ವಿಧ: ಬ್ಲಾಗ್ ಬರಹ
June 19, 2007
ಕೆ.ರಾಮದಾಸ್ ಮೈಸೂರಿನಲ್ಲಿ ಇಂದು ಬೆಳಿಗ್ಗೆ ನಿಧನರಾದರು. ವಿವರಗಳಿಗೆ ಕೆಳಗಿನ ಚುರಮುರಿ ಲಿಂಕ್ ನೋಡಿ.
http://churumuri.wordpress.com/2007/06/19/k-ramdas-rest-in-peace/
ಅಂತರಜಾಲದಲ್ಲಿ ಎಲ್ಲಾದರೂ ಕೆ.ರಾಮದಾಸ್ ಬಗ್ಗೆ ಹೆಚ್ಚಿನ ಮಾಹಿತಿ ಇದ್ದರೆ ತಿಳಿಸಿ.
ವಿಧ: ಬ್ಲಾಗ್ ಬರಹ
June 19, 2007
ಭಾರತದ ಸ್ವಾತಂತ್ರ್ಯ ಸಂಗ್ರಾಮದ ವಿಷಯವನ್ನು ಪ್ರಸ್ತಾಪಿಸುವಾಗಲೆಲ್ಲ ನಾವು ಮಾಡುವ ಹೆದ್ದಪ್ಪು ಎಂದರೆ ’ಸ್ವಾತಂತ್ರ್ಯ ಸಿಕ್ಕಿತು’ ಎಂದು ಹೇಳುವುದು. ನಾವು ತಿದ್ದಿಕೊಳ್ಳಲೇಬೇಕಾದ ಅಂಶ ಒಂದಿದೆ: ನಮಗೆ ಸ್ವಾತಂತ್ರ್ಯ ಸಿಕ್ಕಿದ್ದಲ್ಲ, ನಾವು ಸ್ವಾತಂತ್ರ್ಯವನ್ನು ಪಡೆದುಕೊಂಡೆವು.
ಹಾಗಾದರೆ ನಾವು ಸ್ವಾತಂತ್ರ್ಯ ಕಳೆದುಕೊಂಡದ್ದು ಯಾವಾಗ?
ಈ ಪ್ರಶ್ನೆಗೆ ಬಹುಪಾಲು ಜನರಿಂದ ನಮಗೆ ಸಿಗುವ ಉತ್ತರವು ಇತಿಹಾಸದ ಕಾಲಖಂಡದಲ್ಲಿ ಇಂದಿನಿಂದ ೧೫೦ ವರ್ಷಗಳನ್ನು ದಾಟಿ ಆಚೆ ಹೋಗಲಾರದು. [Jhansi…
ವಿಧ: ಬ್ಲಾಗ್ ಬರಹ
June 19, 2007
"ಅರ್ಚನ" ಅದು ನನ್ನ ಹೆಸರು. ಇನ್ನು ಅದರ ಪುರಾಣ ಅದೆಲ್ಲಿಂದ ಶುರು ಮಾಡಲಿ? ಶುರುವಿನಿಂದಲೇ ಶುರು ಮಾಡುತ್ತೇನೆ.
ನಮ್ಮಮ್ಮನ ಹೆಸರು ತಾರ ಅಂತ. ಅವರ ಹೆಸರು ಇಂಗ್ಲೀಷ್ ವರ್ಣಮಾಲೆಯ ಕೊನೆಯ ಅಕ್ಷರಗಳಲ್ಲಿ ಬರೋದ್ರಿಂದ ಅವ್ರಿಗೆ ರಗಳೆ. ರಗಳೆ ಯಾಕಪ್ಪ ಅಂದ್ರೆ ಸ್ಕೂಲು ಕಾಲೇಜುಗಳಲ್ಲಿ ಹೆಸರಿನ ಪಟ್ಟಿ ಇಂಗ್ಲೀಷ್ ವರ್ಣಮಾಲೆಯ ಪ್ರಕಾರ ಇರೋದ್ರಿಂದ ಹಾಜರಿ ಕರೀಬೇಕಾದ್ರೆ ನಮ್ಮಮ್ಮನ ಹೆಸರು ಕೊನೆಗೆ. ಪರೀಕ್ಷೆಗೆ ಬರೀಬೇಕಾದ್ರೆ ಕೂತುಕೊಳ್ಳಬೇಕಾದ್ದು ಕೊನೆಗೆ. ಡೆಸ್ಕುಗಳ ಬೆಂಚುಗಳ ಅವಸ್ಥೆ…
ವಿಧ: ಬ್ಲಾಗ್ ಬರಹ
June 19, 2007
ನನ್ನ ತಂದೆ ಸತ್ತಾಗ ನನಗೆ ೬ ವರ್ಷ. ಆಕಸ್ಮಿಕವಾಗಿ ಹೃದಯಾಘಾತವಾಗಿ ಒಂದು ಭಾನುವಾರ ಸಾಯಂಕಾಲ ನಮ್ಮನ್ನು ಅಗಲಿದರು. ಅವರು ಎದೆನೋವು ಎಂದೊಡನೆ ನನ್ನ ಅಕ್ಕಂದಿರು ಪಕ್ಕದಲ್ಲಿದ್ದ ವೈದ್ಯರನ್ನು ಕರೆತರಲು ಓಡಿದರೆ, ನನ್ನ ಅಣ್ಣಂದಿರು ಔಷಧಿ ತರಲು ನಡೆದರು. ಹೀಗಾಗಿ ನನ್ನ ತಂದೆಯ ಕೊನೆಯುಸಿರು ನೋಡಿದ್ದು ನಾನು ಮತ್ತು ನನ್ನ ತಾಯಿ ಇಬ್ಬರೇ. ನನ್ನ ತಾಯಿ ಅವರ ಬಾಯೊಳಗೆ ಸುರಿದ ಗಂಗಾಜಲ ನೊರೆ ನೊರೆಯಾಗಿ ಆಚೆ ಇಳಿದಿದ್ದು ನನಗಿನ್ನೂ ಕಣ್ಣಿಗೆ ಕಟ್ಟಿದಂತಿದೆ. ಅಪ್ಪನನ್ನು ಚಟ್ಟಕ್ಕೆ ಬಿಗಿದು, ಅವರ…
ವಿಧ: ಚರ್ಚೆಯ ವಿಷಯ
June 18, 2007
radiation ಗೆ ವಿಕಿರಣ ಸರಿಯಾದ ಪದವೆ?
ವಿಕಿರಣ ಅಂದ್ರೆ ವಿಶೇಶ ಕಿರಣ? ....ಅಂದ್ರೆ ಇಂಗ್ಲಿಸಿನಲ್ಲಿ ಅದು special rays ಅಂತ ಆಗಬೇಕಿತ್ತು.
[ಇದು ಕರ್ನಾಟಕ ಸರಕಾರದ ಹತ್ತನೆ ಇಯತ್ತೆಗೆ(standard) ಇರುವ ವಿಗ್ನಾನ( ಡಿ.ಎನ್.ಶಂಕರಬಟ್ಟರು ಹೇಳಿರುವ ಹಾಗೆ ಕನ್ನಡಿಗರು ಉಚ್ಚರಿಸುವುದು ಹೀಗೆ..ವಿಙ್ಞಾನ ಅಲ್ಲ) ಓದುವ ಹೊತ್ತಗೆಯಲ್ಲಿ ಹೀಗೆ ಹೇಳಲಾಗಿದೆ]
radiation ಅಂದ್ರೆ ಕನ್ನಡದಲ್ಲಿ ' ಹೊರ ಹೊಮ್ಮುವುದು' ಸರಿಯಾದ ಪದ ಅಂತ ನನಗನ್ನಿಸಿದ್ದು.
radiation ಗೆ ಇಂಗ್ಲಿಸಿನಲ್ಲಿ ಇರುವ ಪದ…
ವಿಧ: ಚರ್ಚೆಯ ವಿಷಯ
June 18, 2007
ಮದುವೆ ಮಂಟಪಗಳ ಸಂಖ್ಯೆ ಹೆಚ್ಚಿದಷ್ಟೂ ಗೊಂದಲ ಉಂಟಾಗುವುದು ಸಹಜ. ಮದುವೆಗೆ ಬಂದವರು ತಪ್ಪಾಗಿ ಬೇರೊಂದು ಛತ್ರದೊಳಕ್ಕೆ ಹೋಗುತ್ತಾರೆಂದರೆ ಈ ಗೊಂದಲವೇ ಕಾರಣ. ಅದಕ್ಕೇ ಈಗೀಗ ಮದುವೆ ಮಂಟಪದ ಮುಂದೆಯೇ ದೊಡ್ಡದಾಗಿ ವಧು ವರರ ಹೆಸರನ್ನು ಪ್ರದರ್ಶಿಸಿರುತ್ತಾರೆ. ಬಣ್ಣದ ದೀಪಗಳಿಂದ ಹಿಡಿದು ಹೂಗಳ ಅಲಂಕಾರದವರೆಗೆ ಈ ಹೆಸರುಗಳು ಬಹು ಸುಂದರವಾಗಿ ರಾರಾಜಿಸುತ್ತವೆ. ರಾಜ ವೆಡ್ಸ್ ರಾಣಿ ಅಥವಾ ರಾಜ ವಿತ್ ರಾಣಿ ಎಂದೇ ಇಂಗ್ಲಿಷ್‌ನಲ್ಲಿ ಮಿಂಚುವ ಈ ಪದಗಳು ಕನ್ನಡದಲ್ಲಿ ಏಕಿರಬಾರದು? ಬೆಂಗಳೂರಿನಲ್ಲಿ…
ವಿಧ: ಚರ್ಚೆಯ ವಿಷಯ
June 18, 2007
ಈ ವಿಷಯದ ಮೇಲೆ ಉತ್ತರ ಅಮೆರಿಕಾದ ಮೇರಿಲ್ಯಾಂಡ್ ಕನ್ನಡಿಗರ ಕುಟೀರ ಭೂಮಿಕಾ ವೇದಿಕೆಯಲಿ "ವಿಚಿತ್ರಾನ್ನ" ಖ್ಯಾತಿಯ ಶ್ರೀವತ್ಸ ಜೋಷಿ ವಿಚಾರ ಮಂಡಿಸಿದರಂತೆ. ಅದರ ವರದಿ ಶಾಂತಲಾ ದಾಮ್ಲೆ ಅವರದ್ದು.
http://thatskannada.oneindia.in/nri/article/180607science_bhoomika.html
ಸ್ನಾತಕೋತ್ತರ ಮಟ್ಟದ ಗಂಭೀರ ವಿಜ್ಞಾನವನ್ನೆಲ್ಲಾ ಕನ್ನಡದಲ್ಲಿ ಅನುವಾದ ಮಾಡುವುದರಲ್ಲಿ ಹೆಚ್ಚು ಪ್ರಯೋಜನವಿಲ್ಲ. ಆದರೆ, ಜನಪ್ರಿಯ ವಿಜ್ಞಾನ ಸಾಹಿತ್ಯ ಜನಸಾಮಾನ್ಯರಲ್ಲಿ, ಅದರಲ್ಲೂ ನಗರದಿಂದಾಚೆಯಿರುವ ಕನ್ನಡ…
ವಿಧ: ಚರ್ಚೆಯ ವಿಷಯ
June 18, 2007
ಜೈ ಭಾರತ ಜನನಿಯ ತನು- ಜಾತೆ - ಯಲ್ಲಿ 'ಕಬ್ಬಿಗರುದಿಸಿದ ಮಂಗಳಧಾಮ, ಕವಿ ಕೋಗಿಲೆಗಳ ಪುಣ್ಯಾರಾಮ' ಅನ್ನುತ್ತಾರೆ ಕುವೆಂಪು. ಕಬ್ಬಿಗ ಅನ್ನುವ ಶಬ್ದದ ಅರ್ಥ ಕವಿ ಎಂದು ಆದಲ್ಲಿ , ಒಂದೇ ಅರ್ಥ ಬರುವ ಎರಡು ಶಬ್ದಗಳನ್ನು ಪಕ್ಕ ಪಕ್ಕ ಇಟ್ಟರೆ ಕುವೆಂಪು.. ? ಅಥವಾ ಕಬ್ಬಿಗ ಅಂದರೆ ಬೇರೆ ಅರ್ಥವಿದೆಯೆ...? ಬರಹ ನಿಘಂಟು ನಾನು ನೋಡಿ ಆಗಿದೆ, ಗೊತ್ತಿದ್ದವರಿಂದ ಸಮಾಧಾನಕ್ಕಾಗಿ ಕಾಯುತ್ತಿದ್ದೇನೆ.
( ಈ ವಿಷಯ ಚರ್ಚೆ ಆಗಬೇಕಾದರೆ | ಚರ್ಚೆಯಲ್ಲಿ ಸೇರಬೇಕಾದರೆ ನಾನು 75 ಶಬ್ದಗಳು ಸೇರಿಸಬೇಕು…
ವಿಧ: ಬ್ಲಾಗ್ ಬರಹ
June 18, 2007
ಅನಂತಮೂರ್ತಿಯವರಿಗೆ ಬೇಸರವಾಗಿದೆ. ಕೋಪವೂ ಬಂದಂತಿದೆ. ತಾವಿನ್ನು ಸಾರ್ವಜನಿಕವಾಗಿ ಸಾಹಿತ್ಯ ಚರ್ಚೆ ಮಾಡುವುದಿಲ್ಲವೆಂದು ಅವರು ಘೋಷಿಸಿದ್ದಾರೆ. ದಯವಿಟ್ಟು ಹಾಗೆ ಮಾಡಬೇಡಿ ಎಂದು ಅವರ ಶಿಷ್ಯರೂ ಅಭಿಮಾನಿಗಳೂ ಬೇಡಿಕೊಳ್ಳುತ್ತಿದ್ದಾರೆ. ಈ ರಾದ್ಧಾಂತಕ್ಕೆಲ್ಲ ಕಾರಣಗಳು: ಇತ್ತೀಚೆಗೆ ಬೆಂಗಳೂರಿನಲ್ಲಿ ಭೈರಪ್ಪನವರ 'ಆವರಣ' ಕೃತಿ ಕುರಿತು ಎನ್.ಎಸ್.ಶಂಕರ್ ಬರೆದಿರುವ 'ಆವರಣದ ಅನಾವರಣ' ಎಂಬ ಪುಸ್ತಕದ ಬಿಡುಗಡೆ ಸಂದರ್ಭದಲ್ಲಿ ಅವರಾಡಿದ ಮಾತುಗಳು ಪತ್ರಿಕೆಗಳಲ್ಲಿ ವರದಿಯಾಗಿರುವ ರೀತಿ ಹಾಗೂ ಇದನ್ನು…
ವಿಧ: ಬ್ಲಾಗ್ ಬರಹ
June 18, 2007
ಅನಂತಮೂರ್ತಿಯವರಿಗೆ ಬೇಸರವಾಗಿದೆ. ಕೋಪವೂ ಬಂದಂತಿದೆ. ತಾವಿನ್ನು ಸಾರ್ವಜನಿಕವಾಗಿ ಸಾಹಿತ್ಯ ಚರ್ಚೆ ಮಾಡುವುದಿಲ್ಲವೆಂದು ಅವರು ಘೋಷಿಸಿದ್ದಾರೆ. ದಯವಿಟ್ಟು ಹಾಗೆ ಮಾಡಬೇಡಿ ಎಂದು ಅವರ ಶಿಷ್ಯರೂ ಅಭಿಮಾನಿಗಳೂ ಬೇಡಿಕೊಳ್ಳುತ್ತಿದ್ದಾರೆ. ಈ ರಾದ್ಧಾಂತಕ್ಕೆಲ್ಲ ಕಾರಣಗಳು: ಇತ್ತೀಚೆಗೆ ಬೆಂಗಳೂರಿನಲ್ಲಿ ಭೈರಪ್ಪನವರ 'ಆವರಣ' ಕೃತಿ ಕುರಿತು ಎನ್.ಎಸ್.ಶಂಕರ್ ಬರೆದಿರುವ 'ಆವರಣದ ಅನಾವರಣ' ಎಂಬ ಪುಸ್ತಕದ ಬಿಡುಗಡೆ ಸಂದರ್ಭದಲ್ಲಿ ಅವರಾಡಿದ ಮಾತುಗಳು ಪತ್ರಿಕೆಗಳಲ್ಲಿ ವರದಿಯಾಗಿರುವ ರೀತಿ ಹಾಗೂ ಇದನ್ನು…