ಎಲ್ಲ ಪುಟಗಳು

ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
September 14, 2024
ಪ್ರತಿಭಾವಂತ ಲೇಖಕರಾದ ಡಾ ಸುಬ್ರಹ್ಮಣ್ಯ ಸಿ ಕುಂದೂರು ಇವರ ‘ಜೀವನ ಯಾನ' ಎನ್ನುವ ಕಾದಂಬರಿ ಇತ್ತೀಚೆಗೆ ಪುಸ್ತಕ ಮನೆ ಪ್ರಕಾಶನದಿಂದ ಬಿಡುಗಡೆಯಾಗಿದೆ. ಈ ತಮ್ಮ ಕಾದಂಬರಿಯ ಬಗ್ಗೆ ಒಂದಿಷ್ಟು ಮಾಹಿತಿಗಳನ್ನು ಲೇಖಕರು ತಮ್ಮ ಮಾತಿನಲ್ಲಿ ಹಂಚಿಕೊಂಡಿದ್ದಾರೆ.. “ಕಳೆದ ದಶಕಗಳಿಂದ ಮಲೆನಾಡಿನ ಸಾಂಸ್ಕೃತಿಕ ಪರಿಸರದಲ್ಲಿ ಮಾನವರ ವಲಸೆಯ ಅಭಿವ್ಯಕ್ತಿಯು ಸಾಮಾನ್ಯವಾಗಿ ಗೋಚರವಾಗುತ್ತಿದೆ. ದುಡಿಯುವ ನೆಲೆಯಲ್ಲಿ ನಡೆಯುವ ಮಾನವಕೇಂದ್ರಿತ ಪಲ್ಲಟಗಳು ಸಾಂಸ್ಕೃತಿಕ ಪಟುತ್ವವನ್ನು ಮೀರುವ ಮತ್ತು ಸಮಗೊಳಿಸುವ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
September 14, 2024
ಈ ತನಕ ನಾನು ಕೇಳಿ ಇಷ್ಟ ಪಟ್ಟ ಪರಭಾಷೆಗಳ ಅನೇಕ ಗೀತೆಗಳನ್ನು ನನ್ನ ಸಂತೋಷಕ್ಕಾಗಿ ಆದಷ್ಟು ಅನುವಾದ / ಭಾವಾನುವಾದ ಮಾಡಿಕೊಂಡು ನಾನೇ starmaker ಎಂಬ App ನಲ್ಲಿ ಹಿನ್ನೆಲೆ ಸಂಗೀತದೊಡನೆ ಹಾಡಿಕೊಂಡು ರೆಕಾರ್ಡ್ ಮಾಡಿಕೊಂಡು ಕೇಳುತ್ತ ಖುಷಿ ಪಡುತ್ತಿದ್ದೇನೆ. 103) ಮೂಲ ಹಾಡು -'ಹಮ್ ದಿಲ್ ದೇ ಚುಕೇ ' ಚಿತ್ರದ 'ತಡಪ್ ತಡಪ್ ಕೆ ಇಸ ದಿಲ್ ' ನನ್ನ ಅನುವಾದ :- ಮರಳಿ ಮರಳಿ ಈ ಹೃದಯ ನಿಟ್ಟುಸಿರ ಬಿಡುತಲಿದೆ ಏಕೆ ನನಗೆ ಈ ಶಿಕ್ಷೆ ? ಯಾವ ಅಪರಾಧಕೆ? ಹಾಳಾದೆ ನಾ ಹಾಳಾದೇ ಹಾಳಾದೆ ನಿನ್ನ…
ವಿಧ: ರುಚಿ
September 14, 2024
ಹಣ್ಣುಗಳನ್ನು ಬೀಜ ಹಾಗೂ ಗಟ್ಟಿಯಾದ ಭಾಗವನ್ನು ತೆಗೆದು ಶುಂಠಿ ತುಂಡಿನೊಂದಿಗೆ ಮಿಕ್ಸಿಯಲ್ಲಿ ಪೇಸ್ಟ್ ಮಾಡಿ ಬಾಣಲಿಯಲ್ಲಿ ಹಾಕಿ ಮಗುಚ ಬೇಕು. ಬೆಂದ ನಂತರ ಸಕ್ಕರೆ ಹಾಗೂ ಚಿಟಿಕೆ ಉಪ್ಪು ಹಾಕಿ ಜಾಮ್ ನ ಹದ ಬರುವವರೆಗೆ ಮಗುಚುವುದು. -ಗೀತಾ ಕೋಟೆ, ಅಂಚೆ ಕಳಂಜ, ಸುಳ್ಯ 
ವಿಧ: ಪುಸ್ತಕ ವಿಮರ್ಶೆ
September 13, 2024
ಪರಿಶುದ್ಧ ಬಾಳೂ ಕವಿತೆಯೇ ಬರೀ ಪದಗಳಲ್ಲ ಕನ್ನಡದ ಪ್ರಮುಖ ವಿಮರ್ಶಕರೆಂದು ಹೆಸರಾದ ಡಾ. ಎಚ್ .ಎಸ್. ಸತ್ಯನಾರಾಯಣ ಅವರು ಈವರೆಗೆ ಬರೀ ಗದ್ಯ ಸಾಹಿತ್ಯ ಪ್ರಕಾರದಲ್ಲಿ ಒಡನಾಡುತ್ತಿದ್ದರು. ಅವರ ಮೊದಲ ಕವನ ಸಂಕಲನ (ಹಾಯ್ಕುಗಳ ಸಂಕಲನ) ಪ್ರಕಟಿಸುವ ಮೂಲಕ ಕವಿಯಾಗ ಬೇಕೆಂಬ ಅವರ ಅಸೆಯನ್ನೂ ಅವರು ಪೂರೈಸಿಕೊಂಡರು. ‘ಮರ  ಬರೆದ ರಂಗೋಲಿ’ ಎಂಬ ಹಾಯ್ಕು ಸಂಕಲನ ಮಾಲೂರಿನ ‘ಅಲಂಪು ಪ್ರಕಾಶನ’ದಿಂದ ೨೦೨೩ ರಲ್ಲಿ ಪ್ರಕಟವಾಗಿದೆ, ಅವರೇ ಹೇಳಿದಂತೆ ಹಲವಾರು ಹೈಕು ಬರಹಗಾರರಿಗೆ ಮುನ್ನುಡಿ ಬರೆಯುವ ಕಾರಣಕ್ಕಾಗಿ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
September 12, 2024
ರವಿ ಬೆಳಗೆರೆಯವರ ಸಂಪಾದಕತ್ವದಲ್ಲಿ ಹೊರಬರುತ್ತಿದ್ದ ‘ಹಾಯ್ ಬೆಂಗಳೂರು' ವಾರ ಪತ್ರಿಕೆಯಲ್ಲಿ ಪ್ರಕಟವಾದ ಕಪಟ ಸ್ವಾಮಿಗಳ ಬಗ್ಗೆ ವರದಿಗಳ ಸಂಗ್ರಹವೇ ‘ಹಾಯ್ ಕಂಡ ಸ್ವಾಮಿಗಳು' ಎನ್ನುವ ಕೃತಿ. ಈ ಪುಸ್ತಕ ರವಿ ಬೆಳಗೆರೆ ಅವರ ನಿಧನದ ನಂತರ ಅವರ ಮಗಳು ಭಾವನಾ ಬೆಳಗೆರೆ ಅವರ ಮುತುವರ್ಜಿಯಲ್ಲಿ ಹೊರಬಂದಿದೆ. ಈ ಕೃತಿಯ ಬೆನ್ನುಡಿಯಲ್ಲಿ ಸ್ವತಃ ಭಾವನಾ ಬೆಳಗೆರೆ ವ್ಯಕ್ತ ಪಡಿಸಿದ ಭಾವನೆಗಳು ಹೀಗಿವೆ..  “ಹಿಂದೂಧರ್ಮ, ಗೋರಕ್ಷಣೆ, ಕೇಸರಿ ಉಡುಪು, ಇದು ಈಗ ಭಾರತದಲ್ಲಿ ವಿಪರೀತವಾಗಿ…
ವಿಧ: ರುಚಿ
September 12, 2024
ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಅದಕ್ಕೆ ಗೋದಿ ಹಿಟ್ಟು ಹಾಕಿ ಸಣ್ಣ ಉರಿಯಲ್ಲಿ ಸ್ವಲ್ಪ ಕಂದು ಬಣ್ಣ ಬರುವವರೆಗೆ ಹುರಿಯಿರಿ. ಗೋಡಂಬಿ, ದ್ರಾಕ್ಷಿ ಸೇರಿಸಿಕೊಳ್ಳಿ. ಇನ್ನೊಂದು ಪಾತ್ರೆಯಲ್ಲಿ ಹಾಲು, ನೀರು ಹಾಗು ಸಕ್ಕರೆ ಸೇರಿಸಿ ಕುದಿಯಲು ಇಡಿ. ಕುದಿಯುವ ಈ ಹಾಲು, ನೀರಿನ ಮಿಶ್ರಣವನ್ನು ಹುರಿದ ಗೋದಿ ಹಿಟ್ಟಿಗೆ ಸೇರಿಸಿ ಚೆನ್ನಾಗಿ ಮಗುಚಿ. ಏಲಕ್ಕಿ ಪುಡಿ ಸೇರಿಸಿ ಮತ್ತೆ ಗಂಟಿಲ್ಲದಂತೆ ಮಗುಚಿ ಇಳಿಸಿ. ಇದು ಬೇಗನೇ ಆಗುವ ಸಿಹಿತಿಂಡಿ. - ಸಹನಾ ಕಾಂತಬೈಲು, ಮಡಿಕೇರಿ
ವಿಧ: ಪುಸ್ತಕ ವಿಮರ್ಶೆ
September 11, 2024
ವಿವೇಕ ದಿವಟೆಯವರ  ‘ಹೊಂಗಿರಣ’ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಪ್ರಭಾರಿ ಪ್ರಾಚಾರ್ಯರಾಗಿರುವ ಬೆಳಗಾವಿ ತಾಲೂಕಿನ ಬಸವನ ಕುಡಚಿಯ  ಶ್ರೀ ವಿವೇಕ ದಿವಟೆಯವರು ದ್ವಿಭಾಷಾ ಕವಿಗಳು. ಅವರು ಹಿಂದಿಯಲ್ಲಿ ಬರೆದಿರುವ ಕವನ ಸಂಕಲನ ಪ್ರಕಟವಾಗಿದೆ. ಮೂಲತಃ ಹಿಂದಿ ಅಧ್ಯಾಪಕರಾಗಿರುವ ಅವರು  ಕನ್ನಡದಲ್ಲಿಯೂ ಬರೆಯುವ ಪ್ರಯತ್ನವಾಗಿ ಅವರ ಕವನ ಸಂಕಲನ ‘ಹೊಂಗಿರಣ’ ೨೦೨೦ ರಲ್ಲಿ ವಿವೇಕ ಪ್ರಕಾಶನದಿಂದಲೇ ಪ್ರಕಟವಾಗಿದೆ. ಅವರ ಈ ಮೊದಲ ಕವನ ಸಂಕಲನಕ್ಕೆ ಬೆಳಗಾವಿಯ ಹಿರಿಯ ಪತ್ರಕರ್ತರಾದ ಶ್ರೀ ಎಲ್,ಎಸ್…
ವಿಧ: ರುಚಿ
September 11, 2024
ತೊಂಡೆಹಣ್ಣುಗಳನ್ನು ಸಣ್ಣಗೆ ಕತ್ತರಿಸಿ, ಉಪ್ಪು ಹಾಕಿ ಬೇಯಿಸ ಬೇಕು. ಅದು ತಣ್ಣಗಾದ ಮೇಲೆ ಚೆನ್ನಾಗಿ ಕಿವುಚಿಕೊಳ್ಳ ಬೇಕು. ಕಿವುಚಿದ ತೊಂಡೆಹಣ್ಣಿಗೆ ಮೊಸರು, ಹಸಿಮೆಣಸು ಸಣ್ಣಗೆ ಕೊಚ್ಚಿ ಹಾಕಬೇಕು. ಈ ಮಿಶ್ರಣ ಕ್ಕೆ ಬೇವಿನಸೊಪ್ಪು ಒಗ್ಗರಣೆ ಹಾಕಿದರೆ ಪಚ್ಚಡಿ ತಯಾರು. -ಅಶ್ವಿನಿಮೂರ್ತಿ ಅಯ್ಯನಕಟ್ಟೆ
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
September 10, 2024
ರಾಮಕೃಷ್ಣ ಹೆಗಡೆ ಇವರು ಬರೆದ 'ಒಲವ ಧಾರೆ' ಎನ್ನುವ ಕವನ ಸಂಕಲನ ಇತ್ತೀಚೆಗೆ ಕಾರ್ಕಳದ ಪುಸ್ತಕ ಮನೆ ಪ್ರಕಾಶನದ ಮುಖಾಂತರ ಬಿಡುಗಡೆಯಾಗಿದೆ. ಈ ಕವನ ಸಂಕಲನಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಜಯಲಕ್ಷ್ಮಿ ಕೆ. ಇವರು ತಮ್ಮ ಮುನ್ನುಡಿ ಬರಹದಲ್ಲಿ ವ್ಯಕ್ತ ಪಡಿಸಿದ ಅನಿಸಿಕೆಗಳ ಆಯ್ದ ಭಾಗ...  “ನವೋದಯ-ನವ್ಯ ಸಾಹಿತ್ಯರಚನೆಯ ಈ ಕಾಲಘಟ್ಟದಲ್ಲಿ ಕವನಗಳನ್ನು ರಚಿಸಲು ನಿರ್ದಿಷ್ಟ ನಿಯಮಗಳೇನೂ ಇಲ್ಲವಾದರೂ ತೋಚಿದ್ದನ್ನೆಲ್ಲ ಗೀಚಿದರೆ ಅದು ಕವನ ಎನಿಸಿಕೊಳ್ಳುವುದಿಲ್ಲ. ಅನುಭವಗಳ ಸಾರವನ್ನು ಕಲ್ಪನೆಯ…
ವಿಧ: ರುಚಿ
September 09, 2024
ಸ್ಟೀಲ್ ಅಥವಾ ಚೆನ್ನಾಗಿ ಕಲಾಯಿ ಇರುವ ಹಿತ್ತಾಳೆ ಪಾತ್ರೆಯಲ್ಲಿಹಾಲು- ಬೆಲ್ಲ ಸೇರಿಸಿ ಕಾಯಿಸುತ್ತಾ ಬನ್ನಿ. ಕಾಯಿಸುತ್ತಿರುವಾಗಲೇ ಏಲಕ್ಕಿ-ಲವಂಗ ಅರೆದು ಪುಡಿಮಾಡಿ ಹಾಕಿ. ಹಾಲು ಪೂರ್ತಿ ಗಟ್ಟಿಯಾಗಿ ಒಣ ಪಂಚಕಜ್ಜಾಯದಂತೆ ಗಟ್ಟಿಯಾಗುವ ತನಕ ಕಾಯಿಸಿ. ಅನಂತರ ಕೆಳಗಿಳಿಸಿಡಿ. ಇದು ಹುಡಿ (ಪುಡಿ) ಯಾಗುತ್ತದೆಯಾದ್ದರಿಂದ " ಸಿಹಿ ಸಿಹಿ ಹುಡಿ ಗಿಣ್ಣ" ಸುಮಾರು ಒಂದು ವಾರದ ತನಕ ಹಾಗೇ ಇಟ್ಟರೂ ಹಾಳಾಗುವುದಿಲ್ಲ. ಬಂಧುಗಳು- ಆತ್ಮೀಯರು ಬಂದಾಗ ಪ್ರೀತಿಯಿಂದ ಕೊಡಿ. ಇದನ್ನು ಹಾಗೆಯೇ ಅಥವಾ ದೋಸೆ-…