ಎಲ್ಲ ಪುಟಗಳು

ಲೇಖಕರು: sindhu
ವಿಧ: ಬ್ಲಾಗ್ ಬರಹ
June 25, 2007
ಎಲ್ಲ ಅಂಗಡಿಗಳು ಬಾಗಿಲು ಹಾಕುತ್ತಿವೆ. ಆಲ್ಲಿಂದ ಮೆಜೆಸ್ಟಿಕ್ಕಿಗೆ ಹೊರಡುವ ಕೊನೆಯ ಬಸ್ಸಿಗೆ, ರಾತ್ರಿ ಊರಿಗೆ ಹೊರಟ ಜನರೆಲ್ಲ ದೀಪದ ಕೆಳಗೆ ನಿಂತು ಕಾಯುತ್ತಿದ್ದಾರೆ. ಸೊಪ್ಪು ಮಾರುವ ಹೆಂಗಸು, ಉಳಿದ ಕೊತ್ತಂಬರಿ ಕಟ್ಟನ್ನು ಬಾಳೆಯೆಲೆಯಲ್ಲಿ ಜೋಪಾನವಾಗಿ ಸುತ್ತಿಟ್ಟು, ಉಳಿದ ಸೊಪ್ಪನ್ನ ಹಾಗೆ ಒದ್ದೆಯ ಗೊಣಿಬಟ್ಟೆಯಲ್ಲಿ ಮುಚ್ಚಿ ಮಂಕರಿಗೆ ತುಂಬಿ, ನೋಟು ಚಿಲ್ಲರೆಗಳನ್ನು ಎಣಿಸಿ, ತನ್ನ ಪುಟ್ಟ ಪರ್ಸಿಗೆ ತುಂಬಿ, ಮತ್ತೊಂದ್ಸಲ ಆ ಜಾಗವನ್ನೆಲ್ಲ ನೋಡಿ, ಮನೆಗೆ ಹೊರಟಿದ್ದಾಳೆ. ತಳ್ಳು ಗಾಡಿಯ…
ಲೇಖಕರು: srinivasc
ವಿಧ: ಬ್ಲಾಗ್ ಬರಹ
June 25, 2007
ಭಿಕ್ಷುಕರು ಸಣ್ಣಕತೆ ಸಂಚಾರಿ ಪೊಲೀಸರ (ಟೈಗರ್) ವ್ಯಾನ್ ಮುಂದೆ ಹೋದ ಕೂಡಲೇ ಅದರ ಹಿಂದೆ ಸಾಲು ಸಲಾಗಿ `ಬೌ ಬೌ ಬೌ ಬೌ' ಎಂದು ಒಂದು ಗುಂಪಲ್ಲಿ ಹತ್ತು ಹದಿನೈದು ನಾಯಿಗಳು ಓಡಿದವು. ನಿಧಾನಕ್ಕೆ ಹೋಗುತ್ತಿದ್ದ ವ್ಯಾನು ನಾಯಿಗಳನ್ನು ಕಂಡು ಹೆದರು ಓಡುವ ಕಳ್ಳರ ಹಾಗೆ ತನ್ನ ವೇಗವನ್ನು `ಸರ್ರ್ ರ್ರ್ ರ್ರ್' ಎಂದು ಜೋರಾಗಿ ಮುಂದೋಡಿತು. ಎಷ್ಟೋ ದಿವಸ ನಕ್ಕದವನಂತೆ ನಾನು ಜೋರಾಗಿ ನಕ್ಕುಬಿಟ್ಟೆ. ನನ್ನೆದುರು ಕೂತಿದ್ದ ಸ್ನೇಹಿತ ದರ್ಶನ್ ಯಾರದ್ದೋ ಜೊತೆ ಮೊಬೈಲಿನಲ್ಲಿ ಹರಟುತ್ತಿದ್ದವ ನನ್ನ ನಗೆಗೆ…
ಲೇಖಕರು: srinivasc
ವಿಧ: ಬ್ಲಾಗ್ ಬರಹ
June 25, 2007
ಕನಸುಗಳು ನಿನ್ನ ಪಾದಗಳ ಅಡಿ ನನ್ನ ಕನಸುಗಳ ಚೆಲ್ಲಿರುವೆ ಮೃದುವಾಗಿ ನಡೆ ಎಚ್ಚರವಾದೀತು. ಹಗಲುಗನಸಲ್ಲವಿದು ಗೆಳತಿ ಮೃದುವಾದ ಮನಸ್ಸು ನನ್ನ ಮನಕೆ ನೀನೇ ಒಡತಿ ಇದು ಆಗಲಿ ನನಸು ಭಾರದ ಹೆಜ್ಜೆ ಇಡಬೇಡ ನೋವು ಆದೀತು ನೀನು ಎಷ್ಟೇ ದೂರವಿದ್ದರು ಆಗಸದಿಂದ ನೋಡುವೆನೇ ಸಂತಸದಿ ಇರು ನೀನು ಎಂದು ದೇವರ ಬೇಡುವೆನೇ ಕನಸಿನ ಮೇಲೆ ಓಡಬೇಡ ನಿಂತು ಹೋದೀತು
ಲೇಖಕರು: ritershivaram
ವಿಧ: ಬ್ಲಾಗ್ ಬರಹ
June 25, 2007
ಲೈಂಗಿಕ ಶಿಕ್ಷಣ ನೀಡಬೇಕೆ ಬೇಡವೇ ಎಂಬುದರ ಬಗ್ಗೆ ರಾಜ್ಯದಲ್ಲಿ ಚರ್ಚೆ ನಡೆಯುತ್ತಿದೆ.   ಇದು ಕೇವಲ ಚರ್ಚೆಯಲ್ಲೆ ಮುಕ್ತಾಯವಾಗಬಾರದು. ಎಫ್ ಪಿಎಐ ಲೈಂಗಿಕ ಶಿಕ್ಷಣ ನೀಡಲು ಮುಂದೆ ಬಂದಿರುವಾಗ ತತ್ ಕ್ಷಣ ಜಾರಿಗೊಳಿಸಲು ಪೂರಕ ವಾತಾವರಣ ವಿರುವಾಗ ಎಲ್ಲ ತಜ್ಞರು ಮತ್ತು ಸಮಾಜಸೇವಾಸಕ್ತರೊಂದಿಗೆ ಸರ್ಕಾರ ಕೂಡಲೇ ಕಾರ್ಯ ಪ್ರವೃತ್ತ ವಾಗುವುದು ಸೂಕ್ತವೆನಿಸುತ್ತದೆ. ಅಲ್ಲದೇ,ಇಂದಿನ ಪರಿಸರದಲ್ಲಿ ವಿದ್ಯಮಾನಗಳನ್ನು ನೋಡುತ್ತಿದ್ದರೆ ಲೈಂಗಿಕೆ ಶಿಕ್ಷಣವೇ ಬೇಡ ಎಂಬ ವಾದ ಖಂಡಿತ ಸರಿಯಲ್ಲ. ಈ…
ಲೇಖಕರು: koumodiki
ವಿಧ: Basic page
June 25, 2007
ಕನ್ನಡದಲ್ಲಿ ಇದುವರೆಗೆ ಯಾರು ಮಡದ ಕೆಲಸವನ್ನು ಅಮೆರಿಕದ ಶ್ರಿ ರಾಮಾನುಜ ಮಿಶನ್ ಮಾಡಿದೆ. ನಮ್ಮ ದೇಶದ ದಾರ್ಶನಿಕರಲ್ಲಿ ಒಬ್ಬರಾದ ಶ್ರಿ ರಾಮಾನುಜಾಚಾರ್ಯರ ಜೀವನವನ್ನಾದರಿಸಿದ ಚಿತ್ರ ನಿರ್ಮಿಸಿದ್ದರೆ. ಇದರಲ್ಲಿ ಆಚಾರ್ಯರ ಜೀವನ ಹಾಗು ಅವರ ಸಿದ್ದಾಂತಗಳನ್ನು ಎಲ್ಲರಿಗು ಅರ್ಥವಾಗುವಂತೆ ಪ್ರಸ್ತುತ ಪಡಿಸಿದ್ದರೆ. ಆಚಾರ್ಯ ೧೨೦ ವರ್ಷಗಳ ಸುಧೀರ್ಗ ಜೀವನದ ಮುಖ್ಯ ಘಟ್ಟಗಳನ್ನು ಇಲ್ಲಿ ತೋರಿಸಲಾಗಿದೆ. ಇದನ್ನು ತಯಾರಿಸಿದವರು ಬೆಂಗಳೂರಿನ mediatech ಮತ್ತು ನಿರ್ದೇಶಿಸಿದವರು ಎಂ.ಆರ್.ಬಾಲಕೃಷ್ಣ…
ಲೇಖಕರು: Vasanth Kaje
ವಿಧ: ಬ್ಲಾಗ್ ಬರಹ
June 24, 2007
ಸೂರ್ಯಾಸ್ತದ ಚಿತ್ರಗಳನ್ನು ಎಷ್ಟು ತೆಗೆದರೂ creative ಸಾಧ್ಯತೆಗಳು ಬಾಕಿ ಉಳಿಯುತ್ತವೆ. ಅದಕ್ಕೆ ನಾನು ಟೈಟಲ್ ನಲ್ಲಿ ಮತ್ತದೇ ಅನನ್ಯ ಸೂರ್ಯಾಸ್ತ ಎಂಬ oxymoron ಉಪಯೋಗಿಸಿದ್ದೇನೆ :) ವಂದನೆಗಳು,  ವಸಂತ್ ಕಜೆ
ಲೇಖಕರು: cmariejoseph
ವಿಧ: Basic page
June 24, 2007
ಯೇಸುಕ್ರಿಸ್ತನನ್ನು ತೋಳಲ್ಲಿ ಹಿಡಿದ ವಾತ್ಸಲ್ಯಮಯಿ ತಾಯಿಯಾಗಿ ಕಂಡುಬರುತ್ತಾಳೆ ಚಿತ್ರಕಲ್ಲುಮಾತೆ ಅರ್ಥಾತ್ ಮರಿಯಾಮಾತೆ. ಬಿದಿಗೆ ಚಂದ್ರನ ಮೇಲೆ ವಿರಾಜಮಾನರಾಗಿರುವ ಮರಿಯಾಮಾತೆಯು ನಿರಾಭರಣಳಾಗಿ ನಿರ್ಮಲವದನಳಾಗಿ ಕಂಗೊಳಿಸುತ್ತಿದ್ದಾಳೆ. ಅವಳ ಒಂದು ಕೈಯಲ್ಲಿ ಪುಟ್ಟಬಾಲಕ ಯೇಸು ಕುಳಿತು ಹಸನ್ಮುಖನಾಗಿ ನೋಡುತ್ತಿದ್ದಾನೆ. ಮರಿಯಳ ಮೊಗದಲ್ಲಿ ವಾತ್ಸಲ್ಯ ದಯಾರ್ದ್ರತೆಗಳು ಎದ್ದುಕಾಣುತ್ತವೆ. ಹೈದರಾಲಿಯ ಸೇನೆಯಲ್ಲಿದ್ದ ಕ್ರೈಸ್ತ ತುಕಡಿಯೊಂದರ ದೈವವಾಗಿದ್ದ ಈ ಎರಡು ಅಡಿ ಎತ್ತರದ ಮರಿಯಾ ಮಾತೆಯ…
ಲೇಖಕರು: D.S.NAGABHUSHANA
ವಿಧ: ಬ್ಲಾಗ್ ಬರಹ
June 24, 2007
ಬಜೆಟ್ ಬೂಟಾಟಿಕೆ ಹಿರಿಯ ಗಾಂಧಿವಾದಿ ಅರ್ಥಶಾಸ್ತ್ರಜ್ಞ ಎಲ್.ಸಿ.ಜೈನ್ ಅವರ ವಿರುದ್ಧ ಮಾನ ನಷ್ಟ ಮೊಕದ್ದಮೆ ಹೂಡುವುದಾಗಿ ನಮ್ಮ ಉಪಮುಖ್ಯಮಂತ್ರಿ ಯಡಿಯೂರಪ್ಪ ಗುಟುರು ಹಾಕಿದ್ದಾರೆ. ಇಂತಹವರಿಗೆ ಒಮ್ಮೆ ಶಿಕ್ಷೆಯಾದರೆ, ಅದು ಇನ್ನು ಮುಂದೆ ಆಧಾರರಹಿತ ಮಾತುಗಳನ್ನಾಡುವವರಿಗೆ ಎಚ್ಚರಿಕೆಯಾಗುತ್ತದೆ ಎಂದಿದ್ದಾರೆ ಅವರು. ಆದರೆ ಆಧಾರರಹಿತ ಬಜೆಟ್ ಮಂಡಿಸುವವರಿಗೆ ಏನು ಶಿಕ್ಷೆ ಮತ್ತು ಎಚ್ಚರಿಕೆ ಎಂದು ಮಾತ್ರ ಅವರು ಹೇಳಿಲ್ಲ! ಜೈನ್ ಅವರು ಮಾಡಿರುವ ಅಪರಾಧವೆಂದರೆ, ಹೋದ ವರ್ಷದ ಬಜೆಟ್ಟಿನ ವಿವಿಧ…
ಲೇಖಕರು: D.S.NAGABHUSHANA
ವಿಧ: ಬ್ಲಾಗ್ ಬರಹ
June 24, 2007
ರಾಜ್ಕುಮಾರ್ ಎಂಬ ಪವಾಡ ಐವತ್ತು ವರ್ಷಗಳ ಹಿಂದೆ ಕನ್ನಡ ರಾಜ್ಯೋದಯವಾದಾಗ ಕನ್ನಡಿಗರು ಕಂಡ ಕನಸುಗಳು ಹಲವಾರು. ಹರಿದು ಹಂಚಿಹೋಗಿದ್ದ ಕನ್ನಡದ ಜನ ನೂರಾರು ವರ್ಷಗಳ ನಂತರ ಮತ್ತೆ ಒಂದಾದ ಸಂದರ್ಭದಲ್ಲಿ ಕನ್ನಡದ ಹೆಸರಿನಲ್ಲಿ ಹೊಸ ಉತ್ಸಾಹ ತಾಳಿದರು. ಏಕೆಂದರೆ, ಕನ್ನಡವೆಂಬುದು ಆಗ ಕೇವಲ ಒಂದು ಭಾಷೆಯ ಹೆಸರು ಮಾತ್ರವಾಗಿರದೆ ಅದು, ಸಾವಿರಾರು ವರ್ಷಗಳ ಒಂದು ಸಾಮಾನ್ಯ ಸಂಸ್ಕೃತಿಯ ಸ್ಮೃತಿಕೋಶದ ಹಕ್ಕುದಾರಿಕೆಯುಳ್ಳ ಒಂದು ಭಾಷಾ ಸಮುದಾಯ ಮತ್ತೆ ಹೊಸ ಉತ್ಸಾಹದೊಡನೆ ಒಟ್ಟಾಗಿ, ಕನ್ನಡ…
ಲೇಖಕರು: vbamaranath
ವಿಧ: ಬ್ಲಾಗ್ ಬರಹ
June 22, 2007
ಕನ್ನಡಕ್ಕಾಗಿಬೆವರು ಸುರಿಸಿದ ಹೊತ್ತು;ಪ್ರತಿಕ್ಷಣಸ್ವಾತಿ-ಮುತ್ತು; ನಾನು ನನ್ನದು ಅಹಂ ಕಳೆಯಲಿ; ನಾವು ನಮ್ಮದು ಭಾವ ಬೆಳೆಯಲಿ;ಒಂಟಿ ಸಲಗಎನ್ನಿಸದೆ;ಶ್ರಮಿಕರ ಗುಂಪಲ್ಲಿರಲಿನಿನ್ನೆದೆ; ನಿನಗಾಗಿ ನಿನ್ನೊಳಿತಿಗಾಗಿ ಮಾಡಿದ್ದು ಯಶವಲ್ಲಯ್ಯ; ಕನ್ನಡಕ್ಕಾಗಿ, ಜನತೆಗಾಗಿ ಮಾಡಿದ್ದು ಎಂದೆಂದೂ ಸಲ್ಲುವುದಯ್ಯ; (ಕೆಳಗಿನ ಚರ್ಚೆಯ ನಂತರ "ಸಲ್ಲ" ಪದದ ಬದಲಾಗಿ "ಸಲ್ಲುವುದಯ್ಯ" ಎಂದು ಬದಲಾಯಿಸಲಾಗಿದೆ) ಅನ್ಯರ ಮೊಗದಲ್ಲಿದೇವರ ಕಾಣ;ಸಹಾಯದ ಮುದ್ರೆಯಲ್ಲಿನಲಿವನ್ನು ಕಾಣ; ---…