ವಿಧ: ಕಾರ್ಯಕ್ರಮ
December 01, 2006
ಕನ್ನಡಸಾಹಿತ್ಯಡಾಟ್‌ಕಾಂ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಾ ಹೋಗುತ್ತಿದೆ ಎನ್ನುವುದು ಸಂತೋಷಕರವಾದಂತಹ ಸಂಗತಿ. 'ಬೆಂಬಲಿಗರ ಬಳಗಗಳು' ಬರಿ ಸೈಬರ್ ಸ್ಪೇಸ್‌ನ ವಿರ್ಚುವಲ್ ಚಟುವಟಿಕೆಗೆ ಮಾತ್ರ ಸೀಮಿತವಾಗದೆ ಭೂಮಿಗಿಳಿದ ಜನರಿಗೆ ಹತ್ತಿರವಾಗುತ್ತ ಅನೇಕ ಪ್ರಶ್ನೆಗಳನ್ನು, ಸಂವಾದಗಳನ್ನು ಹುಟ್ಟಿ ಹಾಕುತ್ತಿವೆ. ಇದಕ್ಕೆ ಪೂರಕವೆಂಬಂತೆ ಹಲವೆಡೆ ಬೆಂಬಲಿಗರ ಬಳಗಗಳು ಸಹ ಹುಟ್ಟಿಕೊಳ್ಳಲಾರಂಭಿಸಿವೆ.
ಈ ನಿಟ್ಟಿನಲ್ಲಿ ತುಮಕೂರು ಜಿಲ್ಲೆಯ ಕನ್ನಡಸಾಹಿತ್ಯಡಾಟ್‌ಕಾಂ ಆಸಕ್ತರು "ತುಮಕೂರು…
ವಿಧ: ಬ್ಲಾಗ್ ಬರಹ
December 01, 2006
ಬೊಗಳೂರು, ಡಿ.1- ಇಂದು ಅಂತಾರಾಷ್ಟ್ರೀಯ ಏಡ್ಸ್ ದಿನಾಚರಣೆ. ಈ ದಿನವನ್ನು ವಿಶ್ವಾದ್ಯಂತ ಸಂಭ್ರಮ ಸಡಗರಗಳಿಂದ ವಿಧ್ಯುಕ್ತವಾಗಿ ಆಚರಿಸಲಾಯಿತು ಎಂದು ತಿಳಿದುಬಂದಿದೆ. (bogaleragale.blogspot.com)
ಸುಮಾರು 25 ವರ್ಷಗಳ ಹಿಂದೆ ಏಡ್ಸ್‌ಗೆ ಕಾರಣವಾಗುವ ಎಚ್ಐವಿ (ವೈರಸ್) ಪತ್ತೆಯಾದ ಬಳಿಕ ಏಡ್ಸ್ ಕುರಿತಾಗಿ ಭರ್ಜರಿ ಪ್ರಗತಿಯಾಗಿದೆ. ಈ ಬಗ್ಗೆ ಗ್ರಾಮ ಗ್ರಾಮಗಳಲ್ಲೂ ಸಾಕಷ್ಟು ಬೆಳವಣಿಗೆ ಕಂಡಿದ್ದು, ತನ್ನ ಆಳವಾದ ಬೇರುಗಳನ್ನು ಕುಗ್ರಾಮಗಳಿಗೂ ತೂರಿಸಿದೆ.
ಈ ಶುಭವಸರದಲ್ಲಿ, ಏಡ್ಸ್ ನಿಷೇಧಿಸಲು…
ವಿಧ: ಬ್ಲಾಗ್ ಬರಹ
November 30, 2006
ಅಂತರ್ಜಾಲ ಪುಟ ಮಾಡಲು ಯಾವುದಾದರೂ ಲೈಸೆನ್ಸ್ ನ ಅಗತ್ಯವಿದೆಯೇ?
ನಾನು ಯಾವುದೇ ಡೌನ್ ಲೋಡ್ ಗಳನ್ನ ಹಾಕುತ್ತಿಲ್ಲ. ನನ್ನ ಲೇಖನಗಳನ್ನ ಹಾಕುವ ಯೋಚನೆ ಇದೆ.
ಇದರ ಬಗ್ಗೆ ಯಾರಿಗಾದರೂ ಗೊತ್ತಿದ್ದರೆ ತಿಳಿಸಿ.
ಧನ್ಯವಾದಗಳೊಂದಿಗೆ
ಅರವಿಂದ
ವಿಧ: ಬ್ಲಾಗ್ ಬರಹ
November 30, 2006
ಬೊಗಳೂರು, ನ.30- ಬ್ಯಾಂಗಲೋರ್, ಮ್ಯಾಂಗಲೋರ್, ಮೈಸೋರ್ ಮುಂತಾದ Oreಗಳ ಹೆಸರನ್ನು ಊರು ಅಂತ ಬದಲಾಯಿಸಿ ಕನ್ನಡೀಕರಣ ಮಾಡುವಲ್ಲಿ ಸಾಕಷ್ಟು ಪ್ರಯತ್ನಗಳು ನಡೆಯುತ್ತಿರುವಂತೆಯೇ ಅದನ್ನು ಗುಜರಾತಿಗೆ ಹೋಲಿಸುವ ಮತ್ತೊಂದು ಹೊಸ ಪ್ರಯತ್ನ ನಡೆಸುತ್ತಿದೆ ಎಂಬುದು ಬೊಗಳೆ ರಗಳೆ ಬ್ಯುರೋದ ಗಮನಕ್ಕೆ ಬಂದಿದೆ. (bogaleragale.blogspot.com)
ಗುಜರಾತಿನ ಜಾಮ್ ನಗರವನ್ನು ಹೈಜಾಕ್ ಮಾಡಿ ಬೆಂಗಳೂರೆಂಬ ಬ್ರೆಡ್‌ಗೆ ಅಂಟಿಸಿಬಿಡೋ ಯತ್ನ ನಡೆಸಲಾಗುತ್ತಿದ್ದು, ಇದನ್ನು ಬೊಗಳೂರು ಬ್ಯುರೋ ತೀವ್ರವಾಗಿ…
ವಿಧ: ಬ್ಲಾಗ್ ಬರಹ
November 29, 2006
ಸುಮಾರು ಮೂರು ತಿಂಗಳ ಹಿಂದೆ ಕನ್ನಡದ ವಿಕಿಪೀಡಿಯಾವನ್ನು ನಾನು ಮೊದಲನೇ ಸರಿ ನೋಡಿದೆ. ಆದರೆ ಅಲ್ಲಿನ ಅಕ್ಷರಗಳು ಸರಿಯಾಗಿ ಮೂಡದೇ ಇದ್ದಿದ್ದರಿಂದ ನಿರಾಸೆಯಾಯಿತು. ಗೂಗಲ್‌ನಲ್ಲಿ ಸುಮಾರು ಹೊತ್ತು ಸರ್ಚ್ ಮಾಡಿದ ಮೇಲೆ ಯೂನಿಕೋಡಿನ ಕೆಲವು ಪಾಂಟ್‌ಗಳು ಸಿಕ್ಕಿದವು. ಅದರಲ್ಲಿ ಒಂದನ್ನು ಅಚ್ಚುಇಳಿಸಿದ ಮೇಲೆ ವಿಕಿಪೀಡಿಯಾ ಸರಿಯಾಗಿ ಮೂಡಿತು! ಸುಮಾರು ನಾಲ್ಕು ಸಾವಿರಕ್ಕಿಂತಲೂ ಹೆಚ್ಚು ಲೇಖನಗಳು ಅಲ್ಲಿ ಇದ್ದದ್ದು ನನಗೆ ಆಶ್ಚರ್ಯ ಉಂಟು ಮಾಡಿತು. ಏಕೆಂದರೆ ಯೂನಿಕೋಡ್ ಕನ್ನಡದಲ್ಲಿ ಈಗಾಗಲೇ…
ವಿಧ: ಚರ್ಚೆಯ ವಿಷಯ
November 29, 2006
ಲಿನಕ್ಸಿನಲ್ಲಿ ಹಲವು ರೆಂಡರಿಂಗ್ ಇಂಜಿನುಗಳಿವೆ. ಅದರಲ್ಲಿ 'ಪ್ಯಾಂಗೋ' ಕೂಡ ಒಂದು. ಲಿನಕ್ಸ್ ಬಳಸುವವರಿಗೆ ಜಿಟಿಕೆ (GTK) ಮತ್ತು ಗ್ನೋಮ್ (GNOME) ಬಗ್ಗೆ ತಿಳಿದೇ ಇರುತ್ತದೆ. GNOME ಬಳಸುವ ರೆಂಡರಿಂಗ್ ಇಂಜಿನ್ - pango.
pango ಕನ್ನಡ ಅಕ್ಷರಗಳನ್ನು ಪರದೆಯ ಮೇಲೆ ಬಿತ್ತರಿಸುವಾಗ ಕೆಲವೊಂದು ತಪ್ಪುಗಳನ್ನು ಮಾಡುತ್ತಿತ್ತು. ಅದರಲ್ಲಿ ಸುಮಾರು ತಪ್ಪುಗಳು ಈಗ ಸರಿಪಡಿಸಿರುವರಾದರೂ ಒಂದೇ ಒಂದು ಬಗ್ ಉಳಿದುಕೊಂಡುಬಿಟ್ಟಿದೆ. ಲಿನಕ್ಸ್ ಬಳಸುವ ಸಂಪದ ಓದುಗರು ಯಾರಾದರೂ ಇದ್ದರೆ ಈ [:http…
ವಿಧ: Basic page
November 29, 2006
ನಿತ್ಯದ ಬೆಳಗೂ ಹೀಗೆಯೇ,
ಒಂದು ಕೋಲಾಜ್
ಕಲಾಕೃತಿಯಂತೆ.
ಏಳುತ್ತಿದ್ದ ಹಾಗೇ,
ಎದುರುಮನೆಯ ಅವರೇಕಾಳು
ಉಪ್ಪಿಟ್ಟಿನ ಪರಿಮಳ.
ಪಕ್ಕದ ಭಟ್ಟರ ಮನೆಯಲ್ಲಿ
ಕೌಸಲ್ಯಾ ಸುಪ್ರಜಾ..
ಹೊರಗಡೆ ಬೀದಿಯಲ್ಲಿ
ಶಾಲೆಯ ವ್ಯಾನಿನ ಹಾರ್ನು
ಮಾಲಿಕನ ಮಗನಿನ್ನು ಹೊರಟಿಲ್ಲ,
ಕೇಳುತಿದೆ ಅವನಮ್ಮನ ಬೈಗುಳ.
ಹಾದಿಯಲ್ಲಿ ಸೇವಂತಿಗೆ ಮಾರುವ
ಗಾಡಿಯಾತನ ಕೂಗು,
ಕೂಗೇ ಅದು, ಅಲ್ಲ ವಿನಂತಿಯೆ?
ಸ್ನಾನದ ಮನೆಯೊಳಗಿಂದ
ಮಿತ್ರನ ಏರು ದನಿ
ಟವಲು ಕೊಡೋ , ಮರೆತೆ.
ಮರೆತದ್ದೆ?, ಇರಬಹುದು.
ಎಲ್ಲಿಂದಲೋ ಬರುವ
ಊದುಬತ್ತಿಯ ಘಮಲು,
ಮನೆಯ…
ವಿಧ: ಬ್ಲಾಗ್ ಬರಹ
November 28, 2006
ಅರಿಯೆನು ನಾನೋಡುವಾ ಬದುಕ
ಕಾಣೆನು ಸಾವಿನಾಚೆಯ ಲೋಕ
ಲೇಸು ಕ೦ಡಿರುವ ಈ ಬದುಕು, ಕಾಣದಾ ಸಾವಿಗಿ೦ತ
ಬದುಕು ಬದುಕೆಲೋ ಪ೦ಡಿತಪುತ್ರ ||
- ಯಾವ ಬದುಕನ್ನು ನಡೆಸುತ್ತಿದ್ದೀನೋ ಅದು ಏನೆ೦ದು ತಿಳಿದಿಲ್ಲ. ಏತಕ್ಕಾಗಿಯೆ೦ದೂ ಗೊತ್ತಿಲ್ಲ. ಆದರೆ ಕ೦ಡಿದ್ದೇನಷ್ಟೆ. ಆದರೆ ಸಾವಿನ ಬಗೆಗೆ ಇರುವದು ಕೇವಲ ಕಲ್ಪನೆಗೆಳು, ಆ ಲೋಕವನ್ನು ಕ೦ಡೂ ಇಲ್ಲ. ಹಾಗಾಗಿ ಆಗಾಗ ಬರುವ ಹತಾಶ ಭಾವನೆಗಳಿಗಾಗಿ ಪ್ರಾಣತೆಗೆದುಕೊಳ್ಳಲು ಯಾವ ಬಲವಾದ ಕಾರಣವಿದೆ ಹೇಳಿ.
ವಿಧ: ಬ್ಲಾಗ್ ಬರಹ
November 28, 2006
[:http://fedora.redhat.com/|ಫೆಡೋರಾ ೬] ನೇ ಅವೃತ್ತಿಯಲ್ಲಿ ಹೊಸತೊಂದು ಕನ್ನಡ ಯೂನಿಕೋಡ್ ಫಾಂಟ್ ಬಿಡುಗಡೆ ಮಾಡಿದ್ದಾರೆ. ಫಾಂಟ್ ಹೆಸರು ಲೋಹಿತ್ ಕನ್ನಡ. ಇತ್ತೀಚೆಗೆ ನನ್ನ ಸ್ನೇಹಿತನಿಂದ ಈ ವಿಷಯ ತಿಳಿಯಿತು. ಆದರೆ ಉಳಿದೆಲ್ಲ ಫಾಂಟುಗಳಂತೆ ಈ ಫಾಂಟ್ ಕೂಡ ಸಂಪೂರ್ಣಗೊಂಡಿಲ್ಲ. ಸುಮಾರು ತಪ್ಪುಗಳಿವೆ.
ಆಸಕ್ತರು ಈ ಫಾಂಟನ್ನು [:http://rpmfind.net/linux/RPM/fedora/devel/s390/fonts-kannada-2.0.6-1.noarch.html|ಇಲ್ಲಿಂದ ಡೌನ್ಲೋಡ್] ಮಾಡಿಕೊಳ್ಳಬಹುದು.
ಒಳ್ಳೆಯ ಸುದ್ದಿ…
ವಿಧ: ಬ್ಲಾಗ್ ಬರಹ
November 28, 2006
ಬೊಗಳೂರು, ನ.28- ತಾನು ದರೋಡೆ ಮಾಡಿಲ್ಲ ಎಂದು ಪೊಲೀಸನೊಬ್ಬ ಬೊಗಳೆ ರಗಳೆ ಬ್ಯುರೋ ಎದುರು ಬೊಗಳೆ ಬಿಟ್ಟಿದ್ದಾನೆ. (bogaleragale.blogspot.com)
ದರೋಡೆ ಆರೋಪದಲ್ಲಿ ಮುಖ್ಯ ಕನಿಷ್ಠ ಬಿಲ್ಲೆ ಬಂಧನಕ್ಕೊಳಗಾದ ಪ್ರಕರಣ ಇಲ್ಲಿ ವರದಿಯಾಗಿರುವ ಹಿನ್ನೆಲೆಯಲ್ಲಿ ಕನಿಷ್ಠರ ರಕ್ಷಣೆಯ ನಿಟ್ಟಿನಲ್ಲಿ ಧಾವಿಸಿದ ನಿಕೃಷ್ಟ ಬ್ಯುರೋ ಸಿಬ್ಬಂದಿಗೆ ವಿಶೇಷ ಸಂದರ್ಶನ ನೀಡಿದ ಮಹಾನ್ ಕನಿಷ್ಠ ಬಿಲ್ಲೆ, ತಾನು ಕಳ್ಳರನ್ನು ಹಿಂಬಾಲಿಸುತ್ತಿದ್ದೆನಷ್ಟೇ ಎಂದು ಸ್ಪಷ್ಟೀಕರಣ ನೀಡಿದ್ದಾರೆ.
ಈಗಿನ ದಿನಗಳಲ್ಲಿ…