ಎಲ್ಲ ಪುಟಗಳು

ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
December 18, 2024
‘ಟಿಕೆಟ್ ಪ್ಲೀಸ್’ ವಿಕ್ರಂ ಚದುರಂಗ ಅವರ ಅನುವಾದಿತ ಕತೆಗಳಾಗಿವೆ. ಈ ಕೃತಿಯಲ್ಲಿ ಐದು ಕತೆಗಳಿದ್ದು, ನಮ್ಮ ಹೊರಜಗತ್ತಿನ ಮತ್ತು ದೈಹಿಕ ಅನುಭವದ ಮೂಲಕವೇ ತಲುಪಬಹುದಾದ ಒಳ ಅನುಭವಗಳನ್ನು, ಭಾವಲೋಕವನ್ನು ಓದುಗರಿಗೆ ಒಗ್ಗಿಸುವ ಅನುವಾದದ ಪ್ರಯತ್ನವಿಲ್ಲಿದೆ. ಇಲ್ಲಿನ ಟಿಕೆಟ್ ಪ್ಲೀಸ್ ಲಾರೆನ್ಸನ ಪ್ರಸಿದ್ಧ ಕತೆಯಾಗಿದ್ದು, ಹಲವಾರು ಭಾಷೆಗಳಿಗೂ ಕೂಡ ಅನುವಾದಗೊಂಡಿದೆ. ಮೊದಲ ಮಹಾಯುದ್ಧಾನಂತರದ ಕಾಲದಲ್ಲಿ ಈ ಕಥೆ ನಡೆಯುವಾಗಿನ ಯುರೋಪಿನ ಪಟ್ಟಣದ ಸ್ಥಿತಿಗತಿಗಳು, ಅಲ್ಲಿ ಬದಲಾಗುತ್ತಿರುವ ಸಾಮಾಜಿಕ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
December 18, 2024
ಮುನ್ನುಡಿಯಲ್ಲಿ ಹೇಳುವಂತೆ ಇದು ಅವಧೂತ ಮಾರ್ಗದ ಒಂದು ಚರಿತ್ರ ಗ್ರಂಥ.  ಭಗವದ್ ಭಕ್ತರು 'ನಾನು ಇದನ್ನು ಬರೆದಿಲ್ಲ, ಭಗವಂತ ಬರೆಸಿದ ' ಎಂದು ಹೇಳುವಂತೆ ಗಳಗನಾಥರು ಇದನ್ನು ಪರಮಹಂಸರು ಬರೆಸಿದ್ದಾರೆ ಅಂತ ಹೇಳುತ್ತಾರೆ. ಇದು ಎರಡನೇ ಭಾಗವಂತೆ ಆದರೆ ಮೊದಲು ಮುದ್ರಿಸಿದ್ದಂತೆ.  ಅದರ ಪ್ರಾರಂಭದ ಕೆಲವು ಸಾಲುಗಳು ಹೀಗಿವೆ - ಈ ಜಗತ್ತಿನಲ್ಲಿ ದೇವರು ಹಾಗೂ ಅವನ ಸೃಷ್ಟಿ ಎರಡು ಇರುತ್ತವೆ. ದೇವರ ಸ್ವರೂಪ ಕಣ್ಣಿಗೆ ಕಾಣದೆ ಇದ್ದು ಆತನ ಸೃಷ್ಟಿಯು ವ್ಯಕ್ತ ಇರುತ್ತದೆ. ದೇವರು ತನ್ನ ಇಚ್ಛೆಯಂತೆ…
ಲೇಖಕರು: Kavitha Mahesh
ವಿಧ: ರುಚಿ
December 17, 2024
ಮೈದಾ ಹಿಟ್ಟು, ಉಪ್ಪು, ಮೆಣಸಿನ ಹುಡಿ ಹಾಗೂ ಕಾರ್ನ್ ಫ್ಲೋರ್ ಗಳನ್ನು ಸೇರಿಸಿ ಚೆನ್ನಾಗಿ ಕಲಕಿ ನೀರು ಹಾಕಿ ದೋಸೆ ಹಿಟ್ಟಿನ ಹದಕ್ಕೆ ಕಲಸಿಡಿ. ಹೂ ಕೋಸುಗಳನ್ನು ಕಲಸಿದ ಹಿಟ್ಟಿನಲ್ಲದ್ದಿ ಎಣ್ಣೆಯಲ್ಲಿ ಕರಿದು ತೆಗೆಯಿರಿ. ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಸಾಸಿವೆ - ಇಂಗಿನ ಒಗ್ಗರಣೆ ಕೊಡಿ. ಈರುಳ್ಳಿ, ಹಸಿಮೆಣಸಿನ ಕಾಯಿ, ಬೆಳ್ಳುಳ್ಳಿ ಎಸಳುಗಳನ್ನು ಹಾಕಿ ಬಾಡಿಸಿ. ಬಾಡಿಸಿದ ಮಿಶ್ರಣವನ್ನು ತಟ್ಟೆಗೆ ಹಾಕಿ ಕರಿದ ಹೂಕೋಸುಗಳು, ಶುಂಠಿ, ಚಿಲ್ಲಿ ಸಾಸ್, ಟೊಮೆಟೋ ಸಾಸ್ ಗಳನ್ನು ಹಾಕಿ ಮೆಲ್ಲಗೆ ಕಲಸಿ,…
ಲೇಖಕರು: addoor
ವಿಧ: ಪುಸ್ತಕ ವಿಮರ್ಶೆ
December 17, 2024
ಇದು ಯುನೆಸ್ಕೋದ ಏಷ್ಯಾ ಸಾಂಸ್ಕೃತಿಕ ಕೇಂದ್ರ ಪ್ರಾಯೋಜಿಸಿದ ಏಷ್ಯಾದ ಸಹ ಪ್ರಕಟಣಾ ಕಾರ್ಯಕ್ರಮದ ಅನುಸಾರ ಪ್ರಕಟಿಸಿದ ಏಷ್ಯಾದ 14 ದೇಶಗಳ ಸಮಕಾಲೀನ ಕತೆಗಳ ಸಂಕಲನ. ಮೊದಲ ಕತೆ ಅಫಘಾನಿಸ್ತಾನದ್ದು: ಗಿಡುಗ ಮತ್ತು ಮರ. ಒಂದೂರಿನಲ್ಲೊಂದು ಮೋಚಿಯ ಸಣ್ಣ ಅಂಗಡಿ. ಆತ ಬೆಳಗ್ಗೆ ಅಂಗಡಿ ತೆರೆದರೆ ಸಂಜೆಯ ವರೆಗೆ ಕೂತಿರುತ್ತಿದ್ದ. ಅವನ ಅಂಗಡಿಗೆ ಪ್ರತಿ ದಿನ ಇಬ್ಬರು ಸೋಮಾರಿಗಳು ಬಂದು ಹರಟೆ ಹೊಡೆಯುತ್ತಾ ಇರುತ್ತಿದ್ದರು. ಅದೊಂದು ದಿನ ಮೋಚಿ ಖಿನ್ನನಾಗಿದ್ದ. ಯಾಕೆಂದು ಕೇಳಿದಾಗ “ನನ್ನ ಗಿಡುಗ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
December 17, 2024
ಈ ಪುಸ್ತಕವನ್ನು ನಾನು archive.org ತಾಣದಿಂದ ಪುಕ್ಕಟೆ ಇಳಿಸಿಕೊಂಡಿದ್ದೆ . ಆದರೆ ಇದರ ಕೊಂಡಿಯನ್ನು ನಾನು ಈಗ ಕೊಡಲಾರೆ. ಕ್ಷಮಿಸಿ.  ಇದು ಹೊಸ ಪುಸ್ತಕವಾಗಿದ್ದು ಸುಮಾರು 160 ಪುಟಗಳಲ್ಲಿ ಸುಮಾರು ಹತ್ತು ಕಥೆಗಳಿವೆ. ಇದರ ಮುನ್ನುಡಿಯಲ್ಲಿ ಕಥೆ ಎಂದರೇನು ಎಂಬ ವಿವೇಚನೆ ಇದೆ. ಓದಲು ತಕ್ಕದಾಗಿದೆ.  ಕಥೆಗಳಿಂದ ನಾವು ಸ್ವತಃ ಅನುಭವಿಸದೆ ಇದ್ದುದನು ತಿಳಿಯಬಹುದು. ಇಲ್ಲಿನ ಕಥೆಗಳು ಹಾಗೆ ಇವೆ. ಬಹುತೇಕ ಮಧ್ಯಮ ವರ್ಗದ ಅಥವಾ ಮೇಲಿನ ವರ್ಗದ ಹಿನ್ನೆಲೆಯನ್ನು ಹೊಂದಿವೆ.  ಇದರಿಂದ ನಾನು ಮಾಡಿಕೊಂಡ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
December 16, 2024
ವಿದ್ಯಾ ಭರತನಹಳ್ಳಿ ಬರೆದ ‘ಬೇಸೂರ್’ ಎನ್ನುವ ಚೊಚ್ಚಲ ಕಥಾ ಸಂಕಲನ ಇತ್ತೀಚೆಗೆ ಬಿಡುಗಡೆಯಾಗಿದೆ. ತಮ್ಮ ಈ ಕಥಾ ಸಂಕಲನದ ಕುರಿತಾಗಿ ಲೇಖಕಿ ಹೇಳುವುದು ಹೀಗೆ… “ನಾನು ನನ್ನೊಳಗೇ ಕಥೆ ಬರೆದುಕೊಳ್ಳುತ್ತಿದ್ದೆ. ಮನೆಯ ಬಾಗಿಲಲ್ಲಿ ಗೇಟಿಗೆ ತಲೆಯಾನಿಸಿ ಮಗಳು ಬರುವುದನ್ನು ಕಾಯುತ್ತ ಇರುವಾಗ, ಗಂಡನೊಂದಿಗೆ ವಾಕಿಂಗ್ ಮಾಡುವಾಗ, ಅರಳಿದ ಹೂವಿನೊಳಗೆ ಕಣ್ಣಿಗೆ ಕಾಣಿಸದ ಹುಳ ಹೊಕ್ಕಿದ್ದನ್ನು ತೆಗೆಯುವಾಗ, ಫಕ್ಕನೆ ಯಾವುದೋ ನೆನಪಾಗಿ ಕಣ್ಣು ತುಂಬಿ ತುಳುಕುವಾಗ. ಸುತ್ತೆಲ್ಲ ಹರವಿಕೊಂಡ ಇತಿಹಾಸ, ವರ್ತಮಾನ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
December 16, 2024
ಈ ಪುಸ್ತಕದಿಂದ ನಾನು ಮಾಡಿಕೊಂಡ ಕೆಲವು ಟಿಪ್ಪಣಿಗಳು ಇಲ್ಲಿವೆ. ಇಲ್ಲಿನವು ಭಾರತದ ಹಿತಕಾರಕ ರಹಸ್ಯಗಳು. ಧರ್ಮಕ್ಕೆ ಅಂತರಂಗ ಬಹಿರಂಗ ಎಂಬ ಎರಡು ಅಂಗಗಳು ಇರುವವು. ಧರ್ಮದ ಅಂತರಂಗವು ಜಗದ್ ಕಾರಣನಾದ ದೇವರ ಪ್ರೀತಿಗೆ ಸಂಬಂಧ ಇರುವುದು. ಧರ್ಮದ ಬಹಿರಂಗವು ಜಗತ್ತಿನ ಸುಖದ ಪ್ರಾಪ್ತಿಗೆ ಸಂಬಂಧಿಸಿದ್ದಾಗಿರುವುದು. ಧರ್ಮದ ಅಂತರಂಗವು ಶಾಶ್ವತವಾಗಿ ಇರುವುದು. ಜಗತ್ತು ಯಾವಾಗಲೂ ರೂಪಾಂತರ ಹೊಂದತಕ್ಕದ್ದಾಗಿದ್ದು ಈ ಜಗತ್ತು ಚಂಚಲವಾಗಿರುವುದರಿಂದ ಜಗತ್ತಿನ ಸುಖದ ಪ್ರಾಪ್ತಿಗೆ ಕಾರಣವಾದ ಲೌಕಿಕ ಆಚಾರ…
ವಿಧ: ರುಚಿ
December 15, 2024
ಸಣ್ಣಗೆ ಕತ್ತರಿಸಿದ ಗುಜ್ಜೆ ಹೋಳನ್ನು ಉಪ್ಪು, ಮೆಣಸಿನ ಹುಡಿಯೊಂದಿಗೆ ನೀರು ಹಾಕಿ ಚೆನ್ನಾಗಿ ಬೇಯಿಸಬೇಕು. ಬೆಂದ ಭಾಗಕ್ಕೆ ನುಣ್ಣಗೆ ಬೀಸಿದ ಹಸಿಕಾಯಿಯನ್ನು ಸೇರಿಸಿ ಕುದಿಸಬೇಕು. ಸಣ್ಣಗೆ ಕುದಿಯಲಾರಂಬಿಸಿದಾಗ ಹುಳಿನೀರು ಸೇರಿಸಿ ಕುದಿಸಬೇಕು. ತುಪ್ಪ, ಮೆಂತೆ, ಸಾಸಿವೆ, ಒಣಮೆಣಸು ಹಾಕಿ ಒಗ್ಗರಣೆ ಕೊಡಬೇಕು. ಮೆಂತೆ ಮೇಲಾರ ಸಿದ್ದ. ಅಶ್ವಿನಿ ಮೂರ್ತಿ ಅಯ್ಯನಕಟ್ಟೆ
ವಿಧ: ರುಚಿ
December 14, 2024
ಮೇಲೆ ತಿಳಿಸಿದ ಎಲ್ಲಾ ಸಾಮಾನುಗಳನ್ನು ಸೇರಿಸಿ ನೀರುಹಾಕಿ ರುಬ್ಬಿಕೊಳ್ಳಿ. ದಪ್ಪ ಹಲಸಿನ ತೊಳೆಯನ್ನು ತೊಟ್ಟಿನ ಬುಡದಲ್ಲಿ ನಾಜೂಕಾಗಿ ದುಂಡಗೆ ಕತ್ತರಿಸಿ ರುಬ್ಬಿದ ಮಸಾಲೆಯನ್ನು ತುಂಬಿಸಿ. ದಪ್ಪ ತಳದ ಪಾತ್ರೆಯಲ್ಲಿ ಎಣ್ಣೆ ಬಿಸಿಮಾಡಿ ಸಾಸಿವೆ, ಕರಿಬೇವು, ಅರಿಶಿನ ಎಲ್ಲಹಾಕಿ ಒಗ್ಗರಣೆ ಮಾಡಿಕೊಳ್ಳಿ. ಅದರಲ್ಲಿ ತುಂಬಿದ ಹಲಸಿನ ತೊಳೆಯನ್ನು ಇಟ್ಟು – ಮಸಾಲೆ ಮಿಕ್ಕಿದ್ದರೆ ಹಾಕಿ ಬೇಯುವಷ್ಟು ನೀರು ಹಾಕಿ ೧೦ ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿ, ಕುಕ್ಕರ್‌ನಲ್ಲಿ ಬೇಯಿಸುವುದಾದರೆ ಒಂದೇ ವಿಷಲ್ ಸಾಕು…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
December 13, 2024
`ಕಟ್ಟು’ ಎಂಬ ಪುಸ್ತಕ ಡಾ. ಬಸಯ್ಯಸ್ವಾಮಿ ಅವರ ವಿಮರ್ಶಾ ಲೇಖನಗಳ ಸಂಕಲನವಾಗಿದೆ. ಸಾಹಿತ್ಯ, ಶಾಸನ, ಸಮಾಜ ಎಂಬ ಮೂರು ಭಾಗವನ್ನು ಒಳಗೊಂಡ ಒಟ್ಟು ೧೫ ಲೇಖನಗಳು ಇದರಲ್ಲಿವೆ.(ವಲಸೆ ಸಾಹಿತ್ಯ, ವಚನ ಸಾಹಿತ್ಯ, ಶಾಸನ, ಮತ್ತು ಭಾಷೆ) ಸಾಹಿತ್ಯವನ್ನು ವಿವಿದ ಆಯಾಮಗಳಲ್ಲಿ, ಹಲವು ಮಗ್ಗುಲುಗಳಲ್ಲಿ ನೋಡುವ ಕುತೂಹಲದ ಕಣ್ಣನ್ನೂ ಲೇಖಕ ಹೊಂದಿರುವುದನ್ನು ಇಲ್ಲಿ ಕಾಣಬಹುದು. ಅಷ್ಟೇ ಅಲ್ಲದೆ ಸಾಮಾಜಿಕ ಮತ್ತು ಸಾಂಸ್ಕೃತಿಕ ನೆಲೆಗಳಲ್ಲಿ ಅವರ ಆಸಕ್ತಿಯು ಡಾಳಾಗಿ ಕಾಣಿಸುತ್ತದೆ. ಕನ್ನಡ ಸಾಹಿತ್ಯವನ್ನು,…