ಎಲ್ಲ ಪುಟಗಳು

ವಿಧ: ಪುಸ್ತಕ ವಿಮರ್ಶೆ
September 08, 2024
ಈಗಾಗಲೇ 2021 ರಲ್ಲಿ."ಮರುಳನ ಶಾಯಿರಿ‌ ಲೋಕ "ಎಂಬ ಶಾಯಿರಿ ಸಂಕಲನದ ಮೂಲಕ ಶಾಯಿರಿ ಕವಿಯಂದು ಹೆಸರಾದವರು ಹುಲಕೋಟಿಯ ಮರುಳಸಿದ್ದಪ್ಪ ದೊಡಮನಿಯವರು.ಅವರ "ಮರುಳನ ಶಾಯಿರಿ"  ಲೋಕದ ಗುಂಗು ಇನ್ನು ತಲೆಯಿಂದ ಮಾಸದಿರುವಾಗಲೇ,ಈ ಕವಿ ಎರಡನೆಯ  ಶಾಯಿರಿ ಸಂಕಲನವನ್ನು  ಓದುಗರ ಎದೆಗೆ ಇತ್ತಿದ್ದಾರೆ.ಅವರು ಸದಾ ಶಾಯಿರಿಯನ್ನೇ  ಉಸಿರಾಡಿಸುವದಕ್ಜೆ ಇದೊಂದು ನಿದರ್ಶನ. ಕನ್ನಡದಲ್ಲಿ ಶಾಂತರಸ,  ಇಟಗಿ ಈರಣ್ಣ‌ ,ಎಸ್ ಜಿ ಸ್ವಾಮಿ , ಅಸಾದುಲ್ಲಾ ಬೇಗ್,ಮೊದಲಾದ ಹಿರಿಯರಿಂದ ಬರೆಯಲು ಶುರು ಹಚ್ಚಿಕೊಂಡು ಈ ಕಾವ್ಯ…
ಲೇಖಕರು: Varsha Bhat
ವಿಧ: ಬ್ಲಾಗ್ ಬರಹ
September 08, 2024
ಕಣ್ಣು ಬಿಡುವ ಮೊದಲೇ ಅಮ್ಮನ ದನಿ ಕಿವಿಗೆ ತಲುಪಿತ್ತು. ನಿದ್ದೆಯ ಮಂಪರಿನಲ್ಲಿದ್ದ ನನಗೆ ಕೇಳಿದ್ದು ಒಂದು ಪದ, ಸಂಪಿಗೆ. ಅಷ್ಟು ಕೇಳಿದ್ದೇ ತಡ, ಮನಃಪಟಲ ಹದಿನೈದು ವರ್ಷಗಳಷ್ಟು ಹಿಂದೆ ಓಡಿತು. ಆಗ ನಗರದ ಇನ್ನೊಂದು ಮೂಲೆಯಲ್ಲಿ ನಮ್ಮ ಮನೆ. ಮೂರು ಚಕ್ರದ ಸೈಕಲ್ ನಲ್ಲಿ ಊರೆಲ್ಲಾ ಸುತ್ತಿ, ಅರ್ಥಾತ್ ಮನೆಯ ಬಳಿಯಿದ್ದ ಮೂರೂ ಅಡ್ಡರಸ್ತೆಗಳನ್ನು ದಾಟಿ ಹೋದರೆ, ಅಲ್ಲಿ ಒಂದು ಸಂಪಿಗೆ ಮರ. ಬಹಳ ದೊಡ್ಡ ಮರವೇನಲ್ಲ‌. ಆದರೆ ಇದ್ದ ಗಾತ್ರದ ತುಂಬಾ ಹೂವು. ಆ ಹೂವುಗಳೊಂದಿಗೆ ಅವು ಬೀರುವ ಪರಿಮಳ.…
ವಿಧ: ರುಚಿ
September 07, 2024
ಬೇವಿನ ಸೊಪ್ಪು, ತೆಂಗಿನ ತುರಿ, ಉಪ್ಪು, ಹುಳಿ, ಹುರಿಕಡಲೆಯನ್ನು ಒಟ್ಟಾಗಿ ಬೀಸಿ ಒಗ್ಗರಣೆ ಹಾಕಿದರೆ ಬೇವಿನ ಸೊಪ್ಪಿನ ಸಾದಾ ಗೊಜ್ಜು ತಯಾರು. -ಅಶ್ವಿನಿ ಮೂರ್ತಿ ಅಯ್ಯನಕಟ್ಟೆ  
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
September 05, 2024
‘ಭೂಮಿ' ಎನ್ನುವುದು ಲೇಖಕ ಈರಣ್ಣ ಬೆಂಗಾಲಿ ಇವರು ಬರೆದ ಕಾದಂಬರಿ. ಈ ಕಾದಂಬರಿಯ ಬಗ್ಗೆ ಮುನ್ನುಡಿಯನ್ನು ಬರೆದಿದ್ದಾರೆ ಶೇಖರಗೌಡ ವೀ ಸರನಾಡಗೌಡರ್ ತಾವರಗೇರಾ ಇವರು. ತಮ್ಮ ಮುನ್ನುಡಿಯಲ್ಲಿ ಶ್ರೀಯುತರು ವ್ಯಕ್ತ ಪಡಿಸಿದ ಭಾವ ಇಲ್ಲಿದೆ... “ಬಿಸಿಲ ನಾಡು ಕಲ್ಯಾಣ ಕರ್ನಾಟಕದ ಒಂದು ಭಾಗ ರಾಯಚೂರು ಜಿಲ್ಲೆ. ಈ ಬಿಸಿಲ ನಾಡಿನಲ್ಲಿ ಅನೇಕ ಸಾಹಿತ್ಯ ದಿಗ್ಗಜರು ಕಲ್ಯಾಣ ಕರ್ನಾಟಕದ ಘನತೆ, ಗೌರವಗಳನ್ನು ರಾಜ್ಯ ಮಟ್ಟದಲ್ಲಿ, ರಾಷ್ಟ್ರ ಮಟ್ಟದಲ್ಲಿ ಬೆಳಗುವಂತೆ ಮಾಡಿದ್ದಾರೆ ಮತ್ತು ಮಾಡುತ್ತಿದ್ದಾರೆ.…
ವಿಧ: ರುಚಿ
September 04, 2024
ದೊಣ್ಣೆ ಮೆಣಸನ್ನು ಸಣ್ಣಗೆ ಚೌಕಾಕಾರಕ್ಕೆ ಹೆಚ್ಚಿ. ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಸಾಸಿವೆ, ಜೀರಿಗೆ, ಉದ್ದಿನಬೇಳೆ, ಕೆಂಪುಮೆಣಸಿನ ಚೂರುಗಳನ್ನು ಹಾಕಿ ಸಾಸಿವೆ ಸಿಡಿದಾಗ ಕರಿಬೇವು ಮತ್ತು ದೊಣ್ಣೆ ಮೆಣಸಿನ ಚೂರುಗಳನ್ನು ಹಾಕಿ ಬಾಡಿಸಿ. ನಂತರ ಅರಸಿನ ಪುಡಿ, ಉಪ್ಪಿನ ಪುಡಿ ಹಾಕಿ ಬೆರೆಸಿ. ಒಲೆಯಲ್ಲಿ ಸ್ವಲ್ಪ ಹೊತ್ತು ಮಗುಚುತ್ತಾ ಇರಿ. ಬಾಣಲೆಯನ್ನು ಇಳಿಸಿ. ತಣಿದ ನಂತರ ಮೊಸರನ್ನು ಹಾಕಿ ಕಲಸಿ. ಈಗ ದೊಣ್ಣೆಮೆಣಸಿನ ರಾಯಿತ ಸವಿಯಲು ತಯಾರಾಯಿತು. - ಸಹನಾ ಕಾಂತಬೈಲು, ಮಡಿಕೇರಿ
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
September 03, 2024
ಯಶೋದಾ ಮೋಹನ್ ಅವರು ಬರೆದ ಚೊಚ್ಚಲ ಕಥಾ ಸಂಕಲನ ‘ಇಳಿ ಹಗಲಿನ ತೇವಗಳು' ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಪುಸ್ತಕಕ್ಕಾಗಿ ಬರೆದ ಲೇಖಕಿಯ ಮಾತುಗಳ ಆಯ್ದ ಭಾಗ ಇಲ್ಲಿದೆ… “‘ಇಳಿ ಹಗಲಿನ ತೇವಗಳು' ನನ್ನ ಮೊದಲನೆಯ ಕಥಾ ಸಂಕಲನ ಮತ್ತು ಮೂರನೆಯ ಕೃತಿ. ವಿದ್ಯಾರ್ಥಿ ಜೀವನ ಕಳೆದು ಸುಮಾರು ಮೂವತ್ತು ವರ್ಷಗಳ ನಂತರ ಮತ್ತೊಮ್ಮೆ ಬರವಣಿಗೆಯನ್ನು ಆರಂಭಿಸಲು ಪ್ರೇರಣೆ ಸಿಕ್ಕಿದಾಗ ನನ್ನೊಳಗಿನ ಭಾವಗಳು ಬಿಡುಗಡೆಗೊಂಡ ಹಲವು ಬಗೆಗಳಲ್ಲಿ ಸಣ್ಣ ಕತೆಯೂ ಒಂದು. ಆಗೊಮ್ಮೆ ಈಗೊಮ್ಮೆ ಬರೆದ ಕೆಲವು ಕತೆಗಳು ಈ…
ಲೇಖಕರು: Kavitha Mahesh
ವಿಧ: ರುಚಿ
September 01, 2024
ಕಡಲೆಬೇಳೆಯನ್ನು ಒಂದು ಗಂಟೆ ಕಾಲ ನೆನೆಸಿ ಬಸಿದು ತರಿತರಿಯಾಗಿ ರುಬ್ಬಿ. ರುಬ್ಬಿದ ಮಿಶ್ರಣಕ್ಕೆ ಅಕ್ಕಿ ಹಿಟ್ಟು, ತೆಂಗಿನ ತುರಿ, ಕರಿಬೇವಿನ ಸೊಪ್ಪು, ಕೊತ್ತಂಬರಿ ಸೊಪ್ಪು, ಇಂಗು, ಮೆಣಸಿನ ಹುಡಿ, ಶುಂಠಿ ತುರಿ, ಉಪ್ಪು ಸೇರಿಸಿ ಸ್ವಲ್ಪ ನೀರು ಹಾಕಿ ಚಟ್ಟಂಬಡೆಯ ಹದಕ್ಕೆ ಗಟ್ಟಿಯಾಗಿ ಕಲಸಿ. ಕಲಸಿದ ಮಿಶ್ರಣದಿಂದ, ಚಿಕ್ಕ ಉಂಡೆ ಮಾಡಿ ತಟ್ಟಿ ಕಾದ ಎಣ್ಣೆಯಲ್ಲಿ ಕರಿಯಿರಿ. ಗರಿಗರಿಯಾದ ಚಟ್ಟಂಬಡೆ, ಕಾಯಿ ಚಟ್ನಿಯೊಂದಿಗೆ ಇಲ್ಲವೇ ಮೊಸರಿನಲ್ಲಿ ನೆನೆಯಿಟ್ಟು ತಿನ್ನಲು ಬಹಳ ರುಚಿಕರ.
ವಿಧ: ಪುಸ್ತಕ ವಿಮರ್ಶೆ
September 01, 2024
೨೦೦೧ರಲ್ಲಿ ಬರೆದ ತಮ್ಮ ‘ಐಕ್ಯಗಾನ ಮೊಳಗಲಿ' (ನಾಡು-ನುಡಿ ಗೀತೆಗಳು) ಸಂಕಲನದಲ್ಲಿ ದೈಹಿಕ ಶಿಕ್ಷಣ ಶಿಕ್ಷಕ, ಕವಿಗಳಾದ ಹಾ.ಮ.ಸತೀಶ ಇವರು ಒಟ್ಟು ಮೂವತ್ತು ಗೀತೆಗಳನ್ನು ಬರೆದಿದ್ದಾರೆ. ನಾಡು-ನುಡಿ ಗೀತೆಗಳನ್ನೇ ಒಂದಾಗಿಸಿ, ನಾಡಭಕ್ತಿ, ಪ್ರೇಮ ಮೆರೆದಿರುವುದು ಗೀತೆಯ ಸಾಲುಗಳಲ್ಲಿ ಪ್ರತಿಧ್ವನಿಸುತ್ತಿದೆ. ‘ಕನ್ನಡದ ಮಕ್ಕಳಿಗಾಗಿಯೇ’ ಬರೆದದ್ದು ಎನ್ನುವ ಮಾತು ತೂಕವುಳ್ಳದ್ದಾಗಿದೆ. ರಾಗ ಹಾಕಿ ಹಾಡು, ನೃತ್ಯ ಮಾಡುವಂತಿದೆ. ಈ ‘ಐಕ್ಯಗಾನ’ ನೋಡಲು ಪುಟ್ಟ ಪುಸ್ತಕವಾದರೂ ಪುಟಗಳ ಬಿಡಿಸುತ್ತಾ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
August 30, 2024
ಯಾವುದೇ ಒಂದು ಪುಸ್ತಕಕ್ಕೆ ಉತ್ತಮ ವಿಮರ್ಶೆ ಕಲಶಪ್ರಾಯವಿದ್ದಂತೆ. ವಿಮರ್ಶೆ ಹೊಗಳಿಕೆಯಾಗಿರಲಿ, ತೆಗಳಿಕೆಯಾಗಿರಲಿ, ಸಲಹೆಯಾಗಿರಲಿ, ಟೀಕೆಯಾಗಿರಲಿ ಎಲ್ಲವೂ ಆ ಕೃತಿಯ ಲೇಖಕನಿಗೆ ಅತೀ ಮುಖ್ಯ. ವಿಮರ್ಶೆಗಳನ್ನು ಗಮನಿಸಿಯೇ ಆ ವ್ಯಕ್ತಿ ತನ್ನ ಮುಂದಿನ ಪುಸ್ತಕವನ್ನು ರೂಪಿಸಿಕೊಳ್ಳಬಹುದು. ಲೇಖಕರಾದ ನರೇಂದ್ರ ಪೈ ಅವರು ವಿಮರ್ಶೆಗಳ ಸಂಗ್ರಹವನ್ನೇ ಒಂದು ಕೃತಿಯನ್ನಾಗಿಸಿದ್ದಾರೆ. ಅದಕ್ಕೆ ಅವರಿಟ್ಟ ಹೆಸರು ‘ಸಾವಿರದ ಒಂದು ಪುಸ್ತಕ' ಈ ಬಗ್ಗೆ ಲೇಖಕರ ಮನದಾಳದ ಮಾತುಗಳು ಹೀಗಿವೆ... “ನಾವು ನಮ್ಮ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
August 28, 2024
ತಂತ್ರಜ್ಞಾನ ಬೆಳೆದಂತೆ ವಂಚಕರ ಯೋಚನೆ ಮತ್ತು ಯೋಜನೆಗಳೂ ವಿಭಿನ್ನ ರೀತಿಯಲ್ಲಿ ಬೆಳೆಯುತ್ತಿದೆ. ಈಗಿನ ಹೊಸ ಟ್ರೆಂಡ್ ಎಂದರೆ ಸೈಬರ್ ವಂಚನೆ. ಈ ವಂಚಕರು ಎಲ್ಲೋ ಕುಳಿತುಕೊಂಡು ಅಂತರ್ಜಾಲದ ಸಹಾಯದಿಂದ ಜನರ ಹಣವನ್ನು ಕೊಳ್ಳೆ ಹೊಡೆಯುತ್ತಿದ್ದಾರೆ. ಇಂತವರನ್ನು ಗುರುತಿಸಿ ಶಿಕ್ಷೆ ನೀಡುವುದೂ ಬಹಳಷ್ಟು ಸಲ ಕಷ್ಟವಾಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ನೀಡುವ ಕೃತಿ ‘ಸೈಬರ್ ವಂಚನೆ'. ಇದನ್ನು ಬರೆದಿದ್ದಾರೆ ವಿಕ್ರಮ್ ಜೋಶಿ. ಈ ಅಂತರ ಜಾಲದ ಕರಾಳ ಮುಖವನ್ನು ಬಯಲು ಮಾಡಲು ಲೇಖಕರು ಬಹಳಷ್ಟು…