ಮಾರುತಿಯ ಲಂಕಾ ಪ್ರಯಾಣ
ಲಂಕೆಗೆ ಹಾರಿದ ಹನುಮನು
ಶಂಕೆಯ ಪಡುತಿರದೆ ಸೀತೆಯನು ತಾ ನೋಳ್ಪಂ|
ರಂಕದಿ ಕೃಶದಲಿ ಕೊರಗುತ
ಲಂಕಿಣಿ ಕಾಯುತಲಿ ಮಾತೆ ರಾಮನ ಸತಿಯಂ||
ಬಳಿಯಲಿ ಬರುತಿಹ ರಾವಣ
- Read more about ಮಾರುತಿಯ ಲಂಕಾ ಪ್ರಯಾಣ
- Log in or register to post comments
ಲಂಕೆಗೆ ಹಾರಿದ ಹನುಮನು
ಶಂಕೆಯ ಪಡುತಿರದೆ ಸೀತೆಯನು ತಾ ನೋಳ್ಪಂ|
ರಂಕದಿ ಕೃಶದಲಿ ಕೊರಗುತ
ಲಂಕಿಣಿ ಕಾಯುತಲಿ ಮಾತೆ ರಾಮನ ಸತಿಯಂ||
ಬಳಿಯಲಿ ಬರುತಿಹ ರಾವಣ
ಊರ್ವಶಿ ಅಥವಾ ಉರ್ವಶಿಯು ಇಂದ್ರಲೋಕದ ಓರ್ವ ಅಪ್ಸರೆ. ಇಂದ್ರನ ಅಮರಾವತಿಯ ನೃತ್ಯಗಾತಿಯರಾದ ರಂಭೆ, ತಿಲೋತ್ತಮ, ಮೇನಕೆ ಮೊದಲಾದವರ ಜೊತೆಗಾರ್ತಿ. ಇವಳಿಗೂ ಮಹಾಭಾರತಕ್ಕೂ ಏನು ಸಂಬಂಧ ಎಂದು ಯೋಚಿಸುವಿರಾ? ಮಹಾಭಾರತದ ಕಥೆಗಳಲ್ಲಿ ಊರ್ವಶಿಯದ್ದೂ ಒಂದು ಸಣ್ಣದಾದರೂ ಪ್ರಮುಖ ಪಾತ್ರವಿದೆ. ಅದೇನೆಂದು ತಿಳಿದುಕೊಳ್ಳುವ ಮೊದಲು ಊರ್ವಶಿಯ ಹುಟ್ಟಿನ ಬಗ್ಗೆ ಗಮನಿಸುವ.
ಪರಿಪರಿಯ ನೋವುಂಡು ಸೋತು ಸೊರಗಿದ ದೇಹ
ಕೊನೆಗೊಮ್ಮೆ ಸಾಯುವುದೇ ಮೇಲೆಂದುಕೊಂಡಿತು
ಅಂತರಾತ್ಮದ ಕೂಗು ಕಿವಿಗೆ ಕೇಳಿಸಿತಾಗ
ಮುಂದೆ ಸಾಗಲು ದಾರಿ ನೂರಾರು ಇದೆ ಎಂದು
ಬದುಕಿನುದ್ದಕೂ ಕವಲು ದಾರಿಗಳೇ ವಿನಹ
ನಾವು ವೈಜ್ಞಾನಿಕವಾಗಿ ಎಷ್ಟೇ ಮುಂದುವರೆದರೂ ಇನ್ನೂ ಈ ಆಧುನಿಕ ಪ್ರಪಂಚದಲ್ಲಿ ವಿಜ್ಞಾನಿಗಳ ನಿಲುಕಿಗೆ ಸಿಗದ ಹಲವಾರು ವಿಷಯಗಳು ಅಡಗಿವೆ. ಈಗಾಗಲೇ ನೀವು ‘ಡೆವಿಲ್ಸ್ ಕೆಟಲ್' ಎಂಬ ನಿಗೂಢ ಜಲಪಾತದ ಬಗ್ಗೆ ಓದಿರುವಿರಿ. ಅದೇ ಸಾಲಿಗೆ ಸೇರುವ ಇನ್ನೊಂದು ರಹಸ್ಯ ‘ಹೆಸ್ಡಾಲನ್ ಲೈಟ್ಸ್' (Hessdalen Lights). ಈ ಹೆಸ್ಡಾಲನ್ ಬೆಳಕು ಏನು? ಎಲ್ಲಿ, ಯಾವಾಗ ಕಂಡು ಬರುತ್ತದೆ? ಎಂಬುವುದರ ಬಗ್ಗೆ ನಾವು ತಿಳಿದುಕೊಳ್ಳೋಣ.
ಬೆಳಕಾಯಿತೇಳು
ಏಳೆನ್ನ ಹೃದಯ ಕನ್ಯೆ!
ತಮ ಸರಿಯಿತೇಳು
ಸುಮ ಬಿರಿಯಿತೇಳು
ತೆರೆಯುತಿದೆ ಜಗದ ಕಣ್ಣೆ!
ಅದೊಂದು ಬೃಹತ್ ಕಟ್ಟಡ. ಫುಟ್‍ಬಾಲ್ ಅಂಗಣದಂತಹ ನಾಲ್ಕು ಮಹಡಿಗಳು. ಎಲ್ಲಿಕಂಡರಲ್ಲಿ ಮೂಟೆಮೂಟೆ ಅಡಿಕೆಹಾಳೆ ತಟ್ಟೆಗಳು. ಅಲ್ಲಿರುವ ಕೆಲಸಗಾರರು ಸುಮಾರು ೫೦೦ ಹಾಗೂ ಯಂತ್ರಗಳು ನೂರಾರು.
ಇದು “ಇಕೊ ಬ್ಲಿಸ್” ಅಡಿಕೆಹಾಳೆ ತಟ್ಟೆ ಕಾರ್ಖಾನೆಯ ಒಂದು ನೋಟ. ಅದರ ಮೆನೇಜಿಂಗ್ ಡೈರೆಕ್ಟರ್ ಬಲಿಪಗುಳಿ ರಾಜಾರಾಮ್ ಸಿ.ಜಿ. ಇತ್ತೀಚೆಗೆ ನಮಗೆ ಕಾರ್ಖಾನೆಯನ್ನು ತೋರಿಸುತ್ತಾ, “ನಾವೀಗ ವಾರಕ್ಕೆ ಎರಡು-ಮೂರು ಕನ್‍ಟೈನರುಗಳಲ್ಲಿ ೨೨ ನಮೂನೆಯ ಅಡಿಕೆಹಾಳೆ ತಟ್ಟೆಗಳನ್ನು ರಫ್ತು ಮಾಡುತ್ತೇವೆ. ಒಂದೊಂದು ಕನ್‍ಟೈನರಿನಲ್ಲಿರುತ್ತವೆ ಮೂರರಿಂದ ನಾಲ್ಕು ಲಕ್ಷ ಅಡಿಕೆಹಾಳೆ ತಟ್ಟೆಗಳು” ಎಂದಾಗ ಕೋಟಿಗಟ್ಟಲೆ ರೂಪಾಯಿ ವಾರ್ಷಿಕ ವಹಿವಾಟಿನ ಆ ಉದ್ದಿಮೆಯ ಇನ್ನೊಂದು ನೋಟ ದಕ್ಕಿತು.
ಏನೋ ಮಾಡಲು ಹೋಗಿ…
ರಾಮಣ್ಣನ ತೋಟದಲ್ಲಿ ಹಲಸು ಹಣ್ಣಾದ ಸಮಯ. ಅಳಿಲು ಮಂಗಗಳ ಉಪಟಳಕ್ಕೆ ಅವರು ಕೋವಿ ಹಿಡಿದು ಧಾವಿಸಿದ್ದರು. ಕೋತಿಯೊಂದು ಅಳಿಲಿನ ಮರಿಯನ್ನೆತ್ತಿ ಕೆಳಗೆ ಎಸೆದ ರಭಸಕ್ಕೆ ಅದರ ಕಾಲು ಮುರಿದುಕೊಂಡಿತ್ತು. ರಾಶಿ ಬಿದ್ದ ಸೊಳೆಗಳಿಂದ ಬೀಜವಾದರೂ ಸಿಕ್ಕೀತೆಂದು ಕೆಳಗೆ ಬಾಗಿ ಬುಟ್ಟಿಯಲ್ಲಿ ತುಂಬಿಸುತ್ತಿರುವ ರಾಮಣ್ಣನ ಬೆನ್ನಿಗೆ ಕಾಯಿಯೊಂದು ಬಿದ್ದಾಗ ಪಕ್ಕದಲ್ಲೇ ಬಿದ್ದಿದ್ದ ಮರಿಯು ನೋವಿನಲ್ಲೂ ನಕ್ಕಂತೆ ಭಾಸವಾಗಿತ್ತು.
ನಿಜ ಬದುಕು..
ಕೊರೋನಾ ಬಂದಿತು ನಿಜವನು ಅರುಹಿತು
ನಿನ್ನವರಾರಿಹರಿಲ್ಲೆಂದು...
ಸುತ್ತಲು ಇರುವರು ನಿನ್ನವರೆಲ್ಲರು
ಹಲ್ಲನು ಗಿಂಜುತ ಬಳಿ ಬಂದು||
ಪಾಂಡವರು ಮತ್ತು ಕೌರವರ ನಡುವೆ ಹದಿನೆಂಟು ದಿನಗಳ ಕಾಲ ಭೀಕರ ಕುರುಕ್ಷೇತ್ರ ಯುದ್ಧ ನಡೆದ ಸಂಗತಿ ನಿಮಗೆ ಗೊತ್ತೇ ಇದೆ. ಲಕ್ಷಾಂತರ ಸೈನಿಕರು, ಅತಿರಥ ಮಹಾರಥ ರಾಜರು ಎಲ್ಲಾ ಈ ಯುದ್ಧದಲ್ಲಿ ಭಾಗವಹಿಸಿದ್ದರು. ವಿಧರ್ಭದ ರಾಜ ರುಕ್ಮಿ ಹಾಗೂ ಕೃಷ್ಣನ ಅಣ್ಣ ಬಲರಾಮ ಮಾತ್ರ ಈ ಯುದ್ಧದಲ್ಲಿ ಭಾಗಿಯಾಗಿರಲಿಲ್ಲ. ಶ್ರೀಕೃಷ್ಣ ತಾನು ಶಸ್ತ್ರವನ್ನು ಹಿಡಿಯುವುದಿಲ್ಲ ಎಂಬ ಶರತ್ತಿನ ಮೇಲೆ ಯುದ್ಧದಲ್ಲಿ ಪಾಲ್ಗೊಂಡಿದ್ದರು. ಆದರೆ ಇವರಿಗೆಲ್ಲಾ ಯುದ್ಧದ ಸಮಯದಲ್ಲಿ ಊಟೋಪಚಾರ ಯಾರು ಮಾಡುತ್ತಿದ್ದರು ನಿಮಗೆ ಗೊತ್ತೇ? ಆ ಸಮಯ ಊಟದ ನಿರ್ವಹಣೆ ಹೊತ್ತಿದ್ದವರು ಉಡುಪಿಯ ರಾಜ. ಇವರ ಬಗ್ಗೆ ಮಾಹಿತಿ ಇರುವುದು ಕಮ್ಮಿ.
ಸ್ವಯಂಸ್ಪೂರ್ತಿಯೇ ಗುರುವಾಗಿ ಮೈ ಮನಸ್ಸುಗಳನ್ನು ಆವರಿಸಿದ ಫಲವಾಗಿ ಉಡುಪಿಯ ಶ್ರೀರಕ್ಷಾ ಎಂಬ ಹತ್ತನೇ ತರಗತಿಯ ವಿದ್ಯಾರ್ಥಿನಿಯೋರ್ವಳು ಇಂದು ಅತ್ಯುತ್ತಮ ಚಿತ್ರ ಕಲಾವಿದೆಯಾಗಿ ಹಲವರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ. ಪೆನ್ಸಿಲ್ ಆರ್ಟ್ ಮತ್ತು ಪೈಂಟಿಂಗ್ ನಲ್ಲಿ ಹತ್ತು ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ಈಗಾಗಲೇ ಸಾಕಷ್ಟು ಬಹುಮಾನಗಳನ್ನೂ ಪಡೆದುಕೊಂಡಿರುವ ಶ್ರೀರಕ್ಷಾ, ಉಡುಪಿ ನಗರದ ಒಳಕಾಡು ಸರಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿ ಪರೀಕ್ಷೆ ಬರೆದಿರುವ ವಿದ್ಯಾರ್ಥಿನಿ. ಇಲ್ಲಿ ಕಾಣಿಸುತ್ತಿರುವ ಸುಂದರವಾದ ಚಿತ್ರಗಳಲ್ಲಿರುವ ಜೀವಾಳವೇ ಶ್ರೀರಕ್ಷಾಳ ಪ್ರತಿಭೆಗೆ ಸಾಕ್ಷಿ.