ಎಲ್ಲ ಪುಟಗಳು

ವಿಧ: ರುಚಿ
August 15, 2024
ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿಕೊಂಡು ಗೋದಿ ಹಿಟ್ಟನ್ನು ಹಾಕಿ ಚೆನ್ನಾಗಿ ಪರಿಮಳ ಬರುವವರೆಗೆ ಅಂದರೆ ಸ್ವಲ್ಪ ಕಂದು ಬಣ್ಣ ಬರುವವರೆಗೆ ಸಣ್ಣ ಉರಿಯಲ್ಲಿ ಹುರಿಯಿರಿ. ಆರಿದ ನಂತರ ಸಕ್ಕರೆ ಪುಡಿ, ಏಲಕ್ಕಿ ಪುಡಿ, ತುಪ್ಪದಲ್ಲಿ ಹುರಿದ ಗೋಡಂಬಿ ಚೂರುಗಳನ್ನು ಸೇರಿಸಿ ಉಂಡೆಗಳನ್ನು ಮಾಡಿದರೆ ಗೋದಿ ಲಾಡು ಸವಿಯಲು ರೆಡಿ. ಈ ಲಾಡು ವಾರಗಟ್ಟಲೆ ಉಳಿಯುತ್ತದೆ. ಇದು ಮಕ್ಕಳಿಗೆ ಬಹಳ ಇಷ್ಟವಾಗುವ ಸಿಹಿತಿಂಡಿ. -ಸಹನಾ ಕಾಂತಬೈಲು, ಮಡಿಕೇರಿ
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
August 14, 2024
ಕೆ ಎಂ ಕೃಷ್ಣ ಭಟ್ ಇವರು ‘ರಾಮಾಯಣ ಮತ್ತು ಮಹಾಭಾರತ' ಎನ್ನುವ ಕುತೂಹಲ ಕೆರಳಿಸುವ ಪ್ರಬಂಧಗಳ ಸಂಕಲನವನ್ನು ಹೊರತಂದಿದ್ದಾರೆ. ರಾಮಾಯಣ ಹಾಗೂ ಮಹಾಭಾರತದ ಕುರಿತಾದ ಕೆಲವು ಸಂಶಯಗಳು, ದೃಷ್ಟಿಕೋನಗಳು, ಅಭಿಪ್ರಾಯ ಭೇದಗಳನ್ನು ವಿಮರ್ಶೆ ಮಾಡುವ ಪ್ರಯತ್ನ ಈ ಕೃತಿಯಲ್ಲಿ ಲೇಖಕರು ಮಾಡಿದ್ದಾರೆ. ಲೇಖಕರು ಸ್ವತಃ ಹಿರಿಯ ನ್ಯಾಯವಾದಿಗಳಾಗಿರುವುದರಿಂದ ಪ್ರತಿಯೊಂದು ವಿಷಯಕ್ಕೂ ಇನ್ನೊಂದು ಬಗೆಯ ತರ್ಕವೂ ಇರಬಹುದು ಎನ್ನುವ ಯೋಚನೆ ಮಾಡಿದ್ದಾರೆ. ಅವರೇ ತಮ್ಮ ‘ಒಂದು ಮಾತು' ಎನ್ನುವ ಬರಹದಲ್ಲಿ ಬರೆದಂತೆ “…
ಲೇಖಕರು: Kavitha Mahesh
ವಿಧ: ರುಚಿ
August 13, 2024
ಮಸಾಲೆ ಪದಾರ್ಥಗಳನ್ನು ಹುರಿದು ಹುಡಿ ಮಾಡಿ. ಬದನೆಕಾಯಿಗಳನ್ನು ಒಲೆಯ ಮೇಲಿರಿಸಿ ಕಪ್ಪಾಗುವವರೆಗೆ ಬಿಸಿ ಮಾಡಿ. ತೊಟ್ಟು ಮತ್ತು ಸಿಪ್ಪೆಗಳನ್ನು ತೆಗೆದು ಬದನೆಯನ್ನು ಮಸೆದು ಬಿಡಿ. ಕಾದ ಎಣ್ಣೆಗೆ ಸಾಸಿವೆ, ಕರಿಬೇವು, ಇಂಗಿನ ಒಗ್ಗರಣೆ ಮಾಡಿ. ಈರುಳ್ಳಿ ಹಾಕಿ ಬಾಡಿಸಿ. ಈ ಮಿಶ್ರಣಕ್ಕೆ ಹುಣಸೆ ರಸ, ಮಸಾಲೆ ಹುಡಿ, ಮಸೆದ ಬದನೆಕಾಯಿ, ಉಪ್ಪು ಹಾಕಿ ಕೈಯಾಡಿಸಿ ಒಲೆಯಿಂದ ಕೆಳಗಿರಿಸಿ. ತೆಂಗಿನಕಾಯಿ - ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
August 12, 2024
‘ಪೀಜಿ’ ಸುಶೀಲ ಡೋಣೂರ ಅವರ ಕಾದಂಬರಿಯಾಗಿದೆ. ಇದಕ್ಕೆ ರಾಗಂ ಬೆನ್ನುಡಿ ಬರಹವಿದೆ; ಕಾಡುವ ಕಥೆ ತಟ್ಟನೆ ಬರೆಯಿಸಿಕೊಳ್ಳುವುದಿಲ್ಲ, ಅದು ಒಳಗೊಳಗೆ ವಿಸ್ತಾರಗೊಳ್ಳುತ್ತದೆ. ಅಲ್ಲಿ ವಿಷಾದ ಮಡುಗಟ್ಟಿದಂತೆ ಮಾತು ಮೌನವಾಗುತ್ತದೆ. ಪ್ರೇಮ್ ಚಂದ್, ಅಲೆಕ್ಸಾಂಡರ್ ಪುನ್, ಕಾಮುಗಳ ಕಾದಂಬರಿಗಳು ಘಟಿಸಿದ್ದೇ ಹೀಗೆ. ಘನ ಗಂಭೀರ ಕಾರ್ಮೋಡಗಳು ಆಕಾಶ ತುಂಬಿದಂತೆ ತಟ್ಟನೆ ಮಳೆ ಸುರಿಯುವುದಿಲ್ಲ. ಓಡಾಡುತ್ತವೆ, ಕಾಡುತ್ತವೆ ಕೊನೆಗೊಮ್ಮೆ ಸುರಿದುಬಿಟ್ಟರೆ ನಿಂತ ನೆಲದ ಗತಿ ಏನಾದೀತು ಎನ್ನುವ ಭಯ…
ವಿಧ: ರುಚಿ
August 11, 2024
ಪೇರಳೆ ಚಿಗುರು ಮತ್ತು ಜೀರಿಗೆಯನ್ನು ಒಟ್ಟಾಗಿ ಬೇಯಿಸಿ. ಉಪ್ಪು, ಕಾಯಿತುರಿ ಜೊತೆ ನುಣ್ಣಗೆ ರುಬ್ಬಿ. ಮಜ್ಜಿಗೆ ಹಾಕಿದರೆ ತಂಬುಳಿ ರೆಡಿ. ಮಕ್ಕಳಿಗೆ ಅಜೀರ್ಣದಿಂದ ಬೇಧಿಯಾದರೆ ಇದು ಒಳ್ಳೆಯ ಮದ್ದು. ದೊಡ್ಡವರಿಗೂ ಉತ್ತಮ. - ಸಹನಾ ಕಾಂತಬೈಲು, ಮಡಿಕೇರಿ
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
August 09, 2024
‘ನಿನಗಾಗಿ ಬರೆದ ಕವಿತೆಗಳು' ಎಚ್.ಎಸ್‌.ಮುಕ್ತಾಯಕ್ಕ ಅವರ ಹೊಸ ಸಂಕಲನ. ಈ ಕೃತಿಯನ್ನು 'ಸಂಗಾತ ಪುಸ್ತಕ' ಪ್ರಕಟಿಸಿದೆ. ಇದು ಪ್ರೇಮ ಪದ್ಯಗಳ ಸಂಕಲನ. ಈ ಪದ್ಯಗಳು ಓದುತ್ತ ಗಾಢ ಪ್ರೇಮದ ಹೂದೋಟದಲ್ಲಿ ಕಳೆದು ಹೋಗುವಂತೆ ಮಾಡುತ್ತವೆ. ಈ ಸಂಕಲನ ಪ್ರೇಮಿಗಳ ಉಸಿರಾಟದ ಪಲುಕುಗಳಂತಿವೆ. ಪ್ರತಿ ಪುಟದಲ್ಲಿಯೂ ಆವರಿಸಿರುವ ಪ್ರೇಮ ಪದ್ಯಗಳು ನಮ್ಮವೇ ಅನ್ನಿಸುತ್ತವೆ. ಕವಯತ್ರಿ ಎಚ್ ಎಸ್ ಮುಕ್ತಾಯಕ್ಕ ೧೯೮ ಪುಟಗಳ ಈ ಕೃತಿಗೆ ತಮ್ಮ ಮನದಾಳದ ಮಾತುಗಳನ್ನು ಬರೆದಿದ್ದಾರೆ. ಅದರಲ್ಲಿ ವ್ಯಕ್ತ ಪಡಿಸಿದ ಭಾವನೆಗಳ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
August 07, 2024
ಸಾವಯವ ಕೃಷಿಕ ಗ್ರಾಹಕ ಬಳಗ ಇವರು ಪ್ರಕಟಿಸುತ್ತಿರುವ ಕೃಷಿಕರಿಗೆ ಮಾರ್ಗದರ್ಶಿ ಪುಸ್ತಕಗಳ ಮಾಲಿಕೆಯಲ್ಲಿ ನಾಲ್ಕನೇ ಕೃತಿ ಸರೋಜಾ ಪ್ರಕಾಶ್ ಅವರು ಬರೆದ ‘ನಮ್ಮ ಕೈತೋಟ - ನಮ್ಮ ಹೆಮ್ಮೆ'. ಈ ಕೃತಿಯು ಕೈತೋಟ ಮಾಡುವವರಿಗೆ ಮತ್ತು ತರಬೇತಿ ನೀಡುವವರಿಗೆ ಬಹಳ ಮಾಹಿತಿ ಪೂರ್ಣವಾಗಿದೆ. ಈ ಅಂಗೈ ಅಗಲದ (ಪಾಕೆಟ್ ಬುಕ್) ೨೬ ಪುಟಗಳ ಪುಸ್ತಕದಲ್ಲಿ ಬಹಳಷ್ಟು ಆಸಕ್ತಿದಾಯಕ ಮಾಹಿತಿಗಳನ್ನು ನೀಡಲಾಗಿದೆ. ಈ ಕೃತಿಯ ಬಗ್ಗೆ ಸಾವಯವ ಕೃಷಿಕ ಗ್ರಾಹಕ ಬಳಗದ ಅಧ್ಯಕ್ಷರಾದ ಜಿ ಆರ್ ಪ್ರಸಾದ್ ಅವರು ತಮ್ಮ ಅಧ್ಯಕ್ಷರ…
ವಿಧ: ರುಚಿ
August 07, 2024
ಪುನರ್ಪುಳಿ ಸಿಪ್ಪೆ, ಕಾಯಿತುರಿ, ಜೀರಿಗೆ, ಬೆಲ್ಲ, ಉಪ್ಪು ಎಲ್ಲ ಒಟ್ಟಿಗೆ ಹಾಕಿ ನುಣ್ಣಗೆ ರುಬ್ಬಿ ಬೇಕಷ್ಟು ನೀರು ಸೇರಿಸಿದರೆ ತಂಬುಳಿ ತಯಾರಾಯಿತು. ಇದಕ್ಕೆ ಮಜ್ಜಿಗೆ ಸೇರಿಸಲು ಇಲ್ಲ. - ಸಹನಾ ಕಾಂತಬೈಲು, ಮಡಿಕೇರಿ
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
August 05, 2024
'ವಿಶ್ವದ ರಹಸ್ಯ ಭೇದಿಸಿದ ಭೌತವಿಜ್ಞಾನಿಗಳು’ ಕೃತಿಯು ಡಾ. ಎ.ಓ. ಆವಲ ಮೂರ್ತಿ ಅವರ ಭೌತವಿಜ್ಞಾನ ಚರಿತ್ರೆಯ ಒಂದು ಇಣುಕುನೋಟವಾಗಿದೆ. ಭೌತವಿಜ್ಞಾನದ ೧೪೫ ಶ್ರೇಷ್ಠ ವಿಜ್ಞಾನಿಗಳ ಸಿದ್ದಿ ಸಾಧನೆಗಳನ್ನು ಪರಿಚಯಿಸಿರುವ ಕೃತಿಯಿದು. ವಿಜ್ಞಾನ ಕ್ಷೇತ್ರದ ಆವಿಷ್ಕಾರಗಳು ಸರಪಳಿಯಿದ್ದಂತೆ. ಜಗತ್ಪಸಿದ್ಧ ಸಾಧನೆಗಳು ಒಬ್ಬನೇ ವಿಜ್ಞಾನಿಯದೆಂದು ಕಿರೀಟ ತೊಡಿಸುವಂತಿಲ್ಲ. ಆ ಸಂಶೋಧನೆಗೆ ಹಿಂದಿನ ವಿಜ್ಞಾನಿಗಳು ತಳಪಾಯ ಹಾಕಿರುತ್ತಾರೆ. ಅವರೆಲ್ಲ ಶೇಖರಿಸಿದ್ದ ಮಾಹಿತಿಯನ್ನು ಜರಡಿ ಹಿಡಿದು…
ಲೇಖಕರು: Kavitha Mahesh
ವಿಧ: ರುಚಿ
August 04, 2024
ಅಕ್ಕಿ ರವೆ, ಅವಲಕ್ಕಿಗಳನ್ನು ಪ್ರತ್ಯೇಕವಾಗಿ ಒಂದು ಗಂಟೆ ನೆನೆಸಿ ನೀರು ಬಸಿಯಿರಿ. ಬಸಿದ ಅವಲಕ್ಕಿಗೆ ಹಸಿಮೆಣಸಿನ ಕಾಯಿ, ಶುಂಠಿ ಸೇರಿಸಿ ತರಿತರಿಯಾಗಿ ಅರೆದು, ಬದಿಗಿಸಿರಿದ ಅಕ್ಕಿ ರವೆ, ಕಾಳು ಮೆಣಸಿನ ಹುಡಿ, ಜೀರಿಗೆ ಹುಡಿ ಮತ್ತು ಇಡ್ಲಿ ಮಿಶ್ರಣದ ಹದಕ್ಕೆ ಮೊಸರು ಬೆರೆಸಿ, ಕಲಕಿ ೨-೩ ಗಂಟೆ ಹುದುಗಲು ಇಡಿ. ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಸಾಸಿವೆ, ಇಂಗು, ಅರಸಿನ, ಕಡಲೆ ಬೇಳೆ, ಉದ್ದಿನ ಬೇಳೆಗಳ ಒಗ್ಗರಣೆ ಮಾಡಿ. ಕೊತ್ತಂಬರಿ ಸೊಪ್ಪು, ಪುದೀನಾ ಸೊಪ್ಪು, ಉಪ್ಪು ಸೇರಿಸಿ, ಚೆನ್ನಾಗಿ ಕಲಕಿ.…