ಮತ್ತೊಮ್ಮೆ ಹನಿಗಳೊಂದಿಗೆ

4.5

 ಕಿರಣಗಳ ಭಾರಕ್ಕೆ 

ಸೋತ ಸೂರ್ಯ 

ಪಡುವಣದ ಸಮುದ್ರದ 

ಎದೆಯಲ್ಲಿ 

ಪಿಸುಗುಡಲು

ಹವಣಿಸುತ್ತ ಇರುವಾಗ 

ಅಗೋ ತಿಂಗಳ 

ಆಗಮನ 

***************

ಅವಳ ಕಣ್ಣ ಆಳ 

ತಿಳಿಯದೆ ಈಜು 

ಬಾರದ ಅವನು 

ತನ್ನನ್ನೇ ಬಲಿಕೊಡುತ್ತಾನೆ.

***************

ಅವಳೆಂದರೆ ಅವನಿಗೆ 

ಸತ್ತು ಹೋಗುವಷ್ಟು ಇಷ್ಟ 

ಅದಕ್ಕೆ ಅವಳ ಎದುರು 

ಮಾತಾಡುವುದು ಕಷ್ಟ.

*********************

ಮನದಿ ತುಂಬಿರೋ 

ಕಾವಳವನ್ನು 

ಕಸ ಗುಡಿಸೋ ಅವನು 

ಎಲೆ ಅಡಿಕೆ ಹಾಕಿಕೊಂಡು 

ಉಗಿಯುತ್ತಾನೆ

****************

ರಾತ್ರಿ ಕೊಂದ 

ಕನಸುಗಳು 

ಮುಂಜಾವಿನಲಿ 

ಮಂಜಾಗಿ 

ಜಗದ 

ತುಂಬಾ 

ಸವಾರಿ 

ಹೊರಡುತ್ತವೆ

**************

ಅವನ ಕಣ್ಣ

ಪಾಪೆಯಲ್ಲಿ 

ಸತ್ತು ಬಿದ್ದ 

ನೆನಪುಗಳು 

ಕಂದು

ಓನುಗಳಾಗಿವೆ

*************

ಪ್ರತಿ ಸಾರಿಯೂ 

ಜಗವು ಭಾವನೆಗೆ 

ಕಿವುಡಾದಾಗ

ಕವಿತೆ ಎದೆಯೊಳಗೆ 

ಗರ್ಭ ಧರಿಸುತ್ತದೆ

******************

ಜಗದ ಕಣ್ಣಿಗೆ 

ಮೌನಿಯಾದ  ಅವಳು 

ಆತ್ಮದ ಕನ್ನಡಿಯ 

ಮುಂದೆ ಸುಮ್ಮನೆ 

ಅಳುತ್ತಾಳೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಎಲ್ಲವೂ ಚೆನ್ನಾಗಿದೆ. ಮೊದಲನೆಯದು ಸಕತ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದ ಚೇತನ್. ವಿಶ್ವಾಸದೊಂದಿಗೆ ರವಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರವಿಯವರೇ ಎಲ್ಲವೂ ಚೆನ್ನಾಗಿದೆ <ಪ್ರತಿ ಸಾರಿಯೂ ಜಗವು ಭಾವನೆಗೆ ಕಿವುಡಾದಾಗ ಕವಿತೆ ಎದೆಯೊಳಗೆ ಗರ್ಭ ಧರಿಸುತ್ತದೆ. > ತುಂಬಾ ಹಿಡಿಸಿತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವೆಂಕಟೇಶ್ ರಿಗೆ ವಂದನೆಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮತ್ತೊ೦ದು ಸೊಗಸಾದ ಹನಿಗಳ ಗುಚ್ಛ!! ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಘು ಸಾರ್ ಇವೆಲ್ಲ ನಿಮ್ಮೆಲ್ಲರ ಪ್ರೋತ್ಸಾಹದ ಪರಿಣಾಮ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೋವಿನಲ್ಲೂ ತೃಪ್ತಿಯನ್ನು ಕ೦ಡ ಮನಸ್ಸಿನ ಮಾತುಗಳೇ ಈ ಹನಿಗಳು? ಮನದ ಕದ ತಟ್ಟಲು ಯಶಸ್ವಿಯಾಗಿವೆ ಹನಿಗಳು... ಅಭಿನ೦ದನೆಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ಪ್ರಸನ್ನ ನೋವಿನಲ್ಲೇ ಅರಳಿದವು ಈ ಪುಟ್ಟ ಹನಿಗಳು. ನಿಮ್ಮ ಮನ ತಟ್ಟಿದ್ದಕ್ಕೆ ಸಾರ್ಥಕ ಭಾವ. ನಿಮ್ಮವ ರವಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸೂಪರ್.. ತುಂಬಾ ಚೆನ್ನಾಗಿವೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರವಿ, ಅದ್ಭುತವಾಗಿದೆ ಮೊದಲ ಹನಿ... ತುಂಬಾ ಚೆನ್ನಾಗಿವೆ. ಭಾವ ತುಂಬಿದ ಎದೆಯ ಕ್ಷಿತಿಜದಲಿ ಸೂರ್ಯ ಸಂಜೆ ಮಾಡುವುದು ಹೀಗೆಯೇ ಅನ್ನಿಸುತ್ತೆ....... ಅನುಪಮಾ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅನುಪಮ ನಿಮ್ಮ ಪ್ರೋತ್ಸಾಹಕ್ಕೆ ಶರಣು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.