ಮಹಾಭಾರತದಲ್ಲಿ ಕಳೆದುಹೋದ ಪಾತ್ರಗಳು (ಭಾಗ ೫) - ಉಲೂಕ

ಮಹಾಭಾರತದಲ್ಲಿ ಉಲೂಕ ಅಥವಾ ಉಲ್ಲೂಕ ಎಂಬ ವ್ಯಕ್ತಿಯ ಬಗ್ಗೆ ಮಾಹಿತಿ ಇರುವುದು ಕಮ್ಮಿ. ಆದರೆ ತಿಳಿದಿರುವ, ನಾನು ಸಂಗ್ರಹಿಸಿರುವ ಮಾಹಿತಿಯನ್ನು ನಿಮ್ಮ ಮುಂದೆ ಇಡುತ್ತೇನೆ. ದುರ್ಯೋಧನನ ಸೋದರ ಮಾವ ಶಕುನಿಯ ಬಗ್ಗೆ ಯಾರಿಗೆ ತಿಳಿದಿಲ್ಲ? ಒಂದು ರೀತಿಯಲ್ಲಿ ಕುರುಕ್ಷೇತ್ರ ಯುದ್ಧವಾಗಲು ಶಕುನಿ ಮಾಮಾ ಕಾರಣ. ಸದಾ ಕಾಲ ಪಾಂಡವರ ಬಗ್ಗೆ ಇಲ್ಲ ಸಲ್ಲದ್ದನ್ನು ದುರ್ಯೋಧನನಿಗೆ ಹೇಳಿ ಅವನಿಗೆ ನಿರಂತರ ಅವರ ಮೇಲೆ ದ್ವೇಷ ಬೆಳೆಯಲು ಕಾರಣನಾದವನೇ ಶಕುನಿ. ನಾನಿಂದು ಪ್ರಸ್ತಾಪಿಸಿದ ಉಲೂಕನು ಇದೇ ಶಕುನಿಯ ಹಿರಿಯ ಮಗ.

Image

ಕ್ಯಾಬೇಜ್ ಖಾರ ದೋಸೆ

Image

ಅಕ್ಕಿ ಮತ್ತು ತೊಗರಿಬೇಳೆಯನ್ನು ನೀರಿನಲ್ಲಿ ೨ ಗಂಟೆ ನೆನೆಸಿ. ನಂತರ ಅದಕ್ಕೆ ಕೆಂಪು ಮೆಣಸು, ಉಪ್ಪು, ಇಂಗು ಸೇರಿಸಿ ಕಡೆಯಿರಿ. ಹಿಟ್ಟು ಹೆಚ್ಚು ನಯವಾಗದಂತೆ ಕಡೆದು ಅದಕ್ಕೆ ಸಣ್ಣದಾಗಿ ಕತ್ತರಿಸಿದ ಕ್ಯಾಬೇಜ್ ಹಾಗೂ ಈರುಳ್ಳಿಯನ್ನು ಸೇರಿಸಿ. ಕಾವಲಿಯನ್ನು ಒಲೆಯ ಮೇಲೆ ಕಾಯಿಸಿ ಅದಕ್ಕೆ ಈ ಮಿಶ್ರಣವನ್ನು ರೊಟ್ಟಿ ತಟ್ಟುವಂತೆ ಕೈಯಿಂದ ತಟ್ಟಿ. ಸರಿಯಾಗಿ ಕಾದ ಬಳಿಕ ಕಾವಲಿಯಿಂದ ತೆಗೆಯಿರಿ. ಬಿಸಿ ಬಿಸಿಯಾಗಿ ಊಟಕ್ಕೆ ಹಿತಕರವಾಗಿರುತ್ತದೆ.( ಖಾರ ಜಾಸ್ತಿ ಬೇಕಾದಲ್ಲಿ ಮೆಣಸನ್ನು ಜಾಸ್ತಿ ಹಾಕಿ) 

ಬೇಕಿರುವ ಸಾಮಗ್ರಿ

ಕ್ಯಾಬೇಜ್ ೧ ಕಪ್, ಬೆಳ್ತಿಗೆ ಅಕ್ಕಿ ಅರ್ಧ ಕಪ್, ತೊಗರಿಬೇಳೆ ಕಾಲು ಕಪ್, ಕೆಂಪು ಮೆಣಸು ೪-೫, ರುಚಿಗೆ ತಕ್ಕಷ್ಟು ಉಪ್ಪು. ಹದ ಗಾತ್ರದ ಈರುಳ್ಳಿ ೧, ಚಿಟಿಕೆಯಷ್ಟು ಇಂಗು

ಬಾಳೆ ಎಲೆಯಲ್ಲಿ ಹಲಸಿನ ಹಣ್ಣಿನ ಕಡುಬು

Image

ಮೇಲೆ ಹೇಳಿದ ಎಲ್ಲಾ ವಸ್ತುಗಳನ್ನು ಕಡಿಯುವ ಕಲ್ಲಿನಲ್ಲಿ ನೀರು ಹಾಕದೇ ರುಬ್ಬಬೇಕು. ರುಬ್ಬುವ ಹಿಟ್ಟು ನಯವಾದಾಗ ಒಂದು ಪಾತ್ರೆಯಲ್ಲಿ ತೆಗೆದು ಇಡಿ. ಬಾಳೆ ಎಲೆಯನ್ನು ಒಲೆಯಲ್ಲಿ ಬಾಡಿಸಿ ಅದರ ಮೇಲೆ ಮೊದಲು ರುಬ್ಬಿದ ಹಿಟ್ಟನ್ನು ಸ್ವಲ್ಪ ಸ್ವಲ್ಪವೇ ಹರಡಿ, ಮಡಚಿ ಇಡ್ಲಿ ಬೇಯಿಸುವ ಪಾತ್ರೆಯಲ್ಲಿ ಹಬೆಯಲ್ಲಿ ಬೇಯಿಸಿ. ೪೦ ರಿಂದ ೪೫ ನಿಮಿಷ ಬೇಯಿಸಿ. ನಂತರ ಪಾತ್ರೆಯ ಮುಚ್ಚಳ ತೆಗೆದು ಬೆಂದಿದೆಯಾ ಎಂದು ಪರೀಕ್ಷಿಸಿ. ಸರಿಯಾಗಿ ಬೆಂದ ಬಳಿಕ ಒಲೆಯಿಂದ ಪಾತ್ರೆಯನ್ನು ಕೆಳಗಿಳಿಸಿ. ತುಪ್ಪ ಹಾಗೂ ಉಪ್ಪಿನಕಾಯಿ ಜೊತೆ ತಿನ್ನಲು ಬಲು ರುಚಿಕರ. ಮಳೆಗಾಲದಲ್ಲಿ ಹಲಸಿನ ಹಣ್ಣು ದೊರೆತಾಗ ಈ ತಿಂಡಿಯನ್ನು ಮಾಡಬಹುದು.

ಬೇಕಿರುವ ಸಾಮಗ್ರಿ

ಹಲಸಿನ ಸೊಳೆ ೨ ಕಪ್, ಬೆಳ್ತಿಗೆ ಅಕ್ಕಿ ಅರ್ಧ ಕಪ್, ಬೆಲ್ಲ ರುಚಿಗೆ ತಕ್ಕಷ್ಟು, ತೆಂಗಿನ ತುರಿ ೪ ಚಮಚ, ರುಚಿಗೆ ತಕ್ಕಷ್ಟು ಉಪ್ಪು. ಸ್ವಲ್ಪ ಏಲಕ್ಕಿ

ಮೈಸೂರು ಸಂಸ್ಥಾನದ ಕೊನೆಯ ಮಹಾರಾಜ- ಶ್ರೀ ಜಯಚಾಮರಾಜೇಂದ್ರ ಒಡೆಯರ್

ಜುಲೈ ೧೮, ೨೦೨೦ ಕ್ಕೆ ಮೈಸೂರು ಸಂಸ್ಥಾನದ ಕೊನೆಯ ಮಹಾರಾಜ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರಿಗೆ ನೂರು ವರ್ಷ ತುಂಬಿತು. ಮೈಸೂರು ಸಂಸ್ಥಾನದ ಕೊನೆಯ ಹಾಗೂ ೨೫ನೇ ಮಹಾರಾಜರು ಇವರಾಗಿದ್ದರು. ೧೯೧೯ರ ಜುಲೈ ೧೮ರಂದು ಜನಿಸಿದ ಇವರಿಗೆ ಈ ವರ್ಷ ೧೦೧ರ ಸಂಭ್ರಮ. ಹತ್ತು ವರ್ಷಗಳ ಕಾಲ ಇವರು ಮೈಸೂರು ರಾಜ್ಯವನ್ನು ಆಳಿದ್ದರು. ೧೯೪೦ರಿಂದ ೧೯೫೦ರ ವರೆಗೆ ಮೈಸೂರು ಸಂಸ್ಥಾನವನ್ನು ಆಳಿದ ಹಿರಿಮೆ ಇವರದ್ದು. ೧೯೫೦ರಲ್ಲಿ ಭಾರತವು ಗಣರಾಜ್ಯವಾದಾಗ ಇವರ ಅರಸೊತ್ತಿಗೆ ಕಳೆದು ಹೋದರೂ ೧೯೫೬ರವರೆಗೆ ಮೈಸೂರು ರಾಜ್ಯದ ಪ್ರಮುಖರಾಗಿ ಕಾರ್ಯ ನಿರ್ವಹಿಸಿದ್ದರು.

Image

ನನ್ನೂರಿನ ಮೂರು ಮುತ್ತುಗಳು

ನನ್ನ ಊರು ಮಂಗಳೂರು ತಾಲೂಕಿನ ಸುರತ್ಕಲ್ ಬಳಿಯ ಕೃಷ್ಣಾಪುರ-ಕಾಟಿಪಳ್ಳ. ಈ ವರ್ಷ ಪಿಯುಸಿ ಪರೀಕ್ಷೆಯ ಫಲಿತಾಂಶದ ಮೇಲೆ ನಾನು ಕಣ್ಣಾಡಿಸಿದಾಗ ನಾನು ಕಲಿತ ಶಾಲೆಯಾದ ಕಾಟಿಪಳ್ಳದ ಬ್ರಹ್ಮಶ್ರೀ ನಾರಾಯಣಗುರು ಪದವಿ ಪೂರ್ವ ಕಾಲೇಜಿನ ಮೂರು ಮಂದಿ ವಿದ್ಯಾರ್ಥಿಗಳು ಪಡೆದ ಅಂಕಗಳನ್ನು ಪಡೆದು ದಂಗಾದೆ. ಅವರೆಲ್ಲಾ ಸರಾಸರಿ ೯೫ ಶೇಕಡಾ ಅಂಕಗಳನ್ನು ಪಡೆದಿದ್ದಾರೆ. ಹಲವಾರು ಮಂದಿ ಇವರಿಗಿಂತ ಅಧಿಕ ಅಂಕ ಪಡೆದವರು ಇಲ್ಲವೇ? ಎಂದು ನೀವು ಕೇಳ ಬಹುದು. ಆ ಮೂರು ಮಂದಿ ಬಗ್ಗೆ ಒಂದಷ್ಟು ತಿಳಿಸುತ್ತೇನೆ. ಮತ್ತೆ ನಿಮ್ಮ ಅಭಿಪ್ರಾಯ ತಿಳಿಸಿ.

Image

ಮಹಾಭಾರತದಲ್ಲಿ ಕಳೆದುಹೋದ ಪಾತ್ರಗಳು (ಭಾಗ ೪) - ದುಶ್ಯಲಾ

ನೂರು ಮಂದಿ ಕೌರವರು ಹಾಗೂ ಐದು ಮಂದಿ ಪಾಂಡವರ ಮುದ್ದಿನ ತಂಗಿಯೇ ದುಶ್ಯಲಾ. ಅವಳನ್ನು ದುಶಾಲ ಅಥವಾ ದುಶ್ಯಾಲಾ ಎಂದೂ ಕರೆಯುತ್ತಾರೆ. ಅಪ್ಪ ಹಸ್ತಿನಾಪುರದ ಮಹಾರಾಜ, ನೂರಾ ಐದು ಮಂದಿ ಅಣ್ಣಂದಿರು ಎಲ್ಲವೂ ಇದ್ದು ಕೊನೆಗೆ ಎಲ್ಲವನ್ನೂ ಕಳೆದು ಕೊಂಡು ದೌರ್ಭಾಗ್ಯವನ್ನು ಅಪ್ಪಿಕೊಂಡೇ ಬದುಕಿದ ಯುವ ರಾಣಿ ದುಶ್ಯಲಾ. ಎಲ್ಲಾ ಮಹಾಭಾರತ ಕತೆಗಳಲ್ಲಿ ಇವಳ ಬಗ್ಗೆ ಸ್ವಲ್ಪ ಸ್ವಲ್ಪ ಮಾಹಿತಿಗಳಿವೆ.

Image

ಪುಸ್ತಕನಿಧಿ - 4. "July 22 1947" ಕನ್ನಡ ಕಾದಂಬರಿ - ಓದುತ್ತ

ಡಾ. ಸರಜೂ ಕಾಟ್ಕರ್  ಅವರ ಈ ಕಾದಂಬರಿಯು ಉಚಿತವಾಗಿ VIVIDLIPI ಎಂಬ App ನಲ್ಲಿ ಈ-ಬುಕ್ ರೂಪದಲ್ಲಿ ಇದೆ.  ಇದು ಚಲನಚಿತ್ರವೂ  ಆಗಿದೆ

ಇದು ಸ್ವಾತಂತ್ರ್ಯ ಸಂಗ್ರಾಮದ ಹಿನ್ನೆಲೆಯಲ್ಲಿ ತಂದೆ ಮಗ, ಮೊಮ್ಮಗನ ಕಥೆಯನ್ನು ಹೇಳುತ್ತದೆ. ಚೆನ್ನಾಗಿದೆ. ಬಹಳ ದೊಡ್ಡದೂ ಏನಲ್ಲ,   ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ.

ಏಕೋ ಇದನ್ನು ಓದಲು ಆರಂಭಿಸಿದೆ. ಏನಿದು ಈ ತಾರೀಕು ? ಇದು ರಾಷ್ಟ್ರೀಯ ಧ್ವಜದಿನ . ಏನು ಹಾಗಂದರೆ ? ಇಂಟರ್ ನೆಟ್ಟಿನಲ್ಲಿ ನೋಡಿದೆ . ಅನೇಕ ಕುತೂಹಲಕರ ಸಂಗತಿಗಳು ದೊರಕಿದವು. ಭಾರತ ದೇಶಕ್ಕೆ ಒಂದೇ ಧ್ವಜ ಬೇಕು ಎ೦ದು ಮೊದಲು ಯೋಚಿಸಿದ್ದು ಯಾರು ಗೊತ್ತೇ - ಆಶ್ಚರ್ಯ ! - ಬ್ರಿಟಿಶರು  1857 ರಲ್ಲಿ, 

ಮಹಾಭಾರತದಲ್ಲಿ ಕಳೆದುಹೋದ ಪಾತ್ರಗಳು (ಭಾಗ ೩)- ಬಾರ್ಬರಿಕ

ನಾನು ಬಾರ್ಬರಿಕ. ಮಹಾಭಾರತ ಯುದ್ಧದಲ್ಲಿ ನಾನು ಭಾಗವಹಿಸಿದ್ದರೆ, ಯುದ್ಧ ಒಂದೇ ದಿನದಲ್ಲಿ ಮುಗಿದು ಹೋಗುತ್ತಿತ್ತು ಎಂಬ ನಂಬಿಕೆ ನನಗಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಏಕೆ? ಎಂದು ತಿಳಿಯಬೇಕಾದರೆ ನೀವು ನನ್ನ ಕತೆಯನ್ನು ಓದಲೇ ಬೇಕು. ನಾನು ಹಿಡಿಂಬೆ ಹಾಗೂ ಪಾಂಡು ಪುತ್ರನಾದ ಭೀಮನ ಮೊಮ್ಮಗ. ಭೀಮನ ಮಗ ಘಟೋತ್ಖಜನ ಮಗ. ನನ್ನ ಅಮ್ಮ ನಾಗಕನ್ಯೆ ಅಹಿಲಾವತಿ ಅಥವಾ ಮಾರ್ವಿ. ನನ್ನ ಅಮ್ಮ ನನ್ನನ್ನು ಉತ್ತಮ ಯೋಧನನ್ನಾಗಿ ಮಾಡಿದಳು. ಅವಳು ನನಗೆ ಎಲ್ಲಾ ರೀತಿಯ ಯುದ್ಧ ಕಲೆಗಳನ್ನು ತಿಳಿಸಿಕೊಟ್ಟಳು. ಅವಳು ಈಶ್ವರ ದೇವರ ಭಕ್ತೆಯಾಗಿದ್ದಳು. ಇದು ನನ್ನನ್ನೂ ಈಶ್ವರ ದೇವರನ್ನು ಪೂಜಿಸಲು ಪ್ರೇರೇಪಿಸಿತು. ನನ್ನ ಪೂಜೆಯ ಫಲದಿಂದ ಈಶ್ವರ ಪ್ರಸನ್ನನಾದ.

Image

ರೈತರ ಆದಾಯ ಹೆಚ್ಚಳಕ್ಕೆ ಆರೋಮ್ಯಾಟಿಕ್ ಗಿಡಗಳ ಕೃಷಿ

“ಜೋಳದ ಬದಲಾಗಿ ಕಾಡು ಚೆಂಡುಮಲ್ಲಿಗೆ ಬೆಳೆಯಲು ೨೦೧೭ರಲ್ಲಿ ನಾನು ನಿರ್ಧರಿಸಿದಾಗ, ನನ್ನ ಹಳ್ಳಿಯ ಜನರು ನನಗೆ ಹುಚ್ಚು ಹಿಡಿದಿದೆ ಎಂದು ಯೋಚಿಸಿದರು” ಎನ್ನುತ್ತಾರೆ, ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯ ತಲ್ಲಾ ಗ್ರಾಮದ ೪೫ ವರುಷ ವಯಸ್ಸಿನ ರೈತ ಪವನ್ ಕುಮಾರ್.
ಮೊದಲ ಹಂಗಾಮಿನಲ್ಲಿ ಅವರು ಬೆಳೆಸಿದ ಗಿಡಗಳಲ್ಲಿ ಹೂಗಳು ಅರಳಲೇ ಇಲ್ಲ. ಆಗಂತೂ ತನ್ನನ್ನು ಕುಗ್ರಾಮ ತಲ್ಲಾದ ಹಳ್ಳಿಗರು ಟೀಕಿಸಿದ್ದೇ ಟೀಕಿಸಿದ್ದು ಎಂಬುದವರ ನೆನಪು. ಆದರೆ ಈಗ ಚಂಬಾ ಜಿಲ್ಲೆಯ ಬಹುಪಾಲು ರೈತರಿಗೆ ಇವರೇ ಮಾದರಿ. ಯಾಕೆಂದರೆ, ಇವರು ಗಳಿಸುವ ಆದಾಯ ವರುಷಕ್ಕೆ ಹೆಕ್ಟೇರಿಗೆ ರೂ.೧.೨೦ ಲಕ್ಷ! ಇದು, ಇವರು ಜೋಳ ಬೆಳೆಸಿದ್ದರೆ ಸಿಗಬಹುದಾಗಿದ್ದ ಆದಾಯದ ಐದು ಪಟ್ಟು!

Image

ಮಹಾಭಾರತದಲ್ಲಿ ಕಳೆದುಹೋದ ಪಾತ್ರಗಳು (ಭಾಗ ೨)- ವಿಕರ್ಣ ಹಾಗೂ ಯುಯುತ್ಸು

ಮಹಾಭಾರತ ಮಹಾ ಗ್ರಂಥದಲ್ಲಿ ಕಳೆದುಹೋದ ದುರ್ಯೋಧನನ ಪತ್ನಿ ‘ಭಾನುಮತಿ' ಎಂಬ ಪಾತ್ರದ ಬಗ್ಗೆ ಹಿಂದಿನ ಲೇಖನದಲ್ಲಿ ಬರೆದಿದ್ದೆನಲ್ಲಾ. ಅದೇ ರೀತಿಯ ಇನ್ನೆರಡು ಪಾತ್ರಗಳ ಬಗ್ಗೆ ನಾನಿಂದು ಬರೆಯಲಿರುವೆ. ನಿಮಗೆ ಕೌರವರು ನೂರು ಮಂದಿ ಎಂದು ಗೊತ್ತು. ಅವರ ಹೆಸರುಗಳು ಗೊತ್ತಾ? ಎಲ್ಲರಿಗೂ ಹೆಸರುಗಳು ಇವೆ. ನಮಗೆ ಗೊತ್ತಿರುವ ಹೆಸರು ದುರ್ಯೋಧನ ಹಾಗೂ ದುಶ್ಯಾಸನ ಮಾತ್ರ. ನೂರು ಮಂದಿ ಕೌರವರಲ್ಲಿ ಓರ್ವನನ್ನು ಬಿಟ್ಟು ಎಲ್ಲರೂ ಅಧರ್ಮಿಗಳಾಗಿದ್ದರು ಎಂದು ಮಹಾಭಾರತ ಕಥೆ ಹೇಳುತ್ತದೆ. ಆ ಓರ್ವನೇ ವಿಕರ್ಣ. ಕುಂತಿಗೆ ಮೊದಲ ಮಗುವಾದಾಗ ಧೃತರಾಷ್ಟ್ರನ ಪತ್ನಿ ಗಾಂಧಾರಿ ಗರ್ಭವತಿಯಾಗಿದ್ದಳು. ಕುಂತಿಗೆ ಮಗು ಜನಿಸಿತು ಎಂದಾಗ ಗಾಂಧಾರಿ ತನಗೆ ಕುಂತಿಗಿಂತ ಮೊದಲು ಮಗುವಾಗಬಾರದಿತ್ತಾ ಎಂದು ಪರಿತಪಿಸಿದಳು.

Image