ಮಿನಿ ನಯಾಗರ ಲಾಲ್ ಬಾಗ್ನಲ್ಲಿ!
ಈ ವರ್ಷ(೨೦೧೩) ಸ್ವಾತಂತ್ರ್ಯ ದಿನದ ಲಾಲ್ ಬಾಗ್ ಫ್ಲವರ್ ಶೋಗೆ ದಾಖಲೆ ಸಂಖ್ಯೆಯ ಜನ ಬಂದಿದ್ದರು. ಮಾರನೇದಿನ ಬೆಳಗ್ಗೆ ಹೋದಾಗ ಲಾಲ್ ಬಾಗ್ ಗಾರ್ಬೇಜ್ ಬಾಗ್ ಆಗಿತ್ತು. ಎಲ್ಲಿ ನೋಡಿದರಲ್ಲಿ ಜೋಳದ ದಂಟು, ಜ್ಯೂಸ್ ಕವರ್, ಐಸ್ ಕ್ರೀಂ ಡಬ್ಬಿಗಳು....ಕಸ ಕಸ...ಮಳೆ ಇದ್ದುದರಿಂದ ಇನ್ನಷ್ಟೂ ರಾಡಿ. ( http://www.deccanher... )
ನಡೆದಾಡುವ ಹಾದಿಯನ್ನೇನೋ ಸಿಬ್ಬಂದಿ ಗುಡಿಸಿ ಸ್ವಚ್ಛ ಮಾಡುತ್ತಿದ್ದರು. ಆದರೆ ಲಾಲ್ ಬಾಗ್ನ ಪ್ರಸಿದ್ಧ ಮಿಲಿಯಾಂತರ ವರ್ಷದ ಕಲ್ಲಿನ ಮೇಲೆ ರಾಶಿ ರಾಶಿ ಕಸ. (ಸುತ್ತಮುತ್ತಲಿನ ಕಸ ನೋಡಿ ಗೋಪುರದ ಮೇಲಿರುವ ಏಕದಂತನೂ ಬೇಸರದಿಂದ ತನ್ನ ಅಭಯ ಹಸ್ತವನ್ನೇ ಕಿತ್ತೆಸೆದಿದ್ದಾನೆ) ಒಂದು ಚಿಕ್ಕ ಬಸ್ ಟಿಕೆಟ್ನ್ನೂ ಅಲ್ಲಿ ಇಲ್ಲಿ ಎಸೆಯದೇ ಇರುವ ನನಗೆ, ಈ ಜನರ ವರ್ತನೆ ಬೇಸರ ತರಿಸಿತು.
ಎಲ್ಲಾ ಇಂಗ್ಲೀಷ್ನಲ್ಲೇ ಟಸ್ ಪುಸ್ ಮಾತನಾಡುತ್ತಾರೆ. ಗಾಜಿನ ಮನೆ ಮುಂದೇನೇ ಬಾಲ್ ಆಡುತ್ತಿದ್ದರು. ಮಕ್ಕಳಲ್ಲಾ..ದೊಡ್ಡವರೇ! ಬಾಲ್ ಹೂವಿನ ಗಿಡದ ಮೇಲೇ ಬೀಳುತ್ತಿತ್ತು. ಈ ಜನ ಜನ್ಮದಲ್ಲಿ ಒಂದೇ ಒಂದು ಗಿಡ ನೆಟ್ಟು ಬೆಳಸಿರಲಿಕ್ಕಿಲ್ಲ.
ಹುಲ್ಲಿನ ಮೇಲೆ ಓಡಿ ಬಂದು ಹೂವಿನ ಗಿಡದ ಮೇಲೆ ಜಿಗಿದ ಹುಡುಗನಿಗೆ ಆತನ ತಾಯಿ ಜೋರುಮಾಡಿದಳು-ದುಬಾರಿ ಶೂನಲ್ಲಿ ಕೆಸರು ಆದದ್ದಕ್ಕೆ.. ಹುಲ್ಲಿನ ಮೇಲೆ ನಡೆದರೆ ೫೦ ರೂ ಫೈನ್ ಎಂದು ಬೋರ್ಡ್ ಇದೆ. ಸಿಬ್ಬಂಧಿಗೆ ಆ ಅಧಿಕಾರ ಕೊಟ್ಟಿಲ್ಲ ಕಾಣುತ್ತದೆ. ಬರೀ ವಿಶ್ಲ್ ಹಾಕಿ ಸುಮ್ಮನಾಗುತ್ತಾರೆ. ಈ ಕೋತಿಗಳಿಗೆ ಅದೆಲ್ಲಾ ಎಲ್ಲಿ ನಾಟುತ್ತದೆ.
ಇದೆಲ್ಲಾ ಹೇಳಿ ಪ್ರಯೋಜನವಿಲ್ಲ. ನಮ್ಮ ಜನ ಸುಧಾರಿಸುವುದಿಲ್ಲ.
ಈಗ ಮುಖ್ಯ ವಿಷಯ ಬೇರೆ-
ಅಂದಾಜು ೪೦ ಲಕ್ಷ ವೆಚ್ಚದಲ್ಲಿ ಲಾಲ್ ಬಾಗ್ ಕೆರೆಯ ಸಮೀಪ ೧೫ ಅಡಿ ಎತ್ತರದಿಂದ ವಾಟರ್ ಫಾಲ್ (ಮಿನಿ ನಯಾಗರ! ಮಿನಿ ಜೋಗ್!) ಮಾಡುವ ಯೋಜನೆ ಇದೆ. ( water fall will gush at lalbagh project to make use of rocky terrain and lake water TOI 29 aug) ಪಕ್ಷಿಗಳು ಅಟ್ರಾಕ್ಟ್ ಆಗುವವು ಎಂದು ಕಾರಣ ಹೇಳಿರುವರು! ಕೆರೆಯ ಸುತ್ತಮುತ್ತ ಮಿನಿ ಜೋಗ್ ಫಾಲ್ಸ್ ನೋಡಲು ಜನ ಮುತ್ತಿಕೊಂಡಾಗ, ಈಗ ಅಲ್ಲಿ ಇದ್ದಬದ್ದ ಪಕ್ಷಿಗಳೂ ದೂರ ಹೋಗಿ, ಅಲ್ಲೂ ಈ "ತಿಂಬಟ್ಗಳು" ತಿಂದು ಬಿಸಾಕಿದ್ದನ್ನು ವಿಲೇವಾರಿ ಮಾಡಲು ಪಾರಿವಾಳಗಳು, ಕಾಗೆಗಳೇ ತುಂಬುವವು.
ಇಲ್ಲಿನ ಒಂದೊಂದು ಮರಗಳೂ ಒಂದೊಂದು ಕತೆ, ಕವಿತೆ, ಕಲೆ, ಇತಿಹಾಸ, ವಿಜ್ಞಾನ, ಭವಿಷ್ಯ.... ಆರ್ಟಿಫಿಶಿಯಲ್ ಆಭರಣಕ್ಕಾಗಿ ಒರಿಜಿನಲ್ ಬಂಗಾರವನ್ನು ಅಡವಿಡಬೇಡಿ..
ಲಾಲ್ ಬಾಗ್ ಗಾಜಿನ ಮನೆಯ ಮುಂದಿರುವ ಕಾರಂಜಿಯಲ್ಲಿ ನೀರು ಹಾರುವುದನ್ನು ನಾನು ನೋಡಿಲ್ಲ. (ಅದು ಕೆಟ್ಟು ಹೋಗಿದೆಯಾ ಅಥವಾ ಸಂಜೆ ಮಾತ್ರ ಕೆಲಸ ಮಾಡುವುದಾ ಗೊತ್ತಿಲ್ಲ) ಇನ್ನು ಈ ಮಿನಿ ನಯಾಗರ ಫಾಲ್ಸ್ ಸಹ ನಾಲ್ಕೇ ದಿನಕ್ಕೆ ಪಂಪ್ ಹಾಳಾಯಿತೆಂದು ಸ್ಟಾಪ್ ಆದರೆ, ೪೦ ಲಕ್ಷ ನೀರಲ್ಲಿ ಹೋಮ!
ಲಾಲ್ ಬಾಗನ್ನು ಇನ್ನಷ್ಟು ಹಾಳು ಮಾಡುವ ಬದಲು-
-ಸ್ವಚ್ಛತೆ ಕಡೆ ಗಮನ ನೀಡಲಿ.
-ಭದ್ರತಾ ವ್ಯವಸ್ಥೆ ಜಾಸ್ತಿ ಮಾಡಲಿ. ಪ್ರತೀ ಎಂಟ್ರಿಯಲ್ಲೂ ಸಿ ಸಿ ಕ್ಯಾಮರವಿರಲಿ
-ಮರಗಳ ಹೆಸರಿನ ಪ್ಲೇಟನ್ನು ಮೊಳೆಹೊಡೆದು ಮರಕ್ಕೆ ಅಂಟಿಸಿದ್ದನ್ನು ತೆಗೆಸಿ, ಪಕ್ಕದಲ್ಲಿ ನೀಟಾಗಿ ಕನ್ನಡದಲ್ಲಿ ಮತ್ತು ಇಂಗ್ಲೀಷಲ್ಲಿ ಬರೆಸಲಿ. ಹೂವಿನ ಗಿಡಗಳ ಹೆಸರನ್ನೂ ಸಹ ಹಾಕಲಿ.
-ನೂರಾರು ಸಂಖ್ಯೆಯಲ್ಲಿರುವ ನಾಯಿಗಳಿಗೆ ಬೇರೆ ವ್ಯವಸ್ಥೆ ಮಾಡಲಿ.
-ಉತ್ತಮ ಗುಣದ ಗೈಡ್ಗಳನ್ನು ನೇಮಿಸಲಿ.
-ಕೆರೆಯ ಸುತ್ತಲೂ ಮಳೆ ಬಂದಾಗ ಕೆಸರು ತುಂಬಿ, ಜಾಗಿಂಗ್/ವಾಕಿಂಗ್ ಮಾಡುವವರಿಗೆ ಕಷ್ಟವಾಗುವುದು. ಅದನ್ನು ಸರಿಪಡಿಸಲಿ.
-ಮಕ್ಕಳಿಗೆ/ದೊಡ್ಡವರಿಗೆ ಮರಗಿಡ ಹತ್ತಲು ಮತ್ತು ಹುಲ್ಲಲ್ಲಿ ಆಡಲು ಒಂದಷ್ಟು ಸ್ಥಳ ಬಿಟ್ಟಿರಲಿ. ಉಳಿದ ಕಡೆ ಹುಲ್ಲಲ್ಲಿ ಕಾಲಿಟ್ಟರೆ, ಮರ ಹತ್ತಿದರೆ ಕೂಡಲೆ ಫೈನ್ ಹಾಕಿ ರಸೀದಿ ಅಲ್ಲೇ ಕೊಡಲಿ.
-ಹಾಗೇ ತಿನ್ನಲು ಸಹ ಒಂದು ಸ್ಥಳ ನಿಗದಿಯಾಗಲಿ. ಅಲ್ಲಿಂದ ಹೊರಗೆ ತಿನಿಸುಗಳನ್ನು ತೆಗೆದುಕೊಂಡು ಹೋಗಬಾರದು.
-ವಿನಾಶದ ಅಂಚಲ್ಲಿರುವ ಮರಗಿಡಗಳು, ಔಷಧೀ ಸಸ್ಯಗಳು, ಹಣ್ಣಿನ ಗಿಡಗಳನ್ನು ಬೆಳೆಸಲಿ. ಪಕ್ಷಿಗಳು, ಜನಗಳು ಬಂದೇ ಬರುತ್ತಾರೆ. false falls ನ ಅಗತ್ಯವೇ ಇಲ್ಲ.
*****************************************
ನಾಗೇಶರು ಕಳೆದ ಬಾರಿ ಹೂವಿನ ದೋಣಿಯ ಹೂಗಳು ಗುಲಾಬಿಯೇನಾ ಎಂದು ವಿಚಾರಿಸಿದ್ದರು. ಅದಕ್ಕಾಗಿ ಪುನಃ ಒಮ್ಮೆ ಹೋಗಿ ಆ ದೋಣಿಗೆ ಒಂದು ರೌಂಡ್ ಹಾಕಿ ಎಲ್ಲವೂ ಗುಲಾಬಿಯೇ ಎಂದು ಕನ್ಫರ್ಮ್ ಮಾಡಿಕೊಂಡು ಬಂದಿದ್ದೆ. ಸಮೀಪದಿಂದ ತೆಗೆದ ಫೋಟೋಗಳನ್ನು ಹಾಕಿರುವೆ.
*************************************
ರಾಜಕಾರಣಿಗಳು ಮೂಗು ತೂರಿಸದಿದ್ದ ಸ್ಥಳ ಯಾವುದಾದರೂ ಇದೆಯಾ?
ರಾಜಕಾರಣಿಗಳೆ,
ಲಾಲ್ ಬಾಗ್ನ ಸಂಧಿಗೊಂದಿಗಳಲ್ಲಿ ತಮ್ಮ ಫೋಟೋ ರಾರಾಜಿಸುವಂತೆ ಮಾಡಬಹುದು-
"ಹುಲ್ಲಿನ ಮೇಲೆ ನಡೆಯಬೇಡಿ" ಎಂಬ ಪೋಸ್ಟರ್, ಪಕ್ಕದಲ್ಲಿ ತಮ್ಮ ನಗುಮುಖ..
"ಹೂ ಕೀಳಬೇಡಿ"..ನಗುಮುಖ..
"ಮರದ ಮೇಲೆ ತಮ್ಮ ಮತ್ತು ಪ್ರೇಮಿಯ ಹೆಸರು ಬರೆಯಬೇಡಿ"...ನಗುಮುಖ..
ಮೊದಲಿಗೆ ಸಣ್ಣದೇ ಫೋಟೋ ಹಾಕಿ, ಪ್ರತಿಭಟಿಸದಿದ್ದರೆ-ಈಗ ರಸ್ತೆ ರಸ್ತೆಗಳಲ್ಲಿ ಹಾಕುತ್ತಿರುವಿರಲ್ಲಾ-ಲೈಟುಕಂಬಕ್ಕಿಂತ ದೊಡ್ಡ ಕಟ್-ಔಟ್ಗಳನ್ನು, ಇಲ್ಲೂ ಪ್ರತೀ ಮರದೆದುರಲ್ಲೂ ಹಾಕಿ. ಕಟ್ ಔಟ್ಗೆ ಬೇಕಿದ್ದರೆ ಅದೇ ಮರದ ಕೊಂಬೆಯನ್ನು ಕಟ್ ಔಟ್ ಮಾಡಿದರಾಯಿತು.
*************************************
ಲಾಲ್ ಬಾಗ್ ಬಗ್ಗೆ ಬರೆದ ಹಿಂದಿನ ಬರಹಗಳ ಕೊಂಡಿ-
http://sampada.net/b...
**************************************
ಲಾಲ್ ಬಾಗ್ ಬಗ್ಗೆ ಕೆಲ ಉತ್ತಮ ಮಾಹಿತಿಗಳು- http://www.bangalore...
****************************
Comments
ಉ: ಮಿನಿ ನಯಾಗರ ಲಾಲ್ ಬಾಗ್ನಲ್ಲಿ!
ಗಣೇಶ್ ಜಿ, ಇಂಥದ್ದೆಲ್ಲ ಸೃಷ್ಟಿಸಿ ನಿರಂತರವಾಗಿ ನೋಡಿಕೊಳ್ಳುವ ಕಾರ್ಯಕ್ಕೆ ಅಗಾಧ ಶಿಸ್ತು, ಸಮೂಹ ಪ್ರಜ್ಞೆ, ಪರಿಸರ ಸಾಮಾನ್ಯ ಪರಿಜ್ಞಾನವಿರಬೇಕು. ಜನ ಸಮೂಹ ಆ ಸ್ವಯಂಪಕ್ವತೆಯ ಮಟ್ಟವನಿನ್ನು ಮುಟ್ಟದಿದ್ದರೆ, ಸೌಂದರ್ಯವನ್ನು ಕಾಪಾಡುವ ಕೆಲಸ ಸುಲಭ ಸಾಧ್ಯವಲ್ಲ. ಹೊರಗಿನ ಬೇರೇನನ್ನೊ ಮಾಡುವ ಬದಲು ನೋಡಿಕೊಳ್ಳಲು ಸುಲಭವಾಗಿರುವ ನಮ್ಮದನ್ನೆ ಸೃಜಿಸಿ ಉಳಿಸಿಕೊಳ್ಳುವುದು ಒಳಿತೇನೊ?
ಎಂದಿನಂತೆ ಚಿತ್ರಗಳು ಸೊಗಸಾಗಿವೆ. ಮತ್ತೆ ತೆಗೆದ ಹೂವಿನ ಚಿತ್ರಕ್ಕೆ ಧನ್ಯವಾದಗಳು :-)
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು
In reply to ಉ: ಮಿನಿ ನಯಾಗರ ಲಾಲ್ ಬಾಗ್ನಲ್ಲಿ! by nageshamysore
ಉ: ಮಿನಿ ನಯಾಗರ ಲಾಲ್ ಬಾಗ್ನಲ್ಲಿ!
ನಾಗೇಶರೆ, ಇದೇ ಲಾಲ್ ಬಾಗ್ ಸುತ್ತುವ ಜನ ಮಾಲ್ಗಳಿಗೆ ಹೋದಾಗ ಚೇಂಜ್ ಆಗುವರು. ಒಂದು ಚೂರೂ ಕಸ ಎಸೆಯುವುದಿಲ್ಲ.
ಮಾಮೂಲಿ ಮಾಲ್ಗಳಲ್ಲೂ ಈಗ ಆರ್ಟಿಫಿಶಿಯಲ್ ಫಾಲ್ಸ್ಗಳನ್ನು ಮಾಡುತ್ತಿದ್ದಾರೆ. ಈಗಿನ ಹೈಟೆಕ್ ಯುಗದಲ್ಲಿ ಈ ಫಾಲ್ಸ್ಗಳು ದೊಡ್ಡ ಸಂಗತಿಯಲ್ಲ.ಲಾಲ್ ಬಾಗ್ನಲ್ಲಿ ಕೆಳಗಿನ ಕೆರೆಯಿಂದ ಮೇಲೆ ನೀರು ಪಂಪ್ ಮಾಡಿ, ಅಲ್ಲಿ ಸ್ಟಾಕ್ ಮಾಡಿಡಲು ಟ್ಯಾಂಕ್ ಕಟ್ಟಬೇಕು. ಕೆಲ ಮರಗಳು ಜಾಗ ಖಾಲಿ ಮಾಡಬೇಕಾಗಬಹುದು. ಈ ಆರ್ಟಿಫಿಶಿಯಲ್ ಆಭರಣಕ್ಕಾಗಿ ಒರಿಜಿನಲ್ ಬಂಗಾರವನ್ನು ಅಡವಿಡಬೇಕಾ? "ಹೊರಗಿನ ಬೇರೇನನ್ನೊ ಮಾಡುವ ಬದಲು ನೋಡಿಕೊಳ್ಳಲು ಸುಲಭವಾಗಿರುವ ನಮ್ಮದನ್ನೆ ಸೃಜಿಸಿ ಉಳಿಸಿಕೊಳ್ಳುವುದು ಒಳಿತೇನೊ?"ಎಂಬ ತಮ್ಮ ಅಭಿಪ್ರಾಯ ನನ್ನದೂ ಸಹ.
ಉ: ಮಿನಿ ನಯಾಗರ ಲಾಲ್ ಬಾಗ್ನಲ್ಲಿ!
ಗಣೇಶ್ಜಿ,
"ನಯಾಗರ ಬೇಡ ಅದಿಲ್ಲದೇ ಸುಂದರವಾಗಿರಲಿ ನಮ್ಮ ನಗರ" ಮತ್ತು "ಲಾಲ್ ಬಾಗ್ ಹೋಗಿ ಕಾಲಾ ಬಾಗ್ ಆಗುತ್ತದೆ" ಎನ್ನುವ ನಿಮ್ಮ ಕಾಳಜಿಗೆ ನನ್ನ ಅಭಿನಂದನೆಗಳು. ಅದೇನೇ ಇರಲಿ, ಛಾಯಾಚಿತ್ರಗಳಂತೂ ತುಂಬಾ ಸುಂದರವಾಗಿವೆ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ
In reply to ಉ: ಮಿನಿ ನಯಾಗರ ಲಾಲ್ ಬಾಗ್ನಲ್ಲಿ! by makara
ಉ: ಮಿನಿ ನಯಾಗರ ಲಾಲ್ ಬಾಗ್ನಲ್ಲಿ!
ಛಾಯಾಚಿತ್ರಗಳಂತೂ ತುಂಬಾ ಸುಂದರವಾಗಿವೆ- ಶ್ರೀಧರ್ಜಿ, ನನ್ನ ಬರಹಕ್ಕೆ ಪುರಾವೆ ಒದಗಿಸಲು, ನನ್ನ ಮಾಮೂಲಿ ಮೊಬೈಲ್ ಕ್ಯಾಮರಾದಿಂದ ತೆಗೆದ ಚಿತ್ರಗಳಿವು. ಇದು ಲಾಲ್ ಬಾಗ್ನ ನಿಜ ಸೌಂದರ್ಯದ ಎಳ್ಳಷ್ಟೂ ಭಾಗ ತೋರಿಸುತ್ತಿಲ್ಲ. ತಮ್ಮ ಮೆಚ್ಚುಗೆಗೆ ಧನ್ಯವಾದಗಳು.
ಉ: ಮಿನಿ ನಯಾಗರ ಲಾಲ್ ಬಾಗ್ನಲ್ಲಿ!
:(((
ಉ: ಮಿನಿ ನಯಾಗರ ಲಾಲ್ ಬಾಗ್ನಲ್ಲಿ!
"ರಾಜಕಾರಣಿಗಳು ಮೂಗು ತೂರಿಸದಿದ್ದ ಸ್ಥಳ ಯಾವುದಾದರೂ ಇದೆಯಾ?
ರಾಜಕಾರಣಿಗಳೆ,
ಲಾಲ್ ಬಾಗ್ನ ಸಂಧಿಗೊಂದಿಗಳಲ್ಲಿ ತಮ್ಮ ಫೋಟೋ ರಾರಾಜಿಸುವಂತೆ ಮಾಡಬಹುದು-
"ಹುಲ್ಲಿನ ಮೇಲೆ ನಡೆಯಬೇಡಿ" ಎಂಬ ಪೋಸ್ಟರ್, ಪಕ್ಕದಲ್ಲಿ ತಮ್ಮ ನಗುಮುಖ..
"ಹೂ ಕೀಳಬೇಡಿ"..ನಗುಮುಖ..
"ಮರದ ಮೇಲೆ ತಮ್ಮ ಮತ್ತು ಪ್ರೇಮಿಯ ಹೆಸರು ಬರೆಯಬೇಡಿ"...ನಗುಮುಖ..
ಮೊದಲಿಗೆ ಸಣ್ಣದೇ ಫೋಟೋ ಹಾಕಿ, ಪ್ರತಿಭಟಿಸದಿದ್ದರೆ-ಈಗ ರಸ್ತೆ ರಸ್ತೆಗಳಲ್ಲಿ ಹಾಕುತ್ತಿರುವಿರಲ್ಲಾ-ಲೈಟುಕಂಬಕ್ಕಿಂತ ದೊಡ್ಡ ಕಟ್-ಔಟ್ಗಳನ್ನು, ಇಲ್ಲೂ ಪ್ರತೀ ಮರದೆದುರಲ್ಲೂ ಹಾಕಿ. ಕಟ್ ಔಟ್ಗೆ ಬೇಕಿದ್ದರೆ ಅದೇ ಮರದ ಕೊಂಬೆಯನ್ನು ಕಟ್ ಔಟ್ ಮಾಡಿದರಾಯಿತು."
:()))))))))))))))))))
ಕೆಲ ತಿಂಗಳುಗಳ ಹಿಂದೆ ಪತ್ರಿಕೆಯಲ್ಲಿ ಓದಿದ್ದು
ಯಾರದೋ ಶವ ಸಂಸ್ಕಾರಕ್ಕೆ ಬಂದಿದ್ದ ಗಣ್ಯರಿಗೆ ಸುಸ್ವಾಗತ ಎಂದು ಕಟೌಟು ಹಾಕಿಸ್ದಿದ್ರಂತೆ ಹಿಂಬಾಲಕರು ..!! ಅದಕ್ಕೆ ಜನ ಉಗಿದು ವ್ಯಗ್ರವಾಗಿ ಪ್ರತಿಕ್ರಿಯಿಸಿದ್ದರು ..!!
ಲಾಲ್ಬಾಗು ಹೀಗೆಲ್ಲ ಆಗೋದು ಪ್ರತಿ ವರ್ಷ ೨ ಸಲ ಮಾಮೂಲಿ .. . ಜನಕ್ಕೂ ಬುದ್ಧಿ ಇಲ್ಲ (ಅಲ್ಲಿ ಮಾತ್ರ - ಮಾಲಲ್ಲಿ ಬುದ್ಧಿವಂತರು ) ಅಧಿಕಾರಿಗಳಿಗೂ ..!!
ನಿಮ್ಮ ಬರಹಗಳು ಓದುತ್ತ ನೀವ್ ಪತ್ರಿಕಾ ವರದಿಗಾರರು ಅನಿಸುತ್ತಿದೆ ...!!
ಶುಭವಾಗಲಿ
\।
In reply to ಉ: ಮಿನಿ ನಯಾಗರ ಲಾಲ್ ಬಾಗ್ನಲ್ಲಿ! by venkatb83
ಉ: ಮಿನಿ ನಯಾಗರ ಲಾಲ್ ಬಾಗ್ನಲ್ಲಿ!
ನಿಮ್ಮ ಬರಹಗಳು ಓದುತ್ತ ನೀವ್ ಪತ್ರಿಕಾ ವರದಿಗಾರರು ಅನಿಸುತ್ತಿದೆ ...!! :) :) ಅಂತೂ ಪತ್ತೆಹಚ್ಚಿದಿರಿ. ಸಪ್ತಗಿರಿವಾಸಿಯವರೆ ತಮ್ಮ ಲೇಖನಗಳನ್ನು ನೋಡದೇ ಬಹಳ ದಿನಗಳಾಯಿತು. "ಸೃಷ್ಟಿ ಭಾಗ ೨" ಆದರೂ ಬರೆಯಿರಿ.
ಉ: ಮಿನಿ ನಯಾಗರ ಲಾಲ್ ಬಾಗ್ನಲ್ಲಿ!
ಸ್ರುಸ್ಟಿ ೨ .. ಕಸ್ಟ ... ಕಸ್ಟ ...!! ಗಣೇಶ್ ಅಣ್ಣ ಬೇರೆ ಏನೋ ತಲೆಯಲ್ಲಿದೆ ಅದನ್ನು ಬರೆಯಲು ಪ್ರಯತ್ನಿಸುವೆ..
ಶ್ಹುಭವಾಗಲಿ
\|
In reply to ಉ: ಮಿನಿ ನಯಾಗರ ಲಾಲ್ ಬಾಗ್ನಲ್ಲಿ! by venkatb83
ಉ: ಮಿನಿ ನಯಾಗರ ಲಾಲ್ ಬಾಗ್ನಲ್ಲಿ!
ಶುಭಸ್ಯ ಶೀಘ್ರಂ..ತಲೆಯಿಂದ ಸಂಪದಕ್ಕೆ ಬೇಗನೆ ಬರಲಿ. ನಿಮ್ಮ ಲೇಖನಗಳನ್ನ ನೋಡದೇ ಬಹಳ ದಿನಗಳಾಯಿತು.
In reply to ಉ: ಮಿನಿ ನಯಾಗರ ಲಾಲ್ ಬಾಗ್ನಲ್ಲಿ! by ಗಣೇಶ
ಉ: ಮಿನಿ ನಯಾಗರ ಲಾಲ್ ಬಾಗ್ನಲ್ಲಿ!
ಅಯ್ಯೋ .... ನಂದು ನಿಧಾನವೇ ಪ್ರಧಾನ ಸಂಘ ಮತ್ತು ಅದ್ಕೆ ನಾವೇ ಅದ್ಯಕ್ಷ -ಉ.. ಕಾ. ಸ. ಕಾ ಎಲ್ಲ.. .... ಹೀಗಾಗಿ ಸ್ವಲ್ಪ ದಿನಗಳೇ ಆಗಬಹುದು .. ಆದರೆ ನೀವೆಲ್ಲ ಬರೆಯುವ ಬರಹಗಳನ್ನು ಓದುತ್ತ ಪ್ರತಿಕ್ರಿಯಿಸುವೆ ..
ಶುಭವಾಗಲಿ
\।