ವಿಧ: ಬ್ಲಾಗ್ ಬರಹ
December 14, 2006
ದುಡ್ಡು.
ದಡ್ಡ ಕಟುಕ ಅಂದ ಮಂದಿ
ದುಡ್ಡ ಹಿಂದೆ ಹಂದಿಯಂದಿ
ಕಾಂತಕಂಡ ಉಕ್ಕಿನಂದಿ
ಯಾವತ್ಜೀವವೆಲ್ಲ ಬಂಧಿ//
ದೊಡ್ಡ ನಿಪುಣ ಬೆಂದ ಮಂದಿ
ದುಡ್ಡತೊರೆದ ಗಾಂಧಿಯಂದಿ
ಕಾಂತಕಂಡ ಧರಣಿಯಂದಿ
ಶಿವನ ಹೊತ್ತ ಮಹಾನಂದಿ//
ಅಹೋರಾತ್ರ.
೧೪/೧೨/೦೬.
ವಿಧ: ಬ್ಲಾಗ್ ಬರಹ
December 14, 2006
ಮನೋಜವಂ ಮಾರುತತುಲ್ಯ ವೇಗಂ
ಜಿತೇದ್ರಿಯಾಂ ಬುದ್ದಿಮತಾಂ ವರಿಷ್ಟಂ
ವಾತಾದ್ಮಜಂ ವಾನರಯುತ ಮುಖ್ಯಂ
ಶ್ರಿರಾಮದೊತಂ ಶರಣಂ ಪ್ರಪಧ್ಯೆ
ಬುದ್ದಿರ್ಬಲಂ ಯಶೋಧ್ಯ್ರರ್ಯಂ
ನಿರ್ಭಯತ್ವಂ ಅರೋಗತ
ಅಜಾಡ್ಯಂ ವಾಕ್ಪಟತ್ವಂ
ಹನುಮಾತ್ ಸ್ಮರಣಾತ್ ಭವೇತ್
-------------------------------------------
ವಿ.ಸೊ: ದಯವಿಟ್ಟು ಲೋಪದೋಷಗಳನ್ನು ತಿದ್ದಬೇಕೆಂದು ವಿನಂತಿ.
ವಿಧ: ಬ್ಲಾಗ್ ಬರಹ
December 13, 2006
ಮಾತು ಕತೆಯ ಲಹರಿಯೊಂದು ಎಲ್ಲಿಂದಲೋ ಪ್ರಾರಂಭವಾಗಿ ಇನ್ನೆತ್ತಲೋ ಹರಿದು ಮತ್ತೆ ಕವಿತೆಯೊಂದರ ಸಾಲಿನೊಂದಿಗೆ ಸಂಗಮಿಸಿದ ಸ್ವಾರಸ್ಯವೊಂದು ಇಲ್ಲಿದೆ ನೋಡಿ. ಆರೋಗ್ಯಕರ ಮನಸ್ಸಿದ್ದರೆ ಸಾಕು ಮಾತನಾಡಲು ಇಂತಹುದೇ ವಿಷಯವೊಂದು ಬೇಕೆನ್ನುವ ರಗಳೆಯಿಲ್ಲ!
http://sampada.net/blog/tvsrinivas41/08/08/2005/139
ಅಂದ ಹಾಗೆ ತವಿಶ್ರೀನಿವಾಸರಾಯರ ಮನಸ್ಸು ಸ್ವಲ್ಪ ಚುರುಕಾಗಿದೆಯೋ ಈಗ? ಅವರ ಲೇಖನಗಳ ಸರಣಿಯು ನಿಂತು ತುಂಬಾ ದಿನಗಳಾಗಿವೆ.
ರಘುನಂದನ
ವಿಧ: ಬ್ಲಾಗ್ ಬರಹ
December 13, 2006
ನಮ್ಮ ಕಂಪನಿಲಿ ಕನ್ನಡ ರಜ್ಯೋತ್ಸವ ಮಾಡ್ದಾಗ T.N.ಸೀತಾರಾಮ್ ಹೀಗ್ ಹೇಳಿದ್ರು - "ಈ ಬಂಡವಾಳಶಾಹಿ ಕಾಲದಲ್ಲಿ ಎಲ್ಲವೂ ಮಾರಾಟದ್ ವಸ್ತು ಹಾಗ್ಬಿಟ್ಟಿದೆ. ಒಂದು ಚಿಕ್ಕ ಹುಡುಗಿ - My Daddy has the Big Car ! ಅಂತಾಳೆ. ಅಪ್ಪ ದೊಡ್ಡ ಕಾರ್ ತಗೊಳ್ಳೊ ಶಕ್ತಿ ಇದೆ ಅಂತ ಆತ ಒಳ್ಳೆ ಅಪ್ಪ ಅನ್ನುಸ್ಕೊತಾನೆ. ಮಮತೆ, ಪ್ರೀತಿ ಇವ್ನೆಲ್ಲಾ ಮಾರಾಟದ್ ವಸ್ತು ಮಾಡಿ ದಿನಾಗ್ಲು TV ಅಲ್ಲಿ ತೋರ್ಸಿ ತೋರ್ಸಿ, ಜನ ಈ ತರದ ಮಾಹಿತಿಯನ್ನೇ ಜ್ನಾನ ಅಂತ ತಿಳ್ಕೊಳಕ್ಕೆ Start ಮಾಡಿದಾರೆ. ಇದೊಂದು ದೊಡ್ಡ…
ವಿಧ: ಬ್ಲಾಗ್ ಬರಹ
December 13, 2006
http://jambuka.blogspot.com/
[:
http://kn.wikipedia.org/wiki/%E0%B2%9C%E0%B2%AE%E0%B2%96%E0%B2%82%E0%B2%A1%E0%B2%BF|ಜಮಖಂಡಿ]
From Wikipedia
Jump to: navigation, search
ಜಮಖಂಡಿ - ಬಾಗಲಕೋಟೆ ಜಿಲ್ಲೆಯ ಒಂದು ಪ್ರಮುಖ ತಾಲ್ಲೂಕು ಕೇಂದ್ರ. ಈ ಪಟ್ಟಣ್ಣಕ್ಕೆ ಜಮಖಂಡಿ ಎಂಬ ಹೆಸರು ಬರುವುದಕ್ಕೆ ಐತಿಹಾಸಿಕ ಕಾರಣಗಳಿವೆ. ಇಲ್ಲಿರುವ ಪ್ರಾಚೀನ ದೇವಾಲಯ ಜಂಬುಕೇಶ್ವರ ಗುಡಿಗೂ ಈ ಪಟ್ಟಣದ ಹೆಸರಿಗೂ ನಂಟಿದೆ. ಈ ಗುಡಿ ಚಾಲುಕ್ಯರ ಕಾಲಕ್ಕೆ ಸೇರಿದ್ದು. 1937ರಲ್ಲಿ…
ವಿಧ: ಬ್ಲಾಗ್ ಬರಹ
December 13, 2006
ಬೊಗಳೂರು, ಡಿ.13- ಡ್ರ್ಯಾಗನ್‌ಗಳಿರುವ ನಾಡಿನಲ್ಲಿ ಅಪ್ಪಿಕೋ ಚಳವಳಿ ನಡೆಯುತ್ತಿದೆ, ಅದು ಭಾರತಕ್ಕೂ ವ್ಯಾಪಿಸುವ ಎಲ್ಲ ಸಾಧ್ಯತೆಗಳಿಗೆ ಪೊಲೀಸರು ಸಂಚು ರೂಪಿಸಿದ್ದಾರೆ ಎಂಬ ಸುದ್ದಿ ಕೇಳಿ ಅಲ್ಲಿಗೆ ಧಾವಿಸಿದಾಗ ಪತ್ತೆಯಾದದ್ದು ಈ ಸುದ್ದಿ. (bogaleragale.blogspot.com)
ಅಲ್ಲಿ ಸಿನಿಮಾ ಮಂದಿರಗಳಲ್ಲಿ ಡಿಸ್ಕೋಉಂಟು ನೋಡಲು ಹೋದವರಿಗೆ ಟಿಕೆಟ್‌ನಲ್ಲಿ ಡಿಸ್ಕೌಂಟ್ ಕೊಡಲಾಗುತ್ತದೆ. ಆದರೆ ಅದಕ್ಕೆ ಅಪ್ಪಿಕೋ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂಬುದು ಅಲ್ಲಿನವರ ಶರತ್ತು.
ಚಲನಚಿತ್ರವು…
ವಿಧ: ಬ್ಲಾಗ್ ಬರಹ
December 13, 2006
ನೆರಳ ನೋಡಿ
ನಡೆಯಬೇಡವೊ ಮನುಜ !
ನಿನ್ನ ಹಿಂದಿರುವ
ಬೆಳಕಿನಂತೆ ತಾನೆ ಈ ನೆರಳು !!!
-----------------------
ಆವಿಇದ್ದರೆ ನೀರ ತುಂಬ
ಕಾಣುವುದೇ ಪ್ರತಿಬಿಂಬ ?
------------------------
ಎಡವಿದ್ದು ಎಚ್ಚರಿಸಲು
ನಿನ್ನನ್ನು !!!
ಯಾತ್ರೆ ಬೇಡ ಎದಲ್ಲ.
--------------------------
ಬಾಳು ಎಂದರೆ
ಒಂದು ಸುಂದರ
ಬಿಳಿಯ ಹಾಳೆ ಮೇಲೆ
ಬರೆದ ಒಂದು ಚಿತ್ತಾರ
ಇಟ್ಟ ತಪ್ಪು ಹೆಜ್ಜೆ
ಕೂಡ, ಕೊಡುವುದೊಂದರ್ಥವು
ನೋಡುವಂತ ನೋಟ
ನಿನಗೆ ಇದ್ದರೆ !!!
---------------------------
ವಿಧ: ಬ್ಲಾಗ್ ಬರಹ
December 12, 2006
ಕಂಪ್ಯೂಟರ್ ಪರದೆಯ ಹೊರಗಿನ ಬದುಕನ್ನು ನಿರ್ಲಕ್ಷಿಸಿ ಆರಾಮ ಕುರ್ಚಿಯ ವಾದಸರಣಿಯನ್ನು ಮಂಡಿಸುವವರ ನಡುವೆ, ಕಂಪ್ಯೂಟರ್ ಮೂಲಕ ಕನ್ನಡದ ಕಂಪನ್ನು ಇಡೀ ಜಗತ್ತಿಗೆ ಪಸರಿಸುವಂತೆ ಮಾಡಿರುವ ಕನ್ನಡ ಸಾಹಿತ್ಯ ಡಾಟ್ ಕಾಮ್‌ನ ಪರಿಶ್ರಮವು ಬಹುದೊಡ್ಡ ಕನ್ನಡ ಸೇವೆಯಾಗಿದೆ ಎಂದು ರಾಷ್ಟ್ರಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕರಾದ ಪಿ.ಶೇಷಾದ್ರಿ ಅವರು ಮುಕ್ತಕಂಠದಿಂದ ವರ್ಣಿಸಿದರು.
ಅವರು ದಿನಾಂಕ ೯.೧೨.೨೦೦೬ ರಂದು ಭಾನುವಾರ ಬೆಳಿಗ್ಗೆ ತುಮಕೂರು ನಗರದಲ್ಲಿ ಕನ್ನಡ ಸಾಹಿತ್ಯ ಡಾಟ್ ಕಾಮ್‌ನ ತುಮಕೂರು…
ವಿಧ: Basic page
December 12, 2006
ಮಿರಮಿರ ಮಿನುಗುವ ಮುದ್ದಿನ ತಾರೆ
ಬಾನಲಿ ಬೆಳಗುವ ನೀನಾರೆ?
ಫಳಫಳ ಹೊಳೆಯುವ ವಜ್ರದ ಹರಳೆ,
ನಭದಲಿ ನಗುವೆಯಾ ನೀ ಹೇಳೆ?
ಧಗಧಗಿಸುವ ನೇಸರ ಮರಳಿದ ಮೇಲೆ,
ಕವಿದಿದೆ ಭುವಿಗೆ ಕತ್ತಲ ಮಾಲೆ,
ಲಕಲಕಲಕಿಸುವ ನಿನ್ನಯ ಲೀಲೆ,
ಭೂಮಿಯ ಬೆಳಗುವ ದೀಪದ ಬಾಲೆ
ನೀಲಾಗಸದಲಿ ತಣ್ಣಗೆ ಬೆಳಗುವೆ
ಕಿಟಕಿ ಕಿಂಡಿಯೆಲೇ ನಗುವೆ.
ಬೆಳಗಿನ ಬೆಳ್ಳಿ ಮೂಡುವವರೆಗೂ,
ಕಣ್ಣನು ಮುಚ್ಚದೆ ಕಾದಿರುವೆ.
ತಣ್ಣನೆ ಬೆಳಕಿನ ಸಣ್ಣವ ನೀನು,
ಕತ್ತಲೆ ಪಯಣದ ಕಣ್ಣೇ ನೀನು,
ನಿನ್ನಾ ಬೆಳಕಿನ ಮರ್ಮವದೇನು?
ಕೆಲಸಕೆ ಸಂಬಳ…
ವಿಧ: ಕಾರ್ಯಕ್ರಮ
December 12, 2006
ಚ ಹ ರಘುನಾಥರ ಸಣ್ಣ ಕತೆಗಳ ಸಂಕಲನ - "ಹೊರಗೂ ಮಳೆ, ಒಳಗೂ ಮಳೆ" ೧೭ ಡಿಸೆಂಬರ್ ೨೦೦೬ ರಂದು ನಯನ ಸಭಾಂಗಣ, ಕನ್ನಡ ಭವನ. ಜೆ ಸಿ ರೋಡ್ ನಲ್ಲಿ ಬಿಡುಗಡೆಯಾಗಲಿದೆ. ಸಮಯ: ಬೆಳಿಗ್ಗೆ ೧೦:೩೦ ಕ್ಕೆ.
ಲೇಖಕರಾದ ಶ್ರೀ ರಾಘವೇಂದ್ರ ಪಾಟಿಲ್, ಅಶೋಕ ಹೆಗ್ಗಡೆ, ಆನಂದ ಋಗ್ವೇದಿ ಮತ್ತು ಇತರರು ಉಪಸ್ಥಿತರಿರುವರು.
ಪುಸ್ತಕ ಪ್ರಕಟಣೆ: ಸಂಚಯ.
(ಫಾರ್ವರ್ಡ್ ಆಗಿ ಬಂದ ಈ-ಮೇಯ್ಲ್ ಒಂದರಿಂದ)