ಎಲ್ಲ ಪುಟಗಳು

ಲೇಖಕರು: hamsanandi
ವಿಧ: ಬ್ಲಾಗ್ ಬರಹ
June 16, 2007
ಕನ್ನಡ ನಾಡಿನ ಜೀವನದಿ ಕಾವೇರಿ. ಹಾಗೇ ಮುಂದೆ ಹೋಗಿ, ಅದು ತಮಿಳುನಾಡಿಗೂ ಜೀವನದಿಯಾಗಿ ಹರಿಯುತ್ತಾಳೆ. ನಮಗಾದರೂ, ಕಾವೇರಿ ಅಲ್ಲದೆ, ತುಂಗೆ, ಭದ್ರೆ, ಕೃಷ್ಣೆ, ಕಾಳಿಯರ ಕೃಪೆ ತಕ್ಕಮಟ್ಟಿಗಿದೆ. ಆದರೆ, ತಮಿಳುನಾಡಿನಲ್ಲಿ, ಕಾವೇರಿ(ಮತ್ತು ಅದಕ್ಕೆ ಸೇರುವ ಹೊಳೆಗಳನ್ನು ಬಿಟ್ಟು) ಬೇರೆ ಪ್ರಮುಖವಾದ ನದೀಜಾಲವಿಲ್ಲ. ಹಾಗಾಗಿ, ತಮಿಳರು ನಮ್ಮಂತೆಯೇ ಕಾವೇರಿಯನ್ನು ಬಹಳ ಗೌರವದಿಂದ ಕಾಣುತ್ತಾರೆ.  ಮೊದಲಿಗೆ ಒಂದು ವಿಷಯದ ಬಗ್ಗೆ ಹೇಳಿಬಿಡುತ್ತೇನೆ. ಇದು ಕಾವೇರಿ ಜಲವಿವಾದದ ಪ್ರಶ್ನೆಯ ಬಗ್ಗೆಯ ಬರಹವಲ್ಲ…
ಲೇಖಕರು: ವೈಭವ
ವಿಧ: ಚರ್ಚೆಯ ವಿಷಯ
June 16, 2007
ಟಿವಿ9 ನಲ್ಲಿ ಹೇಳಿದ್ರೂ 'ಶಾಂತಿನಿವಾಸ' ದ 'ಹಾಲು ಉಕ್ಕುಸೋದು' ಚೆನ್ನಾಗಿ ಆಯ್ತು ಅಂತ.... ಯಾರದರೂ ನೋಡಿದ್ರೆ ಸಿನೆಮಾ ಬಗ್ಗೆ ಅನಿಸಿಕೆಗಳನ್ನ ಹಂಚಿಕೊಳ್ಳಿ.
ಲೇಖಕರು: manjunathsinge
ವಿಧ: ಬ್ಲಾಗ್ ಬರಹ
June 16, 2007
ಕಥೆ ಕಾದಂಬರಿಗಳನ್ನು ಅಥವ ಇನ್ಯಾವುದೇ ಪುಸ್ತಕಗಳನ್ನು ಓದುತ್ತ ಓದುತ್ತ ಹೋದಂತೆ ಹೊಸ ಹೊಸ ಕಲ್ಪನೆಗಳು ನಮ್ಮನ್ನಾವರಿಸಿ ಬಿಡುತ್ತವೆ. ಕೆಲವೊಂದು ಭಾಗಗಳು ನಮ್ಮನ್ನು ಆನಂದದ ಅತ್ಯುನ್ನತ ಸ್ಥಿತಿಗೊಯ್ದರೆ ಕೆಲವೊಂದು ಭಾಗಗಳು ತುಂಬಾ ದುಃಖಕ್ಕೆ ಗುರಿಮಾಡಬಹುದು. ಓದುತ್ತ ಓದುತ್ತ ಹೋದಂತೆ, ಯಾವುದೋ ಒಂದು ಶಕ್ತಿ ಥಟ್ಟನೆ ಬಂದು, ಒಂದೊಂದು ಬಗೆಯ ಭಾವನೆಗಳನ್ನು ಮೂಡಿಸಿ, ಆಶ್ಚರ್ಯಚಕಿತರನ್ನಾಗಿ ಮಾಡಿ, ಮರುಕ್ಷಣವೇ ಮಾಯವಾಗಬಹುದು. ಯಾವುದೋ ಒಂದು ಮಾನಸಿಕ ಸ್ಥಿತಿಯಲ್ಲಿದ್ದಾಗ, ಯಾವುದೋ ಒಂದು ವಿಷಯ…
ಲೇಖಕರು: ವೈಭವ
ವಿಧ: ಚರ್ಚೆಯ ವಿಷಯ
June 15, 2007
ಪ್ರಜಾವಾಣಿ ಯಲ್ಲಿ ಪ್ರಕಟವಾಗಿದೆ. http://prajavani.net/Content/Jun152007/cinema2007061432731.asp ಪ್ರೆಂಚ್ ನವರಿಗೆ ಕನ್ನಡ ಸಿನಿಮಾ ಇರಲಿ ಕನ್ನಡ ನುಡಿಯ ಬಗ್ಗೆ ಗೊತ್ತಿರಲಿಲ್ಲವಂತೆ. ಆದರೆ ಬಂಗಾಲಿ ಮತ್ತು ಮಲೆಯಾಳದ ಬಗ್ಗೆ ಅವರಿಗೆ ಗೊತ್ತಿತ್ತಂತೆ. ಇತ್ತೀಚೆಗೆ ಕನ್ನಡ ಸಿನಿಮಾಗಳು ಚೆನ್ನಾಗಿ ಓಡ್ತಾ ಇವೆ... ಇನ್ನು ಚೆನ್ನಾಗಿ ಓಡ್ಲಿ...ನಾವೇನು ಮಾಡಬಹುದು ?
ಲೇಖಕರು: vbamaranath
ವಿಧ: ಬ್ಲಾಗ್ ಬರಹ
June 15, 2007
ನಾವು ಅಂತರ್ಮುಖಿ ಆಗಿರಬೇಕಾದ್ರೆ ಕೆಲವೊಂದು ಸಾರಿ ತಟ್ಟನೆ ಮನಸ್ಸಿಗೆ ನಾಟುತ್ತೆ, ನಾ ಏನು ಮಾಡ್ತಾ ಇದ್ದೀನಿ, ನಾ ಮಾಡ್ತಾ ಇರೋದು ಸರಿನಾ? ನನ್ನಲ್ಲಿರುವ ಲೋಪದೋಷಗಳು ಇವು, ನಾ ಇನ್ಮೇಲೆ ಹೀಗಿರಬೇಕು-ಹಾಗಿರಬೇಕು ಅಂತ ಸಾಕಷ್ಟು ಯೋಚನೆಗಳು ಬರುತ್ವೆ. ಆದರೆ ಹೊರಪ್ರಪಂಚಕ್ಕೆ ಮನ ಅಡಿಯಿಟ್ಟ ಮೇಲೆ ಮತ್ತೆ ಅದೇ ರಾಗ ಅದೇ ಹಾಡು. ನಾವು ಬಯಸಿದ್ದೆಲ್ಲ ಯಾವಾಗ್ಲು ಸಿಗಲ್ಲ, ಸಿಕ್ಕಿದ್ದರಲ್ಲೆ ತೃಪ್ತಿ ಪಡಬೇಕು ಅಂತ ಸಿಧ್ಧಾಂತಾನ್ನ ಎಲ್ಲರೂ ಹೇಳ್ತಾರೆ. ಆದರೆ ಎಷ್ಟೋ ಸಾರಿ ಪರಿಸ್ಥಿತಿಯ…
ಲೇಖಕರು: sindhu
ವಿಧ: ಬ್ಲಾಗ್ ಬರಹ
June 15, 2007
ಮಳೆಗಾಲದ ಶುರುವಿನ ಶನಿವಾರ ಮಧ್ಯಾಹ್ನ ಮನೆಯಲ್ಲೆಲ್ಲ ಮಲಗಿದ್ದರು. ಶಾಲೆಯ ರಜದ ಮಜಕ್ಕೆ ಪುಟ್ಟಿ ಒಬ್ಬಳೆ ಜಗುಲಿಯ ಮೂಲೆಯಲ್ಲಿ ಕೊಡೆ ಬಿಚ್ಚಿಟ್ಟು ಮನೆ ಮಾಡಿಕೊಂಡು ಅಡಿಗೆ ಆಟದ ಸಾಮಾನು ಹರಡಿ ಕೂತಿದ್ದಳು.ಅಮ್ಮೀ..ಅರೆ ನರಸಾ.. ಹಿ ಹ್ಹಿ ಹ್ಹಿ.. ಅಜ್ಜಯ್ಯ ಐದಾರಾ..? ನರಸ ಬಂದಾನೆ ಹೇಳ್ಬೇಕಲ್ರ ಅಮೀ.. ಪುಟ್ಟ ಅಮ್ಮಿ ಓಡುತ್ತಾಳೆ, ಒಳಗೆ ನಡುಮನೆಯ ಕತ್ತಲಗವಿಯ ಮೆತ್ತನೆ ತಲ್ಪದಲ್ಲಿ ಮಲಗಿರುವ ಅಜ್ಜನನ್ನ ಏಳಿಸಲಿಕ್ಕೆ.ಅಜ್ಜ ಮಲಗಿದ್ದಾನೆ, ಮಗ್ಗುಲಲ್ಲಿ ವಾರ್ತೆಗೆ ಹಚ್ಚಿದ್ದ ರೇಡಿಯೋ ಇನ್ನೂ…
ಲೇಖಕರು: cmariejoseph
ವಿಧ: Basic page
June 15, 2007
ಆನೆಗೊಂದಿ ಸಂಸ್ಥಾನಕ್ಕೆ ಸೇರಿದ ಬಾಡಬಂಕಾಪುರ ಕಾಗಿನೆಲೆ ಪ್ರದೇಶ (ಸುತ್ತಲ ಎಪ್ಪತ್ತೆಂಟು ಗ್ರಾಮಗಳು)ಕ್ಕೆ ನಾಡಗೌಡ ಅಥವಾ ದಣ್ಣಾಯಕನಾಗಿದ್ದ ಬೀರಪ್ಪ ವಿಜಯನಗರ ಸಾಮ್ರಾಜ್ಯದ ಸಾಮಂತನಾಗಿ ಅದರ ವಾಯುವ್ಯ ಗಡಿಯ ರಕ್ಷಣೆ ಮಾಡಿಕೊಂಡಿದ್ದ. ರಾಜನ ಧರ್ಮವೇ ಪ್ರಜೆಗಳ ಧರ್ಮವೆಂಬಂತೆ ತಾನೂ ವೈಷ್ಣವ ಧರ್ಮವನ್ನು ಆಚರಿಸುತ್ತಾ ತನ್ನ ಪತ್ನಿ ಬತ್ಯಮ್ಮನಿಗೆ ಜನಿಸಿದ ಮಗನಿಗೆ ತಿಮ್ಮಪ್ಪನೆಂದು ಹೆಸರಿಟ್ಟ. ಬೀರಪ್ಪನ ನಂತರ ಅವನ ಮಗ ತಿಮ್ಮಪ್ಪ ದಣ್ಣಾಯಕನಾದ. ಸಿಕ್ಕಿದ ನಿಧಿಯನ್ನು ಜನೋಪಯೋಗಕ್ಕೆ ಬಳಸಿದ್ದರಿಂದ…
ಲೇಖಕರು: cmariejoseph
ವಿಧ: Basic page
June 15, 2007
ನಾನು ಜಕ್ಕಾಯ. ಇದು ನನಗೆ ನನ್ನ ಅಪ್ಪ ಅಮ್ಮ ಇಟ್ಟ ಹೆಸರು. ಅಂದಹಾಗೇ ಗಜಕಾಯ, ದೃಢಕಾಯ, ವಜ್ರಕಾಯ ಮುಂತಾದ ಹೆಸರುಗಳನ್ನು ಕೇಳಿ ಕೇಳಿ ನೀವು ನನ್ನ "ಜಕ್ಕಾಯ" ಎಂಬ ಹೆಸರನ್ನು ಕೇಳಿದಾಗ ಹುಬ್ಬೇರಿಸುವುದು ಸಹಜ. ಜಕ್ಕಾಯ ಎಂಬುದು ಯೆಹೂದಿ ಭಾಷೆಯ ಪದ. ಯೆಹೂದಿ ಜನಾಂಗದ ಯೇಸುಕ್ರಿಸ್ತನ ಸಮಕಾಲೀನ ನಾನು. ಆ ದಿನಗಳಲ್ಲಿ ನಮ್ಮನ್ನಾಳುತ್ತಿದ್ದವರು ರೋಮನ್ ಚಕ್ರವರ್ತಿಗಳು. ಜಗತ್ತಿನ ರಾಜರುಗಳಲ್ಲಿ ಅತ್ಯಂತ ಸುಸಂಸ್ಕೃತ ಹಾಗೂ ಕುಲೀನರೆಂದರೆ ಈ ರೋಮನ್ ರಾಜರುಗಳೇ. ಏನು ಅವರ ಸಭ್ಯತೆ, ಶಿಷ್ಟಾಚಾರ! ಅಬ್ಬಾ…
ಲೇಖಕರು: cmariejoseph
ವಿಧ: Basic page
June 15, 2007
ಐರೋಪ್ಯನಾಡುಗಳಿಂದ ಆಗಮಿಸಿ ಅಂದು ಧರ್ಮಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ಮಿಷನರಿಗಳು ಪ್ರತಿವರ್ಷವೂ ತಮ್ಮ ಸಾಧನೆಗಳ ಕುರಿತಂತೆ ತಮ್ಮ ವರಿಷ್ಠರಿಗೆ ವಿಸ್ತೃತ ವರದಿಗಳನ್ನು ಕಳಿಸಬೇಕಾಗಿತ್ತು. ಆ ವರದಿಗಳು ಪ್ರಚಾರಕಾರ್ಯದ ಸಾಧ್ಯಾಸಾಧ್ಯತೆ, ಅದಕ್ಕಿರುವ ವಿಘ್ನಗಳು, ಅಂದಿನ ಸಾಮಾಜಿಕ ಪರಿಸ್ಥಿತಿ, ಸಮಕಾಲೀನ ರಾಜಾಳ್ವಿಕೆಗಳು, ಯುದ್ಧಗಳು, ಜನರ ಮನೋಭಾವ, ಜೀವನಶೈಲಿ, ಆಚಾರವಿಚಾರ, ಸಂಸ್ಕೃತಿ, ಅಂದಿನ ರಾಜರುಗಳ ಏಳುಬೀಳು ಹಾಗೂ ಅವರ ಬಲಾಬಲಗಳ ಬಗ್ಗೆ ನಿಷ್ಪಕ್ಷಪಾತವಾದ ಕನ್ನಡಿ ಹಿಡಿದಿವೆ.…
ಲೇಖಕರು: cmariejoseph
ವಿಧ: ಚರ್ಚೆಯ ವಿಷಯ
June 15, 2007
ಕಂಪ್ಯೂಟರಿನಲ್ಲಿರುವ ಇಂಗ್ಲಿಷ್ ಅಕ್ಷರಗಳಿಗೆ ASCII (American Standard Code for Infromation Interchange=ಮಾಹಿತಿ ವಿನಿಮಯಕ್ಕೆ ಅಮೆರಿಕದ ಮಾನಕ) ಅಳವಡಿಸಿರುವುದರಿಂದ ಒಂದು ಕಂಪ್ಯೂಟರಿನಲ್ಲಿ ಟೈಪಿಸಿದ ಮಾಹಿತಿಯನ್ನು ತೆಗೆದುಕೊಂಡು ಮತ್ತೊಂದು ಕಂಪ್ಯೂಟರಿನಲ್ಲಿ ತೆರೆದು ನೋಡಿದಾಗಲೂ ಅದೇ ಅಕ್ಷರಗಳನ್ನು ಕಾಣಬಹುದಾಗಿದೆ. ಆದರೆ ಕನ್ನಡ ಮುಂತಾದ ಭಾರತೀಯ ಭಾಷೆಗಳನ್ನು ಕಂಪ್ಯೂಟರಿನಲ್ಲಿ ಅಳವಡಿಸಲು ಹಲವರು ಪ್ರಯತ್ನಿಸಿರುವರಾದರೂ ASCII ಯನ್ನು ನಿಯಂತ್ರಿಸುವ ಸಂಸ್ಥೆಗೆ ತಮ್ಮ…