ಕ ಕಾ ಕಿ ಕೀ ಕೋಕಂ ಅಹಾ!

ಕ ಕಾ ಕಿ ಕೀ ಕೋಕಂ ಅಹಾ!

ಚಿತ್ರ

 ಕೋಕಂ ಕುಡಿಯಿರಿ, ಕೋಲಾ ಬಿಡಿ ಅಂತ ಕಳೆದ ಬೇಸಿಗೆಯಲ್ಲಿ ಹೇಳಿದ್ದೆ. ಕೆಲವರಾದರೂ ಪ್ರಾರಂಭಿಸಿರಬಹುದು ಅಂದುಕೊಳ್ಳುತ್ತೇನೆ. ಆ ಲೇಖನ ಬರೆದಾಗ ನನ್ನ ಬಳಿ ೫ನೇ ಕಣ್ಣು (ಶ್ರೀಧರ್‌ಜಿ ಹೇಳಿದ ಕ್ಯಾಮರಾ ಕಣ್ಣು) ಇಲ್ಲದಿದ್ದುದರಿಂದ ಫೋಟೋಗಳನ್ನು ಹಾಕಿರಲಿಲ್ಲ.
ಈ ಬೇಸಿಗೆ ರಜೆಯಲ್ಲಿ  ಘಟ್ಟ ಅಥವಾ ಘಟ್ಟದ ಕೆಳಗೆ, ನೆಂಟರ ಮನೆಗೆ ಹೋಗಿದ್ದೀರಿ ಅಂದ್ರೆ ಅಲ್ಲಿ ಬಿಸಿಲಿಗೆ ಒಣ ಹಾಕಿದ ಕೋಕಂ (  http://www.timeswellness.com/article/7/20101211201012101607102743646e4b9 )ಸಿಪ್ಪೆಗಳು ಕಾಣಿಸಬಹುದು. ಕಂಡರೆ ಬಿಡಬೇಡಿ. ಒಂದು ಚೀಲ ತುಂಬಾ ತುಂಬಿ ಹಿಂದಕ್ಕೆ ಬರುವಾಗ ತೆಗೆದುಕೊಂಡು ಬನ್ನಿ.
ಊರಿಂದ ಹಿಂದೆ ಬಂದಾಯ್ತಾ?
ಸಿಕ್ಕಾಪಟ್ಟೆ ಸೆಖೆಯಾಗುತ್ತಿದೆಯಲ್ಲಾ? ಚೀಲ ಬಿಚ್ಚಿ.. ಆ ಒಣ ಸಿಪ್ಪೆ(ಕೋಕಂ)ಯಿಂದ ಜ್ಯೂಸ್ ಮಾಡುವುದು ಹೇಳುವೆ. ಪಾತ್ರೆಯಲ್ಲಿ ಸ್ವಲ್ಪ ಒಣ ಸಿಪ್ಪೆಗಳನ್ನು ಹಾಕಿ, ನೀರು ಹಾಕಿಡಿ. ಸ್ವಲ್ಪ ಸಮಯದ ನಂತರ ಸಿಪ್ಪೆ ತೆಗೆದು, ಕೆಂಪು ಕೆಂಪಾದ ನೀರಿಗೆ ಸಕ್ಕರೆ, ಬೇಕಿದ್ದರೆ ಐಸ್ ಬೆರೆಸಿ, ಕುಡಿಯಿರಿ.  ಬಾಯಿಂದ ಹೊಟ್ಟೆ ತಳದವರೆಗೆ ತಂಪಾದ ಅನುಭವವಾಗುವುದು. ಆಹಾ..ಅನ್ನದಿದ್ದರೆ ಹೇಳಿ!
ಊರಿಂದ ಬಂದು ಸುಸ್ತಾಗಿದ್ದೀರಿ. ಸಾರು ಮಾಡಲು ಟೊಮೆಟೋ ಸಹ ಇಲ್ಲ. ಚಿಂತಿಸಬೇಡಿ. ೮-೧೦ ಕೋಕಂ ಸಿಪ್ಪೆಗೆ ನೀರು ಬೆರೆಸಿ ಕುದಿಸಿ, ಸ್ವಲ್ಪ ಕರಿಮೆಣಸು ಪುಡಿ, ಬೆಲ್ಲ ಸ್ವಲ್ಪ, ಬೇಕಿದ್ದರೆ ಈರುಳ್ಳಿ ಕತ್ತರಿಸಿ ಸೇರಿಸಿ, ಬೆಳ್ಳುಳ್ಳಿ ಒಗ್ಗರಣೆ, ರುಚಿಗೆ ತಕ್ಕ ಉಪ್ಪು ಹಾಕಿ ಇಳಿಸಿ...ಕೆಂಪು ಕೆಂಪು ಸಾರು ರೆಡಿ. ವಾಹ್ ಕೋಕಂ ವಾಹ್ ಅನ್ನುತ್ತಾ ಊಟ ಮಾಡಿ ಪಾತ್ರೆ ಖಾಲಿ ಆಗದಿದ್ದರೆ ಹೇಳಿ.
ಕೋಕಂ ತಂಬುಳಿಯೂ ಮಾಡಬಹುದಂತೆ! http://wwwchitranna.blogspot.in/2010/09/kokum-tabuli.html
ಕೋಕಂನಿಂದ ತೂಕ ಕಮ್ಮಿಯಾಗುವುದು.  http://myonlineherbs.wordpress.com/2013/01/23/vrikshamla-a-better-natural-cure-for-weight-loss-issue/ನನ್ನದೂ ಐದು ಕೆ.ಜಿ ತೂಕ ಕಮ್ಮಿಯಾಗಿದೆ! ಆದರೆ ಐಸ್ ಕ್ರೀಂ, ಸ್ವೀಟ್ಸ್, ಎಣ್ಣೆ ಪದಾರ್ಥಗಳಿಂದಾಗಿ ೧೦ ಕೆ.ಜಿ. ಏರಿ, ಈ ಐದು ಕೆ.ಜಿ ಇಳಿದದ್ದು ಗಮನಕ್ಕೇ ಬಂದಿಲ್ಲಾ..........:(

Rating
No votes yet

Comments

Submitted by nageshamysore Wed, 05/22/2013 - 02:17

ಗಣೇಶ್ ಜಿ, ಸಿಂಗಪುರದ ಸುತ್ತ ಬರಿ ಉಪ್ಪುನೀರು ಸಮುದ್ರವೆ, ಘಟ್ಟಕ್ಕು ಹೋಗುವಂತಿಲ್ಲ, ಕೋಕಂ ಅನ್ನು ಹುಡುಕುವಂತಿಲ್ಲ! ಸದ್ಯಕ್ಕೆ ನಿಮ್ಮ ಐದನೆ ಕಣ್ಣಿಂದ ಭಟ್ಟಿ ಇಳಿಸಿದ ಸೊಗಸಾದ ಚಿತ್ರಗಳನ್ನು ನೋಡಿಯೆ ಖುಷಿ ಪಟ್ಟುಕೊಳ್ಳಬೇಕು!
-ನಾಗೇಶ ಮೈಸೂರು, ಸಿಂಗಪುರದಿಂದ

Submitted by ಗಣೇಶ Fri, 05/24/2013 - 00:42

In reply to by nageshamysore

ಕೋಕಂ ಸಿಪ್ಪೆಗಳನ್ನು ಕಳುಹಿಸೋಣ ಅಂದರೆ ಬಾಂಬುಂ ಅಂತ ಏರ್‌ಲೈನ್ಸ್‌ನವರು ಭಯಪಟ್ಟಾರು.:(
ಹಾಗೇ ನಮಗೆ ಸಿಂಗಾಪುರದ ಸ್ಪೆಷಲ್ ಹಣ್ಣುಗಳು, ತರಕಾರಿಗಳು..ಇದ್ದರೆ ಪರಿಚಯ ಮಾಡುವಿರಾ?ಧನ್ಯವಾದಗಳು ನಾಗೇಶರೆ.

Submitted by nageshamysore Fri, 05/24/2013 - 06:20

In reply to by ಗಣೇಶ

ಗಣೇಶ್ ಜಿ, ಸಿಂಗಾಪುರದಂತ 45-50 ಕಿ.ಮಿ ನಷ್ಟೆ ಸುತ್ತಳತೆಯಿರುವ ದೇಶದಲ್ಲಿ ಜನಗಳೆ ಕಿಷ್ಕಿಂದೆಯಲ್ಲಿರುವಂತ ಇಕ್ಕಟ್ಟಿನಲ್ಲಿ ಬದುಕಬೇಕು, ಇನ್ನು ಹಣ್ಣು ತರಕಾರಿ ಬೆಳೆಯುವುದೆಲ್ಲಿ ಬಂತು? ಎಲ್ಲಾ  ಇಂಪೋರ್ಟೆ! ಆದರೂ ಟ್ರಾಫಿಕಲ್ ರೀಜನ್ನಿನ ಕೆಲವು ನಮಗೆ ಸಾಮಾನ್ಯವಾಗಿ ಕಾಣದ ಕೆಲವು ಹಣ್ಣುಗಳಿವೆ (ಉದಾಹರಣೆಗೆ ರಂಬುತ್ತಾನ್, ಲೊಂಗಾನ್ ತರದವು). ಮುಂದೊಮ್ಮೆ ಪರಿಚಯಿಸಲು ಯತ್ನಿಸುತ್ತೇನೆ.
- ನಾಗೇಶ ಮೈಸೂರು, ಸಿಂಗಪುರದಿಂದ

Submitted by makara Wed, 05/22/2013 - 21:34

ಉತ್ತಮ ಮಾಹಿತಿಯ ಲೇಖನಕ್ಕೆ ಮೊದಲು ಧನ್ಯವಾದಗಳು ಗಣೇಶ್. ಜಿ. ನಾಗೇಶ್ ಅವರು ಮತ್ತು ಕವಿ ನಾಗರಾಜ್ ಅವರು ಹೇಳಿದಂತೆ ನಿಮ್ಮ ಐದನೆಯ ಕಣ್ಣಿನಿಂದ ತೋರಿಸಿರುವ ಕೋಕಂ ಅನ್ನು ಖಂಡಿತಾ ಕುಡಿಯಬೇಕೆನಿಸುತ್ತಿದೆ. ಡಾಬರ್ ಅವರ ತಯಾರಿಕೆಯಾದ ರೂ-ಆಫ್‌ಝಾ ದಲ್ಲೇನಾದರೂ ಈ ಕೋಕಂ ಅನ್ನು ಉಪಯೋಗಿಸುತ್ತಾರೋ ಹೇಗೆ? ಏಕೆಂದರೆ ಅದರ ಜ್ಯೂಸಿನ ಬಾಟಲಿಯನ್ನು ನೋಡಿದಾಗ ನೀವು ಚಿತ್ರದಲ್ಲಿ ಕೊಟ್ಟಿರುವ ಬಣ್ಣವೇ ಕಾಣಿಸುತ್ತದೆ. ಇದರ ಬಗ್ಗೆ ನಿಮಗೇನಾದರೂ ಐಡಿಯಾ ಇದ್ದರೆ ತಿಳಿಸಿ. ಹಾಗಾದರೂ ಈ ಕೋಕಂ ಅನ್ನು ಕುಡಿದು ಕೋವು (ತೆಲುಗಿನ ಕೊಬ್ಬು) ತಗ್ಗಿಸಿಕೊಳ್ಳಬಹುದು ಆಗ ಅದು ನಿಜವಾಗಿ ಕೋವ್‌ಕಮ್ ಜ್ಯೂಸ್ ಆಗುತ್ತದೆ :)) ನೀವು ಕೊಟ್ಟ ಕೊಂಡಿಯನ್ನು ಹಿಡಿದು ಹೊರಟಾಗ ಇನ್ನೊಂದು ಮಹತ್ವದ ಅಂಶವೂ ಬೆಳಕಿಗೆ ಬಂತು ಅದೇನೆಂದರೆ ಇದನ್ನು ಸೇವಿಸುವುದರಿಂದ ಇದು ಅಲರ್ಜಿಯನ್ನು ನಿವಾರಿಸುತ್ತದೆ ಮತ್ತು ಚರ್ಮದ ಮೇಲೆ ಅಲರ್ಜಿಯಾದ ಜಾಗದಲ್ಲಿ ಇದನ್ನು ಉಜ್ಜಿದರೆ ನಿಮಿಷಗಳಲ್ಲಿ ಅಲರ್ಜಿ ಮಾಯವಾಗುತ್ತದಂತೆ.

Submitted by ಗಣೇಶ Fri, 05/24/2013 - 00:52

In reply to by makara

>>>ಡಾಬರ್ ಅವರ ತಯಾರಿಕೆಯಾದ ರೂ-ಆಫ್‌ಝಾ ದಲ್ಲೇನಾದರೂ ಈ ಕೋಕಂ ಅನ್ನು ಉಪಯೋಗಿಸುತ್ತಾರೋ ಹೇಗೆ?-->ಕೋಕಂ ಎಸೆನ್ಸೇ ಇರುವುದು ಎಂದು ನಮ್ಮ ಸಂಪದಿಗ ಗುರುರಾಜರು ತಿಳಿಸಿರುವರು- http://sampada.net/article/8726 >>>ಆಗ ಅದು ನಿಜವಾಗಿ ಕೋವ್‌ಕಮ್ ಜ್ಯೂಸ್ ಆಗುತ್ತದೆ :)) :); ಧನ್ಯವಾದಗಳು ಶ್ರೀಧರ್‌ಜಿಗೆ.

Submitted by ಸುಮ ನಾಡಿಗ್ Thu, 05/23/2013 - 17:00

ಗಣೇಶಣ್ಣ, ಮಾಹಿತಿಯುಕ್ತ ಲೇಖನ.
ಅಮ್ಮ, ಕೋಕಮ್ ಬೇಯಿಸಿ, ರಸ ತೆಗೆದು, ಸಕ್ಕರೆ ಪಾಕಕ್ಕೆ ಹಾಕಿ, ಜ್ಯೂಸ್ ತಯಾರಿಸುತ್ತಾರೆ.
ಸಮಯದ ಅಭಾವವಿರುವುದರಿಂದ, ನಾನು ನಮ್ಮಮನ ಬಳಿ ಹೇಳಿ, ಮಂಗಳೂರಿನಿಂದ ತಯಾರಿಸಿ ಕೊಂಡು ಬರುತ್ತೇನೆ :-). ಅಮ್ಮ‍ನ ಕೈ ರುಚಿಯೂ ಸವಿದ ಹಾಗಾಯ್ತು!

Submitted by ಗಣೇಶ Fri, 05/24/2013 - 01:03

In reply to by ಸುಮ ನಾಡಿಗ್

ಸುಮ ನಾಡಿಗ್ ಅವರೆ, ಇದು ಇನ್ನೂ ಸುಲಭ. ಫ್ರಿಡ್ಜಿಂದ ತೆಗೆಯುವುದು, ನೀರು ಸೇರಿಸಿ ಕುಡಿಯುವುದು. ಅಮ್ಮನಿಗೆ ಜೈ ಅಂದರಾಯಿತು. :) ಹೀರೇಕಾಯಿ ದೋಸೆಗೆ ಏನು ಮಾಡುವಿರಿ? ( http://sampada.net/%E0%B2%AC%E0%B2%A6%E0%B2%A8%E0%B3%86-%E0%B2%95%E0%B2… ) :) ಧನ್ಯವಾದ ಸುಮ ಅವರೆ.

Submitted by Shreekar Sat, 05/25/2013 - 18:35

"ಡಾಬರ್ ಅವರ ತಯಾರಿಕೆಯಾದ ರೂ-ಆಫ್‌ಝಾ ದಲ್ಲೇನಾದರೂ ಈ ಕೋಕಂ ಅನ್ನು ......"

ರೂ-ಆಫ್‌ಝಾ ಇದು ಹಮ್ ದರ್ದ್ (ವಕ್ಫ್) ಲೆಬೊರೇಟರಿ ಸ್ಥಾಪಕ ಹಕೀಮ್ ಹಾಫೀಜ್ ಅಬ್ದುಲ್‌ ಮಜೀದ್‌ 1906 ರಲ್ಲಿ ಕಂಡು ಹಿಡಿದ ಯುನಾನಿ ಪದ್ಧತಿಯ ಒಂದು ತಂಪು ಪಾನೀಯ.

ಡಾಬರ್ ಕಂಪೆನಿಯವರು ರಿಯಲ್‌ ಎಂಬ ಬ್ರಾಂಡ್ ಹೆಸರಿನಲ್ಲಿ 14 ವಿವಿಧ ಹಣ್ಣು/ಬೆರ್ರಿ ಗಳ ರಸವನ್ನು ಪ್ರತ್ಯೇಕವಾಗಿ ತಯಾರಿಸಿ ಮಾರುತ್ತಾರೆ. ಆದರೆ ಇವುಗಳಲ್ಲಿ ಕೋಕಂ ಸೇರಿಲ್ಲ.

Submitted by ಗಣೇಶ Sun, 05/26/2013 - 00:42

In reply to by Shreekar

ಹಮ್‌ದರ್ದ್‌ನ ರೂ ಅಫ್ಜಾ...ಹೇಗೆ ಮರೆತು ಹೋಯಿತು:( ತಿದ್ದಿದ ಶ್ರೀಕರ್‌ಜಿಗೆ ಧನ್ಯವಾದಗಳು. ಹಾಗೇ ನಾವು ಒಂದೊಂದು ತಪ್ಪು ಮಾಡುತ್ತಿದ್ದರೆ ತಿದ್ದಲಾದರೂ ಶ್ರೀಕರ್‌ಜಿ ಪ್ರತ್ಯಕ್ಷರಾಗುವರಲ್ಲಾ.:)

Submitted by venkatb83 Mon, 05/27/2013 - 16:33

ಇದರ ಪೇಟೆಂಟ್ ಎನಗಿರಲಿ ..!! ಇದರ ಜ್ಯೂಸ್ ಮಾಡಿ -ಮಾರಿ ,೩೦ *೪೦ ಸೈಟ್ ..... . ವ ....!!
ಗಣೇಶ್ ಅಣ್ಣ ಮಲೆನಾಡ ಅರೆ ಮಲೆನಾಡ ಬಯಲು ನಾಡ ಈ ತರಹದ ಅಮೂಲ್ಯ ವಸ್ತು ವಿಷಯಗಳ ಬಗ್ಗೆ ಆಗಾಗ ನಮಮ್ ಗಮನ ಸೆಳೆವ ನಿಮಗೆ ನನ್ನಿ ... ಎಂದಿನಂತೆ ನೀವ್ ಮಾಡಿದ್ದು ತಿನ್ನೋ ಹಾಗೆ ಇದನ್ನು ನೀವೇ ಕುಡಿದು ನಮಗೆ ಬರೀ ಚಿತ್ರ ನೋಡಿ ನಾಲಗೇ ನೀರೂರೋ ಹಾಗ್ ಮಾಡಿದಿರಿ ..'(((೦

ಕೋ ಕಂ ಕೂಲ್ ಮಾರ್ರೇ ,,,!!
ಶುಭವಾಗಲಿ

\।/

Submitted by ಗಣೇಶ Sat, 06/01/2013 - 00:55

In reply to by venkatb83

ಕೋ ಕಂ ಕೂಲ್ ಮಾರ್ರೇ ,,,!!:)ಎಂಚಿನ ಮಾರಾಯ್ರೆ, ಕೋಕಂಗು ತುಳುಟು "ಪುನರ್ಪುಳಿ"ಪಣ್ಪೆರು. ಮಾಮನ ಇಲ್ಲಡೆ ಪೋಂಡ ಪುನರ್ಪುಳಿ ಸಾರ್‌ಲಾ ಜ್ಯೂಸ್‌ಲಾ ಮಲ್ಪಾದ್ ಪರ್ಲೆ.

Submitted by RAMAMOHANA Mon, 09/30/2013 - 17:29

ಆದರೆ ಐಸ್ ಕ್ರೀಂ, ಸ್ವೀಟ್ಸ್, ಎಣ್ಣೆ ಪದಾರ್ಥಗಳಿಂದಾಗಿ ೧೦ ಕೆ.ಜಿ. ಏರಿ, ಈ ಐದು ಕೆ.ಜಿ ಇಳಿದದ್ದು ಗಮನಕ್ಕೇ ಬಂದಿಲ್ಲಾ..........:(
ನೀವು ಈ ರೀತಿ ಶರೀರ‌ ತೂಕ‌ ಬದಲಾವಣೆ ಮಾಡ್ತಿದ್ರೆ ನಿಮ್ಮನ್ನು ಹುಡುಕುವ‌ ನಮ್ಮ‌ ಪತ್ತೇದಾರಿ ಕೆಲಸಕ್ಕೆ ತೊಂದರೆ ಆಗ್ಲಿಕುಂಟು ಮಾರಾಯ್ರೆ.
ಆಯ್ತು ಇತ್ತೀಚಿನ‌ ನಿಮ್ಮ‌ ಮುಖದ‌ ವಿವರ‌ ಕೊಡಿ.
ರಾಮೋ.

Submitted by ಗಣೇಶ Tue, 10/01/2013 - 00:09

In reply to by RAMAMOHANA

:) ಆಯ್ತು ಇತ್ತೀಚಿನ‌ ನಿಮ್ಮ‌ ಮುಖದ‌ ವಿವರ‌ ಕೊಡಿ.- ಹೇಗೆ ಹೇಳಲಿ?
ಸತ್ಯ ಹೇಳಿದರೆ ನಂಬುವುದಿಲ್ಲ ನೀವು. ಆದರೂ ಪ್ರಯತ್ನಿಸುವೆ-
ಒಂದು ಆಂಗ್‌ಲ್‌ನಲ್ಲಿ ರಾಜ್ ಕುಮಾರ್, ಇನ್ನೊಂದು ಆಂಗ್‌‍ಲ್‌ನಲ್ಲಿ ಅನಂತ್ ನಾಗ್, ಮತ್ತೊಂದು..ಹೃತಿಕ್....!
(ನನಗೇ ನಾನು ಕಾಣಿಸುವುದು..ನಿಮಗೆ ಕಾಣಿಸಬೇಕೆಂದೇನಿಲ್ಲ.:) )