ವಿಧ: ಬ್ಲಾಗ್ ಬರಹ
December 09, 2006
ಕನ್ನಡ ಪುಸ್ತಕಗಳು ಅಂರ್ತಜಾಲದಲ್ಲಿ ಯಾಕೆ ಹಾಕಬಾರದು. ಯಾಕೆ ಇ-ಪುಸ್ತಕ ಮಾಡಿ ಯಾಕೆ ಹಾಕಬಾರದು ?
ಬೆಂಗಳೊರಿನಲ್ಲಿ ಕನ್ನಡ ಪುಸ್ತಕ ತುಂಬ ಪರದಾಡಬೇಕು . ಸಪ್ನ ಬುಕ ಸ್ಟಾಲ ಬಿಟ್ಟರೆ ಎಲ್ಲೊ ಕಾಣೊಲ್ಲ :(
ನಿಮ್ಮ ಅನಿಸಿಕೆ ಏನು ?
ವಿಧ: ಬ್ಲಾಗ್ ಬರಹ
December 08, 2006
ಅಂಬೇಡ್ಕರ್ ಪ್ರತಿಮೆಗೆ ಅಪಮಾನ: ಹಿಂಸಾರೂಪಕ್ಕೆ ತಿರುಗಿದ ಪ್ರತಿಭಟನೆಗೆ ನಾಲ್ವರ ಬಲಿ, ಅಂಬೇಡ್ಕರ್ ಮೂರ್ತಿ ಭಗ್ನ: ಬೀದರ್, ನಾಗಪುರ, ಕಾನ್ಪುರ... ಉದ್ವಿಗ್ನ
ಈಚೆಗೆ ಪತ್ರಿಕೆಗಳಲ್ಲಿ ಈ ಸುದ್ದಿಗಳು ಸಾಮಾನ್ಯವಾಗಿಬಿಟ್ಟಿವೆ. ಯಾರೋ ಕಿಡಿ(ತಿಳಿ)ಗೇಡಿಗಳು ಮಾಡಿದ ಕೃತ್ಯಕ್ಕೆ ಹಿಂಸಾರೂಪದ ಪ್ರತಿಭಟನೆಯೇ? ಅಮೂಲ್ಯ ಜೀವಗಳ ಬಲಿಯೇ? ಮೂರ್ತಿಗೆ ಅವಮಾನ ಮಾಡಿದಾಕ್ಷಣ ಮಹಾನಾಯಕ ಅಂಬೇಡ್ಕರ್ ಅವರಿಗೆ ಅವಮಾನವಾಗಿಬಿಡುತ್ತದೆಯೇ?
ಈಚೆಗೆ ಚೆನ್ನೈನಲ್ಲಿ ರಸ್ತೆ ಕಾಮಗಾರಿಗಾಗಿ ವೃತ್ತವೊಂದರಲ್ಲಿದ್ದ…
ವಿಧ: ಬ್ಲಾಗ್ ಬರಹ
December 08, 2006
thatskannada.com ನಲ್ಲಿ ಕನ್ನಡದ ದೋರಣೆ ಬಗ್ಗೆ ಒಂದು article ಓದ್ದೆ. http://thatskannada.oneindia.in/news/2006/12/07/citi_bank.html
ನಮ್ ಕಂಪನಿ ಬ್ಯಾಂಕು HSBC. ಇಲ್ಲಿ ಹೇಗಿರ್ಬೋದು ನೋಡೋಣ ಅಂತ ಕಾಲ್ ಮಾಡ್ದೆ. ಭಾಷೆ ಆಯ್ಕೆ ಇದ್ದದ್ದು ಬರೀ ಇಂಗ್ಳೀಷ್, ಹಿಂದಿ. ಇಂಗ್ಳೀಷ್ ಆರ್ಸಿ ಮುಂದೆ ಹೋದೆ.. ಫೋನ್ ಎತ್ತುತ್ಲು, ಕನ್ನಡ ಶುರು ಹಚ್ಕೊಂಡೆ. ಹುಡುಗಿ ಸ್ವಲ್ಪ ಗಾಬರಿ ಆದ್ಲು.. "ಯಾಕ್ರಿ ಕನ್ನಡ ಬರಲ್ವ ?...Is there nobody who knows Kannada there ?"ಅಂದೆ.…
ವಿಧ: ಬ್ಲಾಗ್ ಬರಹ
December 08, 2006
ಕಂಪ್ಯೂಟರ್ ೦ ಮತ್ತು ೧ ಅನ್ನು ಮಾತ್ರ ಅರ್ಥ ಮಾಡಿಕೊಳ್ಳುತ್ತದೆ . ಎಲ್ಲವನ್ನು ೦ ಮತ್ತು ೧ ಆಗಿಯೇ ಶೇಖರಿಸುತ್ತದೆ ಎಂದು ಕನ್ನಡದಲ್ಲಿ ಕಂಪ್ಯೂಟರ್ ಕಲಿಕೆಯ ಎರಡನೇ ಭಾಗದಲ್ಲಿ ನೋಡಿದೆವು . ಉದಾ. a , b , c, d ,... 1,2,3,.... ಇತ್ಯಾದಿ ಅಕ್ಷರಗಳನ್ನು 10010000, 11110001 , 01010101 ಎಂದೆಲ್ಲ ಆಗಿಯೇ ಅದು ಬಯಸುವದು.
೦ ಮತ್ತು 1 ರ ಭಾಷೆಯೇ ಕಂಪ್ಯುಟರ್ ಬಳಸುವ ಭಾಷೆ . ಅದೇ ದ್ವಿಮಾನ ಭಾಷೆ ಅಥವಾ ಬೈನರಿ ಲ್ಯಾಂಗ್ವೇಜು (binary language).
ನಾವು ಕಂಪ್ಯೂಟರ್ ಗೆ…
ವಿಧ: ಬ್ಲಾಗ್ ಬರಹ
December 08, 2006
ಓದಿದ ಪುಸ್ತಕಗಳ ಬಗ್ಗೆ ಪತ್ರಿಕೆಗಳಲ್ಲಿ ಬ್ಲಾಗುಗಳಲ್ಲಿ ಬರೆಯುವರು. (ಬೇಡ(ವಾ)ದ ಪುಸ್ತಕಗಳ ಬಗ್ಗೆ ನಾನೂ ಬರೆದಿದ್ದೆ) ಆದರೆ ಓದದ ಪುಸ್ತಕಗಳು ? ಅವುಗಳ ಬಗ್ಗೆ ಮುಂದಿನ ವಾರದ 'ಸುಧಾ'ದಲ್ಲಿ ಬರಲಿದೆ. ಏನಿರಬಹುದು? ಕಾದು ನೋಡೋಣ!
ಈ ವಾರದ ಸುಧಾದಲ್ಲಿ ವೆಲ್ಲೂರು ಆಸ್ಪತ್ರೆಯ ಸ್ಥಾಪಕರ ಹೃದಯಸ್ಪರ್ಶಿ ಕಥೆ ಧಾರಾವಾಹಿ ರೂಪದಲ್ಲಿ ಆರಂಭವಾಗಿದೆ . ಮತ್ತು ಡೇನಿಯಲ್ ಪರ್ಲ್ (ನೆನಪಿರಬಹುದು. ಪಾಕಿಸ್ತಾನದಲ್ಲಿ ಅಪಹರಣಕ್ಕೊಳಗಾಗಿ ಕೊಲ್ಲಲ್ಪಟ್ಟ ಪತ್ರಕರ್ತ)ಕುರಿತಾದ ಪುಸ್ತಕ- a mighty heart…
ವಿಧ: ಬ್ಲಾಗ್ ಬರಹ
December 08, 2006
ಮೊದಲು ಚುಕ್ಕಿ ವಿಷಯ . ನಂತರ ಕಕಕ ವಿಷಯ.
ನನ್ನ ಸಹೋದ್ಯೋಗಿ ಸುದರ್ಶನ್ ( ಅವ್ನೂ ನನ್ನ ಹಾಗೇ ಕಂಪ್ಯೂಟರ್ ಪ್ರೊಗ್ರ್ಯಾಮರ್ ) ಗಣಕಯಂತ್ರದ ಮುಂದೆ ತೆರೆಯ ಮೇಲೆ ಕಣ್ಣು ಕೀಲಿಸಿ ಕುಳಿತಿದ್ದ. ಏನ್ರೀ ಸಮಾಚಾರ ? ಅಂದೆ.
ಅಲ್ಲಾ , ಈ ಫಾಕ್ಸ್ ಪ್ರೋ ಪ್ರೊಗ್ರಾಂ ನಲ್ಲಿ ಯಾಕೆ ಹೀಗೆ ಚುಕ್ಕೆ ಇಟ್ಟು ಕಮೆಂಟ್ ಔಟ್ ಮಾಡಿದ್ದಾರೇ ಅಂತ ... ತಲೆ ಕೆಡಿಸಿಕೊಳ್ತಾ ಇದ್ದೀನೀ... ಯಾರಿಟ್ಟರೀ ಚುಕ್ಕಿ ? ಯಾಕಿಟ್ಟರೀ ಚುಕ್ಕಿ? ..... ಅಂತ ... ಹ್ಹಿ ಹ್ಹಿ ಅಂತ ಹಲ್ಲು ಕಿರಿದ .
ವಿವರಣೆ....
ಯಾವದೇ…
ವಿಧ: ಬ್ಲಾಗ್ ಬರಹ
December 08, 2006
ಗೆಳೆಯರೆ,
ದೇಸಗತಿ ಭಾಷೆಗಳು (ಕನ್ನಡವೂ ಸೇರಿದಂತೆ ಎಲ್ಲಾ ದೇಸೀ ಭಾಷೆಗಳು)ಗಳ ಬಗೆಗೆ ಬಂಡವಾಳಶಾಹಿಯ ಧೋರಣೆಗೆ ಮತ್ತೊಂದು ಸ್ಪಷ್ಟ ನಿದರ್ಶನ.
http://thatskannada.oneindia.in/news/2006/12/07/citi_bank.html
ಇದಕ್ಕೆ, 'ಕನ್ನಡಸಾಹಿತ್ಯ.ಕಾಂ'ನ ಸಂಸ್ಥಾಪಕರಾದ ಶ್ರೀಯುತ ಶೇಖರ್‍ಪೂರ್ಣರವರ ಪ್ರತಿಕ್ರಿಯೆ ಇಲ್ಲಿದೆ.
--------------------------ಪ್ರತಿಕ್ರಿಯೆ---------------------------------
ಸ್ನೇಹಿತರೆ,
ಇಂಗ್ಲಿಷ್ ಭಾಷಾ ಒಲವಿನ ಧೋರಣೆ ಪ್ರಾದೇಶಿಕ-ಸ್ಥಳೀಯ ಭಾಷೆಗಳನ್ನು "…
ವಿಧ: ಬ್ಲಾಗ್ ಬರಹ
December 08, 2006
ಬೊಗಳೂರು, ಡಿ.8- ಮಲೇಷ್ಯಾದಲ್ಲಿ ಭಾರತೀಯ ಚಿತ್ರಗಳ ಚಿತ್ರೀಕರಣವನ್ನು ನಿಷೇಧಿಸಲಾಗುತ್ತಿದೆ ಎಂಬ ಮಹತ್ವದ ತನಿಖಾ ವರದಿಯನ್ನು ಹಿಂದೆಂದೂ ಕಂಡರಿಯದ ರೀತಿಯಲ್ಲಿ ಬೊಗಳೆ ರಗಳೆ ಬ್ಯುರೋ ಕೈಗೊಂಡಿದೆ. (bogaleragale.blogspot.com)
ಇದಕ್ಕೆ ಕಾರಣವೆಂದರೆ ಎಲ್ಲವನ್ನೂ ಬಯಲಾಗಿಸುವ ಅಥವಾ ಹುಟ್ಟಿನ ಉಡುಗೆಗಳಲ್ಲಿ ಅಡ್ಡಾಡಬಾರದು ಎಂದು ಅಲ್ಲಿನ ಸ್ಥಳೀಯಾಡಳಿತೆಯು ಆದೇಶ ಮಾಡಿರುವುದು.
ಇದೀಗ ಚಿತ್ರೀಕರಣ ನೆಪದಲ್ಲಾದರೂ ಮಲೇಷ್ಯಾಕ್ಕೆ ಹೋಗುವ ಅವಕಾಶ ತಪ್ಪಿ ಹೋಗುವುದರಿಂದ ಆಕ್ರೋಶಗೊಂಡಿರುವ (ವಸ್ತ್ರ)…
ವಿಧ: ಬ್ಲಾಗ್ ಬರಹ
December 07, 2006
ಅಹಿಂಸೆ ಅಂದರೆ?
ಗಾಂಧಿ ಪೂಜಿತ ರಾಮ
ಸತ್ಯವ್ರತನೇನೊ ಸರಿ
ಶಸ್ತ್ರ ಬಳಸದೆ
ಯುದ್ದ ಗೆಲ್ಲಲಿಲ್ಲ.
ದುಃಖ ಕೊಡುವನು ಶತ್ರು
ಧರ್ಮವಿಲ್ಲದ ಧೂರ್ತ
ಇವರ ನಾಶವದೆಂದು
ಹಿಂಸೆಯಲ್ಲಾ.
ಪರತಂತ್ರದಿಂಸ್ವಾತಂತ್ರ್ಯ
ಅಹಿಂಸಾಫಲವಾದಲ್ಲಿ
ಪಾಕಿಪೋಕರಿಗಳನ್ಯಾಕೆ
ಸೆದೆಬಡಿಯಲಿಲ್ಲ?
ಏಳಿ ಜನಗಳೆ ಏಳಿ
ಸತ್ಯವ್ರತರಾಗಿಂದು
ರಾವಣರ ಚೆಂಡಾಡಿ
ಶ್ರೀ ರಾಮರಾಗಿ.
ಅಹೋರಾತ್ರ.
೦೭/೧೨/೦೬.
೧೪:೪೫.
ವಿಧ: ಬ್ಲಾಗ್ ಬರಹ
December 07, 2006
ದಯವಿಟ್ಟು ಯಾರೂ ಇದನ್ನು ವೈಯಕ್ತಿಕ ಮಟ್ಟದಲ್ಲಿ ತೆಗೆದುಕೊಳ್ಳಬಾರದು.
ತಂತ್ರಾಂಶಗಳನ್ನು ಕನ್ನಡೀಕರಿಸುವ ಪ್ರಯತ್ನ ನಡೆಯುತ್ತಿರುವದು ಸ್ವಾಗತಾರ್ಹ.
ಸಂಪದ ಸೇರುವದಕ್ಕೆ ಮೊದಲು ಈ ವಿಷಯಗಳು ತಿಳಿದೇ ಇರಲಿಲ್ಲ.
ಸಂಪದಕ್ಕೆ ಧನ್ಯವಾದಗಳು.
ಈ ತುರ್ಜುಮೆ ಕೆಲಸ ಮಾಡುವಾಗ ಈಗಾಗಲೇ ಬಳಸುವ ಪದಗಳ ಬದಲಿಗೆ ಇನ್ನಾವ ಪದಗಳನ್ನು ಬಳಸಿದರೆ ಚೆನ್ನಾಗಿರತ್ತೆ ಎನ್ನುವದನ್ನು ಇಲ್ಲಿ ಇನ್ನು ಮುಂದೆ ಪಟ್ಟಿ ಮಾಡುತ್ತೇನೆ.
ಇಲ್ಲಿ ಬರೆಯುವದೆಲ್ಲ ನನ್ನ ವೈಯಕ್ತಿಕ ಅಭಿಪ್ರಾಯವಾಗಿದ್ದು ಬೇರೆಯವರ ಕೆಲಸದ…