ಎಲ್ಲ ಪುಟಗಳು

ವಿಧ: ರುಚಿ
November 24, 2024
ಪಾತ್ರೆಗೆ ಎಣ್ಣೆ ಹಾಕಿ ಉದ್ದಿನ ಬೇಳೆ, ಒಣ ಮೆಣಸು, ಕರಿಬೇವು, ಅರಿಶಿನ, ಸಾಸಿವೆ ಹಾಕಿ ಚಟ್‌ಪಟ್ ಎಂದಮೇಲೆ, ಹೆಚ್ಚಿದ ಕ್ಯಾಪ್ಸಿಕಮ್, ಬೇಯಿಸಿದ ಹಸಿರು ಬಟಾಣಿ ಅಥವಾ ಶೆಂಗಾ, ಈರುಳ್ಳಿ, ಹಾಕಿ ಚೆನ್ನಾಗಿ ಹುರಿದ ಮೇಲೆ ಬಾತ್ ಪೌಡರ್ ಹಾಕಿ, ಉಪ್ಪು, ಹುಣಸೆ ರಸ ಚಿಟಕಿ ಸಕ್ಕರೆ ಹಾಕಿ ಕೈಯ್ಯಾಡಿಸಿ ಅದಕ್ಕೆ ಉದುರಾದ ಅನ್ನ ಹಾಕಿ ಕಲಸಿದರೆ ಕ್ಯಾಪ್ಸಿಕಮ್ ಬಾತ್ ಸಿದ್ದ. -ಕಲ್ಪನಾ ಪ್ರಭಾಕರ ಸೋಮನಳ್ಳಿ
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
November 22, 2024
ಉದಯೋನ್ಮುಖ ಚಿತ್ರ ನಿರ್ದೇಶಕ, ಕತೆಗಾರ ಕೌಶಿಕ್ ರತ್ನ ಅವರ ನೂತನ ಕಥಾ ಸಂಕಲನ ‘ನಿಧಿ’. ಈ ಕೃತಿಗೆ ಅವರು ಬರೆದ ಲೇಖಕರ ಮಾತುಗಳ ಆಯ್ದ ಭಾಗ ಇಲ್ಲಿದೆ… “ಖಾಲಿ ಜೇಬಲ್ಲಿ ಕೋಟಿಗಟ್ಟಲೆ ದೊಡ್ಡ ಕನಸುಗಳನ್ನು ತುಂಬಿಕೊಂಡು ಊರು, ಮನೆ, ಪ್ರೀತಿ, ಓದು, ಕೆಲಸ ಎಲ್ಲವನ್ನೂ ಬಿಟ್ಟು ರಂಗಭೂಮಿಯ ಮಡಿಲು ಸೇರಿ ನಾಟಕಗಳನ್ನು ಮಾಡುತ್ತಾ, ಧಾರಾವಾಹಿ- ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಅನುಭವಿಸುತ್ತಾ, ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿ ಕಿರು ಚಿತ್ರಗಳನ್ನು ಮಾಡುತ್ತಾ, ನಟರಾಗುವ,…
ವಿಧ: ರುಚಿ
November 22, 2024
ಪಾತ್ರೆಗೆ ಅಕ್ಕಿ ಹಿಟ್ಟು, ಹೆಚ್ಚಿದ ದೊಡ್ಡ ಪತ್ರೆ, ಪುದೀನಾ ಎಲೆ, ಈರುಳ್ಳಿ, ಖಾರದಪುಡಿ, ತೆಂಗಿನ ತುರಿ, ಕರಿಬೇವಿನ ಸೊಪ್ಪು, ಉಪ್ಪು, ಹಾಕಿ, ನೀರು ಸೇರಿಸಿ ಕಲಸಿ ಎಣ್ಣೆ ಹಚ್ಚಿದ ಪ್ಲಾಸ್ಟಿಕ್ ಪೇಪರ್ ಅಥವಾ ಬಾಳೆ ಎಲೆಯಲ್ಲಿ ತಟ್ಟಿ ಕಾವಲಿಯ ಮೇಲೆ ಸ್ವಲ್ಪ ಎಣ್ಣೆ ಹಾಕಿ ಬೇಯಿಸಿ ಬೆಣ್ಣೆ ಅಥವಾ ಕಾಯಿ ಚಟ್ನಿ ಹಚ್ಚಿ ತಿನ್ನಿ. -ಕಲ್ಪನಾ ಪ್ರಭಾಕರ ಸೋಮನಳ್ಳಿ
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
November 19, 2024
ಬರಹಗಾರ್ತಿ, ಪತ್ರಕರ್ತೆ ಪ್ರಿಯಾ ಕೆರ್ವಾಶೆ ತಮ್ಮ ಬಾಲ್ಯದ ನೆನಪುಗಳನ್ನು ‘ಪುಟ್ಟ ಹೆಜ್ಜೆ ದೊಡ್ಡ ಕಣ್ಣು’ ಪುಸ್ತದ ಮೂಲಕ ಹರಡಿದ್ದಾರೆ. ಈ ಕೃತಿಯಲ್ಲಿ ಬಹು ಮುಖ್ಯವಾಗಿ ತುಳುನಾಡಿನಲ್ಲಿ ನಡೆಯುವ ಭೂತದ ಆರಾಧನೆ,ಭೂತ, ಗುಳಿಗ ಮೊದಲಾದುವುಗಳ ಬಗ್ಗೆ ಅವರ ಬಾಲ್ಯದ ನೆನಪುಗಳನ್ನು ಬರೆದು ‘ಇದು ಭೂತ ಕಾಲ’ ಎಂದು ನಿವೇದಿಸಿದ್ದಾರೆ. ಈ ಕೃತಿಗೆ ಸುಂದರವಾದ ಮುನ್ನುಡಿಯನ್ನು ಬರೆದಿದ್ದಾರೆ ಖ್ಯಾತ ಅಂಕಣಕಾರ ಜೋಗಿ. ಅವರು ತಮ್ಮ ಮುನ್ನುಡಿಯಲ್ಲಿ ಬರೆದ ಬರಹದ ಕೆಲವು ಸಾಲುಗಳು ಇಲ್ಲಿವೆ… “ಅಪ್ಪನೊಂದಿಗೆ…
ವಿಧ: ರುಚಿ
November 19, 2024
ಕಡಲೇಬೇಳೆಯನ್ನು ಅರ್ಧ ಗಂಟೆ ನೆನೆಯಲು ಬಿಡಿ. ಅದನ್ನು ನುಣ್ಣಗೆ ರುಬ್ಬಿ ಉಪ್ಪು ಸೇರಿಸಿ ಕರಡಿಕೊಳ್ಳಿ. ಎಣ್ಣೆಯನ್ನು ಕಾಯಿಸಿಕೊಳ್ಳಿ. ಬೂಂದಿ ಮಾಡುವ ಪಾತ್ರೆಗೆ ಹಿಟ್ಟನ್ನು ಹಾಕಿ ಎಣ್ಣೆಗೆ ಬಿಡಿ. ಗರಿಗರಿ ಬರುವಂತೆ ಕರಿದುಕೊಳ್ಳಿ. ನಂತರ ಒಂದು ಪಾತ್ರೆಯಲ್ಲಿ ಬೆಲ್ಲವನ್ನು ಸ್ವಲ್ಪ ನೀರು ಬೆರೆಸಿ ಪಾಕಕ್ಕೆ ಇಡಿ. ಇದಕ್ಕೆ ಏಲಕ್ಕಿ ಪುಡಿ ಹಾಕಿಬಿಡಿ. ನೂಲಿನ ಪಾಕಕ್ಕಿಂತ ಜಾಸ್ತಿ ಗಟ್ಟಿ ಬರುವಂತೆ ಪಾಕ ಮಾಡಿ ಇದಕ್ಕೆ ಕರಿದ ಕಾಳನ್ನು ಹಾಕಿ ಕಲಸಿಕೊಳ್ಳಿ. ಕೈಗೆ ಸ್ವಲ್ಪ ತುಪ್ಪ ಸವರಿಕೊಂಡು…
ಲೇಖಕರು: addoor
ವಿಧ: ಪುಸ್ತಕ ವಿಮರ್ಶೆ
November 18, 2024
ಗೋವಾದ ಮೀನುಗಾರ ದಂಪತಿಗಳ ಮಗ ಜುಜೆ ಎಂಬಾತನ ಬದುಕಿನ ಘಟನೆಗಳ ಮೂಲಕ ಗೋವಾದ ಸ್ವಾತಂತ್ರ್ಯ ಹೋರಾಟದ ಕತೆ ಹೇಳುವ ಪುಸ್ತಕ ಇದು. ಸುರೇಖಾ ಪನಂಡಿಕರ್ ಬರೆದಿರುವ ಕತೆಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಕೆ. ಸುಧಾ ರಾವ್. ಅಲ್ಲಿನ ಸಮುದ್ರತೀರದಲ್ಲಿ ಆಟವಾಡುತ್ತಾ, ಅಪ್ಪ ಪೆಡ್ರೊ ಮತ್ತು ಅಮ್ಮ ಮರಿಯಾಳಿಗೆ ಬೆಳಗ್ಗೆ ಮೀನು ವಿಂಗಡಿಸುವ ಕೆಲಸದಲ್ಲಿ ಸಹಾಯ ಮಾಡುತ್ತಾ ದಿನಗಳೆಯುತ್ತಿದ್ದ ಜುಜೆ. ಶಾಲೆಗೆ ಹೋಗಬೇಕೆಂಬುದು ಅವನ ಕನಸು. ಅದು ಕನಸಾಗಿಯೇ ಉಳಿಯಲು ಕಾರಣ ಅವನ ಹೆತ್ತವರ ಬಡತನ. ಹತ್ತಿರದ…
ವಿಧ: ರುಚಿ
November 17, 2024
ಮೊದಲು ಒಣ ಮೆಣಸಿನ ಕಾಯಿ, ಕಡ್ಲೇಬೇಳೆ ಕೊತ್ತಂಬರಿ, ಎಳ್ಳು, ಓಮ, ಜೀರಿಗೆ ಇಂಗು ಅಥವಾ ಬೇಳ್ಳುಳ್ಳಿ ಸ್ವಲ್ಪ ಎಣ್ಣೆ ಹಾಕಿ ಹುರಿದು ತೆಂಗಿನ ತುರಿಯ ಜೊತೆ ಪುಡಿ ಮಾಡಿ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸಕ್ಕರೆ ಹುಳಿಪುಡಿ ಹಾಕಿ ಕಲಸಿಕೊಳ್ಳಿ. ಹಾಗಲಕಾಯಿಯನ್ನು ಕತ್ತರಿಸಿ ಭಾಗ ಮಾಡಿ ಸ್ವಲ್ಪ ಉಪ್ಪು ಹುಳಿ ಹಾಕಿ ಬೇಯಿಸಿಕೊಳ್ಳಿ. ನಂತರ ಇದರೊಳಗಿನ ಬೀಜವನ್ನು ತೆಗೆದು ಇದರೊಳಗೆ ಕಲಸಿದ ಮಸಾಲೆಯನ್ನು ತುಂಬಿ ಎಣ್ಣೆ ಹಾಕಿ ಚೆನ್ನಾಗಿ ಬೇಯಿಸಿ. -ಕಲ್ಪನಾ ಪ್ರಭಾಕರ ಸೋಮನಳ್ಳಿ
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
November 15, 2024
‘ಉರಿಯ ಗದ್ದುಗೆ’ ಬಿ.ಆರ್. ಪೊಲೀಸ್ ಪಾಟೀಲ ಅವರ ಕಾದಂಬರಿಯಾಗಿದೆ. ಇದಕ್ಕೆ ಶಶಿಕಾಂತ ಪಟ್ಟಣ ಅವರ ಬೆನ್ನುಡಿ ಬರಹವಿದೆ; ವಿರಕ್ತಪೀಠ ಪರಂಪರೆಯ ತಾಯಿಬೇರು ಎಡೆಯೂರು ತೋಂಟದ ಸಿದ್ದಲಿಂಗ ಶಿವಯೋಗಿಗಳು. ಅವರ ಬಳಿವಿಡಿದು ಬಂದ ಮಠ ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ. ಈ ಮಠದ ೧೯ನೇ ಪೀಠಾಧಿಕಾರಿಗಳಾಗಿ ೧೯೭೪ ಜುಲೈ ೨೯ ರಂದು ಅಧಿಕಾರ ವಹಿಸಿಕೊಂಡ ಪೂಜ್ಯ ಡಾ. ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳು ಮೊದಲ ದಿನದಿಂದಲೇ ಅನೇಕ ಸವಾಲುಗಳನ್ನು ಎದುರಿಸಬೇಕಾಯಿತು. ಪೀಠಕ್ಕೆ ಬರುವ ಮೊದಲು ಹೊಯ್ದಾಟವಿದ್ದರೂ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
November 13, 2024
ವಿಜಯನಗರದ ಸಾಮ್ರಾಟರಾಗಿದ್ದ ಕೃಷ್ಣ ದೇವರಾಯರಿಗೆ ಭಾರತದ ಇತಿಹಾಸದಲ್ಲಿ ತಮ್ಮದೇ ಆದ ಸ್ಥಾನವಿದೆ. ಇವರ ಬಗ್ಗೆ ಈಗಾಗಲೇ ಹಲವಾರು ಪುಸ್ತಕಗಳು ಬಂದಿದ್ದರೂ ಸು ರುದ್ರಮೂರ್ತಿಯವರು ಬರೆದ ‘ಶ್ರೀ ಕೃಷ್ಜದೇವರಾಯ’ ಮರೆಯಲಾಗದ ಸಾಮ್ರಾಜ್ಯದ ಸಾಮ್ರಾಟ ಎನ್ನುವ ಕಾದಂಬರಿ ಅವರ ಬಗ್ಗೆ ಹೊಸ ಲೋಕವನ್ನೇ ತೆರೆದಿಡುತ್ತದೆ. ಈ ಕಾದಂಬರಿಗೆ ಮುನ್ನುಡಿಯನ್ನು ಬರೆದಿದ್ದಾರೆ ಖ್ಯಾತ ಬರಹಗಾರರಾದ ಆರ್ ಶೇಷಶಾಸ್ತ್ರಿ. ಅವರು ಬರೆದ ಮುನ್ನುಡಿಯಿಂದ ಆಯ್ದ ಭಾಗ ನಿಮ್ಮ ಓದಿಗಾಗಿ… “ಭಾರತದ ಅರಸರುಗಳಲ್ಲಿ…
ವಿಧ: ರುಚಿ
November 13, 2024
ಕಾಯಿತುರಿಯ ಜೊತೆ ಮಾವಿನ ಹೂವು ಮತ್ತು ಚಿಟಕಿ ಉಪ್ಪು, ಹಸಿಮೆಣಸಿನ ಚೂರು, ಹಾಕಿ ನುಣ್ಣಗೆ ರುಬ್ಬಿ ಪಾತ್ರಗೆ ಹಾಕಿ. ಇದಕ್ಕೆ ಕಡೆದ ಮಜ್ಜಿಗೆ, ರುಚಿಗೆ ಬೇಕಾದಷ್ಟು ಉಪ್ಪು, ಹಾಕಿ ಹದ ಮಾಡಿ, ಎಣ್ಣೆ, ಉದ್ದಿನ ಬೇಳೆ, ಒಣ ಮೆಣಸಿನ ಚೂರುಗಳು, ಕರಿಬೇವು, ಸಾಸಿವೆ, ಚಿಟಕಿ ಇಂಗು ಹಾಕಿ ಒಗ್ಗರಣೆ ಮಾಡಿ. ಊಟಕ್ಕೆ ಉಪಯೋಗಿಸಲು ಚೆನ್ನಾಗಿರುತ್ತದೆ. -ಕಲ್ಪನಾ ಪ್ರಭಾಕರ ಸೋಮನಳ್ಳಿ