ವಿಧ: ಬ್ಲಾಗ್ ಬರಹ
November 08, 2006
ಒಬ್ಬ ಗುರುವಿನ ಹತ್ತಿರ ಒಬ್ಬ ಶಿಷ್ಯ ಅಧ್ಯಯನ ಮಾಡುತ್ತಿದ್ದ . ಅವನು ಯಾವಾಗಲೂ ಓದಿನ ಕುರಿತೇ ಚಿಂತಿಸುತ್ತಿದ್ದ. ಗುರುಗಳು ತಮ್ಮ ಪತ್ನಿಗೆ ಶಿಷ್ಯನಿಗೆ ಊಟದ ಸಮಯದಲ್ಲಿ ತುಪ್ಪದ ಬದಲು ಬೇವಿನ ಎಣ್ಣೆಯನ್ನು ಬಡಿಸಲು ಹೇಳಿದ್ದರು. ಆ ಪ್ರಕಾರ ಅವರು ಪ್ರತಿದಿನ ಬೇವಿನ ಎಣ್ಣೆ ಬಡಿಸಿದರೂ , ಅನ್ನದ ಜತೆ ಅದನ್ನೇ ಕಲಸಿಕೊಂಡು ಉಣ್ಣುತ್ತಿದ್ದ . ಅವನಿಗೆ ಅದರ ರುಚಿ ಗೊತ್ತಾಗುತ್ತಲೇ ಇರಲಿಲ್ಲ. ಏಕೆಂದರೆ ಊಟದತ್ತ ಅವನ ಗಮನ ಇರಲೇ ಇಲ್ಲವಲ್ಲ? .
ಹೀಗೆ ಅನೇಕ ವರ್ಷಗಳು ಕಳೆದವು .
ಒಂದು ದಿನ ಅವನು…
ವಿಧ: ಬ್ಲಾಗ್ ಬರಹ
November 07, 2006
ಲೈನಕ್ಸ್ ನ ಕನ್ನಡೀಕರಣಕ್ಕಾಗಿ ಹದಿನೈದು ಸಾವಿರ ಶಬ್ದ/ವಾಕ್ಯಗಳ ಅನುವಾದ ಅಗತ್ಯವಿದ್ದು . ನಾನು ಈ ಕೆಲಸಕ್ಕೆ ಕೈ ಹಾಕಿದಾಗ ಅದಾಗಲೇ ಐದುಸಾವಿರದಷ್ಟು ಅನುವಾದ ಆಗಿತ್ತು ಎರಡು ತಿಂಗಳ ಅವಧಿಯಲ್ಲಿ ನಾನೂ ಸುಮಾರು ಐದುಸಾವಿರದಷ್ಟು ಅನುವಾದ ಮಾಡಿದ್ದು ೨/೩ ರಷ್ಟು ಅನುವಾದ ಆದಂತಾಗಿದೆ. ಮುಂದೆ ನನ್ನ ಕೈಸಾಗದೆ ಬಿಟ್ಟಿರುವೆ.
ಮುಂದೇನು ?
ಈದೀಗ ಗೂಗ್ಲ್ ನಲ್ಲೂ ಇಂಥ ಒಂದು ಕೆಲಸ ನದೆದಿರುವದು ಗಮನಕ್ಕೆ ಬಂತು . ಅದಕ್ಕೆ ಕೈ ಹಚ್ಚಿರುವೆ ಈಗ.
ಜೋಕುಮಾರಸ್ವಾಮಿ ನಾಟಕ ನೀವು ಓದಿರಬಹುದು ಅಥವಾ…
ವಿಧ: ಬ್ಲಾಗ್ ಬರಹ
November 07, 2006
ಮೊನ್ನೆ ದೀಪಾವಳಿಯಂದು ೪ ದಿನ ರಜಾ ಇದ್ದರೂ ಎಲ್ಲೂ ಚಾರಣ ಮಾಡಲು ಸಾಧ್ಯವಾಗಲಿಲ್ಲ. ೩ ದಿನ ಮನೆಯಲ್ಲೇ ಕೂತು 'ಫುಲ್ ಬೋರ್' ಹೊಡೆಸಿಕೊಂಡು, ನಾಲ್ಕನೇ ದಿನ ಸೋಮವಾರ ೨೩ ಅಕ್ಟೊಬರ್-ರಂದು 'ನಡೀಪ್ಪಾ ಮಾರಾಯ, ಆಗುಂಬೆಗಾದರೂ ಹೋಗಿಬರೋಣು' ಎಂದು ಯಮಾಹ ಏರಿದೆ.
ರಜಾದಿನವಾಗಿದ್ದರಿಂದ 'ಸನ್ ಸೆಟ್ ವ್ಯೂ ಪಾಯಿಂಟ್'ನಲ್ಲಿ ಜನಜಂಗುಳಿ. ಸ್ವಲ್ಪ ಮುಂದೆ ಸಾಗಿ ನೋಡಿದರೆ ಪಡಿಯಾರ್-ನ ಅಂಗಡಿಯಲ್ಲಿ 'ಫುಲ್ ರಶ್'. ತಲೆ ಮೇಲೆತ್ತಿ ನೋಡಲು ಕೂಡಾ ಪುರುಸೊತ್ತಿಲ್ಲದೆ, ಚಟ್ಟಂಬಡೆ ಕರಿಯಲು ಬಿಡುತ್ತಾ, ಜನ…
ವಿಧ: Basic page
November 06, 2006
'ರಘುಪತಿ ರಾಘವ ರಾಜಾರಾಮ್, ಪತೀತ ಪಾವನ ಸೀತಾರಾಮ್'.....
ಈ ಹಾಡನ್ನು ರಾಗವಾಗಿ ಹೇಳುತ್ತ, ಭಾವುಕತೆಯ ಉತ್ತುಂಗದಲ್ಲಿ ತೇಲುತ್ತಾ ಅವನ ಲೋಕದಲ್ಲೇ ಕಳೆದುಹೋಗುತ್ತಾನೋ ಎನ್ನಿಸುವಷ್ಟು ಮಗ್ನನಾದ ಒಬ್ಬ ವ್ಯಕ್ತಿ(ತಿರುಕ) ನನ್ನಮೇಲೆ ಗಾಢವಾದ ಪರಿಣಾಮ ಬೀರಿದ್ದಾನೆ ! ಎಲ್ಲರು ಗಮನಿಸುವಂತೆ, ಇತರ ನೇತ್ರಹೀನ ಬಿಕ್ಷುಕರು ತಮ್ಮ ದುಷ್ಕರ್ಮವನ್ನು ಹಳಿದುಕೊಳ್ಳುತ್ತಾ 'ಪಾಪಿ ಪೇಟ್ ಕೆ ಲಿಯ ಕುಚ್ ದೇದೋ ಮಾ; ಜನಮ್ ಸೆ ಅಂಧ ಹೈ, ದಯಾ ಕರೋ' ಎಂದೋ ಮೇರಾ ಕೋಯಿ ನಹಿ ಹೈ; ಇಸ್ ದುನಿಯ ಮೆ' ಇತ್ಯಾದಿ ಗಳು ಅವನ…
ವಿಧ: ಕಾರ್ಯಕ್ರಮ
November 06, 2006
[kn:ರಾ ಶಿವರಾಂ|ರಾಶಿ] ಅವರ ಪುಸ್ತಕಗಳ ಬಿಡುಗಡೆ ಮತ್ತು ಶ್ರೀ ಎಚ್. ಎಸ್. ದೊರೆಸ್ವಾಮಿ ಅವರಿಗೆ ಗೌರವ ಸಮರ್ಪಣೆ
೧೦ - ೧೧ - ೨೦೦೬ ಶುಕ್ರವಾರ ಸಂಜೆ ೬ ಗಂಟೆಗೆ
ಸ್ಥಳ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್
ನಂ ೬, ಬಿ ಪಿ ವಾಡಿಯಾ ರಸ್ತೆ, ಬಸವನಗುಡಿ, ಬೆಂಗಳೂರು ೫೬೦ ೦೦೪
ಕೊರವಂಜಿ-ಅಪರಂಜಿ ಟ್ರಸ್ಟ್
ಹಾಸ್ಯ ಬ್ರಹ್ಮ ಟ್ರಸ್ಟ್
ಅಂಕಿತ ಪುಸ್ತಕ
ರಾಶಿ ಅವರ ಪುಸ್ತಕಗಳ ಬಿಡುಗಡೆ ಮತ್ತು ಶ್ರೀ ಎಚ್. ಎಸ್. ದೊರೆಸ್ವಾಮಿ ಅವರಿಗೆ ಗೌರವ ಸಮರ್ಪಣೆ
ಉದ್ಘಾಟನೆ ಮತ್ತು ಪುಸ್ತಕಗಳ…
ವಿಧ: ಬ್ಲಾಗ್ ಬರಹ
November 06, 2006
'ನಾವು ಮನುಷ್ಯರಯ್ಯ, ಪ್ರಾಣಿಗಳಲ್ಲ'. ಅದರಲ್ಲೇಕೆ ಸಂಶಯ? ನಾವು ಪ್ರಾಣಿಗಳಲ್ಲವೆಂದೋ ಅಥವಾ ಪ್ರಾಣಿಗಳಿಗಿಂತ ಮಿಗಿಲೆಂದೋ ಹೇಳಿಕೊಳ್ಳದಿದ್ದರೆ ನಮ್ಮ ಅಹಮ್ಮಿಗೆ ಸಂತೃಪ್ತಿ ಯಾಗಬೇಡವೇ? ಈಗಂತೂ 'ಅಹಂ ಪೋಷಣೆ' ಎನ್ನುವುದು ವ್ಯಾಪಾರೀಕರಣದ ಮೂಲಮಮಂತ್ರವೇ ಆಗಿರುವಾಗ, ಅದಕ್ಕೆ 'ಅಗತ್ಯವಾದ ಸರಕುಗಳೆಲ್ಲವೂ' ನಮ್ಮ ಮಾರುಕಟ್ಟೆಗಳಲ್ಲಿ, ಮಾಲು ಮಳಿಗೆಗಳಲ್ಲಿ ಕೈ ಗೆಟಕುವಂತಿರುವಾಗ, ನಾವೂ ಪ್ರಾಣಿಗಳೆಂಬುದು ನೆನಪಾಗುವುದಾದರೂ ಹೇಗೆ?
ನಾವಿಂದು ತಾಯಿ ಪೃಕೃತಿಯಿಂದ ಎಷ್ಟೊಂದು ವಿಮುಖರಾಗಿದ್ದೇವೆಂದರೆ,…
ವಿಧ: ಬ್ಲಾಗ್ ಬರಹ
November 06, 2006
ಕನ್ನಡಸಾಹಿತ್ಯಡಾಟ್‌ಕಾಂ ಬೆಂಬಲಿಗರ ಬಳಗ ತನ್ನ ಚಟುವಟಿಕೆಗಳನ್ನು ಕರ್ನಾಟಕದ ಜಿಲ್ಲಾಮಟ್ಟದ ವ್ಯಾಪ್ತಿಗೆ ವಿಸ್ತರಿಸಿಕೊಳ್ಳುವ ಸೂಚನೆಯನ್ನು ತೋರಲಾರಂಭಿಸಿದೆ. ಇದಕ್ಕೆ ಉದಾಹರಣೆ ಎನ್ನಬಹುದಾದರೆ, ತುಮಕೂರು ನಗರದ ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ದಿನಾಂಕ ೦೫-೧೧-೨೦೦೬ ರ ಭಾನುವಾರದಂದು ನೆಡೆದ ಸಭೆ.ಪ್ರಜಾಪ್ರಗತಿಯ ಕೋಟೆ ನಾಗಭೂಷಣ್, ಆರ್.ಎಸ್.ಅಯ್ಯರ್‌ರವರು ಆಯೋಜಿಸಿದ್ದ ಈ ಸಭೆಯಲ್ಲಿ ಬೆಂಗಳೂರಿನಿಂದ ಶೇಖರಪೂರ್ಣ ಮತ್ತು ನಾನು ಭಾಗವಹಿಸಿದ್ದೆವು. ಕಂಪ್ಯೂಟರಿನ ಸವಲತ್ತುಗಳು…
ವಿಧ: ಬ್ಲಾಗ್ ಬರಹ
November 04, 2006
(ಬೊಗಳೂರು ಅರಾಜಕ ಬ್ಯುರೋದಿಂದ)
ಬೊಗಳೂರು, ನ.4- ವಯೋವೃದ್ಧರೂ ನಟನಾ ವೃದ್ಧರೂ ಆದ ಬಾಲಿವುಡ್‌ನ ಪ್ರಥಮ ಪ್ರಜೆ 64ರ ಹರೆಯದ ಅಮಿತಾಭ್ ಬಚ್ಚನ್ ಅವರು ಐದು ಗಂಟೆಗಳಲ್ಲಿ 23 ದೃಶ್ಯದಲ್ಲಿ ಪಾಲ್ಗೊಂಡಿದ್ದು ದಾಖಲೆ ಎಂದು ಇಲ್ಲಿ ಸುದ್ದಿಯಾಗುತ್ತಿರುವಂತೆಯೇ ಕೆರಳಿ ಕೆಂಡವಾಗಿರುವ ರಾಜಕಾರಣಿಗಳು, ಈ ದಾಖಲೆ ತಮ್ಮ ಪಾಲಿಗೆ ಸೇರಬೇಕು ಎಂದು ಮುಗಿಬಿದ್ದ ಘಟನೆಯೊಂದು ಯಾರ ಗಮನಕ್ಕೂ ಬಂದಿಲ್ಲ.
ಅಮಿತಾಭ್ ಅವರು ಐದು ಗಂಟೆಗಳಲ್ಲಿ ಕೇವಲ 23 ಬಾರಿ ಬಣ್ಣ ಬದಲಿಸಿದ್ದಾರೆ. ಆದರೆ ನಾವು ಒಂದು ನಿಮಿಷದಲ್ಲಿ…
ವಿಧ: ಬ್ಲಾಗ್ ಬರಹ
November 03, 2006
.....ಅಂತ ಹಿರಿಯರು ಹೇಳಿದ್ದಾರೆ. ಕೆಲವು ಗಾದೆಗಳು ಅದನ್ನು ನಿರೂಪಿಸಿದೆ ಹಾಗೂ ಇವತ್ತಿಗೂ ಸತ್ಯವೇ! ಈ ಸತ್ಯದ ಪರವಾಗಿ ಒಂದು ಗಾದೆ
ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲ.
ಬನ್ನಿ ಸ್ವಾಮಿ ಸ್ವಲ್ಪ ಸಮಾಜದಲ್ಲಿ ಇಣುಕೋಣ. ಸತ್ಯ ಏನೆಂದು ತಿಳಿಯಲು ಹೋದರೆ ಎಲ್ಲಿದೆ ! ಎಲ್ಲದರಲ್ಲಿಯೂ ಸುಳ್ಳಿನ ಸರಮಾಲೆ. ಕೋಕಾಕೋಲಾ ಕುಡಿಯಿರಿ ಅದರಲ್ಲಿ ಕೀಟನಾಶಕ ಇಲ್ಲ ಇದನ್ನು ಹೇಳುವದು ನಮ್ಮ ತಾರಾಮಣಿಗಳು, ತಾರಾ ಆಟಗಾರರು!! ಪ್ರಯೋಗಶಾಲೆಯಲ್ಲಿ ಏನು ಪರೀಕ್ಷೆ ಮಾಡುತ್ತಾರೆ? ಅದಕ್ಕಿಂತ ಹೆಚ್ಚಿನ…
ವಿಧ: ಬ್ಲಾಗ್ ಬರಹ
November 03, 2006
ನಮಸ್ಕಾರ,
ಒಂದೆರಡು ರಸಪ್ರಶ್ನೆಗಳು-
ಕನ್ನಡದ ಪ್ರಥಮ ಉಚಿತ ಪದಸಂಸ್ಕಾರಕ (ವರ್ಡ್‌ಪ್ರೋಸೆಸರ್) ಯಾವುದು? ತಯಾರಿಸಿದವರು ಯಾರು?
(ಬರಹ ಎನ್ನುತ್ತಿದ್ದೀರಾ? ನುಡಿ ಎನ್ನುತ್ತಿದ್ದೀರಾ?)
ಗಣಕದಲ್ಲಿ ಕನ್ನಡಕ್ಕೆ ಪ್ರಥಮ ಬಾರಿಗೆ ಕೀಲಿಮಣೆ ತಂತ್ರಾಂಶ ಅಳವಡಿಸಿದವರು ಯಾರು?
ಕನ್ನಡಕ್ಕೆ ಮೊದಲ ಬಾರಿಗೆ ಫಾಂಟ್ ತಯಾರಿಸಿದವರು ಯಾರು?
ಭಾರತೀಯ ಭಾಷೆಗಳಿಗೆ ಮೊದಲ ಬಾರಿಗೆ ಧ್ವನ್ಯಾತ್ಮಕ (phonetic) ಕೀಲಿಮಣೆ ಅಳವಡಿಸಿದವರು ಯಾರು?
ಇಷ್ಟೆಲ್ಲ ಸಾಧನೆ ಮಾಡಿ ಯಾವ ಪ್ರಶಸ್ತಿಯನ್ನೂ ಪಡೆಯದವರು ಯಾರು ಗೊತ್ತೆ…