದ್ದೀನ್ ಅವರ ಪರಿಚಯ ಈ ಕೃತಿಯಲ್ಲಿ ಮಾಡಲಾಗಿದೆ. ಇವರ ಬಗ್ಗೆ ಲೇಖಕರಾದ ಡಾ. ಆನಂದ್ ಅವರು ತಮ್ಮ ಮುನ್ನುಡಿಯಲ್ಲಿ ಬರೆದದ್ದು ಹೀಗೆ…
“ ಪ್ರೊ. ಎಂ.…
ವಿಧ: ಪುಸ್ತಕ ವಿಮರ್ಶೆ
October 08, 2024
ಹೊಸ ಬಗೆಯ, ಹೊಸತನದ ಪುಸ್ತಕಗಳನ್ನು ಕನ್ನಡದ ಓದುಗರಿಗೆ ಪರಿಚಯಿಸುವ ಕಾಯಕವನ್ನಾಗಿ ಮಾಡಿಕೊಂಡ ಛಂದ ಪುಸ್ತಕ ಪ್ರಕಾಶನದವರು ‘ಸತ್ತವರ ಸೊಲ್ಲು' ಎಂಬ ನಕ್ಸಲ್ ನಾಡಿನ ಮರೀಚಿಕೆಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದಾರೆ. ಅಶುತೋಷ್ ಭಾರದ್ವಾಜ್ ಎನ್ನುವ ಪತ್ರಕರ್ತ ಕಂಡ ನಕ್ಸಲ್ ಬದುಕಿನ ಅನಾವರಣವೇ ಈ ಕೃತಿ. ಹಿಂದಿ ಭಾಷೆಯ ಈ ಕೃತಿಯನ್ನು ನೇರವಾಗಿ ಕನ್ನಡಕ್ಕೆ ತಂದಿದ್ದಾರೆ ಉದಯೋನ್ಮುಖ ಬರಹಗಾರರಾದ ಕಾರ್ತಿಕ್ ಆರ್. ಈ ಕೃತಿಗೆ ಬೆನ್ನುಡಿಯನ್ನು ಬರೆಯುವ ಮೂಲಕ ಪ್ರೋತ್ಸಾಹಿಸಿದ್ದಾರೆ ಪದ್ಮನಾಭ…
ವಿಧ: ರುಚಿ
October 06, 2024
ಅವಲಕ್ಕಿಯನ್ನು ತೊಳೆದು ಬಸಿದು ಹುಣಸೆ ರಸ, ರಸಮ್ ಪೌಡರ್, ಬೆಲ್ಲದ ತುರಿ ಸೇರಿಸಿ ಚೆನ್ನಾಗಿ ಕಲಕಿ ಅರ್ಧ ಗಂಟೆ ನೆನೆಯಲು ಬಿಡಿ. ಬಾಣಲೆಯಲ್ಲಿ ಎಣ್ಣೆ ಕಾಯಿಸಿ, ಸಾಸಿವೆ - ಇಂಗಿನ ಒಗ್ಗರಣೆ ಮಾಡಿ. ಕಡಲೇಕಾಯಿ ಬೀಜ, ಕರಿಬೇವಿನ ಸೊಪ್ಪು, ಉಪ್ಪು ಸೇರಿಸಿ ಬಾಡಿಸಿ. ಒಗ್ಗರಣೆಗೆ ನೆನೆಸಿದ ಅವಲಕ್ಕಿ ಮಿಶ್ರಣ ಸೇರಿಸಿ ಚೆನ್ನಾಗಿ ಕಲಕಿ ಒಲೆಯಿಂದ ಕೆಳಗಿಳಿಸಿ ತೆಂಗಿನತುರಿಯಿಂದ ಅಲಂಕರಿಸಿದರೆ ಗೊಜ್ಜವಲಕ್ಕಿ ರೆಡಿ.