ಸೋದರರ ಸಾವಯವ ಕೃಷಿ ವಹಿವಾಟು: ವರುಷಕ್ಕೆ ಮೂರು ಕೋಟಿ ರೂಪಾಯಿ

ಪುಣೆಯ ಇಬ್ಬರು ಸೋದರರು ಕೃಷಿ ಮಾಡತೊಡಗಿದಾಗ ಅವರ ಕೃಷಿಉತ್ಪನ್ನಗಳ ವಹಿವಾಟು ವರುಷಕ್ಕೆ ಎರಡು ಲಕ್ಷ ರೂಪಾಯಿ. ಅದೀಗ ತಿಂಗಳಿಗೆ ಮೂವತ್ತು ಲಕ್ಷ ರೂಪಾಯಿಗಳಿಗೆ ಏರಿದೆ. ಇದು ಹೇಗೆ ಸಾಧ್ಯವಾಯಿತು?

Image

ವಿದ್ಯಾರ್ಥಿಗಳ ಕಲಿಕೆಯ ಜೊತೆ ಚೆಲ್ಲಾಟ ಇನ್ನೆಷ್ಟು ದಿನ?

ಕೋವಿಡ್ ೧೯ ಭಾರತಕ್ಕೆ ಬಂದದ್ದೇ ತಡ, ರೋಗದ ಬಗ್ಗೆ, ಅದಕ್ಕೆ ಸೂಕ್ತವಾದ ಮದ್ದು ಇಲ್ಲದಿರುವ ಬಗ್ಗೆ,ಅದರಿಂದಾಗುವ ಜೀವ ಹಾನಿಯ ಬಗ್ಗೆ ಆದ ಚರ್ಚೆ ಅಷ್ಟಿಷ್ಟಲ್ಲ. ಸ್ವಲ್ಪ ವಿಷಯವನ್ನು ಕೆಲವು ಮಾಧ್ಯಮಗಳು ವೈಭವೀಕರಿಸಿದವು. ದಿನವಿಡೀ ಒಂದೇ ವಿಷಯದ ಬಗ್ಗೆ ಸೂಕ್ತ ಮಾಹಿತಿ ನೀಡುವ ಬದಲಾಗಿ ಇನ್ನಷ್ಟು ಹೆದರಿಸಿದವು. ಕಡೆಗೊಮ್ಮೆ ದಿನವಿಡೀ ನೋಡುತ್ತಿದ್ದ ಟಿವಿಯನ್ನು ಒಂದು ಗಂಟೆ ಮಾತ್ರ ನೋಡಲು ಸೀಮಿತಗೊಳಿಸಬೇಕಾಯಿತು. ಇಲ್ಲವಾದರೆ ಕೊರೊನಾ ಬದಲು ಟಿವಿ ನೋಡಿ ಗಾಬರಿಯಾಗಿಯೇ ಸಾಯುವ ಸ್ಥಿತಿ ಬಂದೀತು ಎಂದು ಅನಿಸತೊಡಗಿದೆ. ಕೊರೋನಾ ನಂತರ ಅತ್ಯಂತ ವಿಮರ್ಶೆಗೆ ಒಳಗಾದ ಸಂಗತಿ ಮಕ್ಕಳ ವಿದ್ಯಾಭ್ಯಾಸದ್ದು.

Image

ಗಿಡ ಮೂಲಿಕೆಗಳಿಂದ ಸೌಂದರ್ಯ ಸಾಧನಗಳು

ಪುಸ್ತಕದ ಲೇಖಕ/ಕವಿಯ ಹೆಸರು
ಡಾ॥ ಎಲ್.ವಸಂತ
ಪ್ರಕಾಶಕರು
ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈ.ಲಿ. ಬೆಂಗಳೂರು
ಪುಸ್ತಕದ ಬೆಲೆ
೩೫.೦೦ ರೂ. ಮೊದಲ ಮುದ್ರಣ: ೧೯೯೩

ಡಾ॥ ಎಲ್.ವಸಂತ ಇವರು ಬರೆದಿರುವ ಈ ಕೃತಿ ನಿರಂತರವಾಗಿ ಪುನರ್ ಮುದ್ರಣ ಕಾಣುತ್ತಿದೆ. ಈಗಾಗಲೇ ೧೧ ಮುದ್ರಣಗಳು ಕಂಡ ಕೃತಿ ಇದು. ನಮ್ಮ ಶರೀರ ನಿಸರ್ಗದ ಒಂದು ಅಂಗ, ನಿಸರ್ಗದ ಸೃಷ್ಟಿ. ಶರೀರದ ಕುಂದು ಕೊರತೆಗಳನ್ನು ನಿವಾರಿಸಿಕೊಳ್ಳಲು, ಅದರ ಸೌಂದರ್ಯವನ್ನು ಅಧಿಕಗೊಳಿಸಲು ನಿಸರ್ಗ ನಮಗೆ ಗಿಡಮೂಲಿಕೆಗಳು, ಖನಿಜ, ಲವಣಗಳ ರೂಪದಲ್ಲಿ ಹಲವಾರು ಉಪಯುಕ್ತ ಸಾಧನಗಳನ್ನೂ ಕರುಣಿಸಿದೆ. ಇವನ್ನು ಸರಿಯಾಗಿ ಉಪಯೋಗಿಸಿದರೆ, ಇಂದಿನ ಜಲ, ವಾಯು ಹಾಗೂ ಪರಿಸರ ಮಾಲಿನ್ಯದ ಕಲುಷಿತ ವಾತಾವರಣದಲ್ಲಿಯೂ ಶರೀರದ ಆರೋಗ್ಯ ಹಾಗೂ ಸೌಂದರ್ಯವನ್ನು ಕಾಪಾಡಿಕೊಳ್ಳಬಹುದು.

ಮ್ಯಾಜಿಕ್ ಮಾವು

ಒಂದಾನೊಂದು ಕಾಲದಲ್ಲಿ ಬಹಳ ಎತ್ತರವಾದ ಮಾವಿನ ಮರದ ತುದಿಯಲ್ಲಿ ಒಂದು ಮಾವು ದೊಡ್ಡದಾಗಿ ಬೆಳೆಯಿತು. ಅದು ಬೇರೆ ಮಾವಿನ ಹಣ್ಣುಗಳಂತೆ ಇರಲಿಲ್ಲ. ಓ, ಅದು ಮ್ಯಾಜಿಕ್ ಮಾವು. ಯಾಕೆಂದರೆ ಅದು ಯೋಚಿಸುತ್ತಿತ್ತು, ಮಾತಾಡುತ್ತಿತ್ತು.

ಗುಡ್ಡದಲ್ಲಿದ್ದ ಆ ಎತ್ತರದ ಮಾವಿನ ಮರದ ತುದಿಯಿಂದ ಈ ಮ್ಯಾಜಿಕ್ ಮಾವಿಗೆ ಕೆಳಗಿನ ಹಳ್ಳಿ, ನದಿ, ದೂರದ ಬೆಟ್ಟಗಳು ಕಾಣುತ್ತಿದ್ದವು. "ನಾನು ಈ ಮಾವಿನ ಮರದಿಂದ ಕೆಳಗಿಳಿದರೆ ಎಷ್ಟು ಚೆನ್ನಾಗಿರುತ್ತಿತ್ತು. ಅಲ್ಲೆಲ್ಲ ಅಡ್ಡಾಡ ಬಹುದಾಗಿತ್ತು" ಎಂದು ಯೋಚಿಸಿತು ಮಾವು.

Image

ಬದುಕಿನ ನೃತ್ಯ ನಿಲ್ಲಿಸಿದ ‘ಮಾಸ್ಟರ್ ಜೀ’ ಸರೋಜ್ ಖಾನ್

ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ‘ತೇಜಾಬ್' ಚಿತ್ರದಲ್ಲಿನ ಏಕ್ ದೋ ತೀನ್ ಎಂಬ ಹಾಡಿನ ನೃತ್ಯಕ್ಕೆ ಮನಸೋತಿರುವಿರಾ? ನಟಿ ಶ್ರೀದೇವಿಯ ಮಿ.ಇಂಡಿಯಾ ಚಿತ್ರದಲ್ಲಿನ ‘ಹವಾ ಹವಾಯಿ’ ಎಂಬ ನೃತ್ಯ ನಿಮ್ಮನ್ನೂ ನರ್ತಿಸುವಂತೆ ಮಾಡಿದೆಯಾ? ಆ ನೃತ್ಯ ಕಲಿಸಿದವರು ಯಾರಿರಬಹುದು ಎಂದು ಕುತೂಹಲ ನಿಮ್ಮನ್ನು ಕಾಡಿರಬಹುದಲ್ವೇ? ಆ ಸೂಪರ್ ನೃತ್ಯಗಳ ನಿರ್ದೇಶಕಿಯ ಹೆಸರೇ ಸರೋಜ್ ಖಾನ್. ಸರೋಜ್ ಖಾನ್ ಬಾಲಿವುಡ್ ಚಿತ್ರರಂಗದಲ್ಲಿ ‘ಮಾಸ್ಟರ್ ಜೀ’ ಎಂದೇ ದೊಡ್ಡ ಹೆಸರು ಪಡೆದವರು. ಇಂದು, ಜುಲೈ ೩, ೨೦೨೦ರಂದು ತಮ್ಮ ೭೨ನೇ ವಯಸ್ಸಿನಲ್ಲಿ ಬದುಕಿನ ‘ನೃತ್ಯ'ವನ್ನು  ನಿಲ್ಲಿಸಿದರು.

Image

ವೆಸ್ಟ್ ಇಂಡೀಸ್ ಕ್ರಿಕೆಟ್ ದೈತ್ಯ- ಸರ್ ಎವರ್ಟನ್ ವೀಕ್ಸ್

ಸರ್ ಎವರ್ಟನ್ ಡಿ'ಕೊರ್ಸಿ ವೀಕ್ಸ್ ಇನ್ನಿಲ್ಲ ಎಂಬ ಮಾಹಿತಿಯೊಂದನ್ನು ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಅಂತರ್ಜಾಲ ತಾಣದಲ್ಲಿ ಹಂಚಿಕೊಂಡಿದ್ದರು. ಯಾರಿದು ಎವರ್ಟನ್ ವೀಕ್ಸ್? ಈಗಿನ ಕ್ರೀಡಾಭಿಮಾನಿಗಳಿಗೆ ಅವರ ಗೊತ್ತಿರುವುದು ಕಮ್ಮಿ.  ಇವರು ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಹಿಟ್ಟರ್ ಬ್ಯಾಟ್ಸ್ ಮನ್ ಆಗಿದ್ದರು. ಆಗ ಇನ್ನೂ ಕ್ರಿಕೆಟ್ ಅಷ್ಟೊಂದು ಹುಚ್ಚು ಹಿಡಿಸುವ ಆಟವಾಗಿರಲಿಲ್ಲ. ಪಂದ್ಯಾಟಗಳ ವಿವರಗಳೂ ಸರಿಯಾಗಿ ಸಿಗುತ್ತಿರಲಿಲ್ಲ. ಆ ಸಮಯದಲ್ಲಿ ಖ್ಯಾತರಾಗಿದ್ದ ಕ್ರಿಕೆಟ್ ನ ಮೂರು ‘W’ ಗಳು ( The three W’s) ಎಂದು ಹೆಸರಾಗಿದ್ದ ಫ್ರಾಂಕ್ ವಾರೆಲ್ (Frank Worrel), ಕ್ಲೈಡ್ ವಾಲ್ಕಾಟ್ (Clyde Walcott) ಎವರ್ಟನ್ ವೀಕ್ಸ್ (Everton Weekes) ಆಗಿದ್ದರು.

Image

ಸ್ವಸಹಾಯವೇ ಅತ್ಯುತ್ತಮ ಸಹಾಯ

(“ನ್ಯಾಯಾಧೀಶರ ನೆನಪುಗಳು” ಒಂದು ಅಪರೂಪದ ಪುಸ್ತಕ. ಇದರಲ್ಲಿ ತನ್ನ ವೃತ್ತಿಜೀವನದ ೩೦ ಅನುಭವಗಳನ್ನು ನವಿರಾದ ಭಾಷೆಯಲ್ಲಿ ದಿಟ್ಟತನದಿಂದ ನಮ್ಮ ಮುಂದಿಟ್ಟಿದ್ದಾರೆ ನಿವೃತ್ತ ನ್ಯಾಯಾಧೀಶ ಎ. ವೆಂಕಟ ರಾವ್.

ಕರ್ನಾಟಕ ಸರಕಾರದ ಕಾನೂನು ಕಾರ್ಯದರ್ಶಿಯಾಗಿ ನಿವೃತ್ತರಾದ ನಂತರ, ಮೈಸೂರಿನಲ್ಲಿ ನೆಲೆಸಿದ ದಿ. ಎ. ವೆಂಕಟ ರಾವ್ ಪ್ರಾಮಾಣಿಕ, ಸಜ್ಜನ, ಧೀಮಂತ ವ್ಯಕ್ತಿ. ಅವರು ಬಾಳಿನಲ್ಲಿ ನುಡಿದಂತೆ ನಡೆದವರು. ಈ ಅನುಭವಗಳನ್ನು ಮೊದಲು ಮೈಸೂರಿನ ಸಂಜೆ ಪತ್ರಿಕೆಯಲ್ಲಿ ಇಂಗ್ಲಿಷಿನಲ್ಲಿ ಅಂಕಣವಾಗಿ ಬರೆದರು. ಅವುಗಳ ಸಂಕಲನ ೨೦೦೬ರಲ್ಲಿ ಪ್ರಕಟವಾದ “ಮೆಮೊಯರ್ಸ್ ಆಫ್ ಎ ಜಡ್ಜ್”. ಅದರ ಕನ್ನಡಾನುವಾದವೇ ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ೨೦೦೯ರಲ್ಲಿ ಪ್ರಕಟಿಸಿದ ಈ ಪುಸ್ತಕ.

Image

ನಮ್ಮ ತರಕಾರಿಯಲ್ಲಿ ಔಷಧೀಯ ಗುಣಗಳು

ಪುಸ್ತಕದ ಲೇಖಕ/ಕವಿಯ ಹೆಸರು
ಡಾ.ಎಂ.ಎಚ್. ಸವಿತ
ಪ್ರಕಾಶಕರು
ಅರೀಡ್ಸ್, ಶಿವಮೊಗ್ಗ
ಪುಸ್ತಕದ ಬೆಲೆ
೧೦೦.೦೦ ರೂ. ಪ್ರಥಮ ಮುದ್ರಣ ೨೦೧೪

ಆರೋಗ್ಯವೇ ಭಾಗ್ಯ. ನಮ್ಮ ಸುತ್ತಮುತ್ತಲಿನ ತರಕಾರಿ, ಹಣ್ಣು ಹಂಪಲುಗಳಲ್ಲಿರುವ ರೋಗ ನಿವಾರಕ ಗುಣಗಳನ್ನು ಈ ಪುಸ್ತಕದ ಮೂಲಕ ನಮ್ಮ ಮುಂದೆ ಇರಿಸಿದ್ದಾರೆ ಡಾ. ಎಂ.ಎಚ್. ಸವಿತ ಇವರು. ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕಾ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದುಕೊಂಡು ತಮ್ಮ ಅನುಭವದ ನೆಲೆಗಟ್ಟಿನಲ್ಲಿ ಈ ಪುಸ್ತಕ ಬರೆದಿದ್ದಾರೆ.

ಕನ್ನಡ ಪತ್ರಿಕೆಗಳ ಪಿತಾಮಹ - ಮಂಗಳೂರ ಸಮಾಚಾರ

ಕನ್ನಡ ಪತ್ರಿಕೆಗಳನ್ನು ಓದುವ ಸೊಗಡೇ ಬೇರೆ. ಕನ್ನಡ ಭಾಷೆಯ ಘಮವನ್ನು ಮರೆಯಲಾಗದು. ಕನ್ನಡ ನುಡಿಯನ್ನು ಅಕ್ಷರ ರೂಪಕ್ಕೆ ತಂದು ಅದನ್ನು ಪ್ರಪ್ರಥಮವಾಗಿ ಪತ್ರಿಕೆಯ ರೂಪದಲ್ಲಿ ಹೊರ ತಂದದ್ದು ಯಾವಾಗ ಗೊತ್ತೇ? ೧೮೪೩ ಜುಲೈ ೧ ರಂದು. ಮಂಗಳೂರಿಗನಾದ ನನಗಂತೂ ಕನ್ನಡದ ಮೊದಲ ಪತ್ರಿಕೆ ‘ಮಂಗಳೂರ ಸಮಾಚಾರ' ಮಂಗಳೂರಿನಲ್ಲೇ ಮುದ್ರಿತವಾಗಿ ನಮ್ಮ ಊರಿನ ಹೆಸರೇ ಹೊಂದಿರುವುದಂತೂ ಅತ್ಯಂತ ಆನಂದದ ಸಂಗತಿ. ಈ ಪತ್ರಿಕೆ ಯಾರು ಹೊರತಂದದ್ದು, ಎಲ್ಲಿ ಮುದ್ರಿತವಾಯಿತು ಎಂಬೆಲ್ಲಾ ವಿಷಯಗಳನ್ನು ನಾವು ಸ್ವಲ್ಪ ತಿಳಿದುಕೊಳ್ಳೋಣ.

Image

ಡಾ.ಬಿ.ಸಿ.ರಾಯ್ ನೆನಪಿನಲ್ಲಿ ‘ವೈದ್ಯರ ದಿನ'

ಭಾರತ ದೇಶದಲ್ಲಿ ಪ್ರತೀ ವರ್ಷ ಜುಲೈ ೧ನ್ನು ‘ರಾಷ್ಟ್ರೀಯ ವೈದ್ಯರ ದಿನ' ಎಂದು ಆಚರಿಸುತ್ತಾರೆ. ಇದು ನಮ್ಮ ದೇಶದ ಹೆಮ್ಮೆಯ ವೈದ್ಯ ಹಾಗೂ ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿಯಾಗಿದ್ದ ಡಾ. ಬಿಧಾನ್ ಚಂದ್ರ ರಾಯ್ ಅವರ ಜನ್ಮ ದಿನ. ಅವರು ನಮ್ಮ ದೇಶದ ವೈದ್ಯಕೀಯ ವ್ಯವಸ್ಥೆಗೆ ನೀಡಿದ ಅಮೂಲ್ಯ ಸೇವೆಯನ್ನು ಪರಿಗಣಿಸಿ ಅವರ ಜನ್ಮ ದಿನವನ್ನು ‘ವೈದ್ಯರ ದಿನ' ಎಂದು ಕರೆಯುತ್ತಾರೆ. ಹಾಗೆ ನೋಡಿದರೆ ಪ್ರತಿಯೊಂದು ದಿನವೂ ವೈದ್ಯರ ದಿನವೇ. ಯಾಕೆಂದರೆ ವೈದ್ಯ ದೇವರ ಅವತಾರವೆಂದೇ ಒಂದು ಮಾತಿದೆ. ರೋಗಿಗಳು ವೈದ್ಯರಲ್ಲಿ ದೇವರನ್ನೇ ಕಾಣುತ್ತಾರೆ.

Image