ಎಲ್ಲ ಪುಟಗಳು

ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
November 26, 2023
'ಕಸ್ತೂರಿ' ಹೆಸರಿನ ಮಾಸಪತ್ರಿಕೆ ನಿಮಗೆ ಗೊತ್ತಿರಬೇಕು . ಅದು ಇಂಗ್ಲೀಷಿನ ರೀಡರ್ಸ್ ಡೈಜೆಸ್ಟ್ ಮಾದರಿಯ ಕನ್ನಡ ಡೈಜೆಸ್ಟ್ ಆಗಿದೆ. ಇದೇ ತರಹದ ಕೆಲವು ಡೈಜೆಸ್ಟ್‌ಗಳು ಕನ್ನಡದಲ್ಲಿ ಹಿಂದೆ ಇದ್ದವು.  ಅವುಗಳಲ್ಲಿ ಈ 'ಕಲ್ಯಾಣ'  ಒಂದು. ಇದರ ಕೆಲವು ಸಂಚಿಕೆಗಳು ಹಳೆಯ ಸಂಪದಿಗ ಗೆಳೆಯ ಶ್ರೀ ಓಂ ಶಿವಪ್ರಕಾಶರಿಂದಾಗಿ archive.org ಎಂಬ ತಾಣದಲ್ಲಿ ಸಿಕ್ಕವು . (ಅಲ್ಲಿ 'ಕಲ್ಯಾಣ ಡೈಜೆಸ್ಟ್‌' ಎಂದು ಕನ್ನಡದಲ್ಲಿ ಟೈಪ್ ಮಾಡಿ ಹುಡುಕುವುದರಿಂದ ಸಿಗುತ್ತವೆ. ) ಈ ಡೈಜೆಸ್ಟ್  ಇಂದಿನ ವಿಜಯಪುರ (…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
November 24, 2023
ಐತಿಹಾಸಿಕ ಕಾದಂಬರಿಗಳನ್ನು ಬರೆಯುವುದು ಒಂದು ಸಾಹಸದ ಕಥೆ. ಏಕೆಂದರೆ ಐತಿಹಾಸಿಕ ಕಾದಂಬರಿಗಳನ್ನು ಬರೆಯಲು ಹೊರಟಾಗ ನೀವು ನಿಮ್ಮ ಮನದಲ್ಲಿ ಮೂಡಿದ ಕಲ್ಪನಾ ಲಹರಿಗಳನ್ನೆಲ್ಲಾ ಅದರಲ್ಲಿ ಅಳವಡಿಸುವಂತಿಲ್ಲ. ಕಥೆಗೆ ಪೂರಕ ಎಂದು ಅನಗತ್ಯ ವಿಷಯಗಳನ್ನು ತುರುಕುವಂತಿಲ್ಲ. ಇಂತಹ ಕಾದಂಬರಿಗಳನ್ನು ಬರೆಯಲು ತಾಳ್ಮೆ, ತಿರುಗಾಟದ ಹುಚ್ಚು, ಅಧ್ಯಯನ ಪ್ರವೃತ್ತಿ ಎಲ್ಲವೂ ಅತ್ಯಂತ ಅಗತ್ಯ. ಇಂತಹ ಎಲ್ಲಾ ಗುಣಗಳನ್ನು ತುಂಬಿಕೊಂಡಿರುವ ಕನ್ನಡ ಅಪರೂಪದ ಕಾದಂಬರಿಕಾರ ಸಂತೋಷಕುಮಾರ ಮೆಹೆಂದಳೆ ಎಂದರೆ ತಪ್ಪಾಗಲಾರದು…
ಲೇಖಕರು: addoor
ವಿಧ: ಪುಸ್ತಕ ವಿಮರ್ಶೆ
November 23, 2023
ಕನ್ನಡದ ಸುಪ್ರಸಿದ್ಧ ಲೇಖಕ ಡಾ. ಸಿ.ಆರ್. ಚಂದ್ರಶೇಖರ್ ಬರೆದ ಪುಸ್ತಕವಿದು. ಅವರು ಕನ್ನಡ ಮತ್ತು ಇಂಗ್ಲಿಷಿನಲ್ಲಿ 110ಕ್ಕಿಂತ ಅಧಿಕ ಪುಸ್ತಕಗಳನ್ನು ಬರೆದವರು. ಇದರಲ್ಲಿರುವ ಸೂತ್ರಗಳನ್ನು ಅನುಸರಿಸಿ ಆರೋಗ್ಯವಂತ ವ್ಯಕ್ತಿಗಳಾಗುವುದು ನಮ್ಮ ಕೈಯಲ್ಲೇ ಇದೆ. ಈ ಪುಸ್ತಕದ ಮುನ್ನುಡಿಯಲ್ಲಿ ಆರೋಗ್ಯವಂತ ವ್ಯಕ್ತಿಯ ಲಕ್ಷಣಗಳನ್ನು ಅವರು ಹೀಗೆಂದು ತಿಳಿಸಿದ್ದಾರೆ: “ಒಬ್ಬ ವ್ಯಕ್ತಿ ಆರೋಗ್ಯವಂತನಾದ, ಉಪಯುಕ್ತ ಹಾಗೂ ಯಶಸ್ವೀ ವ್ಯಕ್ತಿ ಎನಿಸಿಕೊಳ್ಳಬೇಕಾದರೆ, ಬರಿಯ ದೇಹ ಗಟ್ಟಿ ಮುಟ್ಟಾಗಿದ್ದರೆ ಸಾಲದು…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
November 22, 2023
“ಹೂದೋಟದಲ್ಲಿ ದುರ್ದೈವಿ ಸಂಗ’ ಕವಿ ಸಂಗಪ್ಪ ನಾಗಲಾಪುರ ಅವರ ಕವನ ಸಂಕಲನ. ಈ ಪುಸ್ತಕದ ವಿಶೇಷತೆ ಎಂದರೆ ಸುಮಾರು ೫೦ ವರ್ಷಗಳ ಹಿಂದೆ ಬರೆದ ಕವನಗಳನ್ನು ಮಸ್ಕಿಯ ಅಡ್ಲಿಗಿ ಪ್ರಕಾಶನ ೨೦೨೩ ರಲ್ಲಿ ಪ್ರಕಟಿಸಿದೆ. ಈ ಕವನ ಸಂಕಲನದಲ್ಲಿ ೭೨ ಕವಿತೆಗಳಿವೆ. ಚಿಕ್ಕ ಚಿಕ್ಕ ಕವಿತೆಗಳು ಹಿಡಿದು ದೀರ್ಘ ಕವಿತೆಗಳು ಇವೆ. ಕವಿ ಸಂಗಪ್ಪ ನಾಗಲಾಪುರ ಅವರು ತಮ್ಮ ಯೌವನ ಕಾಲದಲ್ಲಿ ಬರೆದ ಕವಿತೆಗಳು. ಕವಿ ನಾಗಲಾಪುರ ಅವರ ಬದುಕಿನ ಸಿಹಿ ಕಹಿ ದುಃಖ ನೋವು ನಿರಾಸೆ ಪ್ರೇಮ ಸರಸ ವಿರಸ ವಿರಹ ಈ ರೀತಿಯ ಅನೇಕ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
November 20, 2023
ಉದಯೋನ್ಮುಖ ಕಾದಂಬರಿಗಾರ್ತಿ ರಂಜನೀ ಕೀರ್ತಿ ಅವರ ಸಂಗೀತಾತ್ಮಕ ಥ್ರಿಲ್ಲರ್ ಕಾದಂಬರಿ ‘ಪಸಾ’ ಇತ್ತೀಚೆಗೆ ಬಿಡುಗಡೆಯಾಗಿದೆ. ಕಾದಂಬರಿಯು ಅತ್ಯಂತ ರೋಚಕವಾಗಿ ಸಾಗುತ್ತಾ, ಎಲ್ಲಿಯೂ ಬೋರ್ ಹೊಡೆಸದೇ ಮುಂದುವರಿಯುತ್ತದೆ. ಈ ಕಾದಂಬರಿಯ ಕುರಿತಾಗಿ ನಾಡಿನ ಹಿರಿಯ ಕವಿ ಎಚ್ ಎಸ್ ವೆಂಕಟೇಶಮೂರ್ತಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ ಮತ್ತು ಈ ಕೃತಿಗೆ ಬೆನ್ನುಡಿಯನ್ನು ಬರೆದು ಲೇಖಕಿಯ ಬೆನ್ನು ತಟ್ಟಿದ್ದಾರೆ. ಅವರು ಬೆನ್ನುಡಿಲ್ಲಿ ಬರೆದ ವಾಕ್ಯಗಳು ನಿಮ್ಮ ಓದಿಗಾಗಿ… ‘ಪಸಾ' ರಂಜನೀ ಕೀರ್ತಿ ಅವರ ರೋಚಕ…
ಲೇಖಕರು: Kavitha Mahesh
ವಿಧ: ರುಚಿ
November 19, 2023
ಮೊದಲು ಸೋಯಾ ಚಂಕ್ಸ್ ಗಳನ್ನು ಬಿಸಿನೀರಿನಲ್ಲಿ ಸ್ವಲ್ಪ ಹೊತ್ತು ಕುದಿಸಿ, ನಂತರ ನೀರನ್ನು ಬಸಿದು, ಹಿಂಡಿ ಬದಿಗಿಡಿ. ಒಂದು ಪ್ಯಾನಿನಲ್ಲಿ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿ ನಂತರ ಸ್ವಲ್ಪ ಸಾಸಿವೆ, ಒಂದು ಚೂರು ಜೀರಿಗೆ ಹಾಕಿ ಸಿಡಿಸಿ. ಇದಾದ ಬಳಿಕ ಈರುಳ್ಳಿ. ಅರಶಿನ, ಶುಂಠಿ ಪೇಸ್ಟ್ ಹಾಕಿ ಮಿಕ್ಸ್ ಮಾಡಿ.  ನಂತರ ಮೆಣಸಿನ ಕಾಯಿ ಸ್ವಲ್ಪ ಪನೀರ್ ಹಾಕಿದ ಮೇಲೆ ಸೋಯಾ ಚಂಕ್ಸ್ ಹಾಕಿ ಮಿಕ್ಸ್ ಮಾಡಿ. ಇದನ್ನು ಸ್ವಲ್ಪ ಹೊತ್ತು ಸಣ್ಣ ಉರಿಯಲ್ಲಿ ಬೇಯಿಸಿದ ನಂತರ ರುಚಿಗೆ ತಕ್ಕಷ್ಟು ಉಪ್ಪು, ಮೆಣಸಿನ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
November 17, 2023
ಪ್ಲಾಸ್ಟಿಕ್ ಎಂಬ ವಸ್ತು ನಮ್ಮ ಪರಿಸರವನ್ನು ಪೆಡಂಭೂತದಂತೆ ಕಬಳಿಸುತ್ತಾ ಹೋಗುತ್ತಿದೆ. ಮಣ್ಣಿನಲ್ಲಿ, ನೀರಿನಲ್ಲಿ ಕರಗದ ಈ ಪ್ಲಾಸ್ಟಿಕ್ ನಮ್ಮ ಮುಂದಿನ ಪೀಳಿಗೆಯ ಭವಿಷ್ಯಕ್ಕೆ ಮಾರಕವಾಗುವ ಎಲ್ಲಾ ಲಕ್ಷಣಗಳನ್ನು ತೋರಿಸುತ್ತಿದೆ. ಈ ಬಗ್ಗೆ ಹಲವಾರು ಕೃತಿಗಳು ಹೊರಬಂದಿದ್ದರೂ ಪ್ಲಾಸ್ಟಿಕ್ ಮಾಡುವ ಹಾನಿಯ ಬಗ್ಗೆ ಹೇಳುವುದು ಇನ್ನೂ ಉಳಿದಿದೆ. ಈ ಕೃತಿಯಲ್ಲಿ ಪ್ಲಾಸ್ಟಿಕ್ ಕಸವನ್ನು ಹೆಕ್ಕುವವರ ಬಗ್ಗೆ ಲೇಖಕಿ ಎಚ್ ಎಸ್ ಅನುಪಮಾ ಅವರು ಮಾಹಿತಿ ನೀಡುತ್ತಾ ಹೋಗಿದ್ದಾರೆ. ಅವರು ಈ ಕೃತಿಯ ಬಗ್ಗೆ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
November 15, 2023
ಸದಾಶಿವ ಸೊರಟೂರು ಅವರ ನೂತನ ಕವನ ಸಂಕಲನ “ನಿನ್ನ ಬೆರಳು ತಾಕಿ" ಬಿಡುಗಡೆಯಾಗಿದೆ. ಭರವಸೆಯ ಕವಿಯಾಗಿರುವ ಸದಾಶಿವ ಸೊರಟೂರು ಅವರ ಈ ೧೧೮ ಪುಟಗಳ ಪುಟ್ಟ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಲೇಖಕರಾದ ಲಕ್ಸ್ಮಣ ವಿ ಎ. ಇವರು ತಮ್ಮ ಅನಿಸಿಕೆಯನ್ನು ವ್ಯಕ್ತ ಪಡಿಸುತ್ತಾ...‘“ನಿನ್ನ ಬೆರಳು ತಾಕಿ' ಸದಾಶಿವ ಸೊರಟೂರರ ಪ್ರೇಮ ಕವನ ಸಂಕಲನ. ಸೃಷ್ಟಿಯ ಆದಿಯಿಂದಾಗಿ ಇಲ್ಲಿಯ ತನಕ ಭಾಷೆಯ ಹಂಗಿಲ್ಲದೆ ಸಂವಹನ ಸಾಧ್ಯವಾಗಿದ್ದು ಈ ಪ್ರೇಮಕ್ಕೆ ಮಾತ್ರ. ಪ್ರೇಮ ಸರಳವೆಂದುಕೊಂಡಷ್ಟೂ ಜಟಿಲ. ಕ್ಲಿಷ್ಟಕರ…
ಲೇಖಕರು: addoor
ವಿಧ: ಪುಸ್ತಕ ವಿಮರ್ಶೆ
November 15, 2023
ಡಾ. ಮೀನಗುಂಡಿ ಸುಬ್ರಹ್ಮಣ್ಯ ಅವರ ಜನಪ್ರಿಯ ಪುಸ್ತಕ “ಈ ವರ್ತನೆಗಳು ನಿಮ್ಮಲ್ಲಿ ಎಷ್ಟಿವೆ?” ಅದರ 2ನೇ ಭಾಗ ಈ ಪುಸ್ತಕ. ಇದರಲ್ಲಿವೆ ಒಂಭತ್ತು ವೃತ್ತಾಂತಗಳು ಮತ್ತು ಎರಡು ಲೇಖನಗಳು: “ವಿಪಶ್ಯನ ಧ್ಯಾನ ಶಿಬಿರ - ಒಂದು ಅನುಭವ” ಮತ್ತು “ವಿಜ್ನಾನಕ್ಕೆ ಅಪಚಾರ.” ಹಲವರು ಮಾನಸಿಕ ಸಮಸ್ಯೆಯಿಂದ ಸಂಕಟ ಪಡುತ್ತಾ ಇರುತ್ತಾರೆ - ಒಂದೆರಡಲ್ಲ, ಹಲವಾರು ದಶಕಗಳ ಕಾಲ. ಇಲ್ಲಿನ ವೃತ್ತಾಂತಗಳನ್ನು ಓದಿದಾಗ ಅವರು ಎಷ್ಟು ಸುಲಭವಾಗಿ ತಮ್ಮ ಸಂಕಟ ಹೋಗಲಾಡಿಸಿಕೊಳ್ಳಬಹುದು ಎಂದು ಸ್ಪಷ್ಟವಾಗುತ್ತದೆ. ಅದಕ್ಕಾಗಿ…
ಲೇಖಕರು: Kavitha Mahesh
ವಿಧ: ರುಚಿ
November 13, 2023
ಮೊದಲು ನಾನ್ ಸ್ಟಿಕ್ ಪ್ಯಾನಿನಲ್ಲಿ ಹಾಲು ಹಾಕಿ ಮಂದ ಉರಿಯಲ್ಲಿ ಕುದಿಸಿ. ಮಧ್ಯೆ ಮಧ್ಯೆ ಸೌಟಿನಿಂದ ಬುಡ ಹಿಡಿಯದಂತೆ ಕೈಯಾಡಿಸುತ್ತಿರಿ. ಇದಕ್ಕೆ ಮಿಲ್ಕ್ ಮೇಡ್ (ಕಂಡೆನ್ಸಡ್ ಮಿಲ್ಕ್) ಹಾಕಿ ಕದಡುತ್ತಿರಿ. ಹಾಲು ಹದಿ ಕಟ್ಟಿದ ಹಾಗಿ ಆದಾಗ ಆ ಹದಿಯನ್ನು ಬದಿಗೆ ಸರಿಸುತ್ತಿರಿ. ಹೀಗೆ ಹಾಲು ಮೂರನೇ ಒಂದು ಭಾಗದಷ್ಟು ಆಗುವವರೆಗೂ ಮಾಡುತ್ತಿರಿ. ಇದಕ್ಕೀಗ ಕೇಸರಿ, ಏಲಕ್ಕಿ ಹುಡಿ ಹಾಕಿ ಕದಡಿ. ಸಿಹಿ ಇಷ್ಟಪಡುವವರು ಒಂದೆರಡು ಚಮಚ ಸಕ್ಕರೆ ಹಾಕಬಹುದು. ಈಗ ಬದಿಗೆ ಸರಿಸಿದ ಹದಿಯನ್ನೂ ಸೇರಿಸಿ ಸರಿಯಾಗಿ…