ಮತ್ತೊಮ್ಮೆ ಹನಿಗಳೊಂದಿಗೆ
ಸೋತ ಸೂರ್ಯ
ಪಡುವಣದ ಸಮುದ್ರದ
ಎದೆಯಲ್ಲಿ
ಪಿಸುಗುಡಲು
ಹವಣಿಸುತ್ತ ಇರುವಾಗ
ಅಗೋ ತಿಂಗಳ
ಆಗಮನ
***************
ಅವಳ ಕಣ್ಣ ಆಳ
ತಿಳಿಯದೆ ಈಜು
ಬಾರದ ಅವನು
ತನ್ನನ್ನೇ ಬಲಿಕೊಡುತ್ತಾನೆ.
***************
ಅವಳೆಂದರೆ ಅವನಿಗೆ
ಸತ್ತು ಹೋಗುವಷ್ಟು ಇಷ್ಟ
ಅದಕ್ಕೆ ಅವಳ ಎದುರು
ಮಾತಾಡುವುದು ಕಷ್ಟ.
*********************
ಮನದಿ ತುಂಬಿರೋ
ಕಾವಳವನ್ನು
ಕಸ ಗುಡಿಸೋ ಅವನು
ಎಲೆ ಅಡಿಕೆ ಹಾಕಿಕೊಂಡು
ಉಗಿಯುತ್ತಾನೆ.
****************
ರಾತ್ರಿ ಕೊಂದ
ಕನಸುಗಳು
ಮುಂಜಾವಿನಲಿ
ಮಂಜಾಗಿ
ಜಗದ
ತುಂಬಾ
ಸವಾರಿ
ಹೊರಡುತ್ತವೆ
**************
ಅವನ ಕಣ್ಣ
ಪಾಪೆಯಲ್ಲಿ
ಸತ್ತು ಬಿದ್ದ
ನೆನಪುಗಳು
ಕಂದು
ಓನುಗಳಾಗಿವೆ
*************
ಪ್ರತಿ ಸಾರಿಯೂ
ಜಗವು ಭಾವನೆಗೆ
ಕಿವುಡಾದಾಗ
ಕವಿತೆ ಎದೆಯೊಳಗೆ
ಗರ್ಭ ಧರಿಸುತ್ತದೆ.
******************
ಜಗದ ಕಣ್ಣಿಗೆ
ಮೌನಿಯಾದ ಅವಳು
ಆತ್ಮದ ಕನ್ನಡಿಯ
ಮುಂದೆ ಸುಮ್ಮನೆ
ಅಳುತ್ತಾಳೆ.
Rating
Comments
ಉ: ಮತ್ತೊಮ್ಮೆ ಹನಿಗಳೊಂದಿಗೆ
In reply to ಉ: ಮತ್ತೊಮ್ಮೆ ಹನಿಗಳೊಂದಿಗೆ by Chikku123
ಉ: ಮತ್ತೊಮ್ಮೆ ಹನಿಗಳೊಂದಿಗೆ
ಉ: ಮತ್ತೊಮ್ಮೆ ಹನಿಗಳೊಂದಿಗೆ
In reply to ಉ: ಮತ್ತೊಮ್ಮೆ ಹನಿಗಳೊಂದಿಗೆ by kamath_kumble
ಉ: ಮತ್ತೊಮ್ಮೆ ಹನಿಗಳೊಂದಿಗೆ
ಉ: ಮತ್ತೊಮ್ಮೆ ಹನಿಗಳೊಂದಿಗೆ
In reply to ಉ: ಮತ್ತೊಮ್ಮೆ ಹನಿಗಳೊಂದಿಗೆ by ksraghavendranavada
ಉ: ಮತ್ತೊಮ್ಮೆ ಹನಿಗಳೊಂದಿಗೆ
ಉ: ಮತ್ತೊಮ್ಮೆ ಹನಿಗಳೊಂದಿಗೆ
In reply to ಉ: ಮತ್ತೊಮ್ಮೆ ಹನಿಗಳೊಂದಿಗೆ by prasannakulkarni
ಉ: ಮತ್ತೊಮ್ಮೆ ಹನಿಗಳೊಂದಿಗೆ
ಉ: ಮತ್ತೊಮ್ಮೆ ಹನಿಗಳೊಂದಿಗೆ
ಉ: ಮತ್ತೊಮ್ಮೆ ಹನಿಗಳೊಂದಿಗೆ
In reply to ಉ: ಮತ್ತೊಮ್ಮೆ ಹನಿಗಳೊಂದಿಗೆ by Anupama V Joshi
ಉ: ಮತ್ತೊಮ್ಮೆ ಹನಿಗಳೊಂದಿಗೆ