ಕೊರೋನಾ ಅವ - ಲಕ್ಷಣ

    ಆಕಾಶ ತಲೆಯ ಮೇಲೆ  ಬಿದ್ದಂತೆ ಕುಳಿತಿದ್ದ ಗುಂಡಾಚಾರಿಯನ್ನು  ನೋಡಿ, ಒಳಬಂದ ಅವನ ಸ್ನೇಹಿತ, ಕಾಶಿಗೆ ಆಶ್ಚರ್ಯವಾಯಿತು.
    `ಏನು ಗುಂಡಣ್ಣ, ಹೀಗೆ ಕೂತಿದ್ದೀಯಾ?’ ಕಾಶಿ ಪ್ರಶ್ನಿಸಿದ. ನಿಟ್ಟುಸಿರುಬಿಟ್ಟ ಗುಂಡನೆಂದ - `ಕರೋನಾ ವಕ್ಕರಿಸಿದೆ ಕಣೋ.' ಆರಡಿ ದೂರ ಹಾರಿ ಬಿದ್ದ ಕಾಶಿ - `ಟೆಸ್ಟ್ ಮಾಡಿಸಿದ್ಯಾ?'
    `ಟೆಸ್ಟ್ ಮಾಡ್ಲಿಲ್ಲ, ಟೇಸ್ಟ್ ಮಾಡಿದೆ, ಗೊತ್ತಾಯ್ತು'
    `ಅಂದ್ರೆ. . . ?'

ಲೋಕಸಂಗ್ರಹ ಎಂದರೇನು ?

ಭಗವದ್ಗಿತೆಯಲ್ಲಿ 'ಲೋಕಸಂಗ್ರಹ ' ದ  ಪ್ರಸ್ತಾಪ ಇದೆ. 

ಈ ಶಬ್ದದ ಕುರಿತು ಅಂತರ್ಜಾಲದಲ್ಲಿ ಹುಡುಕಾಡಿದಾಗ ತಿಳಿದು ಬಂದ ಸಂಗತಿ ಈ ಕೆಳಗಿದೆ.

ಸಾಮಾನ್ಯ ಜನರನ್ನು ತಪ್ಪುದಾರಿಗೆ ಹೋಗದಂತೆ ಧರ್ಮದ ಮರ್ಯಾದೆಯಲ್ಲಿರಲು ದಾರಿ ತೋರಿಸಲು ಮಾಡುವ ಕೆಲಸವನ್ನು ಆಚಾರ್ಯ ಶಂಕರರು 'ಲೋಕಸಂಗ್ರಹ' ಎಂದಿದ್ದಾರೆ. ಲೋಕಕ್ಕೆ ಮಾದರಿಯಾಗಿ, ನೋಡಿದೊಡನೆಯೇ ಕೆಟ್ಟದಾರಿ ಬೇಡ, ಒಳ್ಳೆಯ ದಾರಿಯಲ್ಲಿ ಸಾಗಬೇಕೆಂಬ ಪ್ರೇರಣೆ ನೀಡುವ ಸಾಧು-ಮಹಾತ್ಮರೇ ನಿಜವಾದ ಲೋಕಸಂಗ್ರಹ ಮಾಡುವವರು. ಕೇವಲ ಸಮಾಜಸೇವೆ ಲೋಕಸಂಗ್ರಹವಾಗದು. ವೈಯಕ್ತಿಕ ಜೀವನದಲ್ಲಿ ಧರ್ಮದ ಆಚರಣೆ ಮಾಡಿ, ಸಾಮಾನ್ಯ ಜನರ ಜೀವನದಲ್ಲಿ ಪರಿಣಾಮವಾಗುವಂತೆ ಮಾಡುವುದೇ ಲೋಕಸಂಗ್ರಹ.

ಇಲ್ಲಿ ನೀವು ಟೀ ಕುಡಿದ ನಂತರ ಟೀಕಪ್ ತಿನ್ನಬಹುದು!

ನೀವೆಲ್ಲಾ ಚಹಾ (ಟೀ) ಅಥವಾ ಕಾಫಿ ಕುಡಿಯುವವರೇ ಆಗಿದ್ದರೆ ಕುಡಿದ ಕಪ್ ಏನು ಮಾಡುತ್ತೀರಿ? ಸ್ಟೀಲ್ ಅಥವಾ ಗಾಜಿನದ್ದಾಗಿದ್ದರೆ ತೊಳೆದು ತೆಗೆದು ಇರಿಸುತ್ತೀರಿ. ಅದೇ ಪ್ಲಾಸ್ಟಿಕ್ ನದ್ದಾಗಿದ್ದರೆ? ಕಸದ ಡಬ್ಬಕ್ಕೆ ಬಿಸಾಕುತ್ತಿರಿ ಅಲ್ಲವೇ? ಅದೇ ಪ್ಲಾಸ್ಟಿಕ್ ಮಣ್ಣಿನಲ್ಲಿ ಕರಗದೇ ಪರಿಸರಕ್ಕೆ ಹಾನಿಯನ್ನುಂಟು ಮಾಡುತ್ತದೆ. ಈ ವಿಷಯಗಳು ನಿಮಗೆ ತಿಳಿದೇ ಇದೆ. ಅದೇ ನೀವು ಚಹಾ ಕುಡಿದ ನಂತರ ಕಪ್ ಅನ್ನು ಬಿಸಾಕದೇ ತಿಂದು ಬಿಡುವಂತಾಗಿದ್ದರೆ? ಏನು ತಮಾಷೆ ಮಾಡುತ್ತೀರಾ ಎಂದು ಕೇಳಬಹುದು. ಆದರೆ ಇದು ಸತ್ಯ. 

Image

ಕಾವ್ಯ ಸಂಗಮ

ಪುಸ್ತಕದ ಲೇಖಕ/ಕವಿಯ ಹೆಸರು
ಸಂಪಾದಕ: ಮೇಟಿ ಮುದಿಯಪ್ಪ
ಪ್ರಕಾಶಕರು
ಮೇಟಿ ಪ್ರಕಾಶನ, ಕೊಪ್ಪಳ
ಪುಸ್ತಕದ ಬೆಲೆ
೧೫೦.೦೦ ಮೊದಲ ಮುದ್ರಣ : ೨೦೧೭

ಕಾವ್ಯ ಸಂಗಮವೆನ್ನುವುದು ಹೆಸರೇ ಹೇಳುವಂತೆ ಕವನಗಳ ಸಂಗ್ರಹ. ಕರಾವಳಿ ತೀರದ ಕವಿ/ಕವಯತ್ರಿಯವರ ೯೬ ಕವನಗಳು ಈ ಪುಸ್ತಕದಲ್ಲಿವೆ. ಇವನ್ನೆಲ್ಲ ಅತ್ಯಂತ ಆಸಕ್ತಿಯಿಂದ ಸಂಪಾದನೆ ಮಾಡಿದವರು ಸ್ವತಃ ಕವಿಯಾದ ಮೇಟಿ ಮುದಿಯಪ್ಪ ಇವರು.

ಮಹಾಭಾರತದಲ್ಲಿ ಕಳೆದುಹೋದ ಪಾತ್ರಗಳು (ಭಾಗ-೬) -ಏಕಲವ್ಯ

ಮಹಾಭಾರತದ ಕಥೆಯಲ್ಲಿ ಪಾಂಡು ಪುತ್ರ ಅರ್ಜುನನಿಗೆ ಸರಿಸಾಟಿಯಾಗಿದ್ದ ವ್ಯಕ್ತಿಗಳಲ್ಲಿ ಓರ್ವ ಕರ್ಣ. ಈ ಸಂಗತಿ ಎಲ್ಲರಿಗೂ ಗೊತ್ತು. ಮತ್ತೊರ್ವ ಅತಿರಥನೆಂದರೆ ಏಕಲವ್ಯ. ಈಗಿನಂತೆಯೇ ಅಂದಿನ ಕಾಲದಲ್ಲೂ ಬೇರೂರಿದ್ದ ಜಾತಿಯ ಅಸಮಾನತೆಯು ಓರ್ವ ಅತ್ಯಂತ ಪರಾಕ್ರಮಿ ಯೋಧನನ್ನು ಬಲಹೀನನನ್ನಾಗಿಸಿತು. ಏಕಲವ್ಯನ ಗುರು ಭಕ್ತಿಯ ಬಗ್ಗೆ ಬಹುತೇಕರಿಗೆ ತಿಳಿದಿದೆ. ಆದರೂ ಅವನ ಬಗ್ಗೆ, ಅವನ ಅಂತ್ಯದ ಬಗ್ಗೆ ಸ್ವಲ್ಪ ನಾನು ಸಂಗ್ರಹಿಸಿದ ಸ್ವಲ್ಪ ಮಾಹಿತಿಯನ್ನು ನಿಮ್ಮ ಜೊತೆ ಹಂಚಿಕೊಳ್ಳಲು ಬಯಸುವೆ.

Image

ಪುಸ್ತಕನಿಧಿ: 5. ರಸ್ಕಿನ್ ಬಾಂಡ್ ಅವರ the Blue umbrella

ಹಿಂದೆ ಯಾವಾಗಲೋ ನಮ್ಮ ಹರಿಪ್ರಸಾದ್  ನಾಡಿಗರು ಈ ಕಿರು ಕಾದಂಬರಿಯ ಬಗ್ಗೆ ಹೇಳಿದ್ದರು. ರಸ್ಕಿನ್ ಬಾಂಡ್ ತುಂಬಾ ಒಳ್ಳೆಯ ಬರಹಗಾರ.  ತುಂಬಾ  ಸರಳ ಭಾಷೆ ಬಳಸುತ್ತಾರೆ.  ಅವರು ಬರಹದ ಓದು ತುಂಬಾ ಸುಖಕರ. ಆರ್ ಕೆ ನಾರಾಯಣ್ ಅವರ ಬರಹಗಳ ತರಹ ಹೇಳಬಹುದು . 

(ಅವರ  ' ರಸ್ಟಿಯ   ಸಾಹಸಗಳು' ಎಂಬ ಪುಸ್ತಕ ಕನ್ನಡದ ಅನುವಾದದಲ್ಲಿ ಓದಿದ್ದೆ.  Digital library of India ದಿಂದ ನಾನು ಇಳಿಸಿಕೊಂಡಿದ್ದ ಅದು ನನ್ನ ಬಳಿ pdf ರೂಪದಲ್ಲಿ ಇದೆ. ಬೇಕಾದವರು ನನ್ನನ್ನು  9920759710 ಸಂಖ್ಯೆಗೆ ಒಂದು message ಕಳಿಸುವ ಮೂಲಕ ಪಡೆಯಬಹುದು.)

ನಗರದ ಇಲಿ ಮತ್ತು ಹಳ್ಳಿಯ ಇಲಿ

ನಗರದ ಇಲಿ ಮತ್ತು ಹಳ್ಳಿ ಇಲಿ ದಾಯಾದಿಗಳು. ಅದೊಂದು ದಿನ ಹಳ್ಳಿ ಇಲಿಯ ಮನೆಗೆ ನಗರದ ಇಲಿ ಬಂತು. ಅವುಗಳ ಸಂಭಾಷಣೆ ಕೇಳೋಣ.

ಹಳ್ಳಿ ಇಲಿ: ನನ್ನ ಪುಟ್ಟ ಮನೆಗೆ ಬಾ. ಇಲ್ಲಿ ಕತ್ತಲು. ಆದರೆ, ನನ್ನ ಹಿತ್ತಿಲು ದೊಡ್ಡದು. ಹಿಂಬದಿಯಲ್ಲಿರುವ ಭತ್ತದ ಹೊಲಗಳು ವಿಶಾಲವಾಗಿವೆ ಮತ್ತು ಬಯಲುಗಳು ಶುಚಿಯಾಗಿವೆ.

ನಗರದ ಇಲಿ: ನಿನ್ನ ಮನೆಯಲ್ಲಿ ಬಹಳ ಕತ್ತಲು. ನಿನ್ನ ಮನೆಯಲ್ಲಿ ವಿದ್ಯುದ್ದೀಪಗಳು ಇಲ್ಲವೇ?
ಹಳ್ಳಿ ಇಲಿ: ಇಲ್ಲ, ಇಲ್ಲ. ಆದರೆ ಸೂರ್ಯ ಚೆನ್ನಾಗಿ ಬೆಳಗುತ್ತಾನೆ. ಬಾ, ಭತ್ತ ತಿನ್ನು. ಅಥವಾ  ನಿನಗೆ ಜೋಳ ಇಷ್ಟವೇ?

Image

ಹಲಸಿನ ಹಣ್ಣಿನ ಗಾರಿಗೆ

Image

ಅಕ್ಕಿಯನ್ನು ೨ ಗಂಟೆ ನೆನೆಸಿ ತೆಗೆದಿಡಿ. ಅದನ್ನು ಹಲಸಿನ ಹಣ್ಣಿನ ಸೊಳೆ, ಬೆಲ್ಲ, ತೆಂಗಿನ ತುರಿ, ಉಪ್ಪು ಸೇರಿಸಿ ದಪ್ಪನೆ ಬರುವಂತೆ ನೀರು ಹಾಕದೇ ರುಬ್ಬಿ. ಅದಕ್ಕೆ ಎಳ್ಳು ಸೇರಿಸಿ. ಒಂದು ಕಾವಲಿಯಲ್ಲಿ ಎಣ್ಣೆಯನ್ನು ಕಾಯಿಸಿ. ಎಣ್ಣೆ ಕಾದ ಬಳಿಕ ರುಬ್ಬಿದ ಹಿಟ್ಟನ್ನು ಗೋಲಿಯಾಕಾರದ ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ ಎಣ್ಣೆಯಲ್ಲಿ ಕರಿಯಿರಿ. ಸರಿಯಾಗಿ ಕರಿದ ಮೇಲೆ ಗಾರಿಗೆಯನ್ನು ಹೊರ ತೆಗೆದು ಬಿಸಿ ಬಿಸಿಯಾಗಿ ತಿನ್ನಿರಿ. ಇದಕ್ಕೆ ಹಲಸಿನ ಹಣ್ಣಿನ ಮುಳಕ ಎಂದೂ ಕರೆಯುತ್ತಾರೆ.

ಬೇಕಿರುವ ಸಾಮಗ್ರಿ

ಹಲಸಿನ ಹಣ್ಣಿನ ಸೊಳೆ ೧ ಕಪ್, ಬೆಳ್ತಿಗೆ ಅಕ್ಕಿ ಅರ್ಧ ಕಪ್, ಎಳ್ಳು, ರುಚಿಗೆ ಉಪ್ಪು, ಸ್ವಲ್ಪ ತೆಂಗಿನ ಕಾಯಿಯ ತುರಿ, ರುಚಿಗೆ ತಕ್ಕಷ್ಟು ಬೆಲ್ಲ, ಕರಿಯಲು ಎಣ್ಣೆ

 

ಆಮೆಗೊಂದು ಮಂದಿರ- ಶ್ರೀ ಕೂರ್ಮನಾಥ ಸ್ವಾಮಿ ದೇವಸ್ಥಾನ

ಮಹಾವಿಷ್ಣು ಲೋಕದ ಕಲ್ಯಾಣಾರ್ಥ ಹಾಗೂ ಧರ್ಮವನ್ನು ಪುನಃ ಸ್ಥಾಪಿಸಲು ಆಗಾಗ ಭಿನ್ನ ಭಿನ್ನ ಅವತಾರಗಳ ಮೂಲಕ ಅವತರಿಸಿರುವುದು ನಿಮಗೆಲ್ಲಾ ತಿಳಿದೇ ಇದೆ. ಇವುಗಳು ದಶಾವತಾರಗಳೆಂದೇ ಖ್ಯಾತಿ ಹೊಂದಿದೆ. ವಿಷ್ಣುವಿನ ಎರಡನೇ ಅವತಾರವಾದ ಕೂರ್ಮಾವತಾರ ಅಂದರೆ ಆಮೆಯ ಅವತಾರದ ಕತೆ ನಿಮಗೆಲ್ಲಾ ಗೊತ್ತಿರಬಹುದು. ದೇವ-ದಾನವರು ಸೇರಿ ಅಮೃತದ ಆಶೆಗೆ ಸಮುದ್ರವನ್ನು, ಮಂದಾರ ಪರ್ವತವನ್ನು ಕಡಗೋಲಾಗಿಯೂ, ವಾಸುಕಿ ಎಂಬ ನಾಗನನ್ನು ಹಗ್ಗವನ್ನಾಗಿಯೂ ಮಾಡಿ ಕಡೆಯುತ್ತಿರುವಾಗ ಪರ್ವತವು ನೀರಿನಲ್ಲಿ ಮುಳುಗಲು ಪ್ರಾರಂಭವಾದಾಗ ವಿಷ್ಣುವು ಆಮೆಯ ರೂಪದಲ್ಲಿ ಪರ್ವತವನ್ನು ಎತ್ತಿ ಹಿಡಿಯುತ್ತಾರೆ. ಇದರಿಂದ ಸಮುದ್ರವನ್ನು ಕಡೆಯಲು ಅನುಕೂಲವಾಗುತ್ತದೆ.

Image

ಉತ್ತರವಿಲ್ಲದ ಪ್ರಶ್ನೆ

(“ನ್ಯಾಯಾಧೀಶರ ನೆನಪುಗಳು” ಒಂದು ಅಪರೂಪದ ಪುಸ್ತಕ. ಇದರಲ್ಲಿ ತನ್ನ ವೃತ್ತಿಜೀವನದ ೩೦ ಅನುಭವಗಳನ್ನು ನವಿರಾದ ಭಾಷೆಯಲ್ಲಿ ದಿಟ್ಟತನದಿಂದ ನಮ್ಮ ಮುಂದಿಟ್ಟಿದ್ದಾರೆ ನಿವೃತ್ತ ನ್ಯಾಯಾಧೀಶ ಎ. ವೆಂಕಟ ರಾವ್.

ಕರ್ನಾಟಕ ಸರಕಾರದ ಕಾನೂನು ಕಾರ್ಯದರ್ಶಿಯಾಗಿ ನಿವೃತ್ತರಾದ ನಂತರ, ಮೈಸೂರಿನಲ್ಲಿ ನೆಲೆಸಿದ ದಿ. ಎ. ವೆಂಕಟ ರಾವ್ ಪ್ರಾಮಾಣಿಕ, ಸಜ್ಜನ, ಧೀಮಂತ ವ್ಯಕ್ತಿ. ಅವರು ಬಾಳಿನಲ್ಲಿ ನುಡಿದಂತೆ ನಡೆದವರು. ಈ ಅನುಭವಗಳನ್ನು ಮೊದಲು ಮೈಸೂರಿನ ಸಂಜೆ ಪತ್ರಿಕೆಯಲ್ಲಿ ಇಂಗ್ಲಿಷಿನಲ್ಲಿ ಅಂಕಣವಾಗಿ ಬರೆದರು. ಅವುಗಳ ಸಂಕಲನ ೨೦೦೬ರಲ್ಲಿ ಪ್ರಕಟವಾದ “ಮೆಮೊಯರ್ಸ್ ಆಫ್ ಎ ಜಡ್ಜ್”. ಅದರ ಕನ್ನಡಾನುವಾದವೇ ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ೨೦೦೯ರಲ್ಲಿ ಪ್ರಕಟಿಸಿದ ಈ ಪುಸ್ತಕ.

Image