ವಿಧ: ಚರ್ಚೆಯ ವಿಷಯ
November 24, 2006
ಆರ್ಕುಟ್ ಕನ್ನಡ ಸಮುದಾಯದಲ್ಲಿ ಒಬ್ಬರು ಈ ಲಿಂಕ್ ಪೋಸ್ಟ್ ಮಾಡಿದ್ದರು. ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ:
[:http://www.flickr.com/photos/yakshagana/]
(ಕೆಲವು ಯಕ್ಷಗಾನದ ಒಳ್ಳೇ ಕ್ವಾಲಿಟಿ ಫೋಟೋಗಳು)
ವಿಧ: ಬ್ಲಾಗ್ ಬರಹ
November 24, 2006
ಇದು ಒಂದು ಹಿಂದಿ ಚಿತ್ರಗೀತೆ- ಆಜ ಕಲ ಪಾಂವ್ ಜಮೀನ ಪರ ನಹಿ ಪಡತೇ ಮೇರೆ -ಯ ಭಾವಾನುವಾದ .
ಈಗೀಗ ನನ್ನ ಕಾಲು ನೆಲದ ಮೇಲಿರುವದಿಲ್ಲ
ನಾನು ಹಾರುತ್ತಿರುವದನ್ನು ನೀವು ನೋಡಿದ್ದೀರ ? ಹೇಳಿ.
ಎಲ್ಲ ಹಸ್ತ ರೇಖೆಯ ಪ್ರಭಾವ ಎಂದು ನೀನೆಂದಾಗ
ನಾನು ಅಂಗೈಯ ನೋಡಿದೆ .
ಭಾಗ್ಯರೇಖೆಗಳ ಸಂಧಿಸುವಿಕೆಯನ್ನು ನಾನು ನೋಡಿದ್ದೇನೆ!
ಇನ್ನೊಂದು ಪ್ಯಾರಾ ಇದೆ ನನಗೆ ನೆನಪಿಲ್ಲ .
ವಿಧ: ಬ್ಲಾಗ್ ಬರಹ
November 24, 2006
ಹಿಂದೊಮ್ಮೆ 'ಸಿರಿಭೂವಲಯ' ಕುರಿತಾದ ಒಂದು ಲೇಖನ ಬಂದಿತ್ತು. ಈ ವಾರದ ತರಂಗದಲ್ಲಿ ಇನ್ನೂ ವಿವರವಾದ ಲೇಖನ ಬಂದಿದೆ. ಓದಿ.
ಕನ್ನಡದ ಒಂದು ವಿಶಿಷ್ಟ ಡಿಜಿಟಲ್ ಕೃತಿಯಾದ ಅದರಲ್ಲಿ ಒಂದರಿಂದ ಅರ್ವತ್ನಾಲ್ಕರವರೆಗಿನ ಅಂಕೆಗಳನ್ನು ಬಳಸಲಾಗಿದೆ. ಈ ಅಂಕೆಗಳನ್ನು ಅಕ್ಷರಗಳಿಗೆ ಪರಿವರ್ತಿಸಿದಾಗ ಭಾರತದ ಏಳ್ನೂರಕ್ಕೂ (ಹೌದು!) ಹೆಚ್ಚು ಭಾಷೆಯ ಲೇಖನಗಳು ಸಿದ್ಧವಾಗುತ್ತವೆ. ವಿವರಗಳಿಗೆ ಈ ವಾರದ ತರಂಗ ಓದಿ.
ವಿಧ: ಚರ್ಚೆಯ ವಿಷಯ
November 24, 2006
ನನ್ನ ಪ್ರಶ್ನೆ ಸರಳವಾದುದು... ಅಂತರ್ಜಾಲದಲ್ಲಿ ಕನ್ನಡದಲ್ಲಿ ಬರೆಯಲು ನೀವು ಯಾವ ತಂತ್ರಾಂಶವನ್ನು ಉಪಯೋಗಿಸಿತ್ತೀರ? ನಿಮ್ಮ ಆಪರೇಟಿಂಗ್ ಸಿಸ್ಟಮ್ ಯಾವುದೆಂದು ತಿಳಿಸಿ.
ವಿಧ: ಬ್ಲಾಗ್ ಬರಹ
November 23, 2006
ಬೊಗಳೂರು, ನ.23- ನಗುವು ಪರಮೌಷಧ ಎಂದು ತಿಳಿದವರು ಹೇಳಿರುವುದರಿಂದ ಭಾರತೀಯ ಕ್ರಿಕೆಟ್ ತಂಡವು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಇದನ್ನು ಶಿರಸಾವಹಿಸಲು ನಿರ್ಧರಿಸಿದ ಪರಿಣಾಮ ನಿನ್ನೆಯ ಪಂದ್ಯದಲ್ಲಿ ಅತ್ಯಂತ ಗೌರವಾನ್ವಿತ ಸೋಲನ್ನಪ್ಪಿದೆ. (bogaleragale.blogspot.com)
ನಗುವು ಸಹಜದ ಧರ್ಮ ನಗಿಸುವುದು ಪರಧರ್ಮ ಅಂತ ಡಿವಿಜಿಯವರೂ ಹೇಳಿರುವುದರಿಂದ ಪ್ರೇರಣೆಗೊಂಡಿರುವ ಭಾರತೀಯ ಕ್ರಿಕೆಟ್ ತಂಡ, ನಿನ್ನೆಯ ಪಂದ್ಯದಲ್ಲಿ ನಗೆಪಾಟಲಿಗೀಡಾಗುವ ಮೂಲಕ ಭಾರತೀಯರು ಗಹಗಹಿಸಿ ನಗುವಂತೆ…
ವಿಧ: ಬ್ಲಾಗ್ ಬರಹ
November 23, 2006
ಕೆ.ಎಸ್.ಸಿ.ಯ ಮನವಿಗೆ ಅನಿವಾಸಿ ಕನ್ನಡಿಗರು ಅದ್ಭುತವಾಗಿ ಪ್ರತಿಕ್ರಿಯಿಸುತ್ತಿದ್ದಾರೆ.ಅದರ ಮೊದಲ ಭಾಗವಾಗಿ, ಜಾರ್ಜಿಯ ನೃಪತುಂಗ ಕೂಟದ ಸದಸ್ಯರು ೭೦ ಸಹಿಗಳನ್ನು ಸಂಗ್ರಹಿಸಿ ಕಳಿಸಿದ್ದಾರೆ.ಅನಿವಾಸಿ ಕನ್ನಡಿಗರ ೭೫ ಸಹಿಗಳನ್ನು 'ವಿಚಿತ್ರಾನ್ನ' ಅಂಕಣ ಖ್ಯಾತಿಯ ಶ್ರೀವತ್ಸ ಜೋಷಿಯವರು ಸಂಗ್ರಹಿಸಿದ್ದು ಅಂಚೆ ಮೂಲಕ ಕಳಿಸುವುದಾಗಿ ಹೇಳಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ `ಅಕ್ಕ' ಬಳಗದ ಪದಾಧಿಕಾರಿಗಳ ಸಹಿಗಳನ್ನು ಸಂಗ್ರಹಿಸುವ ಕಾರ್ಯ ಕೈಗೆತ್ತಿಕೊಂಡಿದ್ದಾರೆ. ಅವರ ಕನ್ನಡ ಪ್ರೀತಿ…
ವಿಧ: ಕಾರ್ಯಕ್ರಮ
November 22, 2006
ಬೇಂದ್ರೆಯವರ ಅಪರೂಪದ ಭಾವಚಿತ್ರ, ರೇಖಾಚಿತ್ರ, ಸಾಕ್ಷ್ಯಚಿತ್ರಗಳ ಸಹಯೋಗದಲ್ಲಿ
ಕಾವ್ಯವಾಚನ ವಿವಿಧ ಕ್ಷೇತ್ರಗಳ ಗಣ್ಯರಿಂದ
ಕಾವ್ಯ ಶ್ರವಣ ಬೇಂದ್ರೆ ಧ್ವನಿಯಲ್ಲಿ
೨೬ ನವೆಂಬರ್
ಭಾನುವಾರ
ಬೆಳಗಿನ ೯.೩೦ ಕ್ಕೆ
ಯವನಿಕಾ, ನೃಪತುಂಗ ರಸ್ತೆ, ಬೆಂಗಳೂರು - ೧
ಬೇಂದ್ರೆ ಪದ್ಯ ಓದೋ ಮಂದಿ
ಪಂ. ಪರಮೇಶ್ವರ ಹೆಗಡೆ * [kn:ಯು ಆರ್ ಅನಂತಮೂರ್ತಿ|ಯು ಆರ್ ಅನಂತಮೂರ್ತಿ] * [kn:ಬರಗೂರು ರಾಮಚಂದ್ರಪ್ಪ|ಬರಗೂರು ರಾಮಚಂದ್ರಪ್ಪ] * ಸಿದ್ದಲಿಂಗ ಪಟ್ಟಣಶೆಟ್ಟಿ * ಸಿ ಆರ್ ಸಿಂಹ ಶ್ರೀಕಾಂತ *…
ವಿಧ: ಬ್ಲಾಗ್ ಬರಹ
November 21, 2006
ಎಲ್ಲರೂ ಪ್ರಯಾಣ ಮಾಡುತ್ತಾರೆ, ಎಲ್ಲರೂ ಪ್ರಯಾಸ ಕಥನ ಬರೆಯುತ್ತಾರೆ, ನಿಮ್ಮ ಬೊಗಳೆಯಲ್ಲೇಕಿಲ್ಲ ಎಂಬ ಅಪವಾದದಿಂದ ಅವಮಾನಿತನಾಗಿ ಉಜ್ಜೈನಿ ಯಾತ್ರೆಗೆ ತೆರಳಿದ ಅಸತ್ಯಾನ್ವೇಷಿಯಿಂದ ಬೊಗಳೆ-ರಗಳೆಗಾಗಿಯೇ ವಿಶೇಷವಾಗಿ ಸಿದ್ಧಪಡಿಸಲಾದ ದಯನೀಯ ಪ್ರಯಾಸ ಕಥನವಿದು. (ಚಿತ್ರ ಸಹಿತ Bogaleragale.blogspot.com)
ಪ್ರಯಾಸ ಕಥನ ಜವಾಬ್ದಾರಿಯನ್ನು ಬೊಗಳೆ-ರಗಳೆಯ ಏಕಸದಸ್ಯ ಬ್ಯುರೋ ನನಗೊಪ್ಪಿಸಿದ ಪರಿಣಾಮ ಬೇತಾಳನನ್ನೇ ಕಾಡಿದ ವಿಕ್ರಮಾದಿತ್ಯ ಆಳಿದ ಮತ್ತು ಕಳ್ಳಭಟ್ಟಿ ನೆನಪಿಸುವ ಭಟ್ಟಿ ಇರುವ ನಾಡಿಗೆ…
ವಿಧ: ಚರ್ಚೆಯ ವಿಷಯ
November 21, 2006
ದೇಸಗತಿ ಭಾಷೆಗಳು, ಒಂದೇಸಮನೆ ಏರುಮುಖವಾಗಿ ಅಭಿವೃದ್ಧಿ ಹೊಂದುತ್ತಿರುವ ತಂತ್ರಜ್ಞಾನ ಕ್ಷೇತ್ರದಲ್ಲಿ ಎದುರಿಸುತ್ತಿರುವ ಸವಾಲುಗಳ, ಸಾಮಾಜಿಕ, ಸಾಂಸ್ಕೃತಿಕ ಆಯಾಮಗಳ ಬಗೆಗೆ, ಸಾಮಾಜಿಕ ಕಳಕಳಿಯಿಂದ, ವಾಸ್ತವ ನೆಲೆಗಟ್ಟಿನಲ್ಲಿ ನಿಂತು ಯೋಚಿಸುವ, ಸಕಾರಾತ್ಮಕ, ಕ್ರಿಯಾಶೀಲ, ದೃಢ ಸಂಕಲ್ಪಶಕ್ತಿಯಿಂದ ಕೂಡಿದ ಪ್ರಯೋಗಶೀಲ ಗುಣಧರ್ಮದ, ವೈಚಾರಿಕ ಚಿಂತನೆಯ ಭಾಗವಾಗಿ ಕನ್ನಡಸಾಹಿತ್ಯ.ಕಾಂ ಹಾಗೂ ಬೆಂಬಲಿಗರ ಬಳಗದವರು ಕರ್ನಾಟಕದ ಮುಖ್ಯಮಂತ್ರಿಗಳು, ಸೇರಿದಂತೆ, ಕನ್ನಡ ಸಂಸ್ಕೃತಿ, ತಂತ್ರಜ್ಞಾನಕ್ಕೆ…
ವಿಧ: ಬ್ಲಾಗ್ ಬರಹ
November 20, 2006
೧೯ನೆ ಶತಕದ ಅಂತ್ಯಭಾಗದಲ್ಲಿ ಬ್ರಿಟಿಷ್ ಮ್ಯೂಸಿಯಂನ ಪರವಾಗಿ ಜಪಾನಿನಲ್ಲಿ ಯಾತ್ರೆ ಕೈಗೊಂಡ ರಿಚರ್ಡ್ ಗಾರ್ಡನ್ ಸ್ಮಿತ್ ಎಂಬಾತನು ಅಲ್ಲಿ ಕೇಳಿ ಸಂಗ್ರಹಿಸಿದ ಕಥೆಗಳಲ್ಲಿ ಕೆಲವನ್ನು ಪುಸ್ತಕವಾಗಿ ೧೯೦೮ರಲ್ಲಿ ಪ್ರಕಟಿಸಿದನು. ಅವುಗಳಲ್ಲಿ ಕೆಲವನ್ನು ಆರಿಸಿ ಅನುವಾದಿಸಿ ಇಲ್ಲಿ ಕನ್ನಡದ ಓದುಗರಿಗೆ ಪರಿಚಯಿಸುತ್ತಿದ್ದೇನೆ. ಮೊದಲನೆಯ ಕಂತಾಗಿ ಅವೊತು ಫುಜಿತ್ಸುನ ಎಂಬ ಪ್ರಾಮಾಣಿಕನ ಕಥೆಯನ್ನು ಅನುವಾದಿದ್ದೇನೆ. ಈ ಕೊಂಡಿಯನ್ನು ಅನುಸರಿಸಿ ಇಡಿಯ ಕಥೆಯನ್ನು ಓದಬಹುದು.
ವೆಂ.