ವಿಧ: ಪುಸ್ತಕ ವಿಮರ್ಶೆ
October 06, 2024
ಮನುಷ್ಯರ ಬದುಕಿನಲ್ಲಿ ಹಾಸುಹೊಕ್ಕಾಗಿರುವ ಕಾಡಿನ ವಿವಿಧ ಮುಖಗಳನ್ನು ಸರಳವಾಗಿ ಪರಿಚಯಿಸುವ ಪುಸ್ತಕ ಇದು. ಇಂಗ್ಲೀಷಿನಲ್ಲಿ “ವೈಲ್ಡ್ ವುಡ್-ನೋಟ್ಸ್” ಎಂಬ ಶೀರ್ಷಿಕೆ ಹೊಂದಿರುವ ಇದನ್ನು ಕನ್ನಡಕ್ಕೆ ಅನುವಾದಿಸಿದವರು ಎಂ.ಆರ್. ಆನಂದರಾಮಯ್ಯ.
ಇದರಲ್ಲಿರುವ 17 ಪುಟ್ಟ ಅಧ್ಯಾಯಗಳು ಸರಾಗವಾಗಿ ಓದಿಸಿಕೊಂಡು ಹೋಗುತ್ತವೆ. ಮೊದಲ ಅಧ್ಯಾಯ “ವನ್ಯ ಆಕರ್ಷಣೆ”, ನಾವೆಲ್ಲರೂ ಮನೆಯಿಂದ ಹೊರಗೆ ವನಭೋಜನ ಅಥವಾ ರಜಾದಿನವನ್ನು ಏಕೆ ಪ್ರೀತಿಸುತ್ತೇವೆ? ಎಂಬ ಪ್ರಶ್ನೆಯಿಂದ ಶುರು. ಇದಕ್ಕೆ ಹಲವು ಉತ್ತರಗಳನ್ನು…
ವಿಧ: ಪುಸ್ತಕ ವಿಮರ್ಶೆ
October 05, 2024
ತೆಲುಗು ಭಾಷೆಯ ಖ್ಯಾತ ಕತೆಗಾರ್ತಿ ಹಾಗೂ ಪತ್ರಕರ್ತೆ ಕಲ್ಪನಾ ರೆಂಟಾಲಾ ಅವರ ಕಥಾ ಸಂಕಲನವನ್ನು ರಂಗನಾಥ ರಾಮಚಂದ್ರರಾವು ಅವರು ‘ಐದನೇ ಗೋಡೆ ಮತ್ತು ಇತರ ಕಥೆಗಳು' ಹೆಸರಿನಲ್ಲಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಈ ಕಥಾ ಸಂಕಲನಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಡಾ ಎಚ್ ಎಲ್ ಪುಷ್ಪ. ಅವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಅನಿಸಿಕೆಗಳ ಆಯ್ದ ಭಾಗ ಇಲ್ಲಿದೆ...
“ತೆಲುಗಿನಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟಿರುವ ‘ಐದನೇ ಗೋಡೆ’ ಹಲವು ಕಾರಣಕ್ಕೆ ಬಹುಮುಖ್ಯವಾದ ಅನುವಾದಿತ…
ವಿಧ: ಪುಸ್ತಕ ವಿಮರ್ಶೆ
October 03, 2024
ಪುನರ್ವಸು, ಚೆನ್ನಭೈರಾದೇವಿ ಮುಂತಾದ ಚಾರಿತ್ರಿಕ ಕಾದಂಬರಿಗಳನ್ನು ಸಾರಸ್ವತ ಲೋಕಕ್ಕೆ ಅರ್ಪಿಸಿದ ಬರಹಗಾರರಾದ ಡಾ ಗಜಾನನ ಶರ್ಮ ಅವರ ನೂತನ ಕಾದಂಬರಿ ‘ರಾಜಮಾತೆ ಕೆಂಪನಂಜಮ್ಮಣ್ಣಿ' ಇತ್ತೀಚೆಗೆ ಬಿಡುಗಡೆಯಾಗಿದೆ. ಮೈಸೂರಿನ ರಾಜ ಮನೆತನದ ಬಗ್ಗೆ ಬರೆದ ಈ ಐತಿಹಾಸಿಕ ಕಾದಂಬರಿಯ ಕುರಿತು ಸ್ವತಃ ಲೇಖಕರು ಹೆಚ್ಚಿನ ವಿವರಗಳನ್ನು ನೀಡಿದ್ದಾರೆ. ಅದರ ಆಯ್ದ ಭಾಗ ಇಲ್ಲಿದೆ...
“೨೦೦೨ಕ್ಕೆ ಕರ್ನಾಟಕದ ವಿದ್ಯುತ್ ಇತಿಹಾಸಕ್ಕೆ ನೂರು ವರ್ಷ ತುಂಬಿತ್ತು. ಆ ಸಂದರ್ಭದಲ್ಲಿ ನಾನು, "ಬೆಳಕಾಯಿತು ಕರ್ನಾಟಕ" ಎಂಬ…
ವಿಧ: ಪುಸ್ತಕ ವಿಮರ್ಶೆ
October 01, 2024
ದಕ್ಷಿಣ ಕೊಂಕಣ ಹಾಗೂ ಮಲೆನಾಡನ್ನು ಸುಮಾರು ಐದು ದಶಕಗಳ ಕಾಲ ಆಳಿದ ಚೆನ್ನಾಭೈರಾದೇವಿ ಎಂಬ ರಾಣಿಯ ಬಗ್ಗೆ ತಿಳಿದಿರುವವರ ಸಂಖ್ಯೆ ಬಹಳ ಕಡಿಮೆ. ನಾವು ಶಾಲೆಗಳಲ್ಲಿ ಇಂತಹ ಮಹಾರಾಣಿಯರ ಜೀವನ ಕಥೆಯನ್ನು ಕೇಳಿಯೇ ಇಲ್ಲ, ಕಲಿತೂ ಇಲ್ಲ. ನಮ್ಮ ಶಿಕ್ಷಣ ವ್ಯವಸ್ಥೆಯ ದುರಂತ ಇದು. ಭಾರತವನ್ನು ಆಕ್ರಮಿಸಿ ಲೂಟಿ ಮಾಡಿದ ಮೊಘಲರು ಮತ್ತು ಹಲವಾರು ಮುಸ್ಲಿಂ ದೊರೆಗಳ ಬಗ್ಗೆ ಬಹಳ ವಿವರವಾಗಿ ಓದಿರುವ ನಾವು, ನಮ್ಮದೇ ದೇಶದ ಹಲವಾರು ರಾಜರ ಬಗ್ಗೆ, ರಾಣಿಯರ ಬಗ್ಗೆ ಓದಿದ್ದು ಕಡಿಮೆ. ಎಲ್ಲೋ ಒಂದೆಡೆ ರಾಣಿ…
ವಿಧ: ರುಚಿ
October 01, 2024
ಗೋಧಿ ಹಿಟ್ಟು, ಮೈದಾ ಹಿಟ್ಟುಗಳಿಗೆ ನೀರು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ. ಆಲೂಗಡ್ಡೆಗಳನ್ನು ಬೇಯಿಸಿ ಸಿಪ್ಪೆ ತೆಗೆದು ಹುಡಿ ಮಾಡಿ. ಬಟಾಣಿ ಕಾಳುಗಳು, ಶುಂಠಿ ತುರಿ, ಹಸಿಮೆಣಸಿನಕಾಯಿ, ಇಂಗು ಜೀರಿಗೆ ಹುಡಿ, ಅರಸಿನ, ಗರಮ್ ಮಸಾಲಾ ಹುಡಿ, ಉಪ್ಪು ಎಲ್ಲವನ್ನೂ ಸೇರಿಸಿ ನೀರು ಹಾಕದೆ ಮಸಾಲೆ ರುಬ್ಬಿ. ಬೇಯಿಸಿದ ಆಲೂಗಡ್ಡೆಗೆ ರುಬ್ಬಿದ ಮಸಾಲೆ ಸೇರಿಸಿ ಚೆನ್ನಾಗಿ ಕಲಕಿ. ಕಲಸಿದ ಗೋಧಿ-ಮೈದಾ ಹಿಟ್ಟಿನ ಮಿಶ್ರಣದಿಂದ ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿ ಪೂರಿ ಆಕಾರಕ್ಕೆ ಲಟ್ಟಿಸಿ ಆಲೂ ಮಿಶ್ರಣ…
ವಿಧ: ರುಚಿ
September 29, 2024
ಬಸಳೆ ಚಿಗುರನ್ನು ಜೀರಿಗೆ, ಬೆಣ್ಣೆ ಹಾಕಿ ಹುರಿಯಬೇಕು. ಸ್ವಲ್ಪ ತಣ್ಣಗಾದ ಮೇಲೆ ತೆಂಗಿನತುರಿಯೊಂದಿಗೆ ನುಣ್ಣಗೆ ಬೀಸಬೇಕು. ಅದಕ್ಕೆ ಬೆಲ್ಲ , ಉಪ್ಪು, ಮಜ್ಜಿಗೆ, ಬೇಕಾದಷ್ಟು ನೀರು ಹಾಕಿ ಒಗ್ಗರಣೆ ಹಾಕಿದರೆ ಬಸಳೆ ತಂಬುಳಿ ತಯಾರು.
-ಅಶ್ವಿನಿ ಮೂರ್ತಿ ಅಯ್ಯನಕಟ್ಟೆ
ವಿಧ: ಪುಸ್ತಕ ವಿಮರ್ಶೆ
September 28, 2024
ಭರವಸೆಯ ಕವಯತ್ರಿ ಸುಮತಿ ಕೃಷ್ಣಮೂರ್ತಿ ಅವರ ಚೊಚ್ಚಲ ಕವನ ಸಂಕಲನ ‘ವೈಶಾಖದ ಮಳೆ' ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಕವನ ಸಂಕಲನದ ಬಗ್ಗೆ ಸೊಗಸಾದ ಮುನ್ನುಡಿಯನ್ನು ಬರೆದಿದ್ದಾರೆ ಎಂ ಎಸ್ ಆಶಾದೇವಿ. ಇವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಅನಿಸಿಕೆಗಳ ಆಯ್ದ ಭಾಗ...
“ಸುಮತಿ ಕೃಷ್ಣಮೂರ್ತಿಯವರ 'ವೈಶಾಖದ ಮಳೆ' ಯ ಮೊದಲ ಓದು ಕವಿಯ ಮೊದಲ ಕವಿತೆಗಳಿಗಿಂತ ಖಂಡಿತ ತುಸು ಎತ್ತರದಲ್ಲಿದೆ. ಅವರೊಳಗೆ ಕವಿಯ ಕಣ್ಣಿನ ಇರುವಿಕೆಯನ್ನಂತೂ ಇಲ್ಲಿನ ಕವಿತೆಗಳು ಸಾಬೀತು ಮಾಡುತ್ತಿವೆ. ಕವಿತೆಗಳು ಧಿಡೀರ್…
ವಿಧ: ಪುಸ್ತಕ ವಿಮರ್ಶೆ
September 26, 2024
‘ಆತ್ಮಾನುಸಂಧಾನ' ಎನ್ನುವ ಕವನ ಸಂಕಲನ ಎ ಎನ್ ರಮೇಶ್ ಗುಬ್ಬಿ ಅವರ ೧೨ನೇ ಕೃತಿ. ಈ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಕವಯತ್ರಿ, ಲೇಖಕಿ ಹಾಗೂ ಉಪನ್ಯಾಸಕಿಯಾದ ಡಾ. ಸಂಧ್ಯಾ ಹೆಗಡೆ, ದೊಡ್ಡಹೊಂಡ. ಇವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಕೆಲವು ಸಾಲುಗಳು ಇಲ್ಲಿವೆ...
“ಜೀವನದ ಹಲವು ಸ್ತರಗಳನ್ನು ದಾಟಿಬಂದ ಜೀವವೊಂದು 'ಕವಿಭಾವ'ದಲ್ಲಿ ನಿಶ್ಚಿತವಾದ ನೆಲೆಯೊಂದರಲ್ಲಿ ನಿಂತು ನಿರ್ವಿಕಾರ ಭಾವದಿಂದ ತನ್ನ ಅನುಭವದ ಅನುಸಂಧಾನ ಮಾಡುವ ಪಕ್ವ ಮನಸೊಂದರ ಒಡನಾಟಕ್ಕೆ ಬರುವ ಅನುಭವಗಳನ್ನು…
ವಿಧ: ರುಚಿ
September 26, 2024
ಮಾವಿನ ಹಣ್ಣನ್ನು ಹೋಳು ಮಾಡಿ ಗೊರಟು ಸಹಿತ ೪ ಕಪ್ ನೀರಿನಲ್ಲಿ ಅರಸಿನ ಪುಡಿ, ಕೊತ್ತಂಬರಿ-ಜೀರಿಗೆ ಪುಡಿ, ಉಪ್ಪು, ಬೆಲ್ಲ, ಇಂಗು, ಹಸಿಮೆಣಸು ಹಾಕಿ ಬೇಯಿಸಿ. ಬೆಳ್ಳುಳ್ಳಿ ಒಗ್ಗರಣೆ ಕೊಡಿ. ಅನ್ನದೊಂದಿಗೆ ಕಲಸಿ ತಿನ್ನಲು ರುಚಿ.
- ಸಹನಾ ಕಾಂತಬೈಲು, ಮಡಿಕೇರಿ
ವಿಧ: ಪುಸ್ತಕ ವಿಮರ್ಶೆ
September 24, 2024
ಭರವಸೆಯ ಕಾದಂಬರಿಕಾರ ಪ್ರಮೋದ ಕರಣಂ ಅವರು ಬರೆದ ಜನ ಜಾಗೃತಿ ಮೂಡಿಸಬಲ್ಲ ಕಥಾ ಹಂದರವನ್ನು ಹೊಂದಿರುವ ಪುಟ್ಟ ಕಾದಂಬರಿಯೇ ‘ಸಾಧ್ಯ ಅಸಾಧ್ಯಗಳ ನಡುವೆ'. ಈ ಕಾದಂಬರಿಯು ನಮ್ಮ ಈಗಿನ ಯುವ ಜನಾಂಗದ ನಡುವೆ ಪ್ಯಾಷನ್-ಫ್ಯಾಷನ್, ಸ್ಟೈಲ್ ಎಂಬ ನೆಪದಲ್ಲಿ ಹುಟ್ಟಿಕೊಂಡಿರುವ ಮದ್ಯಪಾನ, ಧೂಮಪಾನ, ಮಾದಕ ದ್ರವ್ಯಗಳಂತಹ ಪಿಡುಗಿನ ಬಗ್ಗೆ ಜಾಗೃತಿ ಮೂಡಿಸುತ್ತದೆ.
ಸ್ವಚ್ಛತೆಯನ್ನರಸಿ ಕಲ್ಬುರ್ಗಿಯಿಂದ ಬೆಂಗಳೂರಿಗೆ ಬರುವ ಗಣೇಶನಿಗೆ, ಅಲ್ಲಿ ಬಾಹ್ಯ ಸ್ವಚ್ಛತೆಗಿಂತ ಆಂತರಿಕ ಸ್ವಚ್ಛತೆ ಮಹತ್ವದೆಂದು…