ವಿಧ: ಬ್ಲಾಗ್ ಬರಹ
November 18, 2006
ಸ್ನೇಹಿತರೆ, ಕನ್ನಡಸಾಹಿತ್ಯಡಾಟ್‌ಕಾಂ ಸಲ್ಲಿಸಲಿರುವ ಮನವಿಯ ಕುರಿತಂತೆ 'ಉದಯವಾಣಿ' ದಿನಾಂಕ- ೧೮-೧೧-೨೦೦೬ ರ ಶನಿವಾರದ ಸಂಚಿಕೆಯಲ್ಲಿ (ಪುಸ್ತಕ ಸಂಪದ ವಿಭಾಗ, ಪುಟ ೧೦) "ಕಂಪ್ಯೂಟರ್ ಲೋಕದಲ್ಲಿ ಕನ್ನಡವೂ ರಾರಾಜಿಸಲಿ" ಎನ್ನುವ ಶೀರ್ಷಿಕೆಯಡಿಯಲ್ಲಿ ಸುಧೀರ್ಘವಾದ ಸುದ್ದಿ\ಲೇಖನ ಪ್ರಕಟಸಿದೆ.ಕನ್ನಡಸಾಹಿತ್ಯ.ಕಾಂ೦- ನಿರ್ವಹಿಸುತ್ತಿರುವ ಚಟುವಟಿಕೆಗಳು ಒಂದು ಸಣ್ಣ ಸಾಮಾಜಿಕ ಆಂದೋಲನದ ಸ್ವರೂಪ ಪಡೆಯುತ್ತಿರುವ ಚಿಹ್ನೆಯನ್ನು ತೋರುತ್ತಿರುವುದು ಒಂದು ಸಮಾಧಾನಕರ ಸಂಗತಿ. ಲೇಖನದ ಒಂದು ಸಣ್ಣ…
ವಿಧ: ಬ್ಲಾಗ್ ಬರಹ
November 18, 2006
ಬೊಗಳೆ ರಗಳೆ ಬ್ಯುರೋದಿಂದ ಆವಂತಿಕಾಪುರಿ(ಉಜ್ಜಯಿನಿ)ಪ್ರಯಾಸ ಕಥನ! ಭಟ್ಟಿ ವಿಕ್ರಮಾದಿತ್ಯನ ನಾಡಿಗೆ ಅಸತ್ಯಾನ್ವೇಷಿ ಭೆಟ್ಟಿ! ಕಾಳಿದಾಸನಿಗೊಲಿದ ಕಾಳಿ ನೆಲೆನಿಂತ ನಾಡಿನಲ್ಲಿ ಕಾಲಿ ದೋಸೆ ತಿಂದು ಅಲೆದಾಡಿ ಧೂಳಿದಾಸನಾದ ಕಥೆ... (bogaleragale.blogspot.com)
ಶ್ರೀಕೃಷ್ಣ-ಬಲರಾಮ-ಸುದಾಮರು LKG ಕಲಿತ ಸಾಂದೀಪನಿ ಆಶ್ರಮದಲ್ಲಿ ಅ, ಆ, ಇ, ಈ ಓದಿದ ಅಸತ್ಯಾನ್ವೇಷಿ.
ಜ್ಯೋತಿರ್ಲಿಂಗಗಳಲ್ಲೊಂದಾಗಿರುವ ಮಹಾಕಾಲೇಶ್ವರ ಮಂದಿರದಲ್ಲಿ ಅರ್ಚಕರನ್ನು ರುದ್ರಭಯಂಕರರಾಗಿಸಿದ ಕಥೆ...
ನಿರೀಕ್ಷಿಸಬೇಡಿ...…
ವಿಧ: ಬ್ಲಾಗ್ ಬರಹ
November 18, 2006
ಕಂಪ್ಯೂಟರ್ ಪರಿಸರದಲ್ಲಿ ದೇಸಗತಿ ಭಾಷೆಗಳ ಅಳವಡಿಕೆಯ ಕುರಿತಂತೆ ಕನ್ನಡಸಾಹಿತ್ಯ.ಕಾಂ ಹಾಗು ಎಲ್ಲ ಬೆಂಬಲಿಗರ ಪರವಾಗಿ ಸಹಿ ಸಂಗ್ರಹ ಆಂದೋಳನಕ್ಕೆ ಅಪಾರವಾದ ಬೆಂಬಲ ವ್ಯಕ್ತವಾಗುತ್ತಿದೆ. ರಾಜ್ಯದ ಪ್ರಮುಖ ಪತ್ರಿಕೆಗಳ ಬಹುತೇಕ ಎಲ್ಲ ಪತ್ರಕರ್ತರು ಬೆಂಬಲ ಸೂಚಿಸಿ ಸಹಿ ಮಾಡಿದ್ದಾರೆ. ಜೊತೆಗೆ, ಸಾರ್ವಜನಿಕ ಜೀವನದಲ್ಲಿ, ಸಾಂಸ್ಕೃತಿಕ ಮುಂಚೂಣಿಯಲ್ಲಿರುವ ಅನೇಕರು, ಚಲನಚಿತ್ರ ರಂಗದ ಪ್ರಮುಖರೂ ಸಹ ಸಹಿ ಮಾಡಿ ಬೆಂಬಲ ಸೂಚಿಸಿದ್ದಾರೆ.ಅವರುಗಳ ವಿವರ ಈ ಕೆಳಕಂಡಂತಿದೆ: ಗಿರೀಶ್ ಕಾಸರವಳ್ಳಿ - ಚಲನಚಿತ್ರ…
ವಿಧ: ಬ್ಲಾಗ್ ಬರಹ
November 16, 2006
ಹೀಗೆಂದು ಒಂದು ಲೇಖನವನ್ನು ಓದಿದ್ದ ನೆನಪು . ಬೇರೆ ಭಾಷಿಕರು ಕನ್ನಡ ಕಲಿಯಲಿ ಎಂದು ಅಪೇಕ್ಷಿಸುವ ನಮಗೆ ಕಲಿಯುವವರ ಕಷ್ಟ ಹೇಗೆ ಗೊತ್ತಾದೀತು? ಕನ್ನಡ ಕಲಿಸ ಹೊರಟ ಲೇಖಕಿಯೊಬ್ಬರಿಗೆ ಸುಸ್ತಾಗಿ - ಕನ್ನಡ ಬಹಳ ಸಂಕೀರ್ಣ ಭಾಷೆ ಎಂದೆನ್ನಿಸಿ , ಜಪಾನೀಸ್ ಭಾಷೆ ತುಂಬ ಸುಲಭ , ಸರಳ ಎಂದೆನಿಸಿ ಅದನ್ನೇ ನಮ್ಮ ತಾಯಿನುಡಿ ಮಾಡಬಾರದೇಕೆಂದು ಸೂಚನೆಯನ್ನೂ -ಸೀರಿಯಸ್ಸಾಗಿ ಅಲ್ಲ- ಕೊಟ್ಟಿದ್ದರು!
ನಿನ್ನೆ ಮುಂಬೈಯ ಮಾಲ್ ಒಂದರಲ್ಲಿ - Learn Kannada in a month ಎಂಬ ಪುಸ್ತಕ ನೋಡಿ ಕೊಂಡೆ. ಓದಿದೆ.…
ವಿಧ: ಬ್ಲಾಗ್ ಬರಹ
November 16, 2006
ಬಹು ದಿನಗಳ ನಂತರ ಬರಹ ತಾಣಕ್ಕೆ ಹೋದಾಗ ಈ ನಿಘಂಟು ಕಣ್ಣಿಗೆ ಬಿತ್ತು.
'ಇಗೋ ಕನ್ನಡ' ಖ್ಯಾತಿಯ ಪ್ರೊ. ಜಿ.ವೆಂಕಟಸುಬ್ಬಯ್ಯನವರ ನಿಘಂಟು ಇದು . ಪ್ರಿಸಂ ಪ್ರಕಾಶನದ್ದು .
ಇಲ್ಲಿ ಕನ್ನಡ ಇಂಗ್ಲೀಷ್ ಪದಗಳೆರಡನ್ನೂ ಇಲ್ಲಿ ಹುಡುಕಬಹುದು. ಅನುವಾದಕರಿಗೆ ಅನುಕೂಲವಾಗಲೆಂಬ ಉದ್ದೇಶದಿಂದ ಅಂತ್ರ್ಜಾಲದಲ್ಲಿ ಇಟ್ಟಿದ್ದಾರಂತೆ. ನಿಜಕ್ಕೂ ಹೊಗಳತಕ್ಕಂಥ ಕೆಲಸ . ಮಾಡಿದ್ದಾರೆ.
ವಿಧ: ಬ್ಲಾಗ್ ಬರಹ
November 16, 2006
ಬೊಗಳೂರು, ನ.16- ಮಕ್ಕಳ ಹಾಜರಾತಿ ಕೊರತೆಯಿಂದಾಗಿ ಸರ್ವ ಶಿಕ್ಷಾ ಅಭಿಯಾನದಡಿ 'ಮರಳಿ ಬನ್ನಿ ಶಾಲೆಗೆ' ಎಂಬ ಯೋಜನೆ ಹಮ್ಮಿಕೊಂಡು ಮಕ್ಕಳಿಗೆ ಹಾಲು, ಮೊಟ್ಟೆ, ಅಕ್ಕಿ... ಇತ್ಯಾದಿ ಹಾಳು ಮೂಳು ಕೊಡಲು ಆರಂಭಿಸಿದ್ದು ಹಳೆ ಕಥೆ. (Bogaleragale.blogspot.com)
ಈಗ ಶಿಕ್ಷಕರಿಗಾಗಿ 'ಮರಳಿ ಬನ್ನಿ ಶಾಲೆಗೆ' ಎಂಬ ಹೊಸ ಯೋಜನೆ ಜಾರಿಗೊಳಿಸಲು ಸಿದ್ಧತೆ ನಡೆಯುತ್ತಿದೆ.
ಇತ್ತೀಚೆಗೆ ಶಾಲೆಗೆ ಹಾಜರಾಗುತ್ತಿರುವ ಶಿಕ್ಷಕರ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದ್ದು, ಅವರಿಗೆ ಕಲಿಸಲು ಬೇರೆ ಕಡೆಯೂ…
ವಿಧ: ಬ್ಲಾಗ್ ಬರಹ
November 15, 2006
(ಬೊಗಳೂರು ಶ್ವಾನಾನ್ವೇಷಿ ಬ್ಯುರೋದಿಂದ)
ಬೊಗಳೂರು, ನ.15- ಹಿಂದೊಂದು ಕಾಲವಿತ್ತು, ಬಸ್ಸಿಂದ ಕೆಳಗೆ ಕಾಲಿಟ್ಟ ತಕ್ಷಣ ನಾಯಿಗಳು ಇರುವೆಗಳಂತೆ ಮುತ್ತಿಕೊಳ್ಳುತ್ತಿದ್ದವು. ಆದರೆ ಈಗ ಕಾಲ ಬದಲಾಗಿದೆ. ನಾಯಿಗಳು ನಗರ ಜೀವನದಿಂದ ರೋಸಿ ಹೋಗಿವೆ. ಅವುಗಳು ಬೇರೆ ಪುಟ್ಟ ಪಟ್ಟಣಗಳಿಗೆ ಮತ್ತು ಗ್ರಾಮಾಂತರ ಪ್ರದೇಶಗಳಿಗೆ ವಲಸೆ ಹೋಗುತ್ತಿವೆ.(bogaleragale.blogspot.com)
ಇದಕ್ಕೆ ಕಾರಣವೆಂದರೆ ನಾಯಿಗಳಿಗೆ ಬಾಲ ಅಲ್ಲಾಡಿಸಲು ಜಾಗವೇ ಇಲ್ಲ. ಇರೋದು ಒಂದು ಬಾಲ. ಅದನ್ನೂ ಅಲ್ಲಾಡಿಸಲು ಜಾಗವಿಲ್ಲದ ಮೇಲೆ…
ವಿಧ: ಬ್ಲಾಗ್ ಬರಹ
November 14, 2006
ಬೊಗಳೂರು, ನ.14- ಎಸ್ಸೆಸ್ಸೆಲ್ಸಿ, ಪಿಯುಸಿ ಫಲಿತಾಂಶ ಪ್ರಕಟವಾದಾಗ ಹುಡುಗಿಯರೇ ಮೇಲುಗೈ ಸಾಧಿಸುತ್ತಿದ್ದಾರೆ ಎಂಬುದು ಎಲ್ಲರಿಗೂ ವೇದ್ಯವಾದ ಸಂಗತಿ. ಇತ್ತೀಚೆಗೆ ಕರ್ನಾಟಕ ಸರಕಾರವು ವಿದ್ಯಾರ್ಥಿನಿಯರಿಗೆ ಉಚಿತ ಸೈಕಲ್‌ಗಳನ್ನು ವಿತರಿಸಿ ಅವರನ್ನು ಮತ್ತಷ್ಟು ವೇಗವಾಗಿ ಮುಂದುವರಿಯುವಂತೆ ಮಾಡಿರುವುದರಿಂದ ಆತಂಕಗೊಂಡಿರುವ ಹುಡುಗ ವಿದ್ಯಾರ್ಥಿ ಸಮುದಾಯವು ಸರಕಾರಕ್ಕೆ ಮೊರೆ ಹೋಗಿದೆ. ಒಟ್ಟಿನಲ್ಲಿ ಸರಕಾರದ ಯೋಜನೆಯೊಂದು ಅಸಫಲವಾಗುವ ಮೂಲಕ ಬಾಲಕರು ಹಿಂ-ಬಾಲಕರೇ ಆಗಿಯೂ, ಬಾಲಕಿಯರು ಮುಂ-ಬಾಲಕಿಯರೇ…
ವಿಧ: Basic page
November 13, 2006
ಈಗಾಗಲೇ ೨೫-೩೦ ವರ್ಷಗಳು ಸಂದಿವೆ. ಮಕ್ಕಳು ದೊಡ್ಡವರಾಗಿ ಬೆಳೆದು, ರೆಕ್ಕೆ-ಪುಕ್ಕಗಳು ಬಂದು ಎಲ್ಲೆಲ್ಲೊ ಹಾರಿಹೋಗಿದ್ದಾರೆ. ಒಟ್ಟು ೪೦ ವರ್ಷಗಳಕಾಲ ಮುಂಬೈವಾಸ. ಈಗ ೨೩ ವರ್ಷಗಳಿಂದ ನಮ್ಮ ಸ್ವಂತ ಮನೆಯಲ್ಲಿ ಘಾಟ್ಕೋಪರ್, ನಲ್ಲಿದ್ದೇವೆ. ಆದರೂ ನಾವು ಬೊಂಬಾಯಿನ ಶಿವಾಜಿ ಪಾರ್ಕ್ ನಲ್ಲಿ ಕಳೆದ ೧೦ ವರ್ಷಗಳು ನಿಜಕ್ಕೂ ಅವಿಸ್ಮರಣನೀಯ. ಏಕೆಂದರೆ ಇಲ್ಲಿ ನಮ್ಮ ಇಬ್ಬರು ಮಕ್ಕಳ ಮೊದಲ ಪ್ರಾಥಶಾಲೆಯ ವಿದ್ಯಾಭ್ಯಾಸದ 'ವಿಧಿ' ನಡೆಯಿತು. ೨-೩ ಕನ್ನಡ ಪರಿವಾರಗಳು ನಮ್ಮ ಸಹವರ್ತಿಗಳು ನಮ್ಮೊಡನೆ…
ವಿಧ: ಬ್ಲಾಗ್ ಬರಹ
November 13, 2006
(ಬೊಗಳೂರು ಕೆಲಸವಿಲ್ಲದ ಬ್ಯುರೋದಿಂದ)
ಬೊಗಳೂರು, ನ.13- ದೇಶವನ್ನು ಕಾಡುತ್ತಿರುವ ನಿರುದ್ಯೋಗ ಎಂಬ ಪಿಡುಗು ನಿವಾರಣೆಗೆ ಪೂರ್ಣ ಪ್ರಮಾಣದಲ್ಲಿ ಸಹಕರಿಸುತ್ತಿರುವ ಉಗ್ರಗಾಮಿಗಳಿಗೆ ಭಾರತದ ನಿಧಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ. Bogaleragale.blogspot.com
ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಭಾಗದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಒಂದು ಪೂಜಾ ಕ್ಷೇತ್ರ ಅಥವಾ ಪ್ರಾರ್ಥನಾ ಮಂದಿರಕ್ಕೆ ಗ್ರೆನೇಡ್ ಎಸೆದರೆ 1000 ರೂ. ನೀಡುವ ಈ ಯೋಜನೆಯು ಪಾಕ್ ಪರವಾಗಿರುವ…