ವಿಧ: ರುಚಿ
August 03, 2024
ಬಾಣಲೆ ಒಲೆಯ ಮೇಲಿಟ್ಟು ಸ್ವಲ್ಪ ತುಪ್ಪ ಹಾಕಿ ಬಿಸಿಯಾದಾಗ ಹೆಚ್ಚಿದ ಪಾಲಕ್ ಸೊಪ್ಪು ಹಾಕಿ ಬಾಡಿಸಿ ನಂತರ ರುಬ್ಬಿ ಗೋಧಿ ಹಿಟ್ಟಿಗೆ ಹಾಕಿ. ಉಪ್ಪು, ಕೆಂಪು ಮೆಣಸಿನ ಪುಡಿ, ಜೀರಿಗೆ ಪುಡಿ ಬೆರೆಸಿ. ಅಗತ್ಯಕ್ಕೆ ತಕ್ಕಷ್ಟು ನೀರು ಹಾಕಿ ಕಲಸಿ ಉಂಡೆ ಮಾಡಿ ಚಪಾತಿ ಲಟ್ಟಿಸಿ. ತವಾಕ್ಕೆ ಹಾಕಿ ಎರಡೂ ಬದಿ ಬೇಯಿಸಿ ತೆಗೆಯಿರಿ. ಬಿಸಿಬಿಸಿ ತಿನ್ನಲು ಬಹು ರುಚಿ.
- ಸಹನಾ ಕಾಂತಬೈಲು, ಮಡಿಕೇರಿ
ವಿಧ: ಪುಸ್ತಕ ವಿಮರ್ಶೆ
August 02, 2024
ಸಸ್ಯ ಸಂಪದ ಮಾಲಿಕೆಯಲ್ಲಿ ಪ್ರಕಟವಾದ ೭೦ನೇ ಪುಸ್ತಕವೇ ಲಕ್ಕಿ. ಸಸ್ಯ ಸಂಪದ ಎಂಬ ಪರಿಕಲ್ಪನೆಯಲ್ಲಿ ೧೦೦ ಬಹು ಉಪಯೋಗಿ ಸಸ್ಯಗಳ ಸವಿವರಗಳನ್ನು ಪುಸ್ತಕ ರೂಪದಲ್ಲಿ ಹೊರ ತರುವ ಮುನಿಯಾಲ್ ಗಣೇಶ್ ಶೆಣೈ ಅವರ ಸಾಹಸ ಮೆಚ್ಚತಕ್ಕದ್ದು. ಈಗಾಗಲೇ ೭೦ ಸಸ್ಯಗಳ (ಹಣ್ಣು, ತರಕಾರಿ) ಬಗ್ಗೆ ಮಾಹಿತಿ ನೀಡುವ ಪುಸ್ತಕಗಳು ಹೊರಬಂದಿವೆ. ಬೇಗದಲ್ಲೇ ಈ ಸಂಖ್ಯೆ ನೂರು ತಲುಪಲಿದೆ.
ಲಕ್ಕಿ ಎಂಬ ಸಸ್ಯವನ್ನು ಎಲ್ಲರೂ ನೋಡಿರುತ್ತೀರಿ. ಆದರೆ ಅದರ ಹೆಸರು ಲಕ್ಕಿ ಎನ್ನುವ ಬಗ್ಗೆ ಕಲ್ಪನೆ ಇರುವುದು ಕಡಿಮೆ. ಅದರ ಉಪಯೋಗಗಳ…
ವಿಧ: ರುಚಿ
August 01, 2024
ಒಂದು ಪಾತ್ರೆಯಲ್ಲಿ ಮಾವಿನ ತುರಿ, ಹೆಸರುಕಾಳು, ಕ್ಯಾರೆಟ್ ತುರಿ, ತೆಂಗಿನತುರಿ, ಕಾಳುಮೆಣಸಿನ ಪುಡಿ, ಉಪ್ಪು, ನಿಂಬೆರಸ, ಕೊತ್ತಂಬರಿ ಸೊಪ್ಪು, ಕತ್ತರಿಸಿದ ಹಸಿಮೆಣಸು ಎಲ್ಲವನ್ನೂ ಮಿಶ್ರ ಮಾಡಿ. ನಂತರ ಕರಿಬೇವು ಸೊಪ್ಪಿನ ಒಗ್ಗರಣೆ ಕೊಟ್ಟರೆ ಕೋಸಂಬರಿ ತಿನ್ನಲು ರೆಡಿ.
- ಸಹನಾ ಕಾಂತಬೈಲು, ಮಡಿಕೇರಿ
ವಿಧ: ಪುಸ್ತಕ ವಿಮರ್ಶೆ
July 31, 2024
‘ಯೋಗ ಸಂಗೀತ' - ಮೈಸೂರು ಪರಂಪರೆ ಎನ್ನುವ ಮಾಹಿತಿಪೂರ್ಣ ಪುಸ್ತಕವನ್ನು ಬರೆದವರು ಐತಿಚಂಡ ರಮೇಶ್ ಉತ್ತಪ್ಪ. ಈ ಕೃತಿಗೆ ಅಂತರಾಷ್ಟ್ರೀಯ ಖ್ಯಾತಿಯ ಯೋಗ ಪಟುವಾದ ಡಾ. ಗಣೇಶ್ ಕುಮಾರ್ ಮತ್ತು ಮೈಸೂರು ಕಲ್ಚರಲ್ ಅಸೋಸಿಯೇಷನ್ ಇದರ ಅಧ್ಯಕ್ಷರಾದ ಎ ಪಿ ನಾಗೇಶ್ ಇವರು ಬೆನ್ನುಡಿಯನ್ನು ಬರೆದಿದ್ದು, ಮೈಸೂರಿನ ರವಿ ಪಿ. ಇವರು ಮುನ್ನುಡಿಯನ್ನು ಬರೆದಿದ್ದಾರೆ. ಅವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಅಭಿಪ್ರಾಯಗಳ ಆಯ್ದ ಭಾಗ ಇಲ್ಲಿದೆ...
“ಯೋಗ ಹಾಗೂ ಸಂಗೀತದ ತವರು ಮನೆ ಮೈಸೂರು ಎಂದು…
ವಿಧ: ಪುಸ್ತಕ ವಿಮರ್ಶೆ
July 29, 2024
ಸಸ್ಯ ಸಂಪದ ಮಾಲಿಕೆಯಲ್ಲಿ ಪ್ರಕಟವಾದ ೪೯ನೇ ಪುಸ್ತಕವೇ ಲಕ್ಸ್ಮಣ ಫಲ ಮತ್ತು ಸೀತಾಫಲ. ಸಸ್ಯ ಸಂಪದ ಎಂಬ ಪರಿಕಲ್ಪನೆಯಲ್ಲಿ ೧೦೦ ಬಹು ಉಪಯೋಗಿ ಸಸ್ಯಗಳ ಸವಿವರಗಳನ್ನು ಪುಸ್ತಕ ರೂಪದಲ್ಲಿ ಹೊರ ತರುವ ಮುನಿಯಾಲ್ ಗಣೇಶ್ ಶೆಣೈ ಅವರ ಸಾಹಸ ಮೆಚ್ಚತಕ್ಕದ್ದು. ಈಗಾಗಲೇ ೭೦ ಸಸ್ಯಗಳ (ಹಣ್ಣು, ತರಕಾರಿ) ಬಗ್ಗೆ ಮಾಹಿತಿ ನೀಡುವ ಪುಸ್ತಕಗಳು ಹೊರಬಂದಿವೆ. ಬೇಗದಲ್ಲೇ ಈ ಸಂಖ್ಯೆ ನೂರು ತಲುಪಲಿದೆ.
ಲಕ್ಸ್ಮಣ ಫಲ, ಸೀತಾಫಲ, ರಾಮಫಲ ಮುಂತಾದುವುಗಳು ಬಹು ಆರೋಗ್ಯಕರ ಹಾಗೂ ರುಚಿಕರ ಹಣ್ಣುಗಳು ಎನ್ನುವುದರಲ್ಲಿ…
ವಿಧ: ರುಚಿ
July 28, 2024
ಅಕ್ಕಿ ಹಿಟ್ಟು, ರವೆ ಹಾಗೂ ಮೈದಾಗಳನ್ನು ಸೇರಿಸಿಡಿ. ಈ ಮಿಶ್ರಣಕ್ಕೆ ಮೆಂತ್ಯೆ ಸೊಪ್ಪು, ಕೊತ್ತಂಬರಿ ಸೊಪ್ಪು, ಹಸಿ ಮೆಣಸಿನಕಾಯಿ, ಉಪ್ಪು, ಜೀರಿಗೆ ಮತ್ತು ಎಳ್ಳು ಹುಡಿಗಳನ್ನು ಸೇರಿಸಿ ನೀರಿನೊಂದಿಗೆ ಗಟ್ಟಿಯಾಗಿ ಪೂರಿಯ ಹದಕ್ಕೆ ಕಲಸಿ. ಅರ್ಧ ಗಂಟೆ ನೆನೆಸಿಡಿ. ನಂತರ ಹಿಟ್ಟಿನ ಮಿಶ್ರಣದಿಂದ ಸಣ್ಣ ಸಣ್ಣ ಉಂಡೆಗಳನ್ನು ಮಾಡಿ ಪೂರಿಯ ಹದಕ್ಕೆ ಲಟ್ಟಿಸಿ, ಕಾಯಿಸಿದ ಎಣ್ಣೆಯಲ್ಲಿ ಕರಿದರೆ ರುಚಿಕರವಾದ ಮೆಂತ್ಯೆ ಸೊಪ್ಪಿನ ಪೂರಿ ತಿನ್ನಲು ರೆಡಿ.
ವಿಧ: ಬ್ಲಾಗ್ ಬರಹ
July 26, 2024
ಇದನ್ನು "ಶ್ರೀವತ್ಸ " ಎಂಬವರು ಬರೆದಿದ್ದು archive.org ತಾಣದಲ್ಲಿದೆ. ಇದನ್ನು https://archive.org/details/in.ernet.dli.2015.364640/mode/1up ಈ ಕೊಂಡಿಯಲ್ಲಿ ಓದಬಹುದು ಅಥವಾ ಇಳಿಸಿಕೊಳ್ಳಬಹುದು.
ದಕ್ಷಿಣದ ಯದುಗಿರಿಯ ದೇವರಾದ ಶ್ರೀಕೃಷ್ಣನು - ಅವನ ಹೆಸರು ಸಂಪತ್ಕುಮಾರ - ವಿಗ್ರಹ ರೂಪದಲ್ಲಿ ದೆಹಲಿಯ ಸುಲ್ತಾನನ ಮಗಳ - ಅವಳ ಹೆಸರೇ ಬೀಬಿ ನಾಚ್ಚಿಯಾರ್ - ಶಯ್ಯಾಗೃಹದಲ್ಲಿದ್ದನು. ಅವನನ್ನು ದೆಹಲಿಯ ಸುಲ್ತಾನನ ಆ ಮಗಳು ಪ್ರೀತಿಸಿದ್ದಳು . ಈ ಮೂರ್ತಿ ರೂಪದ ದೇವರನ್ನು ಶ್ರೀ…
ವಿಧ: ಪುಸ್ತಕ ವಿಮರ್ಶೆ
July 26, 2024
‘ಒಡಲ ಜೋಗುಳ' ಎಂಬುದು ವಿಶ್ವಪ್ರಿಯ ವಡ್ಡಮ್ಮ ತಾತನ ತತ್ವಪದಗಳ ಸಂಗ್ರಹದ ಮೊದಲ ಸಂಪುಟ. ಈ ಸಂಪುಟವನ್ನು ಸಂಪಾದನೆ ಮಾಡಿದ್ದಾರೆ ಡಾ. ಯಮನೂರಪ್ಪ ವಡಕಿ ಇವರು. ತಮ್ಮ ಸಂಪಾದಕೀಯದಲ್ಲಿ ಇವರು ಬರೆದ ಸಾಲುಗಳು ನಿಮ್ಮ ಓದಿಗಾಗಿ…
“ಮೂಲತಃ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಮಾಟೂರಿನವರಾದ ಆದಯ್ಯಸ್ವಾಮಿ ಹಿರೇಮಠ ಅವರು ಬಾಲ್ಯದ ದಿನಗಳಿಂದಲೂ ಗಂಗಾವತಿ ನಗರದಲ್ಲಿ ವಾಸವಾಗಿದ್ದವರು. ಪ್ರಾಥಮಿಕ ಶಿಕ್ಷಣದಿಂದ ಪದವಿ ಪೂರ್ವ ಶಿಕ್ಷಣದವರೆಗೂ ಗಂಗಾವತಿಯಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಪೂರೈಸಿದ್ದಾರೆ.…
ವಿಧ: ಪುಸ್ತಕ ವಿಮರ್ಶೆ
July 25, 2024
“ಏಷ್ಯಾ ಮತ್ತು ಪೆಸಿಫಿಕ್ ಪ್ರದೇಶದ ಕತೆಗಳು, ಒಗಟುಗಳು ಮತ್ತು ಗಾದೆಗಳು” ಎಂಬುದು ಈ ಪುಸ್ತಕದ ಉಪಶೀರ್ಷಿಕೆ. ಏಷ್ಯಾ ಮತ್ತು ಪೆಸಿಫಿಕ್ ಪ್ರದೇಶದ ಸಹಪ್ರಕಾಶನ ಕಾರ್ಯಕ್ರಮ (ಎ.ಸಿ.ಪಿ.)ದಲ್ಲಿ ಯುನೆಸ್ಕೋ ಆಶ್ರಯದಲ್ಲಿ ಹೊರತರಲಾದ ಈ ಪುಸ್ತಕವನ್ನು ಎನ್.ಬಿ. ಟ್ರಸ್ಟ್ ಮೂಲಕ ಏಷ್ಯನ್ ಕಲ್ಚರಲ್ ಸೆಂಟರ್ ಫಾರ್ ಯುನೆಸ್ಕೋ ಪ್ರಕಟಿಸಿದೆ.
ಇದರಲ್ಲಿ 54 ಹಾಸ್ಯಭರಿತ ಕತೆಗಳು, 54 ಒಗಟುಗಳು, 23 ಗಾದೆಗಳು ಮತ್ತು ರೇಖಾಚಿತ್ರಗಳಿವೆ. ಉಲ್ಲೇಖಿತ ಪ್ರದೇಶದ 18 ದೇಶಗಳು ಈ ಕೊಡುಗೆ ನೀಡಿವೆ. ಜಗತ್ತಿನ ನಾನಾ…
ವಿಧ: ರುಚಿ
July 25, 2024
ಹುರಿದ ಉದ್ದಿನ ಹಿಟ್ಟು, ಅಕ್ಕಿ ಹಿಟ್ಟು, ಬೆಣ್ಣೆ ಅಥವಾ ಕಾದ ಎಣ್ಣೆ, ಉಪ್ಪು, ಜೀರಿಗೆ, ಎಳ್ಳು ಎಲ್ಲವನ್ನೂ ಒಂದು ಪಾತ್ರೆಗೆ ಹಾಕಿ ಚೆನ್ನಾಗಿ ಬೆರೆಸಿ. ನೀರು ಹಾಕಿ ಹದವಾಗಿ ಕಲಸಿ ಚಕ್ಕುಲಿ ಒರಳಿನಲ್ಲಿ ಹಾಕಿ ಎಣ್ಣೆ ಸವರಿದ ಬಾಳೆಲೆ ಅಥವಾ ಪ್ಲಾಸ್ಟಿಕ್ ಕವರ್ ಮೇಲೆ ಬೇಕಾದ ಅಳತೆಗೆ ಚಕ್ಕುಲಿ ಒತ್ತಿ. ಕಾದ ಎಣ್ಣೆಯಲ್ಲಿ ಹಾಕಿ ಗರಿಗರಿಯಾಗಿ ಕರಿಯಿರಿ.
- ಸಹನಾ ಕಾಂತಬೈಲು, ಮಡಿಕೇರಿ