ವಿಧ: ಬ್ಲಾಗ್ ಬರಹ
June 21, 2007
ಬೆಚ್ಚಗಿರಲೊಂದು ಗೂಡು,ನಚ್ಚಗಿರಲೊಂದು ಹಾಡು,ಕಣ್ತೆರೆದಾಗೊಂದು ಗಾನ,ಕಣ್ಮುಚ್ಚುವಾಗಿನ್ನೊಂದೇ ತಾನ,ನಡುವೆ ಅರಿವಿನ ಸೀಮೆಯಾಚೆಗಿನ ಯಾವುದೋ ತನನ;ನನ್ನ ತಲೆಯಾನಿಸಲೆಂದೇ ಹರವಿ ನಿಂತ ನಿನ್ನೆದೆ,ನನ್ನ ಹಿಡಿದಿಡಲೆಂದೇಬಳಸಿ ನಿಂದ ನಿನ್ನ ಭದ್ರಬಾಹು .....
ಉಹ್... ಇವೆಲ್ಲನಾನು ಕಂಡ ಕನಸಿನಸ್ಕೆಚ್ಚೇ ಹೌದುಈ ಚಂದದ ಗೆರೆಗಳಿಗೆಆ ರಾಡಿ ಬಣ್ಣಗಳನ್ನಎರಚಿದ್ಯಾರು..? ಯಾಕೆ..?
ಗೂಡಿಗೊಂದು ಬೀಗ,ಹಾಡಿಗೆ ಸೆಟ್ ಮಾಡಿಟ್ಟ ಫ್ರೀಕ್ವೆನ್ಸಿ,ರಾಗಗಳಿಗೆ ರಿಮೋಟು,ಮನಸಿನಂಗಳಕ್ಕೆ ಭದ್ರ ಬೇಲಿ,ಬಳಸಿನಿಂದ…
ವಿಧ: ಬ್ಲಾಗ್ ಬರಹ
June 21, 2007
ರೈತರ ಆತ್ಮಹತ್ಯೆ : ತುಕ್ಕು ಹಿಡಿದ ಚರ್ಚೆ
ರೈತರ ಆತ್ಮಹತ್ಯೆ ತಡೆಯಲು ರಾಜ್ಯ ಸರ್ಕಾರ ಅಧ್ಯಯನ ಸಮಿತಿಯೊಂದನ್ನು ರಚಿಸಿದೆ. ಅದು, ಹೋದ ವಾರ ಮುಖ್ಯಮಂತ್ರಿಗಳು ಕರೆದಿದ್ದ ರೈತರೊಡನೆಯ ಸಂವಾದ ಕಾರ್ಯಕ್ರಮದಲ್ಲಿ ವ್ಕಕ್ತವಾದ ಸಲಹೆ-ಸೂಚನೆಗಳ ಆಧಾರದ ಮೇಲೆ ಅದು ಪರಿಹಾರ ಸಾಧ್ಯತೆಗಳನ್ನು ಪರಿಶೀಲಿಸುವುದಂತೆ. ಆದರೆ, ಈ ಕಾರ್ಯಕ್ರಮದಲ್ಲಿ ವ್ಯಕ್ತವಾದ ಸಲಹೆ-ಸೂಚನೆಗಳು ಎಷ್ಟರ ಮಟ್ಟಿಗೆ ಹೊಸವು ಮತ್ತು ಈವರೆಗೆ ಪರಿಶೀಲನೆಗೆ ಒಳಗಾಗಿಲ್ಲದಂತಹವೇ ಎಂಬ ಪ್ರಶ್ನೆ ಇದ್ದೇ ಇದೆ. ಈ ದೃಷ್ಟಿಯಿಂದ ನೋಡಿದಾಗ…
ವಿಧ: ಬ್ಲಾಗ್ ಬರಹ
June 21, 2007
ಕಾರ್ಡಿಫ್ ನಲ್ಲಿ ಒಂದು ದೊಡ್ಡ ಅಲಂಕಾರಿಕ ಗೋಪುರವಿದೆ. ಅದರ ಮೇಲಿನಿಂದ ಒಂದು ತೆಳುವಾದ ಪರದೆಯಂತೆ ನೀರು ಕೆಳಕ್ಕೆ ಹರಿಯುತ್ತಾ ಇರುತ್ತದೆ. ತುಂಬಾ ಸುಂದರವಾದ ವಿನ್ಯಾಸವನ್ನು ಇದು ಸೃಷ್ಟಿ ಮಾಡುತ್ತದೆ. ಅದರ ಎದುರು ನಿಂತುಕೊಂಡಷ್ಟೆ ಫೊಟೊ ತೆಗೆದರೆ ಮಬ್ಬಿಗೂ, ಸ್ಪಷ್ಟತೆಗೂ ವ್ಯತ್ಯಾಸವೇ ತಿಳಿಯದೆಂದು ನನ್ನ ಕೈಯಿಂದ ಗೋಪುರವನ್ನು ಮುಟ್ಟಿ ಚಿತ್ರ ತೆಗೆದೆ.
ಗೋಪುರದ ಚಿತ್ರ ಇಲ್ಲಿದೆ..
ವಂದನೆಗಳು,
ವಸಂತ್ ಕಜೆ.
ವಿಧ: ಚರ್ಚೆಯ ವಿಷಯ
June 20, 2007
ಉದಯವಾಣಿ
ಕಾರವಾರದ ಸಮೀಪ ಗೋವದ ಗಡಿಯ ಹಳ್ಳಿಗೆ ವರ್ಗವಾಗಿ ಬಂದ ಮೇಷ್ಟ್ರು ಅಲ್ಲಿನ ಜನರ ಕೊಂಕಣಿ ಮತನಾಡುವುದು ಕೇಳಿ ಸುಸ್ತಾಗುತ್ತಾರೆ. ಹೇಳಿ ಕೇಳಿ ಅವರದ್ದು ಬಯಲುಸೀಮೆ.
"ದುಂಡಗೆ ಬರೀರಿ" ಅಂತ ಮಕ್ಕಳಿಗೆ ಹೇಳಿದಾಗ ಮುಸಿಮುಸಿ ನಗು.
ತನ್ನ ಉಡುಗೆ ಸರಿಯಿಲ್ವೋ ಅಂತ ಮೇಷ್ಟ್ರಿಗೆ ಡೌಟು.
ಕೊಂಕಣಿಯಲ್ಲಿ ಮಕ್ಕಳಿಗೆ ಕಲಿಸಿದ್ದಕ್ಕೆ ಟೀಚರಮ್ಮನನ್ನು ಆಕ್ಷೇಪಿಸಿದರೆ, ಮೇಷ್ಟ್ರಿಗೆ ಭಾಷಾ ಅಸಹನೆ ಅಂತ ಟೀಚರಮ್ಮನಿಗೆ ಅಸಮಾಧಾನ.
ಓದಿ
ವಿಧ: ಚರ್ಚೆಯ ವಿಷಯ
June 20, 2007
ಇ೦ದು ಜಾತ್ಯಾತೀತವಾದವೆ೦ದರೆ ಹಿ೦ದೂ ದರ್ಮಕ್ಕೊ೦ದಿಷ್ಟು ಕೆಸರು ರಾಚುವುದಕ್ಕೆ ಸೀಮಿತವಾಗಿದೆ. ಇ೦ದು ನಮ್ಮ ಬುದ್ದಿ ಜೀವಿ ಸಮುದಾಯಕ್ಕೆ selective amnesia ಬ೦ದೊದಗಿದೆ. ರಾಜಕಾರಣಿಗಳಲ್ಲದಿದ್ದರೂ ರಾಜಕಾರಣಿಗಳ ಹಾಗೆ ನಮ್ಮ ಇತಿಹಾಸಕಾರರೂ ಹಾಗೂ ನಮ್ಮ ಪ್ರಗತಿಪರ ಚಿ೦ತಕರುಗಳು ಜಾತ್ಯಾತೀತ ಪದಕ್ಕೆ ಬಾರತದಲ್ಲಿ ಹೊಸ ಅರ್ಥವನ್ನ ನೀಡಿದ್ದಾರೆ. ಬಹಳ ಮ೦ದಿ ಈಗಿನ ಯುವಕರುಗಳು ಬೂತಕಾಲದ ಕೆಲವು ಕಹಿ ಘಟನೆಗಳನ್ನ ಮರೆತು ಭವಿಷ್ಯದತ್ತ ಚಿ೦ತಿಸಲು ಬಿಡುತ್ತಿಲ್ಲ. ಈ ವಿಷಯದಲ್ಲಿ ರಾಜಕಾರಣಿಗಳ ಬಗ್ಗೆ…
ವಿಧ: ಬ್ಲಾಗ್ ಬರಹ
June 20, 2007
ಮೊದಲು ಸುನಿಲ ಮತ್ತು ರೋಹಿತರಿಗೆ ನನ್ನಿ. ಹಿಂದೊಮ್ಮೆ ಇಲ್ಲಿ ರೋಹಿತರು ಡಿ.ಎಲ್.ಐ.ನಿಂದ ಹೊತ್ತಿಗೆ ಇಳಿಸಿಕೊಳ್ಳಲು executable jar ಒಂದನ್ನು ನೀಡಿದ್ದರು. ನಾನು ಅದೇ jar ಅನ್ನು ಬಳಸಿಕೊಂಡು applet ಒಂದನ್ನು ಬರೆದಿದ್ದೇನೆ. ಇದನ್ನು ಮೊದಲುಮಾಡುವ ಮೊದಲು ನಿಮ್ಮ PC ಲಿ ಜಾವಾ ಇರಬೇಕು. ಇಲ್ಲವಾದಲ್ಲಿ ಇಲ್ಲಿಂದ ಪಡೆದುಕೊಳ್ಳಿ.
https://sdlc3b.sun.com/ECom/EComActionServlet;jsessionid=77F69C45C5A886DE7023A52B431EFE6B
ಆಮೇಲೆ ಈ ಕೊಂಡಿಯನ್ನು ಕ್ಲಿಕ್ಕಿರಿ.
http://www…
ವಿಧ: ಬ್ಲಾಗ್ ಬರಹ
June 20, 2007
ಸುಮಾರು ವರ್ಷಗಳಿಂದ ನಾನಿರುವ ಅಮೇರಿಕದಲ್ಲಿ ಎನ್.ಅರ್.ಐ. ಲೇಖಕರು ಸೃಷ್ಟಿಸುತ್ತಿರುವ ಕನ್ನಡ ಲೇಖನಗಳನ್ನು ಓದುತ್ತಾ ಬಂದಿದ್ದೇನೆ. ಈ ನಡುವೆ ಕಥಾಸಂಕಲನಗಳು, ಮುಂತಾದವು ಪುಸ್ತಕ ರೂಪದಲ್ಲಿ ಪ್ರಕಟಗೊಳ್ಳುವುದು, ಅದಕ್ಕೆ ಭಾರತದಿಂದ ಬಂದ ಕವಿಗಳು/ಕಥೆಗಾರರು ಮುನ್ನುಡಿ ಬರೆದು, ಪುಸ್ತಕ ಬಿಡುಗಡೆ ಮಾಡಿ, ಶುಭಹಾರೈಸಿ ಹೋಗುವುದು ನಡೆಯುತ್ತಲೇ ಇದೆ. ಇವೆಲ್ಲ ಈ ಲೇಖಕರು ತಾವೇ ಸ್ವಂತ ಖರ್ಚು ಹಾಕಿ ಪ್ರಕಟಿಸಿರುವ ಪುಸ್ತಕಗಳು. ಹಾಗಿದ್ದ ಮೇಲೆ, ಇದರ ಗುಣಮಟ್ಟ ಎಂತಹದ್ದಿರಬಹುದು ಎಂಬ ಪ್ರಶ್ನೆ…
ವಿಧ: Basic page
June 19, 2007
ಬಾಳ ಜೋಡಿ
ಬಾಳ ಮುಂಜಾನೆಯು ಚೆನ್ನಾಯ್ತು-ನಲಿದಾಯ್ತು
ನೆತ್ತಿಯ ಮೇಲಿನ ರವಿಯ ಹೊತ್ತಾಯ್ತು
ನೀನೀಗ ಬಂದಿರುವೆ ನನ್ನ ಜೀವನದಲಿ
ನನ್ನೊಡನೆ ಬರಲೊಪ್ಪಿರುವೆ ಬಾಳಹಾದಿಯಲಿ
ದಾರಿಯಲಿ ಇಹುದು ಕಡಿದಾದ ಬೆಟ್ಟ
ನೀನಿರಲು ಹತ್ತುವುದು ಬಲು ಸುಲಭ! ಪುಟ್ಟ!
ನಾವ್ದಾಟಬಹುದು ನದಿಯು-ನದಿಯ ಸುಳಿಯು
ನೀನಿರಲು ಜೊತೆಯಲ್ಲಿ ಇರುವುದೇ ಸುಳಿಯ ಸುಳಿವು?
ಕ್ರಮಿಸಬಹುದೂ ಮುಂದೆ ಬಿಸಿ ಮರಳಗಾಡು
ನೀನಿರಲು ನನ್ನೊಡನೆ ಅದು ಕೋಗಿಲೆ ಹಾಡು
ಭೇದಿಸಬೇಕಾಗಬಹುದು ಕಾಡು-ಕೋಟೆ ದುರ್ಗಮ
ನಿನ್ನ ಕೈ ಹಿಡಿದಿರಲು, ನೀರ ಕುಡಿದಷ್ಟೇ…
ವಿಧ: ಚರ್ಚೆಯ ವಿಷಯ
June 19, 2007
ಏನು? ನಿಜ್ವಾ? ಅಮೆರಿಕದ ಪ್ರಥಮ ಪ್ರಜೆ ಬುಶ್ ಮತ್ತು ಪ್ರಥಮ ಮಹಿಳೆ ಅರ್ಥಾತ್ ಬುಶ್ ಪತ್ನಿ ಲಾರಾ ಮಾತಿನ ಮಧ್ಯೆ `ಮುಂಗಾರು ಮಳೆ 'ಯೇ? ಅವರು ಕನ್ನಡ ಚಿತ್ರನೋಡಿದ್ರಾ?ಕೂಡಲೇ ರುಚಿ ನೋಡಿ, ತಿಳಿ ಹಾಸ್ಯ ಬೆರೆತ ಸ್ಪೆಷಲ್ ವಿಚಿತ್ರಾನ್ನ-ಶ್ರೀವತ್ಸ ಜೋಶಿಯವರದ್ದು.
ನಿಜವಾಗ್ಲೂ ಡುಬ್ಯಾನಿಗೆ ಭಾರತದ ಬಗ್ಗೆ ಇಷ್ಟು ಗೊತ್ತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು!
ಮುಂಗಾರು ಮಳೆ ಅಮೆರಿಕಾದಲ್ಲೂ ಪ್ರದರ್ಷಿತವಾಗಿದೆಯಂತೆ. ಹಿಟ್ ಆಗಿದೆಯೋ ಗೊತ್ತಿಲ್ಲ.
ಶ್ವೇತಭವನದಲೀ...ಹೂವಿಗೆ ಬಣ್ಣತಂದವನೇ...ಒಲವೇ…
ವಿಧ: Basic page
June 19, 2007
ನೀನೆ ಆದಿ ನೀನೆ ಅಂತ್ಯ ನಮ್ಮ ಪಾಲಿಗೆ
ನೀನೆ ಶಕ್ತಿ ನೀನೆ ಯುಕ್ತಿ ನಮ್ಮ ಬಾಳಿಗೆ
ಆಸರೆ ನೀ ನಮಗೆ ನೀ ಕೈಬಿಟ್ಟರೆ ಸಾವೆಮಗೆ "ಪ"
ಯಾರು ತಾಯಿ ಯಾರು ತಂದೆ ನನ್ನ ಪಾಲಿಗೆ
ಬಾಳತುಂಬ ಬವಣೆ ಏಕೆ ನಮ್ಮ ಬಾಳಿಗೆ
ಯಾವ ತಪ್ಪಿಗೆ ಇಂತ ಶಿಕ್ಷೆಯು ನಮಗೆ "ನೀನೆ"
ಹಗಲು ರಾತ್ರಿ ಕಳೆವುದೇಗೆ
ಗಾಳಿ ಮಳೆಯ ಸಹಿಪುದೇಗೆ
ಅಲೆಯುತಿರುವೆ ದಾರಿ ಕಾಣದೆ "ನೀನೆ"
ಬಾಳತುಂಬ ಬವಣೆ ತುಂಬಿ
ನಾನು ನೊಂದಿಹೆ ಬಾಳಲಾರೆ
ಬದುಕಲಾರೆ ನೀನು ಬಾರದೆ ದಾರಿ ತೊರದೆ "ನೀನೆ"
ತಿನ್ನೊಅನ್ನ ಚಿನ್ನವಾಗಿ ಕಣ್ಣನೀರು…