ವಿಧ: ರುಚಿ
September 24, 2024
ಉಪ್ಪಿನ ಕಾಯಿ ಮಿಡಿಯನ್ನು ತೊಳೆದು ಹೆಚ್ಚಿನ ಖಾರ ತೆಗೆದುಬಿಡಬೇಕು. ಆಮೇಲೆ ಮಾವಿನ ಮಿಡಿಯನ್ನು ತೆಂಗಿನತುರಿಯನ್ನು ನುಣ್ಣಗೆ ಬೀಸಬೇಕು. ಆ ಮಿಶ್ರಣ ವನ್ನು ಮಜ್ಜಿಗೆ ಬೇಕಿದ್ದರೆ ಉಪ್ಪು , ನೀರು ಸ್ವಲ್ಪ ಹಾಕಿ ಕುದಿಸಬೇಕು. ಸಣ್ಣ ಕುದಿ ಬಂದಾಗ ಮೆಣಸು, ಸಾಸಿವೆ ಎಣ್ಣೆ ಹಾಕಿ ಒಗ್ಗರಣೆ ಕೊಟ್ಟರೆ ರುಚಿ ರುಚಿಯಾದ ಪರಿಮಳಯುಕ್ತ ತಂಬುಳಿ ತಯಾರು.
-ಅಶ್ವಿನಿ ಮೂರ್ತಿ ಅಯ್ಯನಕಟ್ಟೆ, ಸುಳ್ಯ
ವಿಧ: ಪುಸ್ತಕ ವಿಮರ್ಶೆ
September 22, 2024
ಗೊರೂರು ರಾಮಸ್ವಾಮಿ ಅಯ್ಯಂಗಾರರ ವೈವಿಧ್ಯಮಯವಾದ 10 ಕತೆಗಳು ಈ ಸಂಗ್ರಹದಲ್ಲಿವೆ. ಹಳ್ಳಿಯ ಬದುಕನ್ನು ತನ್ನ ಬರಹದಲ್ಲಿ ಸೊಗಸಾಗಿ ಚಿತ್ರಿಸಿದವರು ಇವರು. ಸುಲಲಿತವಾಗಿ ಓದಿಸಿಕೊಂಡು ಹೋಗುವುದೇ ಗೊರೂರರ ಕತೆಗಳ ವಿಶೇಷತೆ. ಜೊತೆಗೆ ಇವು ಸುಮಾರು 60 ವರುಷಗಳ ಮುಂಚೆ ಬರೆದ ಕಥೆಗಳಾದರೂ ಇವೆಲ್ಲದರ ಸಂದೇಶಗಳು ಇಂದಿಗೂ ಪ್ರಸ್ತುತ.
ಮೊದಲನೆಯ ಕತೆ “ಕನ್ಯಾಕುಮಾರಿ”. ಚಂದ್ರವಳ್ಳಿಯ ಶ್ರೀಧರ ಬೆಂಗಳೂರಿನಲ್ಲಿ ಬಿ.ಎ. ಓದುತ್ತಿದ್ದ. ಅವನಿಗೆ ಸಂಗೀತ ಒಲಿದಿತ್ತು. ರಜೆಯಲ್ಲಿ ಹಳ್ಳಿಗೆ ಬಂದಾಗ ಅಲ್ಲಿನ ಶಾಲೆಯ…
ವಿಧ: ರುಚಿ
September 22, 2024
ಮೈದಾ ಹಿಟ್ಟು, ಕಡಲೆ ಹಿಟ್ಟು, ಉಪ್ಪುಗಳನ್ನು ಸೇರಿಸಿ, ಮೊಸರಿನಲ್ಲಿ ಗಟ್ಟಿಯಾಗಿ ಕಲಸಿಡಿ. ಈ ಮಿಶ್ರಣಕ್ಕೆ ಹಸಿ ಮೆಣಸಿನಕಾಯಿ, ಶುಂಠಿಯ ತುರಿ, ಕರಿಬೇವಿನ ಸೊಪ್ಪು, ತೆಂಗಿನ ಕಾಯಿಯ ಚೂರುಗಳು, ಜೀರಿಗೆ, ಸಕ್ಕರೆ, ಅಡುಗೆ ಸೋಡಾ ಬೆರೆಸಿ ಚೆನ್ನಾಗಿ ಕಲಕಿ ದೋಸೆ ಹಿಟ್ಟಿಗಿಂತ ಗಟ್ಟಿಯಾದ ಮಿಶ್ರಣ ತಯಾರಿಸಿ ಅರ್ಧ ಗಂಟೆ ಇಡಿ. ನೆನೆಸಿದ ಮಿಶ್ರಣದಿಂದ ನಿಂಬೆ ಗಾತ್ರದ ಹಿಟ್ಟನ್ನು ಕಾದ ಎಣ್ಣೆಯಲ್ಲಿ ಹಾಕಿ ಹೊಂಬಣ್ಣ ಬರುವವರೆಗೆ ಕರಿಯಿರಿ. ರುಚಿಯಾದ ಗೋಳಿಬಜೆ ಸವಿಯಲು ಸಿದ್ಧ. ಕಾಯಿ ಚಟ್ನಿಯೊಂದಿಗೆ ಬಹಳ…
ವಿಧ: ಬ್ಲಾಗ್ ಬರಹ
September 21, 2024
140 ಪುಟಗಳ ಈ ಪುಟ್ಟ ಪುಸ್ತಕವು https://archive.org/details/dli.osmania.3597 ಕೊಂಡಿಯಲ್ಲಿ ನಿಮಗೆ ಸಿಗುತ್ತದೆ.
ಇಲ್ಲಿ ಬ್ರಹ್ಮ ಮುಂತಾದ ದೇವತೆಗಳು ದೇವಲೋಕದಿಂದ ಕರ್ನಾಟಕಕ್ಕೆ ಬಂದು ಬೇರೆ ಬೇರೆ ಪಟ್ಟಣಗಳನ್ನು ನೋಡುತ್ತಾರೆ. ಈ ಪುಸ್ತಕವು 1930ರಲ್ಲಿ ಪ್ರಕಟವಾಗಿರುವುದರಿಂದ ಅಂದಿನ ಪರಿಸ್ಥಿತಿಯನ್ನು ತಿಳಿದುಕೊಳ್ಳಬಹುದು.
ಉದಾಹರಣೆಗೆ ಇದರಲ್ಲಿ ಇಂದಿನ ಮಹಾರಾಷ್ಟ್ರದ ಮಿರಜ ಕೊಲ್ಲಾಪುರಗಳನ್ನು ಸೇರಿಸಿದ್ದಾರೆ !. ಹೀಗಾಗಿ ಸ್ವಾತಂತ್ರ್ಯ ಪೂರ್ವ ಭಾರತ ಮತ್ತು ಕರ್ನಾಟಕದ ಏಕೀಕರಣದ…
ವಿಧ: ಪುಸ್ತಕ ವಿಮರ್ಶೆ
September 21, 2024
ಪರಿಸರ ಸಂಬಂಧಿ ಬರಹಗಳನ್ನು ಬರೆಯುವವರು ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಿದ್ದಾರೆ. ಈ ಸಂದರ್ಭದಲ್ಲಿ ನವೀನಕೃಷ್ಣ ಎಸ್. ಉಪ್ಪಿನಂಗಡಿ ಎನ್ನುವ ಹುಡುಗ ‘ಹೆಜ್ಜೆ ಊರುವ ತನಕ' ಎನ್ನುವ ಕೃತಿಯನ್ನು ಹೊರತಂದಿದ್ದಾರೆ. ಈ ಕೃತಿಯ ಕುರಿತು ಸೊಗಸಾದ ಬೆನ್ನುಡಿ ಬರೆದು ಬೆನ್ನು ತಟ್ಟಿದ್ದಾರೆ ಪರಿಸರ ತಜ್ಞ, ಪತ್ರಕರ್ತ ಶಶಿಧರ ಹಾಲಾಡಿ. ಇವರು ತಮ್ಮ ಬೆನ್ನುಡಿಯಲ್ಲಿ “ ಪರಿಸರ, ಪರಿಸರದೊಂದಿಗಿನ ಒಡನಾಟದ ಅನುಭವಗಳು, ಪರಿಸರ ವ್ಯಾಪಾರಗಳನ್ನು ನಿಕಪಕ್ಕೆ ಒಡ್ಡುವುದು ಮುಂತಾದ ವಿಷಯಗಳ ಕುರಿತಾಗಿ…
ವಿಧ: ಪುಸ್ತಕ ವಿಮರ್ಶೆ
September 19, 2024
‘ಆ ಲಯ ಈ ಲಯ’ ನಟರಾಜ್ ಹೊನ್ನವಳ್ಳಿ ಅವರ ಅನುವಾದಿತ ನಾಟಕ ಸಂಕಲನವಾಗಿದೆ. ಕೃತಿಯ ಮೂಲ ಲೇಖಕ ಲೂಯಿ ನಕೋಸಿ. ಎಚ್. ಎಸ್. ಶಿವಪ್ರಕಾಶ್ ಅವರು ಕೃತಿಯ ಬೆನ್ನುಡಿಯಲ್ಲಿ ಹೀಗೆ ಹೇಳಿದ್ದಾರೆ- “ಆಫ್ರಿಕಾದ ಆಧುನಿಕ ನಾಟಕಕಾರರು ಕೇವಲ ಬರವಣಿಗೆಯ ಬಡಗಿಗಳಲ್ಲ; ಅಥವಾ ರಂಗಭೂಮಿಯ ಕಸುಬಿಗರಲ್ಲ. ಬರವಣಿಗೆ ಅವರ ಮಟ್ಟಿಗೆ ವಸಾಹತುಶಾಹಿ ವ್ಯವಸ್ಥೆಯ ವಿರುದ್ಧ ಒಳಹೊರಗಿನ ದೀರ್ಘಕಾಲೀನ ಹೋರಾಟ, ವೊಲೆ ಶೋಯಿಂಕಾನ ಪ್ರಕಾರ ಆಫ್ರಿಕನ್ ಕಲಾಪ್ರತಿಭೆ ವರ್ತಮಾನದ ಅತ್ಯಂತ ತುರ್ತಿನ ಆದ್ಯತೆಗಳ ನಿರೂಪ. ವರ್ಣಭೇದೀಯ…
ವಿಧ: ರುಚಿ
September 19, 2024
ಬಾಣಲೆಯನ್ನು ಒಲೆಯ ಮೇಲಿಟ್ಟು ಎಣ್ಣೆ, ಸಾಸಿವೆ, ಉದ್ದಿನಬೇಳೆ, ಕರಿಬೇವು ಹಾಕಿ, ಹಸಿಮೆಣಸು ಸಿಗಿದು ಹಾಕಿ ಒಗ್ಗರಣೆ ಮಾಡಿಕೊಂಡು ಅನ್ನ ಹಾಕಿ ಮಗುಚಿ ಬೇಕಷ್ಟು ಉಪ್ಪು ಹಾಕಿ ನಂತರ ಸಣ್ಣಗೆ ಹೆಚ್ಚಿದ ಬಾಳೆಹಣ ್ಣನ ಹೋಳುಗಳನ್ನು ಸೇರಿಸಿ ಚೆನ್ನಾಗಿ ಬೆರೆಸಿ. ಈಗ ಬನಾನ ರೈಸ್ ತಿನ್ನಲು ರೆಡಿ.
ವಿಧ: ಪುಸ್ತಕ ವಿಮರ್ಶೆ
September 17, 2024
ಮಹಿ ಎಂಬ ಆನೆಯ ಕುರಿತಾದ ಮಕ್ಕಳ ಕಥೆಯನ್ನು ಹೇಳ ಹೊರಟಿದ್ದಾರೆ ಆನಂದ್ ನೀಲಕಂಠನ್. ಇವರ ಈ ಪುಸ್ತಕವನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ ರತೀಶ್ ಬಿ ಆರ್. ಈ ಕೃತಿಯ ಲೇಖಕರ ಮಾತಿನಲ್ಲಿ ಆನಂದ್ ನೀಲಕಂಠನ್ ಅವರು ವ್ಯಕ್ತ ಪಡಿಸಿದ ಅನಿಸಿಕೆಗಳ ಆಯ್ದ ಭಾಗ ಇಲ್ಲಿದೆ...
“ಮಕ್ಕಳಿಗಾಗಿ ನಾನು ಬರೆಯುತ್ತಿರುವ ಮೊದಲ ಸರಣಿ ಪುಸ್ತಕ ಇದು. ಆದರೆ ಈ ಕತೆಯನ್ನು ದೊಡ್ಡವರೂ ಓದಿ ಮನರಂಜನೆ ಪಡೆಯಬಹುದಾಗಿದೆ. ಈಗ ಈ ಕತೆಯನ್ನು ಓದುವ ಮಕ್ಕಳು ಮುಂದೆ ಹಲವು ವರ್ಷಗಳಾಗಿ ದೊಡ್ಡವರಾದ ಮೇಲೆ ಮತ್ತೊಮ್ಮೆ ಇದೇ…
ವಿಧ: ರುಚಿ
September 17, 2024
ಅನನಾಸ್ ಹಣ್ಣಿನ ಹೋಳುಗಳನ್ನು ಎಣ್ಣೆಯಲ್ಲಿ ಬಾಡಿಸಿ ಬೇಯಿಸಿಡಿ. ಇಣ ಮೆಣಸಿನಕಾಯಿ, ಮೆಂತ್ಯದ ಕಾಳುಗಳು, ಚೆಕ್ಕೆಗಳನ್ನು ಎಣ್ಣೆಯಲ್ಲಿ ಹುರಿದು ತೆಂಗಿನಕಾಯಿ ತುರಿಯೊಂದಿಗೆ ರುಬ್ಬಿ. ಎಣ್ಣೆ ಕಾಯಿಸಿ ಸಾಸಿವೆ-ಇಂಗು-ಕರಿಬೇವು ಹಾಕಿ ಒಗ್ಗರಣೆ ಮಾಡಿ.
ಒಗ್ಗರಣೆಗೆ ರುಬ್ಬಿದ ಮಿಶ್ರಣ, ಬೆಲ್ಲದ ಹುಡಿ, ಉಪ್ಪು, ಬೇಯಿಸಿದ ಅನನಾಸ್ ಹೋಳುಗಳನ್ನು ಹಾಕಿ ಕುದಿಸಿ. ರುಚಿಯಾದ ಅನನಾಸ್ ಗೊಜ್ಜು, ಚಪಾತಿಯೊಂದಿಗೆ ತಿನ್ನಲು ಬಹಳ ರುಚಿಕರ.
ವಿಧ: ರುಚಿ
September 15, 2024
ಬಾಳೆದಿಂಡು ಮತ್ತು ನೀರುಳ್ಳಿಯನ್ನು ಸಣ್ಣಗೆ ಹೆಚ್ಚಿಟ್ಟುಕೊಳ್ಳಿ. ಒಂದು ಚಿಕ್ಕ ಪಾತ್ರೆಗೆ ಮೊಸರನ್ನು ಹಾಕಿ ಅದಕ್ಕೆ ಉಪ್ಪು, ಹಸಿಮೆಣಸನ್ನು ಸಿಗಿದು ಹಾಕಿ. ಕೊತ್ತಂಬರಿ ಸೊಪ್ಪನ್ನು ಸಣ್ಣಗೆ ಕತ್ತರಿಸಿ ಸೇರಿಸಿ. ಅನಂತರ ಬಾಳೆದಿಂಡಿನ ಚೂರನ್ನು ಹಾಕಿ ಚೆನ್ನಾಗಿ ಮಿಶ್ರ ಮಾಡಿ. ಒಗ್ಗರಣೆ ಕೊಡಿ. ಇದು ಅನ್ನಕ್ಕೆ, ಪಲಾವ್‌ನ ಜೊತೆಗೆ ಚೆನ್ನಾಗಿರುತ್ತದೆ.
- ಸಹನಾ ಕಾಂತಬೈಲು, ಬಾಲಂಬಿ