ಎಲ್ಲ ಪುಟಗಳು

ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
July 29, 2023
ಈ ಐತಿಹಾಸಿಕ ಕಾದಂಬರಿಯನ್ನು ಬರೆದವರು - ರಾಮಚಂದ್ರ. ತ್ರ್ಯಯಂಬಕ. ಕರ್ಪೂರ. ಈ ಕಾದಂಬರಿಯು ವಾಚಕರ ಪುಣ್ಯದಿಂದ ಪೂರ್ಣವಾಯಿತು ಎಂದು ಲೇಖಕರು ಬರೆಯುತ್ತಾರೆ! ಭೂವಡ ಎಂಬ ಚಾಲುಕ್ಯಸಾಮ್ರಾಟನು ಗುರ್ಜರ (ಗುಜರಾತ್) ಪ್ರಾಂತವನ್ನು ಮೇಲಾದ ಧರ್ಮ-ನೀತಿಗಳ ಬೆಂಬಲದಿಂದಲೇ ಗೆದ್ದುದನ್ನು ಈ ಕಾದಂಬರಿ ಹೇಳುತ್ತದೆ. ಇದರ ವಾಚನದಿಂದ ಕನ್ನಡಿಗರಲ್ಲಿ ಸ್ವಾಭಿಮಾನವು ಜಾಗೃತವಾದರೆ ತಾವು ಕೃತಾರ್ಥರಾಗುವುದಾಗಿ ಲೇಖಕರು ಹೇಳುತ್ತಾರೆ. ಆರಂಭಿಕ ಪುಟಗಳಲ್ಲಿ ಸುಂದರ ಯುವತಿ ಯೊಬ್ಬಳ ಅಪಹರಣ, ರಕ್ಷಣೆಯ ಸಂಗತಿಯಿದೆ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
July 29, 2023
ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಬಗ್ಗೆ ನಿವೃತ್ತ ಡಿ ಜಿ ಪಿ ಡಾ. ಡಿ.ವಿ.ಗುರುಪ್ರಸಾದ್ ಅವರು ಬರೆದ ಪುಸ್ತಕವೇ “ಧರ್ಮಾತ್ಮ". ಸಜ್ಜನ ರಾಜಕಾರಣಿ ಎಂದು ಹೆಸರುವಾಸಿಯಾಗಿದ್ದ ಧರಂಸಿಂಗ್ ಸಮ್ಮಿಶ್ರ ಸರಕಾರದ ನೇತೃತ್ವವನ್ನು ವಹಿಸಿದ್ದರು. ಅಧಿಕ ಸಮಯ ಮುಖ್ಯಮಂತ್ರಿಯಾಗಿರಲು ಸಾಧ್ಯವಾಗದೇ ಹೋದರೂ ಹಲವಾರು ವರ್ಷ ಶಾಸಕರಾಗಿ, ಮಂತ್ರಿಯಾಗಿ, ಲೋಕಸಭಾ ಸದಸ್ಯರಾಗಿ ಕರ್ನಾಟಕ ರಾಜ್ಯಕ್ಕೆ ಸಲ್ಲಿಸಿದ ಸೇವೆ ಮರೆಯಲು ಸಾಧ್ಯವಿಲ್ಲ. ಧರಂಸಿಂಗ್ ಅವರ ಊರಿನವರೇ ಆದ ಸಾಹಿತಿ ದೇವು ಪತ್ತಾರ ಇವರು ಪುಸ್ತಕಕ್ಕೆ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
July 27, 2023
ಯುವ ಕವಿ ರಾಜಾ ಎಂ ಬಿ ಇವರು ಮಕ್ಕಳಿಗಾಗಿ ಶಿಶು ಗೀತೆಗಳ ಸಂಕಲನ “ಕೋತಿ ಮತ್ತು ಗೋಧಿ ಹುಗ್ಗಿ" ಯನ್ನು ಹೊರತಂದಿದ್ದಾರೆ. ಮಕ್ಕಳ ಮನಸ್ಸಿಗೆ ಮುಟ್ಟುವಂತೆ ಕವಿತೆಗಳನ್ನು ಬರೆಯುವುದು ಒಂದು ಸವಾಲಿನ ಕೆಲಸ. ಏಕೆಂದರೆ ಅವರಿಗೆ ಅರ್ಥವಾಗುವ ಪದಗಳನ್ನೇ ಬಳಸಿ ಕವಿತೆಯನ್ನು ಹೆಣೆಯುವುದು ಬಹಳ ಕಷ್ಟ. ಆದರೆ ರಾಜಾ ಎಂ ಬಿ ಇವರು ಬರೆದ ಕವಿತೆಗಳು ಮಕ್ಕಳಿಗೆ ಸುಲಭವಾಗಿ ಅರ್ಥವಾಗುವಂತಿದೆ. ಈ ಕವಿತಾ ಸಂಕಲನಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ವಿಮರ್ಶಕ ಎಚ್ ಎಸ್ ಸತ್ಯನಾರಾಯಣ. ಇವರು ಮುನ್ನುಡಿಯಲ್ಲಿ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
July 26, 2023
ಈ ಕಾದಂಬರಿಯ ಕನ್ನಡದ ಆರಂಭಿಕ ಕಾದಂಬರಿಗಳಲ್ಲಿ ಒಂದು.ಸಾಕಷ್ಟು ಪ್ರಸಿದ್ಧಿಯನ್ನು ಪಡೆದಿದೆ. 1933 ರಲ್ಲಿ ನಾಲ್ಕನೇ ಆವೃತ್ತಿಯನ್ನು ಕಂಡ ಈ ಕಾದಂಬರಿಯನ್ನು ಇತ್ತೀಚೆಗೆ ಓದಿದೆ. pustaka.sanchaya.net ವೆಬ್ ತಾಣದಲ್ಲಿ 'ಪ್ರಬುದ್ಧ ಪದ್ಮನಯನೆ' ಎಂದು ಹುಡುಕುವ ಮೂಲಕ ಪುಸ್ತಕವನ್ನು ಓದಬಹುದು. ಇದು ಒಂದು ರಮ್ಯ ಕಥಾನಕ. ಬಹುಶಃ ಮರಾಠಿ ಮೂಲದ್ದು. ಶೂರ ಹಾಗೂ ಸಜ್ಜನ ನಾಯಕ. ಸುಂದರಿ ನಾಯಕಿ (ಅವಳ ಹೆಸರೇ ಪದ್ಮನಯನೆ), ಋಷಿ, ರಾಕ್ಷಸ, ಗಿಳಿ ಎಲ್ಲ ಇಲ್ಲಿದ್ದಾರೆ. ಚೆನ್ನಾಗಿ ಓದಿಸಿಕೊಂಡು…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
July 25, 2023
ಕಥೆಗಾರ್ತಿ ಶೈಲಜಾ ಹಾಸನ ಇವರು ಬರೆದ ‘ನಿಲ್ಲು ನಿಲ್ಲೆ ಪತಂಗ' ಕಥಾ ಸಂಕಲನವು ಬಿಡುಗಡೆಯಾಗಿದೆ. ಈ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಖ್ಯಾತ ಬರಹಗಾರರಾದ ಸಂತೋಷ್ ಕುಮಾರ್ ಮೆಹೆಂದಳೆ ಇವರು. ಇವರು ತಮ್ಮ ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವನೆಗಳ ಆಯ್ದ ಭಾಗ ನಿಮ್ಮ ಓದಿಗಾಗಿ... “ಸಂಜೆ ಸಾಹಿತ್ಯ ಪ್ರಶಸ್ತಿ ಪಡೆದ ಕಥಾ ಸಂಕಲನ "ನಿಲ್ಲುನಿಲ್ಲೆ ಪತಂಗ.." ದೊಡ್ಡ ಮಟ್ಟದ ಸ್ಪರ್ಧೆಯನ್ನು ಎದುರಿಸಿ ಗೆದ್ದ ಕೃತಿ. ಮೊಟ್ಟ ಮೊದಲ ಸಂಜೆ ಸಾಹಿತ್ಯ ಪ್ರಶಸ್ತಿ 2022 ನ್ನು ಮುಡಿಗೇರಿಸಿಕೊಂಡ ಹೆಮ್ಮೆಯೂ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
July 23, 2023
‘ವಿಶ್ವವಾಣಿ’ ಓದುಗರಿಗೆ ರೂಪಾ ಗುರುರಾಜ್ ಹೆಸರು ಚಿರಪರಿಚಿತ. ಅವರು ಪ್ರತೀ ದಿನ ಬರೆಯುವ ‘ಒಂದೊಳ್ಳೆ ಮಾತು’ ಅಂಕಣ ಬಹಳಷ್ಟು ಜನರ ಮನಗೆದ್ದಿದೆ. ವಿಶ್ವವಾಣಿ ಕ್ಲಬ್ ಹೌಸ್ ನಲ್ಲಿ ನಡೆಯುವ ಚರ್ಚೆಗಳನ್ನು ಬಹಳ ಸೊಗಸಾಗಿ ನಿರ್ವಹಣೆ ಮಾಡುವ ಇವರ ಅಂಕಣಗಳ ಸಂಗ್ರಹದ ಮೊದಲ ಭಾಗ ‘ಒಂದೊಳ್ಳೆ ಮಾತು ಭಾಗ 1’ ಈಗಾಗಲೇ ಕಳೆದ ವರ್ಷ ಬಿಡುಗಡೆಯಾಗಿದೆ. ಈಗ ಬಿಡುಗಡೆಯಾಗಿರುವುದು ಅದೇ ಪುಸ್ತಕದ ಎರಡನೇ ಭಾಗ. ಈ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ‘ಥಟ್ ಅಂತ ಹೇಳಿ...' ಎಂಬ ದೂರದರ್ಶನ ಚಂದನದ ಕಾರ್ಯಕ್ರಮ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
July 21, 2023
 ಈ ಎರಡೂ ಚಿತ್ರಗಳು ಇವತ್ತು ಅಂದರೆ 21 ಜುಲೈ 2023 ರಂದು ಬಿಡುಗಡೆ ಆಗುತ್ತಿವೆ. ಮೊದಲು ಕೌಸಲ್ಯಾ ಸುಪ್ರಜಾ ರಾಮ ಚಿತ್ರದ ಹಾಡುಗಳನ್ನು ನೋಡೊಣ. https://youtu.be/MMFBtz0Yb8I ಇಲ್ಲಿ ಸಿಗುವ ಹಾಡು 'ಪ್ರೀತಿಸುವೆ, ಪ್ರೀತಿಸುವೆ, ಮಿತಿ ಮೀರಿ ನಿನ್ನ ಪ್ರೀತಿಸುವೆ ' ನಾಯಕ ನಾಯಕಿಯರ ಯುಗಳ ಪ್ರೇಮ ಗೀತೆ . ಚೆನ್ನಾಗಿದೆ. ಚಿತ್ರೀಕರಣವೂ ಚೆನ್ನಾಗಿದೆ https://youtu.be/P689pDpKOkI ನಿನಗೆ ಸೋತ್ ಹೋಗ್ ಬುಟ್ನಲ್ಲೇ ಶಿವಾನಿ .... ತಲೆಯ ಕೆಡಿಸೈತೆ ನಿನ್ನ ಜವಾನಿ ... ಈ ಹಾಡನ್ನು ಈ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
July 20, 2023
ಶರಣಬಸವ ಕೆ.ಗುಡದಿನ್ನಿ ಅವರು ಬರೆದ ನೂತನ ಕಥಾ ಸಂಕಲನ “ಏಳು ಮಲ್ಲಿಗೆ ತೂಕದವಳು" ಈ ಕಥಾ ಸಂಕಲನಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಲೇಖಕರಾದ ಅಮರೇಶ ನುಗಡೋಣಿ. ಇವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವ ನಿಮ್ಮ ಓದಿಗಾಗಿ... “ಶರಣಬಸವ ಕೆ. ಗುಡದಿನ್ನಿಯವರು ಕಳೆದ ಆರೇಳು ವರ್ಷಗಳಿಂದ ಕತೆಗಳನ್ನು ಬರೆಯುತ್ತಲೇ ಇದ್ದಾರೆ. ಕಥಾ ಸಂಕಲನವನ್ನು ಪ್ರಕಟಿಸಿದ್ದಾರೆ. ಈಗ ಮತ್ತೊಂದು ಕಥೆಗಳ ಕಟ್ಟನ್ನು ಪ್ರಕಟಣೆಗೆ ಸಿದ್ಧ ಮಾಡಿದ್ದಾರೆ.ರಾಯಚೂರು ಜಿಲ್ಲಾ ಪ್ರದೇಶದಲ್ಲಿ ಹುಟ್ಟಿ ಬೆಳೆದ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
July 20, 2023
ಈ ಚಿತ್ರವು 21 ಜುಲೈ 2023 ರಂದು ಬಿಡುಗಡೆ ಆಗಲಿದೆ. ಅದರ ಹಾಡುಗಳನ್ನು ಯೂಟ್ಯೂಬ್ ನಲ್ಲಿ ಕೇಳಿ ನೋಡಿದಾಗ ನನಗೆ ಅನಿಸಿದ್ದು ಹೀಗೆ. https://youtu.be/-qkQ_wEAF0o 'ಸುಮ್ಮನೆ ಪ್ರೀತಿಸು ಸುಮ್ಮನೆ ' - ಇದು ನಾಯಕ ನಾಯಕಿಯ ಪ್ರೇಮಗೀತೆ. ಪ್ರೇಮಗೀತೆ ಎಂದಾಗಲೆಲ್ಲ ನನಗೆ ಇಷ್ಟವಾಗುವ ಸಾಧ್ಯತೆ ಹೆಚ್ಚೇನೋ?. ಕೇಳಲು ಇಂಪಾಗಿದೆ.ಹಿನ್ನೆಲೆಯಲ್ಲಿ ಸುಂದರವಾದ ನಿಸರ್ಗ ದೃಶ್ಯಗಳಿವೆ.  https://youtu.be/4cMYXqgmCks 'ಲಾಲಿ ಲಾಲಿ' - ಇದು ಒಂದು ಮಗು ತನ್ನ ತಾಯಿಗೆ ಹಾಡುವ ಲಾಲಿಪದ . ಕನ್ನಡ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
July 18, 2023
ಸ್ಟ್ಯಾನಿ ಲೋಪಿಸ್ ಅವರು ತಮ್ಮ ನೂತನ ಕಾದಂಬರಿ “ಬರುವಳು...ಬರುವಳು...ಬರುವಳು..." ಇದರಲ್ಲಿ ದುಬೈನ ಶಿಕ್ಷಣ ವ್ಯವಸ್ಥೆ, ಜೀವನ ವಿಧಾನ ಇತ್ಯಾದಿಗಳ ವಿವರ ನೀಡುತ್ತಾರೆ. ನಾಳೆ ಹುಟ್ಟಲಿರುವುದು ಹೆಣ್ಣು ಎಂಬುದನ್ನ ತಿಳಿದೂ ಆ ಕುಟುಂಬದವರು ಹೆಣ್ಣನ್ನು ಸ್ವಾಗತಿಸಲು ಕಾಯುವುದು, ಇತ್ಯಾದಿ ಅಂಶಗಳನ್ನ ಸುಂದರವಾಗಿ ಚಿತ್ರಿಸುತ್ತಾರೆ. ಈ ಕೃತಿಗೆ ಖ್ಯಾತ ಲೇಖಕ ನಾ. ಡಿಸೋಜ ಇವರು ಮುನ್ನುಡಿಯನ್ನು ಬರೆದಿದ್ದಾರೆ. ಅವರ ಬರಹದ ಆಯ್ದ ಭಾಗ ನಿಮ್ಮ ಓದಿಗಾಗಿ... “ಯುನೈಟೆಡ್ ಅರಬ್ ಎಮಿರೇಟ್ಸ್ ಅಂದರೆ ದುಬೈ…