ಎಲ್ಲ ಪುಟಗಳು

ಲೇಖಕರು: D.S.NAGABHUSHANA
ವಿಧ: ಬ್ಲಾಗ್ ಬರಹ
November 01, 2007
ಆಧುನಿಕ ಕರ್ನಾಟಕ ಕಟ್ಟಿದ ಐವ್ವತ್ತು ಮಂದಿ ಮಹನೀಯರು ನಿಜವಾಗಿ ಕರ್ನಾಟಕದ ಸುವರ್ಣ ಮಹೋತ್ಸವದ ಆಚರಣೆ ನಡೆಯಬೇಕಾಗಿದ್ದುದು, 2005ರ ನವೆಂಬರ್ 1ರಿಂದ 2006ರ ನವೆಂಬರ್ 1ರವರೆಗೆ. ಆದರೆ ಆ ಅವಧಿಯಲ್ಲಿದ್ದ ಸರ್ಕಾರ ತನ್ನ ಅಳಿವು- ಉಳಿವಿನ ಕಸರತ್ತಿನಲ್ಲೇ ತೊಡಗಬೇಕಾಗಿ ಬಂದಿದ್ದರಿಂದಾಗಿ ಅಧಿಕೃತವಾಗಿ ಘೋಷಿಸಲ್ಪಟ್ಟ ಆಚರಣೆ, ರಾಜಕೀಯ ಬಿರುಗಾಳಿಗೆ ಸಿಕ್ಕಿ ತತ್ತರಿಸಿತು. ಅದು ಆರಂಭೋತ್ಸವದೊಂದಿಗೇ ಅಂತ್ಯಗೊಂಡಿತು! ನಂತರ ಬಂದ ಹೊಸ ಸರ್ಕಾರ ಹೊಸ ಉತ್ಸಾಹದೊಂದಿಗೆ ಆಚರಣೆಯನ್ನು 2007ರ…
ಲೇಖಕರು: subramanya_kanndaloka
ವಿಧ: ಬ್ಲಾಗ್ ಬರಹ
November 01, 2007
ಬಟಾಬಯಲಿನ ನಡುವೆ ನಿಂತ ಒಂದು ಹೆಮ್ಮರ.. ಅದು ಪ್ರೀತಿಯೆಂಬ ಹೆಮ್ಮರ..ಜೀವನದಲ್ಲಿ ಒಂಟಿಯಾಗಿ ನಿಂತು ಪ್ರೀತಿಯ ಸೋನೆಗೆ ಹಂಬಲಿಸುತ್ತಿರೋ ಹುಡುಗನೊಬ್ಬನ ಹೃದಯದ ಪ್ರತೀಕ.. ಕಾರ್ಮೋಡ ಕವಿದಂತೆ ಮಳೆ ಸುರಿಯಲು ಪ್ರಾರಂಭ..ಮರ ನೆನೆದಂತೆ..ಹಚ್ಚ ಹಸಿರಿನಿಂದ ತುಂಬಿದಂತೆ..ಹೃದಯದಲ್ಲಿ ಪ್ರೇಮದ ಮೊರೆತ ಮೊಳೆಯುತ್ತಿದೆ.. ಆದರೆ ಆದದ್ದೇನು?..ಕಾಗೆಯ ಕಾವ್..ಕಾವ್ ಕರ್ಕಶವನ್ನೇ ಸಂಗೀತವೆಂದರಿತ ಹೃದಯಕ್ಕೆ ಆ ಮರದ ಪೊಟರೆಯಲ್ಲಿ ಗುಬ್ಬಿಯೊಂದು ಹಾಡಿದ ಚಿಂವ್..ಚಿಂವ್ ಎಂಬ ಪ್ರೇಮ ರಾಗ ಕೇಳಲೇ ಇಲ್ಲ..ಸಮಯ…
ಲೇಖಕರು: venkatesh
ವಿಧ: Basic page
November 01, 2007
ಮೈಸೂರು ಸಂಸ್ಥಾನದ ರಾಜ್ಯಗೀತೆಯಾಗಿದ್ದ, " ಕಾಯೌ ಜಯಗೌರಿ, ಕರುಣಾ ಲಹರಿ.....", ಗೀತೆಯನ್ನು, ನಮ್ಮ ಬಾಲ್ಯದ ಶಾಲೆಯದಿನಗಳಲ್ಲಿ, ಹೇಳುತ್ತಿದ್ದದ್ದು ಇಂದಿಗೂ, ನನ್ನ ನೆನಪಿನ ಹಲಿಗೆಯಲ್ಲಿ ಮಾಸದೆ, ಉಳಿದುಕೊಂಡಿದೆ ! " ಕಾಯೌ ಶ್ರೀ ಗೌರೀ ಕರುಣಾಲಹರೀ ತೋಯಜಾಕ್ಷೀ ಶಂಕರೀಶ್ವರೀ [ಪ] ವೈಮಾನಿಕ ಭಾಮಾರ್ಚಿತ ಕೋಮಲತರ ಪಾದೇ ಸೀ ಮಾತಿಗ ಭೂಮಾಸ್ಪದೆ ಕಾಮಿತ ಫಲದೇ [೧] ಶುಂಭಾದಿಮದಾಂಬೋನಿಧಿ ಕುಂಭಜನಿಭೆ ದೇವೀ ಜಂಭಾಹಿತ ಸಂಭಾವಿತೆ ಶಾಂಭವಿ ಶುಭವೀ [೨] ಶ್ಯಾಮಾಲಿಕೆ ಚಾಮುಂಡಿಕೆ ಸೋಮಕುಲಜಚಾಮ…
ಲೇಖಕರು: ನಿರಾಸಕ್ತ
ವಿಧ: ಬ್ಲಾಗ್ ಬರಹ
November 01, 2007
ಅದೇಕೋ ಶುದ್ಧ ನಿರಾಸಕ್ತಿ.. ಹೊಸತೇನೂ ಇಲ್ಲವೆಂಬ ನಿರಾಸಕ್ತಿ.. ದಿವ್ಯ ವೈರಾಗ್ಯದ ನಿರ್ಲಿಪ್ತತೆ. ನಿಂತಲ್ಲೆ ನಿಂತು ಕರಗಿ ಹೋಗಲು ಹಪಹಪಿಸುವ ತಮಸ್ಸು..ಮುಂದಕ್ಕೆ ಸಾಗಲೊಲ್ಲುವ ಮನಸ್ಸಿನ ಕುದುರೆಗಳು.. ಅದ್ವೈತ, ಶೂನ್ಯ ಸಿದ್ಧಾಂತ, ಮಾಯಾವಾದಗಳ ಬಹು ಆಸಕ್ತಿಯಿಂದ ಉಂಟಾದ ನಿರಾಸಕ್ತಿಯೇ ಇದು ? ಮತ್ತೆ ಕಾರಣ ಹುಡುಕಲೂ ನಿರಾಸಕ್ತಿ. ಹುಡುಕಿ ಏನೂ ಮಾಡಲಾಗದೆಂಬ ಸಮಜಾಯಿಷಿ. ಸ್ಥಿತಿ ತಲುಪಿದ್ದಾಗಿದೆ. ಇನ್ನು ಅದನ್ನು ಹೊಂದಿದ ಕ್ರಮದ ಬಗೆಗಿನ ಚರ್ಚೆ ಅಪ್ರಸ್ತುತ. ಆದರೂ ಇದನ್ನು ಬರೆಯುವ ಹಂಬಲ.…
ಲೇಖಕರು: bvatsa
ವಿಧ: Basic page
November 01, 2007
ನನ್ನ ಕವನಗಳಿಗೆ, ಹಾಕಲು.. ಬಾರದು.. ಯಾವುದೇ ಛಂಧಸ್ಸು.. ಏಕೆಂದರೆ, ಅದರಲ್ಲಿದೆ.. ಲಘು-ಗುರುಗಳಿಗೆ.. ಮೀರಿದ, ಒಂದು.. ಮನಸ್ಸು..
ಲೇಖಕರು: bvatsa
ವಿಧ: Basic page
November 01, 2007
ಕರೆಯಲ್ಲಿದ್ದಾಗಲೆಲ್ಲ.. ನೀ ಸಿಗಲೇ ಇಲ್ಲಾ.. ನಿನ್ನ ನೋಡಿ ಅದೆಷ್ಟು, ದಿನಗಳಾದವು ಎಂದೆಲ್ಲಾ,.. ಕೊರೆವವಳು.. ಎದುರು ಬಂದು ನಿಂತಾಗ.. ಇದೇಕೆ, ಹೀಗೆ ಮಾತು ಮರೆತವಳಂತೆ, ಮೌನವಾದಳು ?? ಪತ್ರಗಳಲೆಲ್ಲ.. ತನ್ನ ಪದ-ಪಾಂಡಿತ್ಯವ.. ಮೆರೆದವಳು, ಇದೇಕೆ ಹೀಗೆ.. ನಾ ಎದುರು ಬಂದಾಗ.. ಪದಗಳಿಗೆ ಬರವಿದ್ದಂತೆ, ಪರದಾಡುವಳು ?? ಇವಳೇನಾ ಅವಳು.?? ಎಂದೆಲ್ಲಾ ಅನಿಸುವವಳು., ಮಾತಿಲ್ಲದಿದ್ದರೇನಂತೆ.. ಕ್ಷಣದಲ್ಲಿ..ಬರೀ.. ಕಣ್ಣಲ್ಲೇ..ಎಲ್ಲವನೂ, ಹೇಳಬಲ್ಲವಳು.. ಈ ನನ್ನ, ವಿಚಿತ್ರದವಳು..
ಲೇಖಕರು: bvatsa
ವಿಧ: Basic page
November 01, 2007
ಮನದ ಬಾಗಿಲ ಬಳಿ ಬಂದ ಭಾವಗಳು, ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಮರಳಿದವೇಕೆ ? ನಾಲಿಗೆಯ ತುದಿಗೆ.. ಬಂದ ಎಷ್ಟೋ ಮಾತುಗಳು, ಮತ್ತೊಂದಿಷ್ಟು ಧೈರ್ಯ ಮಾಡಲಿಲ್ಲವೇಕೆ ? ಗರಿಗೆದರಿ, ಒಳಗೊಳಗೆ ಘರ್ಜಿಸಿದ ಆಸೆಗಳು, ಕುಯ್ ಗುಡುತ್ತ, ಬಾಲ ಮುದುರಿ ಮೂಲೆ ಸೇರಿದ್ದೇಕೆ ? ನಾನೆಂಬ ಶತೃವೇ ? ನನ್ನದೇ ಎಂಬ ಹುಚ್ಚು ಭರವಸೆಯೇ ? ನನ್ನದಾಗುವುದಿಲ್ಲವೆಂಬ ವಿರಕ್ತಿಯೇ ? ಪ್ರಶ್ನೆಗಳು, ಪ್ರಶ್ನಿಸಿದಷ್ಟೂ ಉತ್ತರಿಸಲಾರದಷ್ಟು…. ಜಟಿಲವಾಗುತ್ತಿವೆಯೇಕೆ ??
ಲೇಖಕರು: narendra
ವಿಧ: ಬ್ಲಾಗ್ ಬರಹ
November 01, 2007
ನಾವೆಲ್ಲ ಹೆಗಲಿಗೆ ಚೀಲ ಸಿಕ್ಕಿಸಿಕೊಂಡು, ಪ್ರೀತಿಯ ಅಮ್ಮ, ತಮ್ಮನನ್ನು ಮನೆಯಲ್ಲೇ ಬಿಟ್ಟು, ಗೊತ್ತೇ ಇಲ್ಲದ ಹುಡುಗರು, ಭಯ ಹುಟ್ಟಿಸುವ ಮಾಸ್ಟ್ರು, ಟೀಚರ್ರು ಎಲ್ಲ ಇರುವ ನಿಗೂಢ ಶಾಲೆಗೆ ಹೋಗತೊಡಗಿದ್ದು, ಕ್ರಮೇಣ ಅದೆಲ್ಲ ನಮಗೆ ಅಭ್ಯಾಸವಾಗಿದ್ದು ಮತ್ತೆ ಅದೇ ಶಾಲೆ ಬಿಟ್ಟು ಹೈಸ್ಕೂಲಿಗೋ ಕಾಲೇಜಿಗೋ ಬೇರೆ ಕಡೆ ಹೋಗಬೇಕಾದಾಗ ಬಿಟ್ಟು ಹೋಗಬೇಕಲ್ಲ ಎಂದು ಅತ್ತಿದ್ದು.....ಎಲ್ಲ ಹಳೆಯ ನೆನಪುಗಳು. ಅಲ್ಲೆಲ್ಲೋ ನಮಗೆ ಬದುಕಿನ ಸ್ಪರ್ಧಾತ್ಮಕ ಗುಣದ ಅಸ್ಪಷ್ಟ ಪರಿಚಯವಾಗಿರುತ್ತದೆ. ಅದು ಮಾರ್ಕುಗಳ…
ಲೇಖಕರು: ರಘುನಂದನ
ವಿಧ: ಚರ್ಚೆಯ ವಿಷಯ
November 01, 2007
ಹಸಿರು ಮನೆ ಪರಿಣಾಮ ಅಂದರೇನು ಅನ್ನುವುದು ನನಗೆ ಸರಿಯಾಗಿ ಅರ್ಥವಾಗಿಲ್ಲದ ವಿಷಯ. ಇದರಿಂದ ಅಡ್ಡಾದಿಡ್ದಿ ಪರಿಣಾಮಗಳಾಗುತ್ತವೆ ಅನ್ನೋದು ಗೊತ್ತು. ಸರಳ ಕನ್ನಡದಲ್ಲಿ ಉದಾಹರಣೆಗಳೊಂದಿಗೆ ಯಾರಾದರೂ ವಿವರಿಸಿ.
ಲೇಖಕರು: madhava_hs
ವಿಧ: ಬ್ಲಾಗ್ ಬರಹ
October 31, 2007
ವಿಜಯ ಕರ್ನಾಟಕ ನಿಜವಾಗಿಯೂ ಸಮಸ್ತ ಕನ್ನಡಿಗರ ಹೆಮ್ಮೆ. ಇದು ಉತ್ಪ್ರೇಕ್ಷೆಯಲ್ಲ! ಕೇವಲ ೬ ವರ್ಷಗಳ ಹಿಂದೆ ಶುರುವಾದ ಈ ಪತ್ರಿಕೆ ಇಂದು ಎಂತಹ ಸ್ಠಾನದಲ್ಲಿದೆ ನೋಡಿ. ಅಂಕಿ ಅಂಶಗಳ ಪ್ರಕಾರ ಇದು ಕರ್ನಾಟಕದ ನಂ.೧ ಪತ್ರಿಕೆ. ಕನ್ನಡಿಗರಿಗೆ ನಿಜವಾಗಿಯೂ ಇಂತಹ ಪತ್ರಿಕೆಯೊಂದರ ಅವಶ್ಯಕತೆಯಿತ್ತು. ಇತರ ಕನ್ನಡ ಪತ್ರಿಕೆಗಳಂತೂ ನಮ್ಮದೇ ಆದ ಚೌಕಟ್ಟನ್ನು ಹಾಕಿ ಕೊಂಡು ಅದರ ಮಿತಿಯೊಳಗೆ ಬರೆಯುತ್ತಿವೆ. ಏನೇ ಅನ್ಯಾಯ ನಡೆಯುತ್ತಿದ್ದರೂ ಅದನ್ನು ಖಂಡಿಸುವ ಧೈರ್ಯವೂ ಇಲ್ಲದೆ ಒಂದು ವರದಿಯನ್ನು ಹಾಕಿ…