ಮತ್ತೊಮ್ಮೆ ಹನಿಗಳೊಂದಿಗೆ

Submitted by ravi kumbar on Thu, 03/31/2011 - 16:23

 

 
 

 

 

ಕಿರಣಗಳ ಭಾರಕ್ಕೆ 

ಸೋತ ಸೂರ್ಯ 

ಪಡುವಣದ ಸಮುದ್ರದ 

ಎದೆಯಲ್ಲಿ 

ಪಿಸುಗುಡಲು

ಹವಣಿಸುತ್ತ ಇರುವಾಗ 

ಅಗೋ ತಿಂಗಳ 

ಆಗಮನ 

***************

ಅವಳ ಕಣ್ಣ ಆಳ 

ತಿಳಿಯದೆ ಈಜು 

ಬಾರದ ಅವನು 

ತನ್ನನ್ನೇ ಬಲಿಕೊಡುತ್ತಾನೆ.

***************

ಅವಳೆಂದರೆ ಅವನಿಗೆ 

ಸತ್ತು ಹೋಗುವಷ್ಟು ಇಷ್ಟ 

ಅದಕ್ಕೆ ಅವಳ ಎದುರು 

ಮಾತಾಡುವುದು ಕಷ್ಟ.

*********************

ಮನದಿ ತುಂಬಿರೋ 

ಕಾವಳವನ್ನು 

ಕಸ ಗುಡಿಸೋ ಅವನು 

ಎಲೆ ಅಡಿಕೆ ಹಾಕಿಕೊಂಡು 

ಉಗಿಯುತ್ತಾನೆ

****************

ರಾತ್ರಿ ಕೊಂದ 

ಕನಸುಗಳು 

ಮುಂಜಾವಿನಲಿ 

ಮಂಜಾಗಿ 

ಜಗದ 

ತುಂಬಾ 

ಸವಾರಿ 

ಹೊರಡುತ್ತವೆ

**************

ಅವನ ಕಣ್ಣ

ಪಾಪೆಯಲ್ಲಿ 

ಸತ್ತು ಬಿದ್ದ 

ನೆನಪುಗಳು 

ಕಂದು

ಓನುಗಳಾಗಿವೆ

*************

ಪ್ರತಿ ಸಾರಿಯೂ 

ಜಗವು ಭಾವನೆಗೆ 

ಕಿವುಡಾದಾಗ

ಕವಿತೆ ಎದೆಯೊಳಗೆ 

ಗರ್ಭ ಧರಿಸುತ್ತದೆ

******************

ಜಗದ ಕಣ್ಣಿಗೆ 

ಮೌನಿಯಾದ  ಅವಳು 

ಆತ್ಮದ ಕನ್ನಡಿಯ 

ಮುಂದೆ ಸುಮ್ಮನೆ 

ಅಳುತ್ತಾಳೆ

 

 
Rating
No votes yet

Comments