ವಿಧ: ಪುಸ್ತಕ ವಿಮರ್ಶೆ
November 11, 2024
ಐತಿಚಂಡ ರಮೇಶ ಉತ್ತಪ್ಪ ಅವರ ‘ಕುಶಾ ಕೀ ಕಹಾನಿ’ ಕೃತಿಯು ಲೇಖನಗಳ ಸಂಕಲನ. ಈ ಕೃತಿಗೆ ಬೆನ್ನುಡಿ ಬರೆದಿರುವ ಕವಿರಾಜ್ ಅವರು, ಕುಶಾ ಬರೀ ಕತೆಯಷ್ಟೇ ಹೇಳದೆ ನಾವೆಲ್ಲ ಬಲ್ಲ ದಸರಾ ಪಡೆಯ ಅಭಿಮನ್ಯು, ಬಲರಾಮ ಮುಂತಾದವರ ಕೆಲವು ಮಜಾ ತರುವ ಘಟನೆಗಳನ್ನು ವಿವರಿಸುವಾಗ, ಯಾರೋ ನಮ್ಮವರ ಬಗ್ಗೆಯೇ ಗಾಸಿಪ್ ಮಾಡಿದಂತೆ ಕಿವಿ, ಮನಸ್ಸುಗಳಿಗೆ ಆಪ್ತವೆನ್ನಿಸುತ್ತದೆ. ನಿಜವಾಗಿಯೂ ಆನೆಗಳಿಗೆ ಅದರಲ್ಲೂ ಕಥಾನಾಯಕ ಕುಶನಿಗೆ ಇಷ್ಟು ಹಾಸ್ಯ ಪ್ರಜ್ಞೆ ಇದೆಯೋ ಗೊತ್ತಿಲ್ಲ. ಆದರೆ ಕುಶನ ಮಾತು ಕಟ್ಟುತ್ತಾ ಹೋಗಿರುವ…
ವಿಧ: ರುಚಿ
November 11, 2024
ಬೀಟ್ ರೂಟ್ ತುರಿದು ಸ್ವಲ್ಪ ನೀರು ಹಾಕಿ ಬೇಯಿಸ ಬೇಕು. ಅದಕ್ಕೆ ಮಾವಿನ ಹಣ್ಣು, ಬೆಳ್ಳುಳ್ಳಿ, ಉಪ್ಪು, ಬೆಲ್ಲ, ಒಳ್ಳೆಮೆಣಸು ಹುಡಿ, ಹಾಕಿ ಚೆನ್ನಾಗಿ ಕುದಿಸಬೇಕು. ತೆಳ್ಳಗಿರಬೇಕಾದರೆ ಸ್ವಲ್ಪ ನೀರು ಸೇರಿಸಿ ಕುದಿಸಿ ಒಗ್ಗರಣೆ ಹಾಕಿದರೆ ಸಾರು ಸಿದ್ದ.
-ಅಶ್ವಿನಿ ಮೂರ್ತಿ ಅಯ್ಯನಕಟ್ಟೆ, ಸುಳ್ಯ
ವಿಧ: ರುಚಿ
November 10, 2024
ನೆನೆಸಿದ ಅಕ್ಕಿಯನ್ನು ನೀರು ಸೇರಿಸದೆ ಒಂದು ಕಪ್ ಮುಳ್ಳುಸೌತೆ ಹೋಳು, ಉಪ್ಪು ಸೇರಿಸಿ ಬಾಂಬೆ ರವೆಯ ಹದಕ್ಕೆ ರುಬ್ಬಿ. ಈ ಹಿಟ್ಟಿಗೆ ಉಳಿದ ಮುಳ್ಳುಸೌತೆ ಹೋಳು ಬೆರೆಸಿ. ನಂತರ ಬಾಡಿಸಿದ ಬಾಳೆಲೆಯ ಮೇಲೆ ಈ ಮಿಶ್ರಣವನ್ನು ಎರಡು ಸೌಟು ಹಾಕಿ ಬಾಳೆಲೆ ಮಡಚಿ ಒಂದು ಗಂಟೆ ಹಬೆಯಲ್ಲಿ ಬೇಯಿಸಿ. ಕಾಯಿಚಟ್ನಿಯೊಂದಿಗೆ ಸವಿಯಿರಿ.
- ಸಹನಾ ಕಾಂತಬೈಲು, ಬಾಲಂಬಿ
ವಿಧ: ಪುಸ್ತಕ ವಿಮರ್ಶೆ
November 09, 2024
ಇದೊಂದು ರೋಚಕ ಕಥೆ. ಕೇವಲ ರೋಚಕ ಕಥೆ ಮಾತ್ರವಲ್ಲ ಸತ್ಯ ಕಥೆ. ಲೇಖಕ ಸುರೇಶ ಸೋಮಪುರ ಸ್ವತಃ ಕರ್ಣ- ಪಿಶಾಚಿಯನ್ನು ಸಾಕ್ಷಾತ್ಕಾರ ಮಾಡಿಕೊಳ್ಳಲು ಮನೆ-ಮಠ, ಹೆಂಡತಿ-ಮಕ್ಕಳು, ಬಂಧುಗಳು ಎಲ್ಲರನ್ನೂ ಬಿಟ್ಟು ದೀದಿ ಅಂಬಿಕಾದೇವಿಯ ಸಹಾಯದಿಂದ ಶ್ರೀ ಚೈತನ್ಯಾನಂದರನ್ನು ಭೇಟಿಯಾಗುತ್ತಾರೆ. ಅವರ ಮಾರ್ಗದರ್ಶನದಲ್ಲಿ ತಂತ್ರ-ಮಂತ್ರ ಶವಸಾಧನೆ ಇತ್ಯಾದಿ ನಡೆಸುತ್ತಾರೆ. ಅಂತಿಮವಾಗಿ ‘ಕರ್ಣ-ಪಿಶಾಚಿ’ ಅವರ ವಶವಾಗುತ್ತದೆ.
ಸುರೇಶ್ ಸೋಮಪುರ ತಮ್ಮ ಆಧ್ಯಾತ್ಮಿಕ ಶಕ್ತಿಯಿಂದ ಗಳಿಸಿದ ಚಮತ್ಕಾರಗಳನ್ನು ಮಾನವ…
ವಿಧ: ರುಚಿ
November 08, 2024
ಸೋರೆಕಾಯಿ ತುಂಡು, ಉಪ್ಪು, ಬೆಲ್ಲ, ಸ್ವಲ್ಪ ನೀರು ಹಾಕಿ ಬೇಯಿಸಿ. ತಣ್ಣಗಾದ ಮೇಲೆ ತೆಂಗಿನ ತುರಿ, ಹಸಿಮೆಣಸು ಸೇರಿಸಿ ನುಣ್ಣಗೆ ರುಬ್ಬಿ ಸೇರಿಸಿ. ಮೊಸರು ಹಾಕಿ. ನಂತರ ಎಣ್ಣೆಯಲ್ಲಿ ಸಾಸಿವೆ, ಒಣಮೆಣಸು, ಕರಿಬೇವು ಹಾಕಿ ಒಗ್ಗರಣೆ ಕೊಡಿ. ಬೇಸಿಗೆಯ ಬಿಸಿಲ ಝಳಕ್ಕೆ ಈ ಮೊಸರು ಗೊಜ್ಜು ಹೊಟ್ಟೆಗೆ ಹಿತ.
- ಸಹನಾ ಕಾಂತಬೈಲು, ಬಾಲಂಬಿ
ವಿಧ: ಪುಸ್ತಕ ವಿಮರ್ಶೆ
November 07, 2024
ಹಳೆಮನೆ ರಾಜಶೇಖರ ಅವರು ಬರೆದ ವಿಭಿನ್ನ ಕಾದಂಬರಿ ‘ಒಡಲುಗೊಂಡವರು’. ಈ ಕಾದಂಬರಿಗೆ ಮುನ್ನುಡಿಯನ್ನು ಬರೆದಿದ್ದಾರೆ ಲೇಖಕಿ ಅನುಪಮಾ ಪ್ರಸಾದ್ ಅವರು. ಮುನ್ನುಡಿಯ ಕೆಲವು ಸಾಲುಗಳು ನಿಮ್ಮ ಓದಿಗಾಗಿ…
“ಸ್ನೇಹಮಯಿ ರಾಜಶೇಖರ ಅವರೆ ನೀವು ಬರೆದ ಕಾದಂಬರಿಯ ಹಸ್ತ ಪ್ರತಿ ಓದಿ ಅಭಿಪ್ರಾಯ ಬರೆಯಬೇಕೆಂದು ಕೇಳಿದ ನಿಮ್ಮ ವಿಶ್ವಾಸಕ್ಕೆ ಶರಣು. ನೀವು ಮಿಂಚಂಚೆಯಲ್ಲಿ ಕಾದಂಬರಿ ಕಳುಹಿಸಿದ ಸಮಯದಲ್ಲಿ ನಾನು ಮತ್ತೊಮ್ಮೆ ನನ್ನ ಮನೆ ಬದಲಿಸುವ ತರಾತುರಿಯಲ್ಲಿದ್ದೆ. ಇರಲಿ ಬಿಡಿ. ಮನೆಯ ಸಾಮಗ್ರಿಗಳ ಮಾರಾಪು…
ವಿಧ: ರುಚಿ
November 06, 2024
ಜೀರಿಗೆ, ಪುದೀನಾ ಎಲೆಗಳು, ಕೊತ್ತಂಬರಿ ಸೊಪ್ಪು, ಹಸಿ ಮೆಣಸಿನಕಾಯಿ, ಶುಂಠಿ ತುರಿ, ಉಪ್ಪುಗಳನ್ನು ಸೇರಿಸಿ, ಪುದೀನಾ ಚಟ್ನಿ ತಯಾರಿಸಿ. ಬಾಣಲೆಯಲ್ಲಿ ಎಣ್ಣೆ ಕಾಯಿಸಿ, ಈರುಳ್ಳಿ, ಟೊಮೆಟೊ, ಬೇಯಿಸಿದ ಆಲೂಗಡ್ಡೆ, ಕ್ಯಾರೆಟ್, ಸೌತೆಕಾಯಿ, ಗರಮ್ ಮಸಾಲೆಗಳನ್ನು ಹಾಕಿ ಬಾಡಿಸಿ. ಒಲೆಯಿಂದ ಕೆಳಗಿಳಿಸಿ. ತಣಿದ ಮೇಲೆ ಮಂಡಕ್ಕಿ, ಖಾರಾ ಸೇವು, ಪುದೀನಾ ಚಟ್ನಿ ಹಾಕಿ ಕಲಸಿದರೆ ಮಕ್ಕಳಿಗೂ ಇಷ್ಟವಾಗುವ ಸ್ವಾದಿಷ್ಟಕರವಾದ ಭೇಲ್ ಪುರಿ ತಯಾರು.
ವಿಧ: ಪುಸ್ತಕ ವಿಮರ್ಶೆ
November 05, 2024
ಅಭಿಮನ್ಯು ದಿ ಗ್ರೇಟ್ ’ ಐತಿಚಂಡ ರಮೇಶ ಉತ್ತಪ್ಪ ಅವರ ಲೇಖನಗಳ ಸಂಕಲನ. ಈ ಕೃತಿಯಲ್ಲಿ ಒಂದು ಸಾಕಾನೆ ಜನರ ಮೇಲೆ ಇಷ್ಟೊಂದು ಪ್ರಭಾವ ಬೀರಲು ಸಾಧ್ಯವೇ ಅನ್ನುವಂತಹ ವಿಚಾರ ಪ್ರಸ್ತಾಪನೆ ಆಗುತ್ತದೆ. ಮಕ್ಕಳಿಂದ ಹಿರಿಯರ ತನಕ ಅಭಿಮನ್ಯುವಿನ ಮೇಲೆ ಇದ್ದಂತಹ ಪ್ರೀತಿಯನ್ನು ಇಲ್ಲಿ ಲೇಖಕರು ಪ್ರಸ್ತಾಪಿಸುತ್ತಾರೆ. ಹುಲಿ ಸೆರೆ ಕಾರ್ಯಚರಣೆಯಲ್ಲಿಯೂ ಈತನ ಧೈರ್ಯಕ್ಕೆ ಸರಿಸಾಟಿ ಇಲ್ಲ. ಕಾರ್ಯಾಚರಣೆಯ ವೇಳೆ ಇತರ ಆನೆಗಳು ಹುಲಿ ವಾಸನೆ ಬರುತ್ತಿದ್ದಂತೆ ಮುಂದೆ ಹೋಗಲು ಅಂಜುತ್ತವೆ. ಆದರೆ, ಅಭಿಮನ್ಯು, ಹುಲಿ…
ವಿಧ: ಪುಸ್ತಕ ವಿಮರ್ಶೆ
November 05, 2024
ಕನ್ನಡದ ಹೆಸರುವಾಸಿ ಸಾಹಿತಿ ಬೀchi ಅವರ 26ನೆಯ ಪುಸ್ತಕ ಇದು. ಹಾಸ್ಯ ಸಾಹಿತಿ ಹಾಗೂ ವಿಡಂಬನಾ ಸಾಹಿತಿ ಎಂದೇ ಅವರು ಜನಪ್ರಿಯರು.
ಇದು ಅವರ 108 ಪುಟ್ಟ ಬಿಡಿ ಬರಹಗಳ ಸಂಕಲನ. ಎಂಟರಿಂದ ಹದಿನೈದು ಸಾಲುಗಳ ಹಲವು ಬರಹಗಳು ಇದರಲ್ಲಿವೆ. ಅದಲ್ಲದೆ, ಪ್ರತಿಯೊಂದು ಬರಹದ ಪುಟದ ಕೆಳಭಾಗದಲ್ಲಿ ಸಣ್ಣ ಅಕ್ಷರಗಳಲ್ಲಿ ಚಿಂತನೆಗೆ ಹಚ್ಚುವ ಇನ್ನೊಂದು ಚುಟುಕು ಬರಹವೂ ಇದೆ.
ಇವು ಓದಿ ಮರೆಯಬಹುದಾದ ಬರಹಗಳಲ್ಲ ಎಂಬುದೇ ಇವುಗಳ ವಿಶೇಷತೆ. ಓದಿದಾಗ ಕಚಗುಳಿ ಇಡುವ ಈ ಬರಹಗಳು ಅನಂತರ ನಮ್ಮನ್ನು ಚಿಂತನೆಗೆ…
ವಿಧ: ರುಚಿ
November 03, 2024
ಟೊಮೇಟೋ ಹೆಚ್ಚಿ ಬೇಯಿಸಿಕೊಳ್ಳಿ, ಇದಕ್ಕೆ ಸ್ವಲ್ಪ ಎಣ್ಣೆಯಲ್ಲಿ ಹುರಿದ ಉದ್ದಿನ ಬೇಳೆ, ಮೆಣಸು, ಎಳ್ಳು, ಸಾಸಿವೆ ೧/೪ ಚಮಚ ಹಾಕಿ ಕಾಯಿತುರಿ ಉಪ್ಪು ಸೇರಿಸಿ ನೀರು ಹಾಕದೇ ರುಬ್ಬಿಕೊಳ್ಳಿ. ಇದಕ್ಕೆ ಎಣ್ಣೆ ಉದ್ದಿನ ಬೇಳೆ, ಸಾಸಿವೆ ಬೆಳ್ಳುಳ್ಳಿ, ಕರಿಬೇವು ಹಾಕಿ ಒಗ್ಗರಿಸಿ. ಹುಳಿಯಾಗದಿದ್ದಲ್ಲಿ ಮೊಸರು ಸ್ವಲ್ಪ ಸೇರಿಸಬಹುದು. ಅನ್ನದ ಜೊತೆ ಮಾವಿನ ಕಾಯಿ ಬೂತಗೊಜ್ಜಿನಂತೆ ಚೆನ್ನಾಗಿರುತ್ತದೆ.
-ಕಲ್ಪನಾ ಪ್ರಭಾಕರ ಹೆಗಡೆ ಸೋಮನಳ್ಳಿ