ದೌರ್ಬಲ್ಯವನ್ನು ಶಕ್ತಿಯನ್ನಾಗಿಸಬೇಕು !
1 day 4 hours ago - ಬರಹಗಾರರ ಬಳಗನಿಮ್ಮ ಮನೆಯಲ್ಲಿ ಒಂದು ಹಳೆಯ ಹಲಸಿನ ಮರ ಇದೆಯಲ್ಲ ಅದರ ವಯಸ್ಸು ಎಷ್ಟು ಎಂದು ನಿಮ್ಮ ಅಮ್ಮನ ಬಳಿ ಕೇಳಿ. ಅಮ್ಮ ಹೇಳುತ್ತಾರೆ ನಾನು ನೋಡುವಾಗಲೂ ಇದು ಇಷ್ಟೇ ಎತ್ತರ ಇತ್ತು ಈಗ ಸ್ವಲ್ಪ ದಪ್ಪ ಆಗಿದೆ ಅಷ್ಟೇ. ಅಪ್ಪ ಹೇಳುತ್ತಾರೆ ಒಂದು ಎಪ್ಪತ್ತೈದಾದರೂ ಆಗಿರಬಹುದಂತೆ. ಈ ಸಸ್ಯಗಳ ಬೆಳವಣಿಗೆ ಆರಂಭದಲ್ಲಿ ವೇಗವಾಗಿದ್ದರೂ ನಂತರ ನಿಧಾನವಾಗುತ್ತಾ ಹೋಗುತ್ತದೆ. ಏಕೆ ಹೀಗೆ ಎಂದು ಎಂದಾದರೂ ಯೋಚಿಸಿದ್ದೀರಾ? ಇರಲಿ ಬಿಡಿ. ಫಿಲಿಪ್ಪೀನ್ಸ್ ನಲ್ಲಿ ಕಂಡು ಬರುವ ಒಂದು ಜಾತಿಯ ಬಿದಿರು ಎಷ್ಟು ವೇಗವಾಗಿ ಬೆಳೆಯುತ್ತದೆಂದರೆ ಮೊದಲ ದಿನ 12 ಅಡಿಗಳಷ್ಟು. ಅಲ್ಲಿಯ ಜನ ಮರಣ ದಂಡನೆಗೆ ಗುರಿಯಾದ ವ್ಯಕ್ತಿಯನ್ನು ಆ ಕಳಲೆಯ ನೇರದಲ್ಲಿ ಗೂಟ ಹೊಡೆದು ಕಟ್ಟಿ ಬಿಡುತ್ತಿದ್ದರಂತೆ. ದಿನ ಬೆಳಗಾಗುವಾಗ ಅದು ಆತನ ಗುದದ್ವಾರದ ಮೂಲಕ ತೂರಿ ಹೋಗಿ ಕೈದಿ ಸತ್ತು ಹೋಗಿಬಿಡುತ್ತಿದ್ದನಂತೆ. ನಿಮ್ಮ ತೋಟದ ಸಮೀಪ ಒಂದು ರಕ್ಕಸ ಕಳೆಯ ಬಳ್ಳಿ ಬೆಳೆಯುವುದನ್ನು ನೋಡಿರಬಹುದು. ಇವತ್ತು ಆ ಬಳ್ಳಿ ನಿಮ್ಮ ಅಡಿಕೆ ಮರಕ್ಕೆ ಹಬ್ಬಲು ಆರಂಭಿಸಿದರೆ ನಾಲ್ಕು ದಿನಗಳಾಗುವಾಗ ಅದು ಅಡಿಕೆ ಮರದ ಗರಿಗಳನ್ನು ಆವರಿಸಿರುವುದನ್ನು ನೋಡುತ್ತೀರಿ. ಅಡಿಕೆ ಮರಕ್ಕೆ 25 ವರ್ಷ ತಗುಲಿದ ಎತ್ತರಕ್ಕೆ ಬೆಳೆಯಲು ಈ ಬಳ್ಳಿಗೆ ಕೇವಲ ನಾಲ್ಕು ದಿನ ಸಾಕಾಯ್ತು. ಏಕೆ ಹೀಗೆ ಎಂದು ಒಮ್ಮೆಯಾದರೂ ನಿಮ್ಮನ್ನು ಕೇಳಿಕೊಂಡಿದ್ದೀರಾ? ಇದು ಪ್ರಕೃತಿ ರೂಪಿಸಿದ ಉಳಿತಾಯದ ರಹಸ್ಯ. ಮರದ ಎತ್ತರ ಮತ್ತು ದಪ್ಪ ಹೆಚ್ಚಾಗುವುದನ್ನು ನಾವು ಬೆಳವಣಿಗೆ (growth) ಎನ್ನುವುದು. ಎತ್ತರ ಹೆಚ್ಚುವುದು ಪ್ರಾಥಮಿಕ ಬೆಳವಣಿಗೆಯಾದರೆ (primary) ದಪ್ಪಕ್ಕೆ ಬೆಳೆಯುವುದು ಅನುಷಂಗಿಕ (secondary). ಕೋಶ ವಿಭಜನೆಯಾಗುತ್ತಾ ಇದ್ದ ಹಾಗೆ ಲಗೋರಿ ಆಟದಲ್ಲಿ ಒಂದು ಕಲ್ಲಿನ ಮೇಲೆ ಇನ್ನೊಂದು ಕಲ್ಲನ… ಮುಂದೆ ಓದಿ...