ಸಡಿಲ ಮಾತುಗಳು ತರವಲ್ಲ

ಲೋಕಸಭಾ ಚುನಾವಣಾ ಕಣವು ದಿನದಿಂದ ದಿನಕ್ಕೆ ಹೆಚ್ಚೆಚ್ಚು ಕಾವೇರುತ್ತಿರುವಂತೆಯೇ ಕೆಲವು ರಾಜಕೀಯ ಮುಖಂಡರ ಸಡಿಲ ಮಾತುಗಳೂ ಹೆಚ್ಚುತ್ತಿರುವುದು ವಿಷಾದನೀಯ. ಚುನಾವಣೆಯಲ್ಲಿ ಗೆದ್ದರೆ ತಾವೇನು ಮಾಡಬಲ್ಲೆವು ಎಂಬ ಗುಣಾತ್ಮಕ ವಿಚಾರವನ್ನು ಮಂಡಿಸುವುದಕ್ಕಿಂತ ಹೆಚ್ಚಾಗಿ ಕೆಲವರು ತಮ್ಮ ವಿರೋಧಿಗಳನ್ನು ವೈಯಕ್ತಿಕವಾಗಿ ಟೀಕಿಸುವ ನಕಾರಾತ್ಮಕ ರಣತಂತ್ರಕ್ಕೆ ಜೋತುಬಿದ್ದಿರುವುದು ಸಲ್ಲದ ನಡವಳಿಕೆ.

Image

ಸ್ಟೇಟಸ್ ಕತೆಗಳು (ಭಾಗ ೯೧೮)- ದೊಡ್ಡವ

ಅವನು ಬೃಹದಾಕಾರದ ವ್ಯಕ್ತಿ. ದೊಡ್ಡ ದೊಡ್ದ ಬೆರಳುಗಳು, ದೊಡ್ಡದಾದ ತಲೆ, ನಾನವನ ಬಳಿ ನಿಂತರೆ ಆತನ ಮೊಣಕಾಲಿನ ಬಳಿಗೆ ಬರುತ್ತೇನೆ. ಜನ ಸೇರುವಲ್ಲಿಗೆ ಆತ ಬಂದೇ ಬರ್ತಾನೆ. ಆದರೆ ನಿಜ ವಿಷಯ ಏನು ಗೊತ್ತಾ ಆತನಿಗೆ ಸ್ವಂತವಾಗಿ ನಡೆದಾಡುವುದಕ್ಕೆ ಸಾಧ್ಯನೇ ಇಲ್ಲ. ಯಾರೋ ಅವನೊಳಗೆ ನಿಂತು ಆತನನ್ನು ನಡೆಸಬೇಕು. ಆತ ನಡೆಯುತ್ತಾ ಹೋಗುವಾಗ ಒಳಗೆ ನಿಂತವನನ್ನ ಯಾರೂ ನೋಡುವುದಿಲ್ಲ.

Image

ನಿಷ್ಪಾಪಿ ಸಸ್ಯಗಳು (ಭಾಗ ೪೨) - ಪಂಚಪತ್ರೆ ಗಿಡ

ನಾವು ಸಣ್ಣವರಿದ್ದಾಗ ನಮ್ಮಮ್ಮ ಅಮವಾಸ್ಯೆ ಹುಣ್ಣಿಮೆ ಅಂತ ಆಗಾಗ "ಚಿಹ್ನೆ" ಯ ಮಾತ್ರೆ ಕೊಡ್ತಿದ್ದರು. ಏನೋ ಒಂದು ವಾಸನೆಯ ಮಾತ್ರೆಯನ್ನು ತುಳಸಿ ಎಲೆಯ ರಸದ ಜೊತೆ, ಜೇನುತುಪ್ಪದ ಜೊತೆ, ಪಂಚಪತ್ರೆಯ ಎಲೆ ರಸದ ಜೊತೆ ಒತ್ತಾಯದಿಂದ ಕುಡಿಸುತ್ತಿದ್ದರು. ತುಳಸಿ, ಜೇನು, ಪಂಚಪತ್ರೆಯ ವಾಸನೆಯೇ ಅಸಹ್ಯವೆನಿಸುವಂತಾಗಿತ್ತು. ಅದೆಷ್ಟು ಉತ್ತಮ ಔಷಧೀಯ ವಸ್ತುಗಳೆಂದು ಈಗ ಅರಿವಾಗುತ್ತಿದೆ.

Image

‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೪೬) - ಕುವೆಂಪು

ಕುವೆಂಪು ಎಂಬ ಕಾವ್ಯನಾಮದಿಂದ ಸಾಹಿತ್ಯ ರಚನೆ ಮಾಡಿದ ಕವಿ, ಪ್ರಖರ ವಿಚಾರವಾದಿ-ಚಿಂತಕ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಅವರು ಕನ್ನಡ ಸಾಹಿತ್ಯದ ಮೇರೆಗಳನ್ನು ವಿಸ್ತರಿಸಿದವರು. ತಂದೆ ವೆಂಕಟಪ್ಪಗೌಡ ತಾಯಿ ಸೀತಮ್ಮ. ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿಯವರಾದ ಪುಟ್ಟಪ್ಪ ಜನಿಸಿದ್ದು ಚಿಕ್ಕಮಗಳೂರು ಜಿಲ್ಲೆಯ ಹಿರೇಕೂಡಿಗೆಯಲ್ಲಿ ೧೯೦೪ರ ಡಿಸೆಂಬರ್ ೨೯ರಂದು.

Image

ಕೋಟಿ-ಚೆನ್ನಯ (ನಾಟಕ)

ಪುಸ್ತಕದ ಲೇಖಕ/ಕವಿಯ ಹೆಸರು
ಇ. ಸೂರ್ಯನಾರಾಯಣ ರಾವ್
ಪ್ರಕಾಶಕರು
ಗಾಯತ್ರೀ ಪ್ರಕಾಶನ, ಅನಂತ ಪ್ರಕಾಶ, ಕಿನ್ನಿಗೋಳಿ-೫೭೪೧೫೦
ಪುಸ್ತಕದ ಬೆಲೆ
ರೂ. ೫೦.೦೦, ಮುದ್ರಣ: ೨೦೧೧

ವೃತ್ತಿಯಲ್ಲಿ ಪ್ರೌಢಶಾಲಾ ದೈಹಿಕ ಶಿಕ್ಷಕರಾಗಿದ್ದ ಇ ಸೂರ್ಯನಾರಾಯಣ ರಾವ್ ಇವರು ತಮ್ಮ ವೃತ್ತಿ ಜೀವನದ ಸಮಯದಲ್ಲೇ ಬರೆದ ಸೊಗಸಾದ ನಾಟಕ ‘ಕೋಟಿ-ಚೆನ್ನಯ'. ಸೂರ್ಯನಾರಾಯಣ ರಾವ್ ಬಗ್ಗೆ ಅವರ ಮಗ ಇ ವಿಜಯರವಿ ಬಹಳ ಸೊಗಸಾಗಿ ಒಂದು ಬೆನ್ನುಡಿ ಬರೆದಿದ್ದಾರೆ. ಅದರಲ್ಲಿ “ನನ್ನ ತಂದೆಯವರು ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ಯಾವುದೇ ಅಭಿನಯ ಇರಲಿ, ಆ ಪಾತ್ರಕ್ಕೆ ಜೀವ ತುಂಬುತ್ತಿದ್ದರು.