ವಿಧ: ಪುಸ್ತಕ ವಿಮರ್ಶೆ
July 24, 2024
ಸಸ್ಯ ಸಂಪದ ಮಾಲಿಕೆಯಲ್ಲಿ ಪ್ರಕಟವಾದ ೪೧ನೇ ಪುಸ್ತಕವೇ ಬಜೆ. ಸಸ್ಯ ಸಂಪದ ಎಂಬ ಪರಿಕಲ್ಪನೆಯಲ್ಲಿ ೧೦೦ ಬಹು ಉಪಯೋಗಿ ಸಸ್ಯಗಳ ಸವಿವರಗಳನ್ನು ಪುಸ್ತಕ ರೂಪದಲ್ಲಿ ಹೊರ ತರುವ ಮುನಿಯಾಲ್ ಗಣೇಶ್ ಶೆಣೈ ಅವರ ಸಾಹಸ ಮೆಚ್ಚತಕ್ಕದ್ದು. ಈಗಾಗಲೇ ೭೦ ಸಸ್ಯಗಳ (ಹಣ್ಣು, ತರಕಾರಿ) ಬಗ್ಗೆ ಮಾಹಿತಿ ನೀಡುವ ಪುಸ್ತಕಗಳು ಹೊರಬಂದಿವೆ. ಬೇಗದಲ್ಲೇ ಈ ಸಂಖ್ಯೆ ನೂರು ತಲುಪಲಿದೆ.
ಬಜೆ ಎನ್ನುವುದು ಬಹು ಆರೋಗ್ಯಕರ ಸಸ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ. “ಪುಟ್ಟ ಮಕ್ಕಳ ನಾಲಿಗೆಗೆ ತೇಯ್ದ ಬಜೆಯನ್ನು ಲೇಪಿಸುವ…
ವಿಧ: ರುಚಿ
July 23, 2024
ಪುದೀನ, ಕೊತ್ತಂಬರಿ ಸೊಪ್ಪನ್ನು ತೊಳೆದು ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿ. ನಂತರ ಬಾಣಲೆಗೆ ಬೆಣ್ಣೆ ಹಾಕಿ ಬಿಸಿ ಮಾಡಿ. ಇದಕ್ಕೆ ರುಬ್ಬಿದ ಪುದೀನ ಮಿಶ್ರಣ ಹಾಗೂ ಬೇಕಾಗುವಷ್ಟು ನೀರು, ಉಪ್ಪು, ಕಾಳುಮೆಣಸಿನ ಪುಡಿ ಹಾಕಿ ಸ್ವಲ್ಪ ಕುದಿಸಿ ಇಳಿಸಿ. ಬಿಸಿಯಿರುವಾಗಲೇ ಸೇವಿಸಿ. ಈ ಸೂಪ್ ಆರೋಗ್ಯಕ್ಕೆ ಉತ್ತಮ.
- ಸಹನಾ ಕಾಂತಬೈಲು, ಮಡಿಕೇರಿ
ವಿಧ: ಪುಸ್ತಕ ವಿಮರ್ಶೆ
July 22, 2024
“ಮಾತೊಂದ ಹೇಳುವೆ..’ ಗುರುಪಾದ ಬೇಲೂರು ಅವರ ‘ವಾರದ ಮಾತುಕತೆ’ಗಳ ಸಂಗ್ರಹವಾಗಿದೆ. ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ಸಾಮಾನ್ಯವಾಗಿ ಬರವಣಿಗೆಗಳು ಚಲನಚಿತ್ರಗಳಂತಹ ದೃಶ್ಯ ಮಾಧ್ಯಮ ಗಳಾಗುತ್ತವೆ. ಆದರೆ ಇಲ್ಲಿ ಯೂಟ್ಯೂಬ್‌ನಲ್ಲಿ ಬಂದ ಅಂಕಣಗಳು ಅಕ್ಷರ ರೂಪಕ್ಕೆ ಇಳಿದಿವೆ. ಪುಸ್ತಕ ರೂಪದಲ್ಲಿ ಇದೀಗ ಓದುಗರಿಗೆ ಲಭ್ಯ. ಇಲ್ಲಿ ಜ್ಞಾನವಿದೆ. ವಿಜ್ಞಾನವಿದೆ, ಹಿರಿಯರ ಮೌಲಿಕ ಮಾತುಗಳಿವೆ. ಚಿಂತನೆಗೆ ಹಚ್ಚುವ ಅಸಾಮಾನ್ಯ ಸಾಮರ್ಥ್ಯ ಈ ಬರಹಗಳಿಗಿದೆ. ಪ್ರಪಂಚದ ಅನೇಕಾನೇಕ ವೈವಿಧ್ಯಗಳನ್ನು…
ವಿಧ: ರುಚಿ
July 21, 2024
ಬೇಯಿಸಿದ ಬಟಾಟೆಯನ್ನು ಗಂಟುಗಳಿರದ ಹಾಗೆ ಚೆನ್ನಾಗಿ ಹುಡಿ ಮಾಡಿ. ಅದಕ್ಕೆ ಹಸಿಮೆಣಸಿನ ಕಾಯಿ ಪೇಸ್ಟ್, ಕೊತ್ತಂಬರಿ ಸೊಪ್ಪು, ಜೀರಿಗೆ, ಇಂಗು, ಶುಂಠಿ, ಉಪ್ಪನ್ನು ಹಾಕಿ ಕಲಸಿ ಮಿಶ್ರಣ ತಯಾರಿಸಿರಿ. ನಂತರ ಗೋಧಿ ಹಿಟ್ಟಿಗೆ ನೀರು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ ಇಡಿ. ಕಲಸಿಟ್ಟುಕೊಂಡಿದ್ದ ಹಿಟ್ಟಿನಿಂದ ಪೂರಿ ಲಟ್ಟಿಸಿ ಅದರ ಮೇಲೆ ಬಟಾಟೆ ಮಿಶ್ರಣ ಹಾಕಿ ಮಡಚಿ ನಿಧಾನವಾಗಿ ಲಟ್ಟಿಸಿ ಎಣ್ಣೆ ಹಾಕಿ ಎರಡೂ ಬದಿ ಬೇಯಿಸಿದರೆ ಬಿಸಿ ಬಿಸಿ ಬಟಾಟೆ ತಾಲಿಪಟ್ಟು ತಿನ್ನಲು ತಯಾರು.
ವಿಧ: ಪುಸ್ತಕ ವಿಮರ್ಶೆ
July 19, 2024
ಸಸ್ಯ ಸಂಪದ ಮಾಲಿಕೆಯಲ್ಲಿ ಪ್ರಕಟವಾದ ೧೨ನೇ ಪುಸ್ತಕವೇ ನೆಲ್ಲಿ. ಸಸ್ಯ ಸಂಪದ ಎಂಬ ಪರಿಕಲ್ಪನೆಯಲ್ಲಿ ೧೦೦ ಬಹು ಉಪಯೋಗಿ ಸಸ್ಯಗಳ ಸವಿವರಗಳನ್ನು ಪುಸ್ತಕ ರೂಪದಲ್ಲಿ ಹೊರ ತರುವ ಮುನಿಯಾಲ್ ಗಣೇಶ್ ಶೆಣೈ ಅವರ ಸಾಹಸ ಮೆಚ್ಚತಕ್ಕದ್ದು. ಈಗಾಗಲೇ ೭೦ ಸಸ್ಯಗಳ (ಹಣ್ಣು, ತರಕಾರಿ) ಬಗ್ಗೆ ಮಾಹಿತಿ ನೀಡುವ ಪುಸ್ತಕಗಳು ಹೊರಬಂದಿವೆ. ಬೇಗದಲ್ಲೇ ಈ ಸಂಖ್ಯೆ ನೂರು ತಲುಪಲಿದೆ.
ನೆಲ್ಲಿ ಎನ್ನುವುದು ಬಹು ಆರೋಗ್ಯಕರ ಸಸ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ. “ಆಯುರ್ವೇದದಲ್ಲಿ ಮತ್ತು ಪಾರಂಪರಿಕ ವೈದ್ಯಕೀಯದಲ್ಲಿ…
ವಿಧ: ರುಚಿ
July 19, 2024
ಅಕ್ಕಿ, ಉದ್ದಿನ ಬೇಳೆ, ಕಡಲೆಬೇಳೆ, ಮೆಂತ್ಯೆ ಇವುಗಳನ್ನು ೫ ಗಂಟೆಗಳ ಕಾಲ ನೆನೆಸಿ, ನಂತರ ಅದಕ್ಕೆ ಒಣ ಮೆಣಸು, ಜೀರಿಗೆ, ಕೊತ್ತಂಬರಿ ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ರುಬ್ಬಿ. ನಂತರ ಅದಕ್ಕೆ ಬೆಲ್ಲದ ಹುಡಿ, ಉಪ್ಪು, ಹುಣಸೇ ರಸ ಸೇರಿಸಿ.
ಹೀರೇಕಾಯಿ ಸಿಪ್ಪೆ ತೆಗೆದು ತೆಳುವಾಗಿ ಕತ್ತರಿಸಿ. ಹೀರೇಕಾಯಿ ತುಂಡುಗಳನ್ನು ಈ ದೋಸೆ ಹಿಟ್ಟಿನಲ್ಲಿ ಅದ್ದಿ ಕಾದ ಕಾವಲಿಗೆ ಎಣ್ಣೆ ಹಚ್ಚಿ ಒಂದರ ಪಕ್ಕ ಒಂದು ಜೋಡಿಸಿ ಮುಚ್ಚಳ ಮುಚ್ಚಿ ಬೇಯಿಸಿ. ( ಕಡಿಮೆ ಉರಿಯಲ್ಲಿ ಬೇಯಿಸಿ) ಸ್ವಲ್ಪ ಸಮಯದ ನಂತರ ತಿರುವಿ…
ವಿಧ: ಪುಸ್ತಕ ವಿಮರ್ಶೆ
July 17, 2024
ಸಸ್ಯ ಸಂಪದ ಮಾಲಿಕೆಯಲ್ಲಿ ಪ್ರಕಟವಾದ ೭ನೇ ಪುಸ್ತಕವೇ ಲೋಳೆಸರ. ಸಸ್ಯ ಸಂಪದ ಎಂಬ ಪರಿಕಲ್ಪನೆಯಲ್ಲಿ ೧೦೦ ಬಹು ಉಪಯೋಗಿ ಸಸ್ಯಗಳ ಸವಿವರಗಳನ್ನು ಪುಸ್ತಕ ರೂಪದಲ್ಲಿ ಹೊರ ತರುವ ಮುನಿಯಾಲ್ ಗಣೇಶ್ ಶೆಣೈ ಅವರ ಸಾಹಸ ಮೆಚ್ಚತಕ್ಕದ್ದು. ಈಗಾಗಲೇ ೭೦ ಸಸ್ಯಗಳ (ಹಣ್ಣು, ತರಕಾರಿ) ಬಗ್ಗೆ ಮಾಹಿತಿ ನೀಡುವ ಪುಸ್ತಕಗಳು ಹೊರಬಂದಿವೆ. ಬೇಗದಲ್ಲೇ ಈ ಸಂಖ್ಯೆ ನೂರು ತಲುಪಲಿದೆ.
ಲೋಳೆಸರ ಎನ್ನುವುದು ಬಹು ಆರೋಗ್ಯಕರ ಸಸ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ. ಅಲೆವೋರಾ ಎಂದು ಆಂಗ್ಲ ಭಾಷೆಯಲ್ಲಿ ಕರೆಯಲ್ಪಡುವ ಈ…
ವಿಧ: ರುಚಿ
July 17, 2024
ಉದ್ದು, ಮೆಂತ್ಯೆ, ಅಕ್ಕಿ ಎಲ್ಲವನ್ನೂ ತೊಳೆದು ಬೇರೆ ಬೇರೆಯಾಗಿ ೪ ಗಂಟೆ ನೆನೆಸಿ. ಇದಕ್ಕೆ ಸಂಜೆ ಹೊತ್ತಿಗೆ ನೆನೆಸಿದ ಅವಲಕ್ಕಿ ಸೇರಿಸಿ ಅರೆದು ಬೆಳಿಗ್ಗೆ ದೋಸೆ ಹಿಟ್ಟಿಗೆ ಉಪ್ಪು, ಸಕ್ಕರೆ ಬೆರೆಸಿ ದೋಸೆ ಹುಯ್ಯಿರಿ. ದೋಸೆಗೆ ಬೆಣ್ಣೆ ಹಾಕಿ. ಹಿಟ್ಟು ಚೆನ್ನಾಗಿ ಹುದುಗು ಬಂದರೆ ದೋಸೆ ಚೆನ್ನಾಗಿ ಇರುತ್ತದೆ. ಕಾಯಿ ಚಟ್ನಿಯ ಜೊತೆ ಈ ದೋಸೆ ತಿನ್ನಲು ಚೆನ್ನಾಗಿರುತ್ತದೆ.
-ಶೃತಿ ಗದ್ದೇಗಲ್
ವಿಧ: ಪುಸ್ತಕ ವಿಮರ್ಶೆ
July 15, 2024
ದೀಪದ ಮಲ್ಲಿ ಬರೆದಿರುವ ‘ಹುಣಸೇ ಚಿಗುರು ಮತ್ತು ಇತರ ಕಥೆಗಳು' ಎಂಬ ಕಥಾ ಸಂಕಲನ ಇತ್ತೀಚೆಗೆ ಬಿಡುಗಡೆಯಾಗಿದೆ. ಉದಯೋನ್ಮುಖ ಕಥೆಗಾರ್ತಿಯಾಗಿ ಗುರುತಿಸಲ್ಪಡುತ್ತಿರುವ ದೀಪದ ಮಲ್ಲಿಯವರ ಈ ಕಥಾ ಸಂಕಲನಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಸಾಹಿತಿ ದಯಾ ಗಂಗನಘಟ್ಟ. ಇವರು ಈ ಕೃತಿಯಲ್ಲಿರುವ ಮೂಲ ಸೆಲೆ ಮಾನವೀಯ ಕಳಕಳಿ ಎಂದಿದ್ದಾರೆ. ಅವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವನೆಗಳ ಆಯ್ದ ಭಾಗ...
“ಪರಂಪರೆ ಮತ್ತು ಆಧುನಿಕತೆ ಎರಡರ ಕಡೆಗೂ ಒಲವಿರುವ ದೀಪದಮಲ್ಲಿ ಅವರಿಗೆ ಹೊಸ ಹೊಸ…
ವಿಧ: ರುಚಿ
July 14, 2024
ಒಣಮೆಣಸಿನಕಾಯಿ, ಹುರಿಗಡಲೆ, ತೆಂಗಿನಕಾಯಿ ತುರಿ, ಅರಶಿನ ಮತ್ತು ಇಂಗು ಸೇರಿಸಿ ರುಬ್ಬಿ. ಬಾಣಲೆಯಲ್ಲಿ ಕಾದ ಎಣ್ಣೆಗೆ ಸಾಸಿವೆ ಒಗ್ಗರಣೆ ಮಾಡಿ. ನಂತರ ರುಬ್ಬಿಟ್ಟುಕೊಂಡ ಮಸಾಲೆ, ಹುಣಸೆರಸ, ಬೆಲ್ಲ ಹಾಕಿ ಕುದಿಸಿ. ಕುದಿಯುತ್ತಿರುವ ಮಿಶ್ರಣಕ್ಕೆ, ಮಾವಿನಹಣ್ಣಿನ ಹೋಳುಗಳು, ಉಪ್ಪು ಸೇರಿಸಿ ಎರಡು ನಿಮಿಷ ಕುದಿಸಿದರೆ, ಮಾವಿನಹಣ್ಣಿನ ಗೊಜ್ಜು ರೆಡಿ. ಚಪಾತಿಯೊಂದಿಗೆ ಇಲ್ಲವೇ ಅನ್ನದೊಂದಿಗೆ ಸವಿಯಲು ಹಿತಕರ.