ಎಲ್ಲ ಪುಟಗಳು

ವಿಧ: ರುಚಿ
December 04, 2024
ಮಸೆದ ಸಿಹಿ ಗೆಣಸಿಗೆ ಏಲಕ್ಕಿ ಪುಡಿ, ಸಕ್ಕರೆ ಸೇರಿಸಿ ನುಣ್ಣಗೆ ರುಬ್ಬಿ. ಈ ಮಿಶ್ರಣಕ್ಕೆ ಹಾಲು ಸೇರಿಸಿ ಕಲಕಿದರೆ ಸಿಹಿ ಗೆಣಸಿನ ಸವಿಯಾದ ಮಿಲ್ಕ್ ಶೇಕ್ ತಯಾರು. - ಸಹನಾ ಕಾಂತಬೈಲು, ಬಾಲಂಬಿ
ಲೇಖಕರು: addoor
ವಿಧ: ಪುಸ್ತಕ ವಿಮರ್ಶೆ
December 03, 2024
ಶ್ರೀನಿವಾಸ ವೈದ್ಯರು ಧಾರವಾಡದಲ್ಲಿ ಎಂ.ಎ. ಪದವಿ ಗಳಿಸಿದ ನಂತರ, 1959ರಲ್ಲಿ ಮುಂಬಯಿಯಲ್ಲಿ ಕೆನರಾ ಬ್ಯಾಂಕಿನಲ್ಲಿ ಉದ್ಯೋಗಕ್ಕೆ ಸೇರಿದರು. ಮುಂಬಯಿ, ಬೆಂಗಳೂರು ಇತ್ಯಾದಿ ಸ್ಥಳಗಳಲ್ಲಿ 37 ವರುಷ ಸೇವೆ ಸಲ್ಲಿಸಿ, ಉನ್ನತ ಹುದ್ದೆಗೇರಿ 1996ರಲ್ಲಿ ಬೆಂಗಳೂರಿನಲ್ಲಿ ನಿವೃತ್ತರಾದರು. ಈ ಸೇವಾವಧಿಯ ಹಲವಾರು ಅನುಭವಗಳನ್ನು ಈ ಪುಸ್ತಕದಲ್ಲಿ ಹಂಚಿಕೊಂಡಿದ್ದಾರೆ. ಎಂಟು ಪುಸ್ತಕಗಳನ್ನು ಬರೆದಿರುವ ಶ್ರೀನಿವಾಸ ವೈದ್ಯರು “ಹಳ್ಳ ಬಂತು ಹಳ್ಳ” ಕಾದಂಬರಿಗೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
December 02, 2024
ಅನಿಲ್ ಗುನ್ನಾಪೂರ ಅವರ ನೂತನ ಕಥಾ ಸಂಕಲನ ಸರ್ವೆ ನಂಬರ್ ೯೭. ಈ ಕೃತಿಗೆ ಮುನ್ನುಡಿ ಬರೆದಿದ್ದಾರೆ ಪತ್ರಕರ್ತರಾದ ರಘುನಾಥ ಚ.ಹ. ಇವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವನೆಗಳು ನಿಮ್ಮ ಓದಿಗಾಗಿ… “ಏನನ್ನೋ ಹಂಬಲಿಸುತ್ತ ಯಾವುದರ ಹುಡುಕಾಟದಲ್ಲೋ ನಿರತನಾಗಿರುವುದು ಎಲ್ಲ ಕಾಲದ ಮನುಷ್ಯ ಜೀವನದ ಪ್ರಮುಖ ಲಕ್ಷಣವಾಗಿದೆ. ಆ ಹುಡುಕಾಟವೇ ಬದುಕಿನ ಗುರಿಯೂ ಆಗಿರುತ್ತದೆ. ಹಾಗೆ ಹುಡುಕುವುದು ಸಿಗಬಹುದು ಇಲ್ಲವೇ ಸಿಗದಿರಬಹುದು. ಹುಡುಕುತ್ತಿದ್ದುದು ದೊರೆತಾಗ, ಕೆಲವರಿಗೆ ಸಂತೋಷವಾಗಬಹುದು;…
ಲೇಖಕರು: Kavitha Mahesh
ವಿಧ: ರುಚಿ
December 02, 2024
ಗೋಧಿ ಹಿಟ್ಟಿಗೆ ಸ್ವಲ್ಪ ಎಣ್ಣೆ ಹಾಕಿ ಹೆಚ್ಚಿದ ಸಬ್ಬಸಿಗೆ ಸೊಪ್ಪು, ಉಪ್ಪು, ಇಂಗು, ಜೀರಿಗೆ ಹುಡಿ, ಹಸಿ ಮೆಣಸಿನಕಾಯಿ ಪೇಸ್ಟ್, ಕೊತ್ತಂಬರಿ ಸೊಪ್ಪನ್ನು ಹಾಕಿ, ಚೆನ್ನಾಗಿ ನಾದಿ. ಕಲಸಿದ ಹಿಟ್ಟು ಒಂದು ಗಂಟೆ ನೆನೆದ ನಂತರ ರೊಟ್ಟಿ ಲಟ್ಟಿಸಿ ಎಣ್ಣೆ ಹಾಕಿ ಎರಡೂ ಬದಿ ಬೇಯಿಸಿದ್ರೆ ರುಚಿಯಾದ ಸಬ್ಬಸಿಗೆ ಸೊಪ್ಪು ತಾಲಿಪಟ್ಟು ತಯಾರು. ಇದನ್ನು ಕಾಯಿಚಟ್ನಿ ಜೊತೆ ಸೇವಿಸಿದರೆ ಬಹಳ ಚೆನ್ನಾಗಿರುತ್ತದೆ.
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
November 29, 2024
ಭಾರತದ ರಾಷ್ಟಪತಿಗಳಾಗಿದ್ದ ಡಾ ಎ ಪಿ ಜೆ ಅಬ್ದುಲ್ ಕಲಾಂ ಅವರ ಬಗ್ಗೆ ಹಲವಾರು ಪುಸ್ತಕಗಳು ಬಂದಿವೆ. ‘ಅಬ್ದುಲ್ ಕಲಾಂ ಅವರು ನಿಮಗೆ ಗೊತ್ತೇ?’ ಎಂಬ ಕೃತಿಯು ಮಕ್ಕಳಿಗೆ ಅತ್ಯಂತ ಉಪಯುಕ್ತವಾಗಿದೆ. ದೊಡ್ಡ ದೊಡ್ಡ ಆಕಾರದ ಅಕ್ಷರಗಳನ್ನು ಬಳಸಿಕೊಂಡು, ಸರಳವಾದ ಭಾಷೆಯಲ್ಲಿ ಮಾಹಿತಿಯನ್ನು ನೀಡಿರುವುದರಿಂದ ಮಕ್ಕಳಿಗೆ ಓದಿ ಮನನ ಮಾಡಲು ಅನುಕೂಲ. ಈ ಕೃತಿಯು ‘ಅಬ್ದುಲ್ ಕಲಾಂ ಯಾರು?’ ಎನ್ನುವ ಅಧ್ಯಾಯದಿಂದ ಪ್ರಾರಂಭವಾಗುತ್ತದೆ. ಈ ಅಧ್ಯಾಯದಲ್ಲಿ ಕಲಾಂ ಅವರ ಹುಟ್ಟು, ಬಾಲ್ಯ, ಊರು, ಅವರ ವೃತ್ತಿ ಅವರಿಗೆ…
ವಿಧ: ರುಚಿ
November 29, 2024
ಬಾಳೆಹಣ್ಣನ್ನು ಚಿಕ್ಕದಾಗಿ ಹೆಚ್ಚಿಟ್ಟುಕೊಳ್ಳಿ. ಕಾಯಿತುರಿ, ಕೆಂಪುಮೆಣಸು, ಹಸಿಮೆಣಸು, ಸಾಸಿವೆ, ಎಳ್ಳು, ಕೊತ್ತಂಬರಿ ಅರಿಸಿನ ಹಾಕಿ ರುಬ್ಬಿ ಇದಕ್ಕೆ ಮೊಸರು, ಉಪ್ಪು ಬೇಕಾದರೆ ಬೆಲ್ಲ ಹೆಚ್ಚಿದ ಬಾಳೆಹಣ್ಣು, ಹಾಕಿ ಚೆನ್ನಾಗಿ ಕಯ್ಯಾಡಿಸಿ ಇದಕ್ಕೆ ಕೆಂಪು ಮೆಣಸು, ಸಾಸಿವೆ, ಎಣ್ಣೆ, ಇಂಗು ಹಾಕಿ ಚಟಪಟ ಎಂದ ಮೇಲೆ ಸಾಸಿವೆಗೆ ಹಾಕಿ ಕೈಯ್ಯಾಡಿಸಿ,  -ಕಲ್ಪನಾ ಪ್ರಭಾಕರ ಸೋಮನಳ್ಳಿ
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
November 27, 2024
ಮಾಧ್ಯಮ ಕ್ಷೇತ್ರದಲ್ಲಿರುವ ಅನೈತಿಕ ಪೈಪೊಟಿಯು ಮಾಧ್ಯಮ ವೃತ್ತಿ ಮಾಡುವವರನ್ನು ವಿಪರೀತ ಒತ್ತಡದಲ್ಲಿ ಸಿಲುಕಿಸಿದೆ. ಸುದ್ದಿ ಮತ್ತು ಜಾಹೀರಾತುಗಳ ನಡುವಿನ ಅಂತರ ಕಡಿಮೆಯಾಗುತ್ತಿದೆ. ಎಲೆಕ್ಟ್ರಾನಿಕ್ ಮಾಧ್ಯಮವು ಮುದ್ರಣ ಮಾಧ್ಯಮದ ಮೇಲೆ ಪ್ರಭಾವ ಬಿರುತ್ತಿದೆ. ರಾಜಕೀಯ ಪಕ್ಷಗಳ ಮುಖಂಡರು ಮಾಧ್ಯಮ ಸಂಸ್ಥೆಗಳ ಒಡೆಯರಾಗುತ್ತಿದ್ದಾರೆ. ಈ ವಿದ್ಯಮಾನಗಳು ಮಾಧ್ಯಮ ವಿಶ್ವಾಸಾರ್ಹತೆಯ ಬಗ್ಗೆ ಅನುಮಾನ ಮುಡಿಸುತ್ತದೆ. ಇಂದಿನ ಮಾಧ್ಯಮ ಪೀಳಿಗೆಗೆ ಭಾಷಾ ಜ್ಞಾನದ ಕೊರತೆ ಎದ್ದು ಕಾಣುತ್ತಿದೆ. ಇಂಥ…
ವಿಧ: ರುಚಿ
November 27, 2024
ಬದನೆ ಕಾಯಿಯನ್ನು ಸ್ವಲ್ಪ ಎಣ್ಣೆ ಹಚ್ಚಿ ಚಿಕ್ಕ ಚಿಕ್ಕ ನಾಲ್ಕೈದು ತೂತು ಮಾಡಿ ಕೆಂಡದಲ್ಲಿ ಅಥವಾ ಗ್ಯಾಸ್‌ನಲ್ಲಿ ಬೇಯಿಸಿಕೊಳ್ಳಿ ಆಮೇಲೆ ಅದರ ಸಿಪ್ಪೆಯನ್ನು ತೆಗೆದು ಸೌಟಿನಲ್ಲಿ ಚೆನ್ನಾಗಿ ಜಜ್ಜಿ ಒಂದು ಪಾತ್ರೆಗೆ ಹಾಕಿಕೊಳ್ಳಿ ಇದಕ್ಕೆ ಚಿಕ್ಕದಾಗಿ ಹೆಚ್ಚಿದ ಈರುಳ್ಳಿ, ತೆಂಗಿನ ತುರಿ, ರುಚಿಗೆ ಉಪ್ಪು, ಹುಳಿಪುಡಿ ಸಕ್ಕರೆ ಹಾಕಿ ನಂತರ ಒಂದು ಪಾತ್ರೆಯಲ್ಲಿ ಒಗ್ಗರಣೆಗೆ ಇಟ್ಟು ಎಣ್ಣೆ ಕಾದಮೇಲೆ ಉದ್ದಿನ ಬೇಳೆ, ಒಣಮೆಣಸಿನ ಚೂರು, ಹಸಿರು ಮೆಣಸು ಅಥವಾ ಮೆಣಸಿನ ಪುಡಿ, ಅರಿಸಿನ ಸಾಸಿವೆ ಕರಿಬೇವು…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
November 26, 2024
ಭರವಸೆಯ ಕವಯತ್ರಿ ವಾಣಿ ಭಂಡಾರಿಯವರ ಹೊಸ ಕವನ ಸಂಕಲನ ‘ಖಾಲಿ ಜೋಳಿಗೆಯ ಕನವರಿಕೆಗಳು’ ತಮ್ಮ ಮನದಾಳದ ಮಾತಿನಲ್ಲಿ ವಾಣಿಯವರು ತಾವು ಬರೆದ ಕವನಗಳ ಬಗ್ಗೆ, ಕವನಗಳು ತಮ್ಮೊಳಗೆ ಚಿಗುರೊಡೆದ ಬಗ್ಗೆ ಹೇಳುವುದು ಹೀಗೆ “ಮನದ ಭಾವ ಹಾಡಾದಾಗ” “ಮುಳ್ಳಿನ ಮೇಲಿನ ಸಿಟ್ಟಿಗೆ ಬೇಲಿಗೆ ಬೆಂಕಿ ಹಾಕಬೇಡ ಸಾವಿರ ಮುಳ್ಳುಗಳ ನಡುವೆ ಒಂದು ಹೂ ಅರಳಿತು” (ಗಾಲೀಬ) ಕವಿತೆ ಬರೆಯುವುದೆಂದರೆ ಮನದ ಭಾವಕ್ಕೆ ಹೆಪ್ಪು ಹಾಕಿ ಮಸೆದು ಕಾಯಿಸಿ ಘಮಗುಡಿಸಿ ತುಪ್ಪವಾಗಿಸುವ ಕೆಲಸ. ಇಂತಹ ಮಹತ್ಕಾರ್ಯವು ಯಾಕೆ ಏನು ಹೇಗೆ ಎಲ್ಲಿ…
ಲೇಖಕರು: Kavitha Mahesh
ವಿಧ: ರುಚಿ
November 26, 2024
ಸಿಪ್ಪೆ ತೆಗೆದು ಬೇಯಿಸಿ ಮಸೆದ ಆಲೂಗೆಡ್ಡೆಗೆ ಉಪ್ಪು, ಹಸಿ ಮೆಣಸಿನಕಾಯಿ, ಜೀರಿಗೆ ಹುಡಿ, ಕರಿಬೇವಿವ ಸೊಪ್ಪು, ಕೊತ್ತಂಬರಿ ಸೊಪ್ಪು, ಶುಂಠಿ ತುರಿ ಬೆರೆಸಿ ಕಲಸಿಡಿ. ಬ್ರೆಡ್ ಸ್ಲೈಸ್ ನ ಅಂಚುಗಳನ್ನು ತೆಗೆದು ಬಿಳಿ ಭಾಗವನ್ನು ನೀರಿನಲ್ಲಿ ಅದ್ದಿ ಕೈಯಿಂದ ಒತ್ತಿ ನೀರು ತೆಗೆಯಿರಿ. ನಂತರ ಬ್ರೆಡ್ ಸ್ಲೈಸ್ ಅನ್ನು ಒಂದು ತಟ್ಟೆಯ ಮೇಲಿಟ್ಟು ಅದರಲ್ಲಿ ಸ್ವಲ್ಪ ಆಲೂಗೆಡ್ಡೆ ಮಿಶ್ರಣವನ್ನು ತುಂಬಿಸಿ ರೋಲ್ ಮಾಡಿ, ಕಾದ ಎಣ್ಣೆಯಲ್ಲಿ ಹೊಂಬಣ್ನ ಬರುವವರೆಗೆ ಕರಿಯಿರಿ. ರುಚಿಯಾದ ಬ್ರೆಡ್ ರೋಲ್ ತಯಾರು.