ನಾಟಕ, celtx, latex ಕುರಿತಾಗಿ.
celtx ಎಂಬ ಬರಹದ ಸಾಫ್ಟ್ ವೇರ್ ಒಂದಿದೆ. ಅದರಲ್ಲಿ ಸಿನೆಮಾ ಚಿತ್ರಕತೆ, ನಾಟಕ , ಕಾದಂಬರಿ ಮುಂತಾದವನ್ನೆಲ್ಲಾ ಬರೆಯಬಹುದು. ಆಯಾ ಮಾಧ್ಯಮಕ್ಕೆ ತಕ್ಕಂತೆ ಬೇಕಾದ ಅನುಕೂಲಗಳು ಇವೆ. ಸುಮಾರು ವರ್ಷದಿಂದ ಅದರ ಜತೆ ಆಟವಾಡುತ್ತಾ ಇದ್ದರೂ ಕೂಡ, ಪೂರ್ತಿ ಕೃತಿಯನ್ನು ಅದರಲ್ಲಿ ಈ ಹಿಂದೆ ಬರೆದಿರಲಿಲ್ಲ.
ಮೊದಲಿಗೆ ಕನ್ನಡ ಬರೆಯಲು ಆಗುತ್ತಾ ಇರಲಿಲ್ಲ. ಆಮೇಲೆ, ಆದರೂ ಕೂಡ ಅದನ್ನು ಉಳಿಸಲು ಆಗುತ್ತಿರಲಿಲ್ಲ. ಆಮೇಲೆ ಅದನ್ನು ಮುದ್ರಿಸಲು ಆಗುತ್ತಿರಲಿಲ್ಲ. ಆದಾಗಲೂ ಕೆಲವು ಸಣ್ಣ ಪುಟ್ಟ ತೊಡಕುಗಳು ಇದ್ದೇ ಇದ್ದುವು. ಈಗಲೂ ಕೆಲವು ತೊಡಕು ಇದೆ. ಆದರೆ ಅದಕ್ಕೊಂದು ದಾರಿ ಕಂಡು ಕೊಂಡು celtx ಅನ್ನೇ ಬಳಸಿ ಒಂದು ನಾಟಕವನ್ನು ಬರೆಯಲು ಕೂತೆ. ಈಗ ಒಂದು ವಾರದ ಕೆಳಗೆ ಅದನ್ನು ಬರೆದು ಮುಗಿಸಿದೆ. ಈ ಬರಹ ಆ ನಾಟಕದ ಬಗ್ಗೆ ಅಲ್ಲ. ಅದಕ್ಕಿನ್ನೂ ತುಸು ಮರುಬರವಣಿಗೆಯ ಕೆಲಸವಿದೆ. ಆದರೆ ಇಲ್ಲಿ ಹೇಳ ಹೊರಟಿದ್ದು - ಬರೆದು ಮುಗಿಸಿದ ಮೇಲೆ ಅದನ್ನು ಪಿಡಿಎಫ್ ಆಗಿ ಮಾರ್ಪಡಿಸಲು ನಾನು ಇಟ್ಟ ಹೆಜ್ಜೆಗಳ ಬಗ್ಗೆ.
- Read more about ನಾಟಕ, celtx, latex ಕುರಿತಾಗಿ.
- 4 comments
- Log in or register to post comments